ಚೂರಿಯಂತೆ ಚೂಪಾದ ಮುಳ್ಳುಗಳಿಂದ ಆವೃತ್ತವಾದ, ಕೆಂಪು ಕೆಂಪಾದ ಹಣ್ಣುಗಳಿಂದ ಆಕರ್ಷಿಸುವ ಪಾಪಾಸುಕಳ್ಳಿ ಆರೋಗ್ಯದ ಖಜಾನೆಯನ್ನೇ ಹೊಂದಿದೆ!

sadhu srinath

sadhu srinath |

Updated on: Jun 03, 2022 | 6:06 AM

ಪಾಪಾಸುಕಳ್ಳಿ ರೈತನ ಮಿತ್ರ - ಇದರಲ್ಲಿಅನೇಕ ಪ್ರಭೇದಗಳಿವೆ. ರಾಜಸ್ಥಾನದಲ್ಲಿ ಮುಳ್ಳು ಇರದ ಪಾಪಾಸುಕಳ್ಳಿ ಬೆಳೆದು ಕತ್ತರಿಸಿ ದನಗಳಿಗೆ ಮೇವಾಗಿ ಬಳಸುತ್ತಾರೆ. ಹೆಣ್ಣು ಮಕ್ಕಳ ಕಿವಿ ಚುಚ್ಚಲು ಇದರ ಮುಳ್ಳುಗಳನ್ನೇ ಬಳಸುತ್ತಿದ್ದರು. ಅತ್ಯಂತ ಚೂಪಾದ, ಗಟ್ಟಿಯಾದ ಇದರ ಮುಳ್ಳಿನಲ್ಲಿ ಆಂಟಿಸೆಪ್ಟಿಕ್ ಗುಣ ಇರುತ್ತದೆ.

ಚೂರಿಯಂತೆ ಚೂಪಾದ ಮುಳ್ಳುಗಳಿಂದ ಆವೃತ್ತವಾದ, ಕೆಂಪು ಕೆಂಪಾದ ಹಣ್ಣುಗಳಿಂದ ಆಕರ್ಷಿಸುವ ಪಾಪಾಸುಕಳ್ಳಿ ಆರೋಗ್ಯದ ಖಜಾನೆಯನ್ನೇ ಹೊಂದಿದೆ!
ಚೂರಿಯಂತೆ ಚೂಪಾದ ಮುಳ್ಳುಗಳಿಂದ ಆವೃತ್ತವಾದ, ಕೆಂಪು ಕೆಂಪಾದ ಹಣ್ಣುಗಳಿಂದ ಆಕರ್ಷಿಸುವ ಪಾಪಾಸುಕಳ್ಳಿ ಆರೋಗ್ಯದ ಖಜಾನೆಯನ್ನೇ ಹೊಂದಿದೆ!

