AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Acute Bronchitis: ಬೆಂಗಳೂರಿನಲ್ಲಿ ಹೆಚ್ಚಾಗ್ತಿದೆ ಗಾಳಿಯಿಂದ ಹರಡುವ ಅಸ್ತಮಾ ಸೋಂಕು

Air Pollution: ಬೆಂಗಳೂರಿನಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಲರ್ಜಿಯಿಂದಾಗಿ ಹಲವರಲ್ಲಿ ಅಸ್ತಮಾ ಕಾಣಿಸಿಕೊಳ್ಳುವುದು ಸಾಮಾನ್ಯವಾಗುತ್ತಿದೆ

Acute Bronchitis: ಬೆಂಗಳೂರಿನಲ್ಲಿ ಹೆಚ್ಚಾಗ್ತಿದೆ ಗಾಳಿಯಿಂದ ಹರಡುವ ಅಸ್ತಮಾ ಸೋಂಕು
ಬೆಂಗಳೂರಿನಲ್ಲಿ ಅಸ್ತಮಾ ಹೆಚ್ಚಾಗುತ್ತಿದೆ
TV9 Web
| Edited By: |

Updated on:Oct 25, 2021 | 8:43 AM

Share

ಬೆಂಗಳೂರು: ಕೊವಿಡ್​ ನಿಯಮಗಳನ್ನು ಕರ್ನಾಟಕ ಸರ್ಕಾರ ಸಡಿಲಿಸಿರುವುದು ಹಾಗೂ ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆಗಳ ಪರಿಣಾಮವಾಗಿ ನಗರದಲ್ಲಿ ಅಸ್ತಮಾ (ಅಕ್ಯೂಟ್ ಬ್ರಾಂಕಟಿಸ್) ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಅಸ್ತಮಾ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದಾರೆ ಎಂದು ಹಲವು ಆಸ್ಪತ್ರೆಗಳು ವರದಿ ಮಾಡಿವೆ. ವಾರಕ್ಕೆ ಸರಾಸರಿ ಐದರಿಂದ ಆರು ಹೊಸ ಅಸ್ತಮಾ ಪ್ರಕರಣಗಳು ನಗರದ ಆಸ್ಪತ್ರೆಗಳಲ್ಲಿ ವರದಿಯಾಗುತ್ತಿವೆ. ಈ ಕಾಯಿಲೆ ಕೊವಿಡ್​ ಲಕ್ಷಣಗಳನ್ನೇ ಹೊಂದಿದೆ. ಸತತ 20 ದಿನಗಳ ಅವಧಿಗೆ ಕೆಮ್ಮು ನಿಲ್ಲದ ಮಹಿಳೆಯೊಬ್ಬರು ಕೊವಿಡ್ ಸೋಂಕಿನ ಲಕ್ಷಣಗಳಿದ್ದ ಮಹಿಳೆಯೊಬ್ಬರು ಆಸ್ಪತ್ರೆಗೆ ಬಂದಿದ್ದರು. ಆಕೆಯ ಕೊವಿಡ್ ತಪಾಸಣಾ ವರದಿ ನೆಗೆಟಿವ್ ಬಂದಿದ್ದರೂ ಕೆಮ್ಮು ಮಾತ್ರ ನಿಲ್ಲುತ್ತಿರಲಿಲ್ಲ. ಕೊನೆಗೆ ವೈದ್ಯರು ಆಕೆಗೆ ಅಸ್ತಮಾ ಮತ್ತು ಕಫ ಕಡಿಮೆ ಮಾಡುವ ಔಷಧಗಳನ್ನು ಕೊಟ್ಟು ಕೆಮ್ಮು ಕಡಿಮೆ ಮಾಡಿದರು.

ಶ್ವಾಸಕೋಶದ ಕೆಳ ನಾಳಗಳಲ್ಲಿ ಕಂಡು ಬರುವ ಸೋಂಕು ಅಕ್ಯೂಟ್ ಬ್ರಾಂಕಟೈಸ್ (ಅಸ್ತಮಾ) ಆಗಿ ಪರಿವರ್ತನೆಯಾಗಲಿದೆ. ಗಾಳಿ ಸಂಚರಿಸುವ ದೊಡ್ಡ ನಾಳಗಳಿಗೆ ಇದರಿಂದ ಹಾನಿಯಾಗುತ್ತದೆಯಾದರೂ ನ್ಯೂಮೊನಿಯಾದ ಚಹರೆ ಕಾಣಿಸುವುದಿಲ್ಲ. ಸಾಮಾನ್ಯವಾಗಿ ವೈರಸ್​ಗಳಿಂದ ಈ ಸೋಂಕು ಕಾಣಿಸಿಕೊಳ್ಳುತ್ತದೆ, ಅಪರೂಪಕ್ಕೊಮ್ಮೆ ಬ್ಯಾಕ್ಟೀರಿಯಾಗಳಿಂದಲೂ ಈ ಸೋಂಕು ಬರುತ್ತದೆ.

