Sleep: ನಿದ್ರೆ ಹಾಗೂ ನಿಮ್ಮ ದೇಹದ ವಿವಿಧ ಭಾಗಗಳಿಗೆ ಏನು ಸಂಬಂಧ?

ನಿದ್ರೆ ಹಾಗೂ ನಿಮ್ಮ ದೇಹಕ್ಕೆ ಏನು ಸಂಬಂಧವಿದೆ ಎಂದು ಆಲೋಚಿಸುತ್ತಿದ್ದೀರಾ, ಖಂಡಿತವಾಗಿಯೂ ಇದೆ. ನಿಮ್ಮ ನಿದ್ರೆಯ ಮೇಲೆಯೇ ನಿಮ್ಮ ಆರೋಗ್ಯ, ದೇಹ ಎಲ್ಲವೂ ನಿಂತಿದೆ.

Sleep: ನಿದ್ರೆ ಹಾಗೂ ನಿಮ್ಮ ದೇಹದ ವಿವಿಧ ಭಾಗಗಳಿಗೆ ಏನು ಸಂಬಂಧ?
ನಿದ್ರೆ
Follow us
ನಯನಾ ರಾಜೀವ್
|

Updated on: Mar 25, 2023 | 8:00 AM

ನಿದ್ರೆ ಹಾಗೂ ನಿಮ್ಮ ದೇಹಕ್ಕೆ ಏನು ಸಂಬಂಧವಿದೆ ಎಂದು ಆಲೋಚಿಸುತ್ತಿದ್ದೀರಾ, ಖಂಡಿತವಾಗಿಯೂ ಇದೆ. ನಿಮ್ಮ ನಿದ್ರೆಯ ಮೇಲೆಯೇ ನಿಮ್ಮ ಆರೋಗ್ಯ, ದೇಹ ಎಲ್ಲವೂ ನಿಂತಿದೆ. ರಾತ್ರಿ ಎರಡು ಗಂಟೆಗೆ ಇದ್ದಕ್ಕಿಂದ್ದಂತೆ ಎಚ್ಚರವಾಗುತ್ತೆ, ಎಷ್ಟೊತ್ತಾದರೂ ನಿದ್ರೆ ಬರುವುದಿಲ್ಲ ಎಂದು ಹಲವರು ಹೇಳಿರುವುದನ್ನು ನೀವು ಕೇಳಿರಬಹುದು. ಕೆಲವೊಬ್ಬರು ಬೆಳಗ್ಗೆ ಐದು ಗಂಟೆಗೆ ಎಚ್ಚರಗೊಳ್ಳುತ್ತಾರೆ. ಇದರ ಹಿಂದೆ ಹಲವು ಕಾರಣಗಳಿವೆ.

ನಮ್ಮ ದೇಹದಲ್ಲಿರುವ ಪಿತ್ತಕೋಶ, ಯಕೃತ್ತು, ಕರುಳು ಮುಂತಾದ ಅಂಗಗಳು ತಮ್ಮ ಕೆಲಸ ಮಾಡುತ್ತಿರುತ್ತವೆ. ಅವುಗಳ ಕೆಲಸಕ್ಕೆ ನಿಗದಿತ ಸಮಯ ಎಂಬುದಿದೆ. ಕೆಲಸದ ಸಮಯ ಮತ್ತು ನಿಮ್ಮ ನಿದ್ರೆ ಸಮಯ ಹೊಂದಾಣಿಕೆಯಾದರೆ ಅದು ಉತ್ತಮ ಇಲ್ಲವಾದಲ್ಲಿ ನಿಮಗೆ ಆರೋಗ್ಯ ಸಮಸ್ಯೆಗಳು ಕಾಡುತ್ತವೆ.