ಕನ್ನಡ ಭಾಷೆಯಲ್ಲಿ ಪಾಪಾಸುಕಳ್ಳಿ, ಡಬ್ಬುಗಳ್ಳಿ, ಡಬ್ಬಗೊಳ್ಳಿ, ಸಂಸ್ಕೃತ ಭಾಷೆಯಲ್ಲಿ ವಜ್ರಕಾಯ, ವಿದಾರ ವಿಶ್ವಸಾರಕ, ಹಿಂದಿ ಹಾಗೂ ಉರ್ದು ಭಾಷೆಯಲ್ಲಿ ನಾಗ ಫಣಿ (Opuntia elatior, prickly pear) ಭಾರತಾದ್ಯಂತ ಬಂಜರು ಭೂಮಿಯಲ್ಲಿ ಕುರುಚಲು ಕಾಡುಗಳಲ್ಲಿ ಬೆಳೆಯುವ ಸಸ್ಯ. ಪಾಪಾಸು ಕಳ್ಳಿಯ ಮೂಲ ಅಮೆರಿಕಾ ಖಂಡಗಳು. ಪೋರ್ಚುಗೀಸ್ ರು ಅಲ್ಲಿಂದ ಭಾರತಕ್ಕೆ ತಂದರೆಂದು ಹೇಳಲಾಗುತ್ತದೆ. ಭೀಕರ ಬರಗಾಲದಲ್ಲೂ ಬದುಕಬಲ್ಲ ಈ ಡಬ್ಬುಗಳ್ಳಿ ಹೊಲ ಮನೆ ತೋಟ ಗದ್ದೆಗಳ ಕಾವಲಿಗೆ ವಜ್ರಾಯುಧ ಇದ್ದಂತೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಟ್ರ್ಯಾಕ್ಟರ್ ಜೆ ಸಿ ಬಿ ಗಳಿಂದ ನಾಶ ಪಡಿಸಲಾಗುತ್ತಿದೆ ಎಂಬುದು ಬೇಸರದ ಸಂಗತಿ. ಅಳಿವಿನಂಚಿನಲ್ಲಿರುವ ಈ ಡಬ್ಬುಗಳ್ಳಿ ನಿಜಕ್ಕೂ ವಿಶೇಷ ಗುಣಗಳನ್ನು ಹೊಂದಿದೆ (prickly pear health benefits).

ಈಗ ಅಪರೂಪವಾಗುತ್ತಿರುವ ಈ ಪಾಪಾಸುಕಳ್ಳಿ ನಿಜಕ್ಕೂ ರೈತನ ಮಿತ್ರ ಎಂದು ಹೇಳಬಹುದು. ಇದರಲ್ಲಿ ಬೇರೆ ಬೇರೆ ಪ್ರಭೇದಗಳಿವೆ. ರಾಜಸ್ಥಾನದಲ್ಲಿ ಮುಳ್ಳು ಇರದ ಪಾಪಾಸುಕಳ್ಳಿ ಬೆಳೆದು ಕತ್ತರಿಸಿ ದನ ಕರುಗಳಿಗೆ ಮೇವಾಗಿ ಬಳಸುತ್ತಾರೆ. ಕೆಲವು ದಶಕಗಳ ಹಿಂದಿನವರೆಗೂ ಹೆಣ್ಣು ಮಕ್ಕಳ ಕಿವಿ ಚುಚ್ಚಲು ಇದರ ಮುಳ್ಳುಗಳನ್ನೇ ಬಳಸುತ್ತಿದ್ದರು. ಅತ್ಯಂತ ಚೂಪಾದ ಹಾಗೂ ಗಟ್ಟಿಯಾದ ಇದರ ಮುಳ್ಳಿನಲ್ಲಿ ಆಂಟಿಸೆಪ್ಟಿಕ್ ಗುಣ ಇರುತ್ತದೆ.

ತಾಜಾ ಸುದ್ದಿ

ಇದರ ಹಣ್ಣುಗಳು ತಿನ್ನಲು ತುಂಬಾ ರುಚಿ. ತಿಂದಾಗ ಬಾಯಿಯಲ್ಲಾ ಕೆಂಪು ಕೆಂಪು. ಆದರೆ ಹಣ್ಣುಗಳನ್ನು ಬಿಡಿಸಲು ಪರಿಣಿತಿ ಬೇಕು. ಹಣ್ಣಿನ ಮೇಲೆ ಸುಂಕ ( ಸಣ್ಣ ಸಣ್ಣ ಮುಳ್ಳು) ಇರುವುದರಿಂದ ತಂಗಡಿಸೊಪ್ಪು ಅಥವಾ ಹುಲ್ಲಿನಿಂದ ಬಡಿದು ಹಣ್ಣಿನ ತಿರುಳು ತಿನ್ನಬೇಕು.

