AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿಚನ್‌ ಸಿಂಕ್‌ನಿಂದ ಬರುವ ದುರ್ವಾಸನೆಯನ್ನು ತೊಡೆದು ಹಾಕಲು ಈ ಸರಳ ಸಲಹೆಯನ್ನು ಅನುಸರಿಸಿ

ಅಡುಗೆಮನೆಯ ಸಿಂಕ್‌ ಹೆಚ್ಚಾಗಿ ಬಳಸಲ್ಪಡುವ ಕಾರಣ ಅದರ ಸ್ವಚ್ಛತೆಯ ಬಗ್ಗೆ ತುಸು ಹೆಚ್ಚೇ ಗಮನವನ್ನು ಹರಿಸಬೇಕು. ಇಲ್ಲದಿದ್ದರೆ ಅದರಲ್ಲಿ ಕೊಳಕು ಸಂಗ್ರಹವಾಗಿ ದುರ್ವಾಸನೆ ಬರಲು ಪ್ರಾರಂಭಿಸುತ್ತದೆ. ಕೆಲವೊಂದು ಬಾರಿ ಎಷ್ಟೇ ಸ್ವಚ್ಛಗೊಳಿಸಿದರೂ ಸಹ ಸಿಂಕ್‌ನ ದುರ್ವಾಸನೆಯನ್ನು ಹೋಗಲಾಡಿಸಲು ಸಾಧ್ಯವಾಗುವುದಿಲ್ಲ. ಹೀಗಿರುವಾಗ ಈ ಕೆಲವೊಂದು ಮನೆಮದ್ದುಗಳ ಸಹಾಯದಿಂದ ಸಿಂಕ್‌ನಿಂದ ಬರುವ ಕೆಟ್ಟ ವಾಸನೆಯನ್ನು ಸುಲಭವಾಗಿ ತೊಡೆದು ಹಾಕಬಹುದು.

ಕಿಚನ್‌ ಸಿಂಕ್‌ನಿಂದ ಬರುವ ದುರ್ವಾಸನೆಯನ್ನು ತೊಡೆದು ಹಾಕಲು ಈ ಸರಳ ಸಲಹೆಯನ್ನು ಅನುಸರಿಸಿ
ಸಾಂದರ್ಭಿಕ ಚಿತ್ರImage Credit source: Pinterest
ಮಾಲಾಶ್ರೀ ಅಂಚನ್​
|

Updated on: Jun 02, 2026 | 7:10 PM

Share

ಸಿಂಕ್ (sink) ಅಡುಗೆ ಮನೆಯ ಪ್ರಮುಖ ಭಾಗವಾಗಿದ್ದು, ಪಾತ್ರೆ ತೊಳೆಯಲು, ಆಹಾರ ಪದಾರ್ಥಗಳನ್ನು ತೊಳೆಯಲು, ಕೈ ತೊಳೆಯಲು ಹೀಗೆ ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಸಿಂಕ್‌ ಉಪಯೋಗಿಸುತ್ತೇವೆ. ಹೀಗಾಗಿ ಸಿಂಕ್‌ನಲ್ಲಿ  ವಿವಿಧ ರೀತಿಯ ಕೊಳಕು, ಪಾಚಿ ಸಂಗ್ರಹಗೊಳ್ಳುತ್ತದೆ. ಇದರಿಂದಾಗಿ ಸಿಂಕ್‌ನಿಂದ ವಾಸನೆ ಬರಲು ಪ್ರಾರಂಭಿಸುತ್ತದೆ. ಹಾಗಾಗಿ ಹೆಚ್ಚಿನವರು ದುಬಾರಿ ಕ್ಲೀನರ್‌ಗಳನ್ನು ಬಳಸಿ  ಪದೇ ಪದೇ ಸಿಂಕ್‌ ಕ್ಲೀನ್‌ ಮಾಡುತ್ತಿರುತ್ತಾರೆ. ಹೀಗಿದ್ದರೂ ಸಹ ಕೆಲವೊಂದು ಬಾರಿ ಕಿಚನ್‌ ಸಿಂಕ್‌ನಿಂದ ದುರ್ವಾಸನೆ ಬರುತ್ತದೆ. ಹೀಗಿರುವಾಗ ಈ ಕೆಲವೊಂದು ಮನೆಮದ್ದುಗಳ ಸಹಾಯದಿಂದ ಕಿಚನ್‌ ಸಿಂಕ್‌ನಿಂದ ಬರುವ ದುರ್ವಾಸನೆಯನ್ನು ಸುಲಭವಾಗಿ ತೊಡೆದುಹಾಕಬಹುದು.

