Kidney Problem: ಕಿಡ್ನಿ ಸಮಸ್ಯೆಗಳಿಂದ ದೂರವಿರಲು ಈ ಕೆಲಸವನ್ನು ನಿತ್ಯ ತಪ್ಪದೇ ಮಾಡಿ
Kidney Problem:ಮೂತ್ರಪಿಂಡ(Kidney)ವು ದೇಹದ ಅತ್ಯಂತ ಸೂಕ್ಷ್ಮವಾದ ಅಂಗ. ಹೆಚ್ಚಿನವರು ಈ ಅಂಗದ ಬಗ್ಗೆ ಹೆಚ್ಚು ಕಾಳಜಿವಸುವುದಿಲ್ಲ. ಇತ್ತೀಚಿನ ಜೀವನಶೈಲಿಯಿಂದ ಕಂಡು ಬರುವ ಮಧುಮೇಹ, ಸ್ಥೂಲಕಾಯ ಮತ್ತು ರಕ್ತದೊತ್ತಡದ ಸಮಸ್ಯೆಗಳಿಂದ ಮೂತ್ರಪಿಂಡದ ಕಾಯಿಲೆಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಮೂತ್ರಪಿಂಡ(Kidney)ವು ದೇಹದ ಅತ್ಯಂತ ಸೂಕ್ಷ್ಮವಾದ ಅಂಗ. ಹೆಚ್ಚಿನವರು ಈ ಅಂಗದ ಬಗ್ಗೆ ಹೆಚ್ಚು ಕಾಳಜಿವಸುವುದಿಲ್ಲ. ಇತ್ತೀಚಿನ ಜೀವನಶೈಲಿಯಿಂದ ಕಂಡು ಬರುವ ಮಧುಮೇಹ, ಸ್ಥೂಲಕಾಯ ಮತ್ತು ರಕ್ತದೊತ್ತಡದ ಸಮಸ್ಯೆಗಳಿಂದ ಮೂತ್ರಪಿಂಡದ ಕಾಯಿಲೆಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಜೀವನ ಶೈಲಿ, ಆಹಾರ ಕ್ರಮಗಳು ಇಂತಹ ಅಪಾಯವನ್ನು ಹೆಚ್ಚಿಸುತ್ತದೆ. ಆದರೆ ನಮ್ಮನ್ನು ಆರೋಗ್ಯವಂತರಾಗಿಡುವ ಅನೇಕ ಕಾರ್ಯಗಳನ್ನು ಕಿಡ್ನಿ ಮಾಡುತ್ತದೆ. ಇದರ ಆರೈಕೆಗೆ ಒತ್ತು ನೀಡದಿದ್ದರೆ ಹಲವು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.
ನಿಮ್ಮ ಆಹಾರ ಕ್ರಮದಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಮೂತ್ರಪಿಂಡ ಅಥವಾ ಕಿಡ್ನಿಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು. ಆದರೆ ಈಗಾಗಲೇ ಮೂತ್ರಪಿಂಡದ ಸಮಸ್ಯೆಗೆ ಒಳಗಾದವರು ತಮ್ಮ ಆಹಾರದಲ್ಲಿ ಪೊಟಾಷಿಯಂ ಅಂಶ ಕಡಿಮೆ ಇರುವ ಆಹಾರಗಳನ್ನು ಸೇವಿಸುವುದು ಉತ್ತಮ. ಇಂತಹ ಸಮಯದಲ್ಲಿ ಸೇಬು, ಪೇರಳೆ, ಪಪ್ಪಾಯಿ ಮುಂತಾದ ಹಣ್ಣುಗಳನ್ನು ತಿನ್ನುವುದರಿಂದ ದೇಹದಲ್ಲಿ ಸಕ್ಕರೆ ಅಂಶ ಕೂಡ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.
ದೈಹಿಕ ಚಟುವಟಿಕೆಗಳಿರಲಿ ದಿನದ ಯಾವುದೇ ಸಮಯದಲ್ಲಿ ಯಾವುದೇ ವಯಸ್ಸಿನವರು ಮಾಡಬಹುದಾದ ಸುಲಭವಾದ ಮತ್ತು ಸರಳವಾದ ವ್ಯಾಯಾಮ ವಾಕಿಂಗ್. ವ್ಯಾಯಾಮ ಮಾಡಲು ಸಮಯ ಸಿಗದವರಿಗೆ ಅಥವಾ ವ್ಯಾಯಾಮವನ್ನೇ ಮಾಡದವರಿಗೆ ವಾಕಿಂಗ್ ಉತ್ತಮ ವ್ಯಾಯಾಮ. ಆರಂಭದಲ್ಲಿ 10-15 ನಿಮಿಷಗಳ ಕಾಲ ನಡೆದು, ನಂತರ ಕ್ರಮೇಣ ಇದರ ಅವಧಿಯನ್ನು ಹೆಚ್ಚಿಸಬಹುದು.
ನೃತ್ಯ: ನೃತ್ಯವನ್ನು ಉತ್ತಮ ವ್ಯಾಯಾಮವೆಂದು ಪರಿಗಣಿಸಲಾಗುತ್ತದೆ. ಜನರು ಅದನ್ನು ಆನಂದಿಸುವುದು ಮಾತ್ರವಲ್ಲ, ನೃತ್ಯವು ದೇಹಕ್ಕೆ ವ್ಯಾಯಾಮವನ್ನು ನೀಡುತ್ತದೆ. ಮೂತ್ರಪಿಂಡದ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ನೃತ್ಯವು ಉತ್ತಮ ವ್ಯಾಯಾಮ ಎಂದು ಸಾಬೀತಾಗಲಿದೆ.
ಯೋಗಾಭ್ಯಾಸ: ಮೂತ್ರಪಿಂಡದ ಕಾಯಿಲೆಯಿಂದ ಉಂಟಾಗುವ ಆತಂಕ ಮತ್ತು ಒತ್ತಡವನ್ನು ನಿವಾರಿಸುತ್ತದೆ. ವೈದ್ಯರು ಮತ್ತು ಯೋಗ ತರಬೇತುದಾರರೊಂದಿಗೆ ಚರ್ಚಿಸಿ ಸುಲಭವಾದ ಯೋಗ ಭಂಗಿಗಳ ಬಗ್ಗೆ ಮಾಹಿತಿ ಪಡೆದು, ಅವುಗಳನ್ನು ಅಭ್ಯಾಸ ಮಾಡಿ.
ಯೋಗಾಭ್ಯಾಸವು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಲು ಉತ್ತಮ ಮಾರ್ಗವಾಗಿದೆ. ಇದನ್ನು ಜನರು ಕ್ರಮೇಣ ಅಳವಡಿಸಿಕೊಳ್ಳುತ್ತಿದ್ದಾರೆ. ಯೋಗ ಮತ್ತು ಧ್ಯಾನವನ್ನು ಅಭ್ಯಾಸ ಮಾಡುವುದರಿಂದ ಮನಸ್ಸು ಶಾಂತಗೊಳ್ಳುತ್ತದೆ.
ಈಜು: ಈಜುವುದು ಮೋಜಿನ ಚಟುವಟಿಕೆ ಮಾತ್ರವಲ್ಲ, ಇದು ಉತ್ತಮ ಮತ್ತು ಸುಲಭವಾದ ವ್ಯಾಯಾಮವೂ ಹೌದು. ನೀರಿನಲ್ಲಿ ಈಜುವಾಗ ಕೀಲುಗಳ ಮೇಲೆ ಒತ್ತಡ ಕಡಿಮೆಯಾಗುವುದರಿಂದ ಕಿಡ್ನಿ, ಅಧಿಕ ತೂಕದಿಂದ ಪರಿಹಾರ ಸಿಗಲಿದೆ.
ರಕ್ತದಲ್ಲಿ ಗ್ಲೂಕೋಸ್ ಮಟ್ಟವನ್ನು ಕಾಪಾಡಿಕೊಳ್ಳಿ: ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವುದರಿಂದ ಕಿಡ್ನಿ ಸಮಸ್ಯೆಗಳನ್ನು ಕೂಡ ದೂರ ಇಡಬಹುದಾಗಿದೆ. ಜೀವನಶೈಲಿ ಬದಲಾವಣೆಯಿಮದಾಗಿ ತೂಕವನ್ನು ನಿಯಂತ್ರಣದಲ್ಲಿಡುವುದು ಸ್ವಲ್ಪ ಕಷ್ಟ. ವ್ಯಾಯಾಮ ಮಾಡಿ, ಧ್ಯಾನ ಮಾಡಿ, ಉಪ್ಪು ಕಡಿಮೆ ಇರುವ ಆಹಾರ ಸೇವಿಸಿ, ಮದ್ಯಪಾನ ಕಡಿಮೆ ಮಾಡಿ ಆಗ ರಕ್ತದೊತ್ತಡವೂ ನಿವಾರಣೆಯಾಗಲಿದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:54 pm, Thu, 2 June 22