ಬರಗಾಲದಲ್ಲಿ ಇದರ ಎಲೆಯ ಮೇಲಿನ ಮುಳ್ಳುಗಳನ್ನು ತೊಲಗಿಸಿ ಮಧ್ಯದಲ್ಲಿ ತೆಳ್ಳಗೆ ಸೀಳಿ, ಉಪ್ಪು ಖಾರ ಸೇರಿಸಿ ಕೆಂಡದ ಮೇಲೆ ಅಥವಾ ಹೆಂಚಿನ ಮೇಲೆ ಕಾಯಿಸಿ ತಿನ್ನುತ್ತಿದ್ದರಂತೆ ಅದಕ್ಕೆ “ಚಪಾತಿಗಳ್ಳಿ” ಎಂಬ ಎಂಬ ಹೆಸರೂ ಇದೆ.

ಪಾಪಾಸುಕಳ್ಳಿ ಹಣ್ಣಿನ ಔಷಧೀಯ ಗುಣಗಳು ಹೀಗಿವೆ:

  1. * ಪಾಪಾಸುಕಳ್ಳಿ ಹಣ್ಣಿನ ರಸ ಕಫ ಹಾಗೂ ಕೆಮ್ಮು ನಿವಾರಕವಾಗಿ ಕೆಲಸ ಮಾಡುತ್ತದೆ.
  2. * ಇದರ ಮುಳ್ಳುಗಳನ್ನು ತೊಲಗಿಸಿ ಇದರಿಂದ ವಿವಿಧ ಖಾದ್ಯಗಳನ್ನು ತಯಾರಿಸಬಹುದು.
  3. * ಇದರ ಹೂವು, ಹಣ್ಣು, ಎಲೆಗಳ ರಸ ಮಧುಮೇಹಕ್ಕೆ ಉತ್ತಮ.
  4. * ಹಣ್ಣಿನ ಸೇವನೆ ರಕ್ತದೊತ್ತಡ ನಿವಾರಕವಾಗಿ ಕೆಲಸ ಮಾಡುತ್ತದೆ.
  5. * ಎಲೆಗಳ ರಸ ಚರ್ಮಕ್ಕೆ ಕಾಂತಿ ನೀಡುತ್ತದೆ ಹಾಗೂ ಕಪ್ಪು ಕಲೆಗಳನ್ನು ನಿವಾರಿಸುತ್ತದೆ.
  6. * ಹಣ್ಣುಗಳ ಸೇವನೆಯಿಂದ ಮಲಬದ್ಧತೆ ನಿವಾರಣೆ ಆಗುತ್ತದೆ.
  7. * ಮೊಳಕಾಲು ಬಾವು ನೋವುಗಳಿಗೆ ಎಲೆಗಳ ರಸವನ್ನು ಲೇಪಿಸಬೇಕು. ಚರ್ಮ ರೋಗಗಳಿಗೆ ಉಪಯುಕ್ತವಾಗಿದೆ. ಇದರ ಒಂದು ಎಲೆಯನ್ನು ಕಾಂಡದ ಸಮೇತ ಊರಿದರೆ ಬೆಳೆಯುತ್ತದೆ. ಇತ್ತೀಚೆಗೆ ಕೆಲವು ಕಡೆಗಳಲ್ಲಿ ಅಂದಕ್ಕಾಗಿ ಕುಂಡಗಳಲ್ಲಿ ಬೆಳೆಸುತ್ತಿದ್ದಾರೆ.
  8. * ಡಬ್ಬುಗಳ್ಳಿ ಹಣ್ಣಿನ ಜಾಮ್, ಜೆಲ್ಲಿ, ಪೌಡರ್ ಹಾಗೂ ಇದರಿಂದ ತಯಾರಿಸಿದ ತೈಲ ಆನ್ ಲೈನ್ ಗಳಲ್ಲಿ ಮಾರಾಟ ಮಾಡುತ್ತಾರೆ. (ಮಾಹಿತಿ ಸಂಗ್ರಹ: ಎಸ್​ ಹೆಚ್​ ನದಾಫ್)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada