ನೀವು ಕಾಂತಿಯುತ ತ್ವಚೆ ಪಡೆಯಲು ಯಾವ ಯಾವ ಹಣ್ಣು ಮತ್ತು ತರಕಾರಿಗಳನ್ನು ಸೇವಿಸಬೇಕು ಗೊತ್ತೇ?

ನೀವು ಸೇವಿಸುವ ಆಹಾರ ನಿಮ್ಮ ಆರೋಗ್ಯವನ್ನು ಸುರಕ್ಷಿತವಾಗಿರಿಸುವುದರ ಜತೆಗೆ ಚರ್ಮದ ಆರೋಗ್ಯವನ್ನೂ ಸುಧಾರಿಸುತ್ತದೆ. ಹೀಗಿರುವಾಗ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವ ಮೂಲಕ ನಿಮ್ಮ ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಬಹುದು.

ನೀವು ಕಾಂತಿಯುತ ತ್ವಚೆ ಪಡೆಯಲು ಯಾವ ಯಾವ ಹಣ್ಣು ಮತ್ತು ತರಕಾರಿಗಳನ್ನು ಸೇವಿಸಬೇಕು ಗೊತ್ತೇ?
ಸಾಂದರ್ಭಿಕ ಚಿತ್ರ

ಧೂಳು, ಹವಾಮಾನ ಏರು ಪೇರಿನಿಂದಾಗಿ ಚರ್ಮಕ್ಕೆ ಹಾನಿಯುಂಟಾಗಿರಬಹುದು. ಚರ್ಮದ ಅಲರ್ಜಿ, ತುರಿಕೆಯಂತಹ ಲಕ್ಷಣಗಳು ಕಂಡು ಬರುತ್ತಿರಬಹುದು. ನಿಮ್ಮ ಚರ್ಮದ ಆರೋಗ್ಯ ಸುರಕ್ಷತೆ ಜತೆಗೆ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಆಹಾರ ಪದ್ದತಿಯೂ ಸಹ ಮುಖ್ಯ. ನೀವು ಸೇವಿಸುವ ಆಹಾರ ನಿಮ್ಮ ಆರೋಗ್ಯವನ್ನು ಸುರಕ್ಷಿತವಾಗಿರಿಸುವುದರ ಜತೆಗೆ ಚರ್ಮದ ಆರೋಗ್ಯವನ್ನೂ ಸುಧಾರಿಸುತ್ತದೆ. ಹೀಗಿರುವಾಗ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವ ಮೂಲಕ ನಿಮ್ಮ ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಬಹುದು. ನಿಮ್ಮ ಚರ್ಮದ ಹೊಳಪಿಗೆ ಯಾವ ಹಣ್ಣುಗಳು ಮತ್ತು ತರಕಾರಿಗಳು ಸೂಕ್ತ ಎಂಬುದನ್ನು ತಿಳಿಯೋಣ.

ಕಿತ್ತಳೆ ಹಣ್ಣು
ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶವಿರುತ್ತದೆ. ನೀವು ಕಿತ್ತಳೆ ಹಣ್ಣನ್ನು ಸೇವಿಸಬಹುದು ಅಥವಾ ಕಿತ್ತಳೆಯನ್ನು ಉಪಯೋಗಿಸಿ ಫೇಸ್ ಪ್ಯಾಕ್ ತಯಾರಿಸಿಯೂ ಮುಖಕ್ಕೆ ಬಳಸಬಹುದು. ಇದು ನಿಮ್ಮ ಚರ್ಮದ ಹೊಳಪಿಗೆ ಮತ್ತು ಕಾಂತಿ ಹೆಚ್ಚಿಸಿಕೊಳ್ಳಲು ಸಹಾಯಕವಾಗಿದೆ.

ಸ್ಟ್ರಾಬೆರಿ
ಸ್ಟ್ರಾಬೆರಿಯಲ್ಲಿ ಆಲ್ಪಾ ಹೈಡ್ರಾಕ್ಸಿಲ್ ಆಸಿಡ್ ತುಂಬಿರುತ್ತದೆ. ಇದು ಸತ್ತ ಚರ್ಮದ ಕೋಶಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಇದು ಕಾಲಜನ್ ಉತ್ಪಾದನೆಯನ್ನೂ ಹೆಚ್ಚಿಸುತ್ತದೆ. ಜತೆಗೆ ನಿಮ್ಮ ಆರೋಗ್ಯದ ದೃಷ್ಟಿಯಿಂದ ಇದು ಹೆಚ್ಚು ಪ್ರಯೋಜನಕಾರಿ.

ಕುಂಬಳಕಾಯಿ
ಕುಂಬಳಕಾಯಿಯಲ್ಲಿ ಉತ್ಕರ್ಷಣ ನಿರೋಧಕಗಳು ಹೆಚ್ಚು ಕಂಡು ಬರುತ್ತದೆ. ವಿಟಮಿನ್ ಎ ಮತ್ತು ಮಿಟಮಿನ್ ಸಿ ಅಂಶ ಕಂಡು ಬರುತ್ತದೆ. ಇದು ಚರ್ಮದ ಟೋನ್ ಸುಧಾರಿಸಲು ಸಹಾಯಕವಾಗಿದೆ.

ಬಿಟ್ರೂಟ್
ನೀವು ಬಿಟ್ರೂಟ್ ಜ್ಯೂಸ್ ಮಾಡಿಯೂ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಇದು ನಿಮ್ಮ ದೇಹಕ್ಕೆ ಪೌಷ್ಟಿಕಾಂಶಗಳನ್ನು ನೀಡುತ್ತದೆ. ಜತೆಗೆ ರಕ್ತವನ್ನು ಶುದ್ಧೀಕರಿಸಲು ಸಹಾಯಕವಾಗಿದೆ.

ಟೊಮ್ಯಾಟೊ
ಟೊಮ್ಯಾಟೊದಲ್ಲಿ ಎ, ಬಿ1, ಕೆ, ಬಿ3, ಬಿ5, ಬಿ6, ಬಿ7 ಮತ್ತು ವಿಟಮಿನ್ ಸಿ ಅಂಶ ಕಂಡು ಬರುತ್ತದೆ. ಇದು ತ್ವಚೆಯ ಸೌಂದರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನಿಮ್ಮ ಮುಖದ ಮೇಲೆ ಟೊಮ್ಯಾಟೊ ರಸವನ್ನು ಹಚ್ಚುವ ಮೂಲಕ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಿ.

ಇದನ್ನೂ ಓದಿ:

Health Tips: ಜೀರ್ಣಕ್ರಿಯೆ ಚೆನ್ನಾಗಿರಲು 9 ಆಯುರ್ವೇದ ಸಲಹೆಗಳು ಇಲ್ಲಿವೆ

Health Tips: ಸಾತ್ವಿಕ ಆಹಾರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು

Click on your DTH Provider to Add TV9 Kannada