Vitamin A Deficiency: ನಿಮ್ಮ ದೇಹದಲ್ಲಿ ವಿಟಮಿನ್ ಎ ಕೊರತೆಯ 8 ಲಕ್ಷಣಗಳಿವು

ವಿಟಮಿನ್ ನಮ್ಮ ದೇಹಕ್ಕೆ ಅತ್ಯಂತ ಅಗತ್ಯವಾದ ಅಂಶವಾಗಿದೆ. ವಿಟಮಿನ್ ಕೊರತೆಯಿಂದ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ವಿಟಮಿನ್ ಎ ಕೊರತೆಯಿಂದ ನಮ್ಮ ದೇಹದಲ್ಲಿ ಏನೆಲ್ಲ ಬದಲಾವಣೆಗಳು ಉಂಟಾಗುತ್ತವೆ? ಅದಕ್ಕೆ ಪರಿಹಾರವೇನು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

Vitamin A Deficiency: ನಿಮ್ಮ ದೇಹದಲ್ಲಿ ವಿಟಮಿನ್ ಎ ಕೊರತೆಯ 8 ಲಕ್ಷಣಗಳಿವು
ವಿಟಮಿನ್
Follow us
|

Updated on: Feb 16, 2024 | 7:16 PM

ವಿಟಮಿನ್ ಕೊರತೆಯಿಂದ ಆಯಾಸ, ಉಸಿರಾಟದ ತೊಂದರೆ ಮತ್ತು ತಲೆತಿರುಗುವಿಕೆ ಮುಂತಾದ ರೋಗಲಕ್ಷಣಗಳು ಉಂಟಾಗುತ್ತವೆ. ಮಾತ್ರೆ ಅಥವಾ ಚುಚ್ಚುಮದ್ದಿನ ಮೂಲಕ ಸೇವಿಸುವ ವಿಟಮಿನ್ ಸಪ್ಲಿಮೆಂಟ್​ಗಳು (Vitamin Supplements) ನಮ್ಮ ದೇಹದಲ್ಲಿ ವಿಟಮಿನ್ ಕೊರತೆಯನ್ನು ಸರಿಪಡಿಸಬಹುದು. ಆರೋಗ್ಯಕರ ಕಣ್ಣುಗಳು, ಉತ್ತಮ ದೃಷ್ಟಿ, ಆರೋಗ್ಯಕರ ಚರ್ಮವನ್ನು ಕಾಪಾಡಿಕೊಳ್ಳಲು ವಿಟಮಿನ್ ಎ (Vitamin A Deficiency) ಬಹಳ ಅವಶ್ಯಕವಾಗಿದೆ. ಇದು ಸೋಂಕಿನ ವಿರುದ್ಧ ಹೋರಾಡಲು ನಿಮ್ಮ ದೇಹಕ್ಕೆ ಸಹಾಯ ಮಾಡುತ್ತದೆ.

ಮಾನವನ ದೇಹವು ವಿಟಮಿನ್ ಎ ಅನ್ನು ಸ್ವತಃ ಉತ್ಪಾದಿಸಲು ಸಾಧ್ಯವಿಲ್ಲದ ಕಾರಣ ನೀವು ಅದನ್ನು ನಿಮ್ಮ ಆಹಾರದಲ್ಲಿ ಇತರ ರೀತಿಯಲ್ಲಿ ಸೇರಿಸಿಕೊಳ್ಳಬೇಕು. ನಿಮ್ಮ ಆಹಾರದಲ್ಲಿ ನೀವು ಸಾಕಷ್ಟು ವಿಟಮಿನ್ ಎ ಪಡೆಯದಿದ್ದರೆ, ನೀವು ವಿಟಮಿನ್ ಎ ಕೊರತೆಯನ್ನು ಅನುಭವಿಸಬೇಕಾಗುತ್ತದೆ. ಇದು ದೃಷ್ಟಿ ಸಮಸ್ಯೆಗಳು, ಕಡಿಮೆಯಾದ ರೋಗನಿರೋಧಕ ಶಕ್ತಿ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ವಿಟಮಿನ್ ಎ ಕೊರತೆ ಉಂಟಾಗಿದೆ ಎಂಬುದರ ಲಕ್ಷಣಗಳಿವು.

