West Nile Fever: ವೆಸ್ಟ್ ನೈಲ್ ಜ್ವರ ಎಂದರೇನು? ಮಲೇರಿಯಾಗಿಂತ ಭಿನ್ನವೇ?
West Nile Fever:ದೇಶದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಕಡಿಮೆಯಾಗಿದ್ದರೂ ಕೂಡ ವಿವಿಧ ರೀತಿಯ ಸೋಂಕುಗಳು ಪತ್ತೆಯಾಗುತ್ತಿವೆ. ಈ ಹಿಂದೆ ನಿಪಾ ವೈರಸ್‌ನಿಂದ ನರಳಿದ್ದ ಕೇರಳಕ್ಕೆ ಇದೀಗ ವೆಸ್ಟ್ ನೈಲ್ ಜ್ವರ( West Nile Fever)ಎನ್ನುವ ಹೊಸ ರೋಗವು ಆತಂಕವನ್ನು ಹೆಚ್ಚಿಸಿದೆ.
ದೇಶದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಕಡಿಮೆಯಾಗಿದ್ದರೂ ಕೂಡ ವಿವಿಧ ರೀತಿಯ ಸೋಂಕುಗಳು ಪತ್ತೆಯಾಗುತ್ತಿವೆ. ಈ ಹಿಂದೆ ನಿಪಾ ವೈರಸ್‌ನಿಂದ ನರಳಿದ್ದ ಕೇರಳಕ್ಕೆ ಇದೀಗ ವೆಸ್ಟ್ ನೈಲ್ ಜ್ವರ( West Nile Fever)ಎನ್ನುವ ಹೊಸ ರೋಗವು ಆತಂಕವನ್ನು ಹೆಚ್ಚಿಸಿದೆ.
ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ 47 ವರ್ಷದ ವ್ಯಕ್ತಿಯೊಬ್ಬರು ವೆಸ್ಟ್ ನೈಲ್ ಜ್ವರದ ಕಾರಣದಿಂದಾಗಿ ಮಾರ್ಚ್ 29ರಂದು ಸಾವನ್ನಪ್ಪಿದ್ದರು.
ವೆಸ್ಟ್ ನೈಲ್ ವೈರಸ್ ಸೊಳ್ಳೆಗಳ ಮೂಲಕ ಹರಡುತ್ತದೆ. ನಾವು ಈಗಾಗಲೇ ಬೇಸಿಗೆಯ ಉತ್ತುಂಗದಲ್ಲಿದ್ದೇವೆ. ಈ ಕಾಯಿಲೆ ಹರಡುವುದನ್ನು ತಡೆಯಲು ಸೊಳ್ಳೆಗಳ ಬೆಳವಣಿಗೆಯನ್ನು ನಿಯಂತ್ರಿಸುವುದು ಮತ್ತು ಸೊಳ್ಳೆಗಳನ್ನು ನಾಶ ಮಾಡುವುದಾಗಿದೆ. ಇದು ಮಾತ್ರ ಅತ್ಯಗತ್ಯ ಮಾರ್ಗ ಎಂದು ತಜ್ಞರು ಶಿಫಾರಸು ಮಾಡಿದ್ದಾರೆ.
ವೆಸ್ಟ್ ನೈಲ್ ಜ್ವರ ಎಂದರೇನು? ವೆಸ್ಟ್ ನೈಲ್ ಜ್ವರವು ವೆಸ್ಟ್ ನೈಲ್ ವೈರಸ್‌ನಿಂದ ಉಂಟಾಗುವ ವೈರಲ್ ಕಾಯಿಲೆಯಾಗಿದ್ದು, ಕ್ಯುಲೆಕ್ಸ್ ಸೊಳ್ಳೆಯಿಂದ ಹರಡುತ್ತದೆವೆಸ್ಟ್ ನೈಲ್ ವೈರಸ್ ಸೋಂಕು ಸೋಂಕಿತ ಸೊಳ್ಳೆಗಳ ಮೂಲಕ ಹರಡುತ್ತದೆ. ಈ ಸೊಳ್ಳೆಗಳು ಪ್ರಾಥಮಿಕವಾಗಿ ಕ್ಯುಲೆಕ್ಸ್ ಜಾತಿಯ ಸೊಳ್ಳೆಗಳಿಗೆ ಸೇರಿವೆ. ಈ ಸೊಳ್ಳೆಗಳು ಸೋಂಕಿತ ಪಕ್ಷಿಗಳ ರಕ್ತ ಹೀರಿಕೊಳ್ಳುವಾಗ ಸೋಂಕಿಗೆ ಒಳಗಾಗುತ್ತವೆ ಎಂದು WHO ಹೇಳಿಕೆಯಲ್ಲಿ ತಿಳಿಸಿದೆ. ವೈರಸ್ ಸೊಳ್ಳೆಯ ದೇಹವನ್ನು ಪ್ರವೇಶಿಸಿದ ನಂತರ, ಅದು ಕೆಲವು ದಿನಗಳವರೆಗೆ ರಕ್ತದಲ್ಲಿ ಉಳಿಯುತ್ತದೆ. ನಂತರ ವೈರಸ್ ಅಂತಿಮವಾಗಿ ಸೊಳ್ಳೆಯ ಲಾಲಾರಸ ಗ್ರಂಥಿಗಳಿಗೆ ಪ್ರವೇಶಿಸುತ್ತದೆ.
ಈ ಜ್ವರದ ಲಕ್ಷಣಗಳು ಏನು? ತೀವ್ರ ವೆಸ್ಟ್ ನೈಲ್ ಕಾಯಿಲೆ 1% ಕ್ಕಿಂತ ಕಡಿಮೆ ಇರುತ್ತದೆ. ಕೆಲವರಿಗೆ ಎನ್ಸೆಫಾಲಿಟಿಸ್, ಮೆನಿಂಜೈಟಿಸ್, ಪಾರ್ಶ್ವವಾಯು, ಮತ್ತು ಕೆಲವೊಬ್ಬರಿಗೆ ಸಾವು ಕೂಡ ಕಂಡು ಬರುತ್ತದೆ. ಸುಮಾರು ಶೇ. 80 ಸೋಂಕಿತ ಜನರು ಲಕ್ಷಣ ರಹಿತರಾಗಿದ್ದಾರೆ. ಜ್ವರ, ತಲೆನೋವು, ಆಯಾಸ, ದೇಹದ ನೋವು, ವಾಕರಿಕೆ, ದದ್ದು ಮತ್ತು ಊದಿಕೊಂಡ ಗ್ರಂಥಿಗಳು ಇತ್ಯಾದಿಗಳು ಕಂಡು ಬರುತ್ತವೆ.
1937ರಲ್ಲಿ ಮೊದಲ ಪ್ರಕರಣ ಪತ್ತೆ WHO ಪ್ರಕಾರ, ವೆಸ್ಟ್ ನೈಲ್‌ನ ಮೊದಲ ಪ್ರಕರಣವು 1937 ರಲ್ಲಿ ವರದಿಯಾಗಿದೆ. ಈ ವೈರಸ್ ಕಾಗೆ ಮತ್ತು ಪಾರಿವಾಳಗಳಲ್ಲಿ ಕಂಡುಬಂದಿದೆ. ಆಗ ಉಗಾಂಡಾದಲ್ಲಿ ನೆಲೆಸಿರುವ ಮಹಿಳೆಯೊಬ್ಬರು ಇದರ ಸೋಂಕಿಗೆ ಒಳಗಾಗಿದ್ದರು. ನಂತರ ಉತ್ತರ ಈಜಿಪ್ಟ್‌ನ ನೈಲ್ ಡೆಲ್ಟಾ ಪ್ರದೇಶದಲ್ಲಿ 1953 ರಲ್ಲಿ ವೈರಸ್ ಅನ್ನು ಗುರುತಿಸಲಾಯಿತು.
ಪಕ್ಷಿಗಳಲ್ಲಿ ಕಾಣಿಸಿಕೊಂಡಿತ್ತು ಈ ವಿಚಿತ್ರ ಜ್ವರ 1997 ರ ಮೊದಲು, ಈ ವೈರಸ್ ಪಕ್ಷಿಗಳಿಗೆ ಹೆಚ್ಚು ಅಪಾಯಕಾರಿ ಎಂದು ಪರಿಗಣಿಸಲಾಗಿಲ್ಲ. ಆದರೆ, ಇದರ ನಂತರ ಈ ವೈರಸ್‌ನ ಅಪಾಯಕಾರಿ ತಳಿಯು ಇಸ್ರೇಲ್‌ನಲ್ಲಿ ಕಾಣಿಸಿಕೊಂಡಿತು. ಇದರಿಂದಾಗಿ ಹಲವು ಪಕ್ಷಿಗಳು ಇದುವರೆಗೆ ಸಾವನ್ನಪ್ಪಿವೆ.
ವೆಸ್ಟ್ ನೈಲ್ ಜ್ವರದ ಲಕ್ಷಣಗಳೇನು? -ವಾಂತಿ ಅಥವಾ ವಾಕರಿಕೆ -ಚರ್ಮದ ದದ್ದು -ಊದಿಕೊಂಡ ಗ್ರಂಥಿಗಳು. -ಜ್ವರ -ತಲೆನೋವು -ವಿಪರೀತ ಆಯಾಸ -ಸ್ನಾಯು ಸೆಳೆತ ಅಥವಾ ಮೈ-ಕೈ ನೋವು
ಮಲೇರಿಯಾ ಹಾಗೂ ವೆಸ್ಟ್ ನೈಲ್ ಜ್ವರದ ನಡುವಿನ ವ್ಯತ್ಯಾಸ -ಎರಡೂ ರೋಗಕ್ಕೂ ನಿರ್ದಿಷ್ಟ ಚಿಕಿತ್ಸೆಗಳಿಲ್ಲ,
-ಮಲೇರಿಯಾದ ಲಕ್ಷಣಗಳು ತಕ್ಷಣವೇ ಗೋಚರಿಸುತ್ತದೆ, ವೆಸ್ಟ್ ನೈಲ್ ಜ್ವರದ ಪ್ರಕರಣಗಳಲ್ಲಿ ಶೇ.80ರಷ್ಟು ಮಂದಿಗೆ ಲಕ್ಷಣಗಳಿರುವುದಿಲ್ಲ.
-ಎರಡೂ ಕಾಯಿಲೆಯೂ ಸೊಳ್ಳೆಯ ಮೂಲಕ ಹರಡುವಂಥದ್ದು
-ಮಲೇರಿಯಾವು ಅನಾಫಿಲಿಸ್ ಹೆಣ್ಣು ಸೊಳ್ಳೆಯಿಂದ ಹರಡುವಂಥದ್ದು, ವೆಸ್ಟ್ ನೈಲ್ ಜ್ವರ ಕ್ಯೂಲೆಕ್ಸ್ ಸೊಳ್ಳೆಯಿಂದ ಬರುವಂಥದ್ದು.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