ಕಿಚನ್‌ ಸಿಂಕ್‌ನಿಂದ ಬರುವ ವಾಸನೆಯನ್ನು ತೊಡೆದು ಹಾಕುವುದೇಗೆ?

ಅಡಿಗೆ ಸೋಡಾ : ಅಡುಗೆಮನೆಯ ಸಿಂಕ್‌ನ ವಾಸನೆಯನ್ನು ಹೋಗಲಾಡಿಸಲು ನೀವು ಅಡುಗೆ ಸೋಡಾವನ್ನು ಬಳಸಬಹುದು. ಸಿಂಕ್ ಮೇಲೆ ಅಡಿಗೆ ಸೋಡಾ ಸಿಂಪಡಿಸಿ ಮತ್ತು 5 ನಿಮಿಷಗಳ ನಂತರ ಅದನ್ನು ಸ್ಕ್ರಬ್ ಮಾಡಿ. ಇದು ಸಿಂಕ್ ಅನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತದೆ ಮತ್ತು ಸಿಂಕ್‌ನಿಂದ ಬರುವ ದುರ್ವಾಸನೆಯನ್ನು ಹೋಗಲಾಡಿಸುತ್ತದೆ.

ಅಡಿಗೆ ಸೋಡಾ ಮತ್ತು ವಿನೆಗರ್: ಅಡುಗೆ ಸೋಡಾ ಮತ್ತು ವಿನೆಗರ್  ಸಿಂಕ್‌ ಅನ್ನು ಸ್ವಚ್ಛಗೊಳಿಸುವುದಲ್ಲದೆ ವಾಸನೆಯನ್ನು ಬುಡದಿಂದ ನಿವಾರಿಸುತ್ತದೆ. ಅದಕ್ಕಾಗಿ ಮೊದಲು ಅರ್ಧ ಕಪ್ ಅಡಿಗೆ ಸೋಡಾವನ್ನು ಸಿಂಕ್ ಡ್ರೈನ್‌ಗೆ ಸುರಿಯಿರಿ. 5 ನಿಮಿಷಗಳ ನಂತರ, ಒಂದು ಕಪ್ ಬಿಳಿ ವಿನೆಗರ್ ಕೂಡ ಅದಕ್ಕೆ ಸೇರಿಸಿ ಅದನ್ನು 30 ನಿಮಿಷದಿಂದ 1 ಗಂಟೆಯವರೆಗೆ ಹಾಗೆಯೇ ಬಿಡಿ. ನಂತರ,  ಬಿಸಿ ನೀರನ್ನು ಸುರಿದು ಚೆನ್ನಾಗಿ ಸ್ವಚ್ಛಗೊಳಿಸಿ. ಅಡುಗೆ ಸೋಡಾ ಕೊಳೆಯನ್ನು ಸಡಿಲಗೊಳಿಸುತ್ತದೆ ಮತ್ತು ವಿನೆಗರ್ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಇದರಿಂದ ವಾಸನೆಯೂ ನಿವಾರಣೆಯಾಗುತ್ತದೆ.

ನಿಂಬೆ ರಸ: ನಿಂಬೆ ರಸವು ಅಡುಗೆಮನೆಯ ಸಿಂಕ್‌ನಿಂದ ವಾಸನೆಯನ್ನು ತೆಗೆದುಹಾಕಲು ಕೆಲಸ ಮಾಡುತ್ತದೆ. ಇದಕ್ಕಾಗಿ ಮೊದಲಿಗೆ ನಿಂಬೆ ರಸವನ್ನು ಸಿಂಕ್‌ಗೆ ಸುರಿದು ಬ್ರಷ್ ಅಥವಾ ಸ್ಕ್ರಬ್ಬರ್‌ನಿಂದ ಚೆನ್ನಾಗಿ ಸ್ವಚ್ಛಗೊಳಿಸಿ.

ಇದನ್ನೂ ಓದಿ: ಕೆಲವು ವಸ್ತುಗಳನ್ನು ತಪ್ಪಿಯೂ ಬಾತ್‌ರೂಮ್‌ನಲ್ಲಿ ಇಡಬೇಡಿ

ನಿಂಬೆ ಸಿಪ್ಪೆ ಮತ್ತು ಅಡಿಗೆ ಸೋಡಾ: ಈ ಎರಡು ವಸ್ತುಗಳು ಸಹ ಸಿಂಕ್‌ನಿಂದ ಬರುವ ವಾಸನೆಯನ್ನು ತೊಡೆದು ಹಾಕುತ್ತದೆ. ಇದಕ್ಕಾಗಿ ನಿಂಬೆಹಣ್ಣನ್ನು ಅರ್ಧದಷ್ಟು ಕತ್ತರಿಸಿ ಅದರ ಮೇಲೆ ಸ್ವಲ್ಪ ಅಡಿಗೆ ಸೋಡಾ ಸಿಂಪಡಿಸಿ ಅದರಿಂದ ಸಿಂಕ್‌ ಅನ್ನು ಸ್ಕ್ರಬ್‌ ಮಾಡಿ.  ಇದು ಕೊಳೆಯನ್ನು ತೆಗೆದುಹಾಕುವುದಲ್ಲದೆ, ವಾಸನೆಯನ್ನು ತೆಗೆದುಹಾಕುತ್ತದೆ.

