AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Belly Fat: ಹೊಟ್ಟೆಯ ಕೊಬ್ಬನ್ನು ಕರಗಿಸಲು ಇಲ್ಲಿದೆ ಸಿಂಪಲ್​ ಸೂತ್ರ

ಭಾರ ಎತ್ತುವುದು, ವ್ಯಾಯಾಮ ಸೆರಿದಂತೆ ದೇಹವನ್ನು ದಂಡಿಸುವಂತಹ ಕೆಲಸಗಳನ್ನು ಮಾಡಿ. ಇದರಿಂದ ದೇಹದಲ್ಲಿ, ಅದರಲ್ಲೂ ಹೊಟ್ಟೆಯ ಭಾಗದಲ್ಲಿ ಶೇಖರಣೆಯಾದ ಕೊಬ್ಬಿನ ಅಂಶ ಕರಗುತ್ತದೆ.

Belly Fat: ಹೊಟ್ಟೆಯ ಕೊಬ್ಬನ್ನು ಕರಗಿಸಲು ಇಲ್ಲಿದೆ ಸಿಂಪಲ್​ ಸೂತ್ರ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Feb 24, 2022 | 8:00 AM

Share

ಜಂಕ್​ ಫುಡ್​ಗಳ ಸೇವನೆ, ಹೆಚ್ಚು ಹೊತ್ತು ಕುಳಿತುಕೊಂಡು ಕೆಲಸ ಮಾಡುವುದರಿಂದ ಹೊಟ್ಟೆಯ ಕೊಬ್ಬು ಕಾಣಿಸಿಕೊಳ್ಳುತ್ತದೆ. ಇದರಿಂದ ದೇಹದಲ್ಲಿ ಹಲವು ರೀತಿಯ ಸಮಸ್ಯೆಗಳು ಉಲ್ಬಣವಾಗುತ್ತದೆ . ಹೀಗಾಗಿ ಹಲವು ಅಭ್ಯಾಸಗಳನ್ನು ತಪ್ಪಿಸಿ ಒಂದಷ್ಟು ಹೆಲ್ತಿ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಅಗತ್ಯವಿದೆ. ಹೊಟ್ಟೆಯ ಕೊಬ್ಬಿನಿಂದ ಹೃದಯಕ್ಕೆ ಸಂಬಂಧಿಸಿದ ಕಾಯಿಲೆ, ಕರುಳಿನ ಅನಾರೋಗ್ಯ, ಕಿಬ್ಬೊಟ್ಟೆಯ ನೋವು ಹೀಗೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೊಟ್ಟೆಯ ಕೊಬ್ಬು ಹೃದಯಕ್ಕೆ ಅಪಾಯವನ್ನೂ ಕೂಡ ತಂದೊಡ್ಡಬಹದು. ಹೀಗಾಗಿ ಒಂದಷ್ಟು ಮುನ್ನೆಚ್ಚರಿಕಾ ಕ್ರಮ ಮತ್ತು ಆಹಾರ, ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಿದೆ. ಅದಕ್ಕಾಗಿ ಇಲ್ಲಿದೆ ಕೆಲವು ಸಿಂಪಲ್​ ಟಿಪ್ಸ್​ಗಳು

ಆಲ್ಕೋಹಾಲ್​ ಬಳಕೆ ನಿರ್ಬಂಧಿಸಿ: ದೇಹದ ತೂಕ ಅಥವಾ ಬೊಜ್ಜು ಹೆಚ್ಚಾಗಲು ಆಲ್ಕೋಹಾಲ್​ ಸೇವನೆ ಕೂಡ ಕಾರಣವಾಗುತ್ತದೆ. ಒಂದು ಬೀಯರ್​ ಕೂಡ ಸುಮಾರು 150 ಗ್ರಾಂನಷ್ಟು ಕ್ಯಾಲೋರಿಗಳನ್ನು ಹೊಂದಿರುತ್ತವೆ. ಅಲ್ಲದೆ ಸಕ್ಕರೆ ಅಂಶ ದೇಹದಲ್ಲಿ ಕೊಬ್ಬು ಸಂಗ್ರಹವಾಗುವಂತೆ ಮಾಡುತ್ತದೆ. ಹೀಗಾಗಿ ಹೊಟ್ಟೆಯ ಭಾಗದ ಕೊಬ್ಬನ್ನು ಕರಗಿಸಲು ಆಲ್ಕೋಹಾಲ್​ ಅಭ್ಯಾಸವಿದ್ದರೆ ತ್ಯಜಿಸಿಬಿಡಿ.