ಇದನ್ನೂ ಓದಿ: ಬೆಂಗಳೂರಿನ ಶೇ 95 ರಷ್ಟು ಮಂದಿಗೆ ವಿಟಮಿನ್ ಡಿ ಕೊರತೆ: ತಜ್ಞರು ಹೇಳುವ ಕಾರಣ ಇಲ್ಲಿದೆ

ಶುಷ್ಕತೆ:

ವಿಪರೀತ ಶುಷ್ಕತೆ, ಚರ್ಮದ ಕಿರಿಕಿರಿ ಅಥವಾ ಊತವು ವಿಟಮಿನ್ ಎ ಕೊರತೆಯಿಂದ ಉಂಟಾಗುತ್ತದೆ. ಇದು ಎಸ್ಜಿಮಾಗೆ ಕಾರಣವಾಗಬಹುದು.

ಕಣ್ಣಿನ ಸಮಸ್ಯೆಗಳು:

ಕಡಿಮೆ ವಿಟಮಿನ್ ಎ ಮಟ್ಟಗಳು ದೃಷ್ಟಿ ದೋಷ, ಒಣಗಿದ ಕಣ್ಣುಗಳು ಮತ್ತು ರಾತ್ರಿ ಕುರುಡುತನದ ಸಮಸ್ಯೆಗಳಿಗೆ ಕಾರಣವಾಗಬಹುದು.

ದೇಹದ ಬೆಳವಣಿಗೆಗೆ ತೊಂದರೆ:

ಮಕ್ಕಳಲ್ಲಿ ವಿಟಮಿನ್ ಎ ಕೊರತೆಯು ದೈಹಿಕ ಬೆಳವಣಿಗೆಗೆ ಅಡ್ಡಿಯಾಗಬಹುದು.

ಸೋಂಕುಗಳು:

ವಿಟಮಿನ್ ಎ ರೋಗನಿರೋಧಕ ಶಕ್ತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರ ಪರಿಣಾಮವಾಗಿ ನೀವು ಆಗಾಗ ಸೋಂಕಿಗೆ ಒಳಗಾಗಬಹುದು.

ಗಾಯವು ನಿಧಾನವಾಗಿ ವಾಸಿಯಾಗುತ್ತದೆ:

ವಿಟಮಿನ್ ಎ ಕೊರತೆಯು ಗಾಯಗಳು ನಿಧಾನವಾಗಿ ವಾಸಿಯಾಗುವಂತೆ ಮಾಡುತ್ತದೆ. ಏಕೆಂದರೆ ಇದು ಚರ್ಮದ ಕೋಶಗಳ ದುರಸ್ತಿಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ: ಕೂದಲು ಡ್ಯಾಮೇಜ್ ಆಗದಂತೆ ತಡೆಯುವ 7 ವಿಟಮಿನ್​ಗಳಿವು

ಅತಿಯಾದ ಆಯಾಸ:

ನೀವು ನಿರಂತರ ಆಯಾಸವನ್ನು ಅನುಭವಿಸಿದರೆ ನೀವು ವಿಟಮಿನ್ ಎ ಕೊರತೆಯನ್ನು ಹೊಂದಿರಬಹುದು ಎಂದರ್ಥ.

ಬಂಜೆತನ:

ವಿಟಮಿನ್ ಎ ಕೊರತೆಯಿಂದ ಗಂಡು ಮತ್ತು ಹೆಣ್ಣು ಇಬ್ಬರಿಗೂ ಬಂಜೆತನ ಉಂಟಾಗಬಹುದು.

ವಿಪರೀತ ತೂಕ ಇಳಿಕೆ:

ನೀವು ಇದ್ದಕ್ಕಿದ್ದಂತೆ ಸಾಕಷ್ಟು ತೂಕವನ್ನು ಕಳೆದುಕೊಂಡರೆ, ಅದು ವಿಟಮಿನ್ ಎ ಕೊರತೆಯ ಸಂಕೇತವಾಗಿರಬಹುದು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