‘ಶೀತ, ನೆಗಡಿ, ಕಫದಿಂದ ಕೂಡಿದ ಕೆಮ್ಮು, ಜ್ವರ ಮತ್ತು ಉಸಿರಾಟದ ತೊಂದರೆಗಳು ಈ ಕಾಯಿಲೆಯಲ್ಲಿ ಕಂಡುಬರುತ್ತವೆ. ಸೂಕ್ತ ಕಾಲದಲ್ಲಿ ಸರಿಯಾದ ಚಿಕಿತ್ಸೆ ದೊರೆಯದಿದ್ದರೆ ಆಕ್ಸಿಜನ್ ಸ್ಯಾಚುರೇಶನ್ ಪ್ರಮಾಣ ಕಡಿಮೆಯಾಗಬಹುದು. ಕೊರೊನಾ ಪಿಡುಗಿನ ಆತಂಕದ ಹಿನ್ನೆಲೆಯಲ್ಲಿ ಇಂಥ ಲಕ್ಷಣಗಳನ್ನು ಜನರು ಕೊವಿಡ್-19 ಎಂದು ಭಾವಿಸುವುದು ಸಹಜವಾಗಿಯೇ ಇದೆ’ ಎಂದು ವೈದ್ಯೆ ಡಾ ದಿವ್ಯಶ್ರೀ ಹೆಳುತ್ತಾರೆ. ಬೆಂಗಳೂರಿನಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಲರ್ಜಿಯಿಂದಾಗಿ ಹಲವರಲ್ಲಿ ಅಸ್ತಮಾ ಕಾಣಿಸಿಕೊಳ್ಳುವುದು ಸಾಮಾನ್ಯವಾಗುತ್ತಿದೆ ಎನ್ನುವುದು ವಿಕ್ರಮ್ ಆಸ್ಪತ್ರೆಯ ಶ್ವಾಸಕೋಶ ತಜ್ಞೆ ಡಾ.ವಸುನೇತ್ರ ಕಾಸರಗೋಡು ಅವರ ಅಭಿಪ್ರಾಯ.

ವೈರಸ್​ ಸೋಂಕಿತರಲ್ಲಿ ಕೆಲವೊಮ್ಮೆ ವಿಷಮಶೀತ ಜ್ವರ ಬರುತ್ತದೆ. ಸೋಂಕಿನಿಂದ ಚೇತರಿಸಿಕೊಂಡ ಕೆಲ ದಿನಗಳ ನಂತರ ಇಂಥವರಲ್ಲಿ ಅಸ್ತಮಾ ಕಂಡುಬಂದಿರುವುದು ಉಂಟು. ಚಳಿಗಾಲದಲ್ಲಿ ಅಸ್ತಮಾದಿಂದ ತೊಂದರೆ ಅನುಭವಿಸುವವರ ಸಂಖ್ಯೆ ಸಾಮಾನ್ಯವಾಗಿ ಹೆಚ್ಚಾಗುತ್ತದೆ. ಧೂಮಪಾನದ ಅಭ್ಯಾಸ ಇರುವವರಲ್ಲಿ ಈ ಸಮಸ್ಯೆ ಹೆಚ್ಚಾಗುತ್ತದೆ. ಇದಕ್ಕೆ ಸಕಾಲದಲ್ಲಿ ಚಿಕಿತ್ಸೆ ಸಿಗದಿದ್ದರೆ ಶ್ವಾಸಕೋಶದ ಆರೋಗ್ಯ ಇನ್ನಷ್ಟು ಹಾಳಾಗುತ್ತದೆ. 2ರಿಂದ 24 ತಿಂಗಳು ವಯೋಮಾನದ ಶಿಶುಗಳಲ್ಲಿಯೂ ಅಸ್ತಮಾದಿಂದ ಉಸಿರಾಟದ ತೊಂದರೆ ಕಂಡುಬರುತ್ತಿದೆ. ಕಳೆದ ಒಂದು ತಿಂಗಳಿನಿಂದೀಚೆಗೆ ಮಕ್ಕಳಲ್ಲಿ ಅಸ್ತಮಾ ಹೆಚ್ಚಾಗುತ್ತಿರುವುದನ್ನು ಗಮನಿಸಿದ್ದೇನೆ ಎನ್ನುತ್ತಾರೆ ಡಾ ದಿವ್ಯಶ್ರೀ.

ಈ ಅಂಶವನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಮಕ್ಕಳ ತಜ್ಞೆ ಡಾ ಸುಪ್ರಜಾ ಚಂದ್ರಶೇಖರ್ ಸಹ ದೃಢಪಡಿಸುತ್ತಾರೆ. ‘ಇತ್ತೀಚೆಗಷ್ಟೇ 4 ತಿಂಗಳ ಮಗುವಿಗೆ ನಾವು ಚಿಕಿತ್ಸೆ ನೀಡಿದೆವು. ಮಕ್ಕಳಲ್ಲಿ ಉಸಿರಾಟದ ಸಮಸ್ಯೆಗೆ ಸಕಾಲದಲ್ಲಿ ಚಿಕಿತ್ಸೆ ಸಿಗದಿದ್ದರೆ ಹೃದ್ರೋಗ ಮತ್ತು ಬೆಳವಣಿಗೆಯ ತೊಂದರೆಗಳು ಎದುರಾಗಬಹುದು’ ಎಂದು ಅವರು ಎಚ್ಚರಿಸುತ್ತಾರೆ.

ಇದನ್ನೂ ಓದಿ: ದೆಹಲಿ ಮಾಲಿನ್ಯ ನಿಯಂತ್ರಣಕ್ಕೆ 10 ಅಂಶಗಳ ಕ್ರಿಯಾ ಯೋಜನೆ ಬಿಡುಗಡೆ ಮಾಡಿದ ಅರವಿಂದ ಕೇಜ್ರಿವಾಲ್ ಇದನ್ನೂ ಓದಿ: Mint Benefits: ಅಸ್ತಮಾದಿಂದ ಕಾಲರಾ ತನಕ ಅನೇಕ ಸಮಸ್ಯೆಗಳಿಗೆ ಪುದೀನಾ ರಾಮಬಾಣ

Published On - 8:43 am, Mon, 25 October 21

ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್