ದೇಹವನ್ನು ದಂಡಿಸಿ: ಭಾರ ಎತ್ತುವುದು, ವ್ಯಾಯಾಮ ಸೆರಿದಂತೆ ದೇಹವನ್ನು ದಂಡಿಸುವಂತಹ ಕೆಲಸಗಳನ್ನು ಮಾಡಿ. ಇದರಿಂದ ದೇಹದಲ್ಲಿ, ಅದರಲ್ಲೂ ಹೊಟ್ಟೆಯ ಭಾಗದಲ್ಲಿ ಶೇಖರಣೆಯಾದ ಕೊಬ್ಬಿನ ಅಂಶ ಕರಗುತ್ತದೆ. ಇದರಿಂದ ಕಿಬ್ಬೊಟ್ಟೆಯ ನೋವು ಕೂಡ ಕಡಿಮೆಯಾಗುತ್ತದೆ.

ಕಾರ್ಬೋಹೈಡ್ರೇಟ್​ಯುಕ್ತ ಆಹಾರ ಕಡಿಮೆ ಮಾಡಿ: ಕಾರ್ಬೋಹೈಡ್ರೇಟ್​ಯುಕ್ ಆಹಾರಗಳು ದೇಹದಲ್ಲಿ ಅನಗತ್ಯ ಕೊಬ್ಬು ಶೇಖರಣೆಯಾಗುವಂತೆ ಮಾಡುತ್ತದೆ.  ಬ್ರೆಡ್​, ಡೈರಿ ಪದಾರ್ಥಗಳಲ್ಲಿ ಹೆಚ್ಚು ಕಾರ್ಬೋಹೈಡ್ರೇಟ್​ ಅಂಶವಿರುತ್ತದೆ. ಹೀಗಾಗಿ ಅಂತಹ ಆಹಾರಗಳನ್ನು ಆದಷ್ಟು ನಿರ್ಭಂಧಿಸಿ. ಇದರಿಂದ ಹೊಟ್ಟೆಯ ಕೊಬ್ಬು ಕೂಡ ಕರಗುತ್ತದೆ.

ವ್ಯಾಯಾಮ ಮಾಡಿ: ಪ್ರತಿದಿನ ಕನಿಷ್ಠ ಅರ್ಧ ಗಂಟೆಯಾದರೂ ವ್ಯಾಯಾಮ ಮಾಡಿ. ಇದರಿಂದ ದೇಹದ ಎಲ್ಲಾ ಭಾಗಗಳಿಗೂ ಚಲನೆಯಾದಂತೆ ಆಗುತ್ತದೆ. ಅಲ್ಲದೆ ಕಿಬ್ಬೊಟ್ಟೆಯಲ್ಲಿರುವ ಕೊಬ್ಬು ಕರಗಿ ಕಿಡ್ನಿಗೆ ಸಂಬಂಧಿಸಿದ ತೊಂದರೆಯಿಂದ ಮುಕ್ತಿ ಪಡೆಯಬಹದು.

ಧ್ಯಾನ ಮಾಡಿ: ಧ್ಯಾನ ಮಾಡುವುದು ದೇಹದ ಅತಿಯಾದ ತೂಕ ಇಳಿಕೆಗೆ ಕಾರಣವಾಗುತ್ತದೆ. ಅಧ್ಯಯನದ ಪ್ರಕಾರ ಪ್ರತಿದಿನ 15 ನಿಮಿಷವಾದರು ಧ್ಯಾನ ಮಾಡಿ. ಇದರಿಂದ ಮನಸ್ಸು ಶಾಂತಗೊಳ್ಳುತ್ತದೆ.  ದೇಹದ ಅನಗತ್ಯಬ ಕೊಬ್ಬು ಕೂಡ ಇಳಿಕೆಯಾಗುತ್ತದೆ.

(ಇಲ್ಲಿರುವ ಸಲಹೆಗಳು ಟಿವಿ9 ಡಿಜಿಟಲ್​ನ ಅಭಿಪ್ರಾಯವಾಗಿರುವುದಿಲ್ಲ. ಟೈಮ್ಸ್​ ನೌನ ವರದಿ ಆಧರಿಸಿ ಮಾಹಿತಿ ನೀಡಲಾಗಿದೆ)

ಇದನ್ನೂ ಓದಿ: 

ಈ ಕಾರಣಕ್ಕೆ ನೀವು ಪ್ರತಿದಿನ ಮರ ಸೇಬು ಹಣ್ಣನ್ನು ಸೇವಿಸಬೇಕು