ಉಪ್ಪು: ನಿಮ್ಮ ಅಡುಗೆಮನೆಯ ಸಿಂಕ್‌ನಿಂದ ಬರುವ ವಾಸನೆಯನ್ನು ತೊಡೆದುಹಾಕಲು ನೀವು ಉಪ್ಪನ್ನು ಸಹ ಬಳಸಬಹುದು. ಬೆಚ್ಚಗಿನ ನೀರಿನೊಂದಿಗೆ ಉಪ್ಪನ್ನು ಬೆರೆಸಿ ದ್ರಾವಣವನ್ನು ತಯಾರಿಸಿ ನಂತರ ಅದನ್ನು ಸಿಂಕ್ ಸುತ್ತಲೂ ಹರಡಿ ಸ್ವಚ್ಛಗೊಳಿಸಿ. ಇದು ವಾಸನೆಯನ್ನು ಸಂಪೂರ್ಣವಾಗಿ ಹೋಗಲಾಡಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಚಾಮುಂಡೇಶ್ವರಿ ದೇವಾಲಯದಲ್ಲಿ ವಿಜಯಲಕ್ಷ್ಮಿ ದರ್ಶನ್ ವಿಶೇಷ ಪೂಜೆ: ವಿಡಿಯೋ
ಚಾಮುಂಡೇಶ್ವರಿ ದೇವಾಲಯದಲ್ಲಿ ವಿಜಯಲಕ್ಷ್ಮಿ ದರ್ಶನ್ ವಿಶೇಷ ಪೂಜೆ: ವಿಡಿಯೋ
ಸುಪ್ರೀಂಕೋರ್ಟ್​​ ನೋಟಿಸ್ ಬಗ್ಗೆ ರೇವಣ್ಣ ಫಸ್ಟ್​​ ರಿಯಾಕ್ಷನ್​​
ಸುಪ್ರೀಂಕೋರ್ಟ್​​ ನೋಟಿಸ್ ಬಗ್ಗೆ ರೇವಣ್ಣ ಫಸ್ಟ್​​ ರಿಯಾಕ್ಷನ್​​
ಅಂಕೋಲಾದಲ್ಲಿ ಭಾರಿ ಮಳೆ: ಗೋಕರ್ಣ ತದಡಿ ರಸ್ತೆಯಲ್ಲಿ ಗುಡ್ಡ ಕುಸಿತ
ಅಂಕೋಲಾದಲ್ಲಿ ಭಾರಿ ಮಳೆ: ಗೋಕರ್ಣ ತದಡಿ ರಸ್ತೆಯಲ್ಲಿ ಗುಡ್ಡ ಕುಸಿತ
ಭಾರತದ ಮೊದಲ ಹೈಡ್ರೋಜನ್ ರೈಲಿಗೆ ಹಸಿರು ನಿಶಾನೆ ತೋರಿದ ಪ್ರಧಾನಿ ಮೋದಿ
ಭಾರತದ ಮೊದಲ ಹೈಡ್ರೋಜನ್ ರೈಲಿಗೆ ಹಸಿರು ನಿಶಾನೆ ತೋರಿದ ಪ್ರಧಾನಿ ಮೋದಿ
ಹರಿಯಾಣದಲ್ಲಿ ದೇಶದ ಮೊದಲ 'ಹೈಡ್ರೋಜನ್ ರೈಲಿ'ಗೆ ಪಿಎಂ ಮೋದಿ ಇಂದು ಚಾಲನೆ
ಹರಿಯಾಣದಲ್ಲಿ ದೇಶದ ಮೊದಲ 'ಹೈಡ್ರೋಜನ್ ರೈಲಿ'ಗೆ ಪಿಎಂ ಮೋದಿ ಇಂದು ಚಾಲನೆ
Live: ಮೊದಲ ಆಶಾಢ ಶುಕ್ರವಾರದಂದು ಚಾಮುಂಡೇಶ್ವರಿಗೆ ವಿಶೇಷ ಪೂಜೆಯ ನೇರಪ್ರಸಾರ
Live: ಮೊದಲ ಆಶಾಢ ಶುಕ್ರವಾರದಂದು ಚಾಮುಂಡೇಶ್ವರಿಗೆ ವಿಶೇಷ ಪೂಜೆಯ ನೇರಪ್ರಸಾರ
'ಆಷಾಢ ಮಾಸ ಶಕ್ತಿ ದೇವತೆಗಳ ಆರಾಧನೆಗೆ ಪ್ರಶಸ್ತವಾದ ಮಾಸ'
'ಆಷಾಢ ಮಾಸ ಶಕ್ತಿ ದೇವತೆಗಳ ಆರಾಧನೆಗೆ ಪ್ರಶಸ್ತವಾದ ಮಾಸ'
ಮೊದಲ ಬಾರಿಗೆ ಇರಾನ್ ಮೇಲೆ ದಾಳಿ ನಡೆಸಿದ ಯುಎಇ
ಮೊದಲ ಬಾರಿಗೆ ಇರಾನ್ ಮೇಲೆ ದಾಳಿ ನಡೆಸಿದ ಯುಎಇ
'ದಿನಕ್ಕೆ 17 ಗಂಟೆ ಓದು, ನಿದ್ದೆಯನ್ನೂ ತ್ಯಜಿಸಿದ್ದೆ';NEET UG ಟಾಪರ್ ಮಾತು
'ದಿನಕ್ಕೆ 17 ಗಂಟೆ ಓದು, ನಿದ್ದೆಯನ್ನೂ ತ್ಯಜಿಸಿದ್ದೆ';NEET UG ಟಾಪರ್ ಮಾತು
ಬೀಳುವ ಸ್ಥಿತಿಯಲ್ಲಿ 141 ವರ್ಷಗಳ ಇತಿಹಾಸವಿರುವ ಹಾರವಾಡ ಸರ್ಕಾರಿ ಶಾಲೆ
ಬೀಳುವ ಸ್ಥಿತಿಯಲ್ಲಿ 141 ವರ್ಷಗಳ ಇತಿಹಾಸವಿರುವ ಹಾರವಾಡ ಸರ್ಕಾರಿ ಶಾಲೆ