West Nail Virus: ಕ್ಯಾಲಿಫೋರ್ನಿಯಾ: ಸತ್ತ ಕಾಗೆಗಳಲ್ಲಿ ವೆಸ್ಟ್ ನೈಲ್ ವೈರಸ್ ಪತ್ತೆ
ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ನ ನಾರ್ಥ್ ಹಿಲ್ಸ್ನಲ್ಲಿ ಸತ್ತ ಕಾಗೆಗಳಲ್ಲಿ ವೆಸ್ಟ್ ನೈಲ್ ವೈರಸ್ (West Nail Virus) ಪತ್ತೆಯಾಗಿದೆ.
ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ನ ನಾರ್ಥ್ ಹಿಲ್ಸ್ನಲ್ಲಿ ಸತ್ತ ಕಾಗೆಗಳಲ್ಲಿ ವೆಸ್ಟ್ ನೈಲ್ ವೈರಸ್ (West Nail Virus) ಪತ್ತೆಯಾಗಿದೆ. ಮೇರಿ ಬೇಟ್ಸ್ ಎಂಬುವವರು ವಾರದ ಹಿಂದೆ ವಾಕಿಂಗ್ಗೆ ತೆರಳುವಾಗ ವಿಚಿತ್ರ ಒಂದನ್ನು ಗಮನಿಸಿದ್ದರು. ಮೂರು ಕಾಗೆಗಳನ್ನು ಸತ್ತು ಬಿದ್ದಿದ್ದನ್ನು ನೋಡಿ ಅಷ್ಟು ಲಕ್ಷ್ಯ ಕೊಡದೆ ಮನೆಗೆ ಹಿಂದಿರುಗಿದ್ದರು , ಮನೆಗೆ ಬರುವಷ್ಟರಲ್ಲಿ ಮನೆಯ ತೋಟದಲ್ಲೂ ಒಂದು ಕಾಗೆ ಸಾಯುವ ಸ್ಥಿತಿಯಲ್ಲಿತ್ತು. ಕೆಲವೇ ನಿಮಿಷಗಳಲ್ಲಿ ಆ ಕಾಗೆಯೂ ಕೂಡ ಮೃತಪಟ್ಟಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.
ಮೇರಿ ತಕ್ಷಣವೇ ಲಾಸ್ ಏಂಜಲೀಸ್ನ ಸ್ಥಳೀಯ ಆಡಳಿತಕ್ಕೆ ವಿಷಯವನ್ನು ತಿಳಿಸಿದ್ದರು. ಮರುದಿನ ಕಾಗೆಗಳನ್ನು ಪರೀಕ್ಷೆಗೆ ಕಳುಹಿಸಲಾಯಿತು ಪರೀಕ್ಷೆಯಲ್ಲಿ ಕಾಗೆಗಳಲ್ಲಿ ವೆಸ್ಟ್ ನೇಲ್ ವೈರಸ್ ತಗುಲಿ ಮೃತಪಟ್ಟಿರುವುದು ಗೊತ್ತಾಗಿದೆ. ಬಳಿಕ ಸುತ್ತಮುತ್ತಲ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಯಿತು, ಹಾಗೆಯೇ ಸತ್ತ ಕಾಗೆಗಳು ಕಂಡುಬಂದರೆ ಅದರಿಂದ ದೂರವಿರುವಂತೆ ಸೂಚಿಸಲಾಯಿತು.
ಸೊಳ್ಳೆಯ ಸ್ಯಾಂಪಲ್ ಕಳುಹಿಸಿದಾಗ ವರದಿ ನೆಗೆಟಿವ್ ಬಂದಿದ್ದು, ಬಳಿಕ ಕಾಗೆಗಳಲ್ಲಿ ಪಾಸಿಟಿವ್ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಆದರೆ ಕಾಗೆಗಳಿಗೆ ಸೊಳ್ಳೆಗಳು ಹೇಗೆ ಕಚ್ಚಿವೆ ಎಂಬುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ವೆಸ್ಟ್ ನೈಲ್ ಜ್ವರ ಎಂದರೇನು?
ವೆಸ್ಟ್ ನೈಲ್ ಜ್ವರವು ವೆಸ್ಟ್ ನೈಲ್ ವೈರಸ್‌ನಿಂದ ಉಂಟಾಗುವ ವೈರಲ್ ಕಾಯಿಲೆಯಾಗಿದ್ದು, ಕ್ಯುಲೆಕ್ಸ್ ಸೊಳ್ಳೆಯಿಂದ ಹರಡುತ್ತದೆವೆಸ್ಟ್ ನೈಲ್ ವೈರಸ್ ಸೋಂಕು ಸೋಂಕಿತ ಸೊಳ್ಳೆಗಳ ಮೂಲಕ ಹರಡುತ್ತದೆ. ಈ ಸೊಳ್ಳೆಗಳು ಪ್ರಾಥಮಿಕವಾಗಿ ಕ್ಯುಲೆಕ್ಸ್ ಜಾತಿಯ ಸೊಳ್ಳೆಗಳಿಗೆ ಸೇರಿವೆ. ಈ ಸೊಳ್ಳೆಗಳು ಸೋಂಕಿತ ಪಕ್ಷಿಗಳ ರಕ್ತ ಹೀರಿಕೊಳ್ಳುವಾಗ ಸೋಂಕಿಗೆ ಒಳಗಾಗುತ್ತವೆ ಎಂದು WHO ಹೇಳಿಕೆಯಲ್ಲಿ ತಿಳಿಸಿದೆ. ವೈರಸ್ ಸೊಳ್ಳೆಯ ದೇಹವನ್ನು ಪ್ರವೇಶಿಸಿದ ನಂತರ, ಅದು ಕೆಲವು ದಿನಗಳವರೆಗೆ ರಕ್ತದಲ್ಲಿ ಉಳಿಯುತ್ತದೆ. ನಂತರ ವೈರಸ್ ಅಂತಿಮವಾಗಿ ಸೊಳ್ಳೆಯ ಲಾಲಾರಸ ಗ್ರಂಥಿಗಳಿಗೆ ಪ್ರವೇಶಿಸುತ್ತದೆ.
ಈ ಜ್ವರದ ಲಕ್ಷಣಗಳು ಏನು? ಮೆನಿಂಜೈಟಿಸ್, ಪಾರ್ಶ್ವವಾಯು, ಮತ್ತು ಕೆಲವೊಬ್ಬರಿಗೆ ಸಾವು ಕೂಡ ಬರಬಹುದು. ಸುಮಾರು ಶೇ. 80 ಸೋಂಕಿತ ಜನರು ಲಕ್ಷಣ ರಹಿತರಾಗಿದ್ದಾರೆ. ಜ್ವರ, ತಲೆನೋವು, ಆಯಾಸ, ದೇಹದ ನೋವು, ವಾಕರಿಕೆ, ದದ್ದು ಮತ್ತು ಊದಿಕೊಂಡ ಗ್ರಂಥಿಗಳು ಇತ್ಯಾದಿಗಳು ಕಂಡು ಬರುತ್ತವೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