ನಮ್ಮ ಮಾನಸಿಕ ಉದ್ವೇಗ ಹಾಗೂ ಹೃದಯದ ಮೇಲಿನ ಯಾವುದೋ ಹೊರೆ ನಮ್ಮನ್ನು ರಾತ್ರಿ ಮಲಗಲು ಬಿಡುವುದಿಲ್ಲ ಅಥವಾ ರಾತ್ರಿ ಇದ್ದಕ್ಕಿದ್ದಂತೆ ನಮ್ಮನ್ನು ಎಬ್ಬಿಸಿಬಿಡುತ್ತವೆ.

ನೀವು ನಿದ್ರೆಯ ಮಾದರಿಯನ್ನು ಅರ್ಥಮಾಡಿಕೊಳ್ಳಬೇಕು, ನೀವು ನಿದ್ರೆಯಿಂದ ಯಾವ ಸಮಯಕ್ಕೆ ಎಚ್ಚರವಾಗುತ್ತಿದ್ದೀರಿ, ಯಾವ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡರೆ ಉತ್ತಮ ನಿದ್ರೆ ಬರುತ್ತೆ ಎಂಬುದನ್ನು ಅರಿಯಬೇಕು. ನೀವು ಮಲಗಿ ಸ್ವಲ್ಪ ಸಮಯದ ನಂತರ ಎದ್ದರೆ ಅದು ಒತ್ತಡ, ಆತಂಕದ ಕಾರಣದಿಂದ ಆಗಿರಬಹುದು. ಪರಿಹಾರವೇನು?

ಆತಂಕ, ಒತ್ತಡದಿಂದಾಗಿ ನಿದ್ರೆಗೆ ತೊಂದರೆಯಾಗುತ್ತಿದ್ದರೆ, ರಾತ್ರಿ ಮಲಗುವ ಮೊದಲು ನೀವು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ. ಅಲ್ಲದೆ ದಿನಚರಿಯಲ್ಲಿ ಧ್ಯಾನ, ಯೋಗವನ್ನು ಕೂಡ ಸೇರಿಸಿ. ಪುಸ್ತಕ ಓದಿ. ಅಷ್ಟಾದರೂ ಸುಧಾರಿಸಿಲ್ಲ ಎಂದಾದರೆ ವೈದ್ಯರ ಸಲಹೆಯನ್ನು ಪಡೆದುಕೊಳ್ಳಿ.

ರಾತ್ರಿ 11 ರಿಂದ 1 ಗಂಟೆಯವರೆಗೆ ನಿಮ್ಮ ಪಿತ್ತಕೋಶವು ಸಕ್ರಿಯವಾಗಿರುತ್ತದೆ, ನೀವು ಹಗಲಿನಲ್ಲಿ ಕೊಬ್ಬಿನ ಪದಾರ್ಥಗಳನ್ನು ಹೆಚ್ಚು ಸೇವಿಸಿದರೆ, ಅದು ರಾತ್ರಿ ನಿಮ್ಮ ನಿದ್ರೆಗೆ ತೊಂದರೆಯುಂಟು ಮಾಡಬಹುದು, ಮಲಗುವ ಮುನ್ನ ಏನು ತಿನ್ನುತ್ತೀರಿ ಎಂಬುದು ಕೂಡ ಮುಖ್ಯವಾಗಿರುತ್ತದೆ. ಹಾಗಾಗಿ ಸಂಜೆಯೇ ನೀವು ಭೋಜನ ಮುಗಿಸಿಕೊಳ್ಳುವುದು ಉತ್ತಮ. ಮಧ್ಯರಾತ್ರಿ 1 ರಿಂದ 3 ಗಂಟೆಯ ಸಮಯದಲ್ಲಿ ನಿಮ್ಮ ಯಕೃತ್ತು ರಿಫ್ರೆಶ್ ಮಾಡುವ ಕೆಲಸ ಮಾಡುತ್ತದೆ. ಇದರರ್ಥ ನೀವು ಈ ಸಮಯದಲ್ಲಿ ಎಚ್ಚರಗೊಂಡರೆ ಅದು ನಿಮ್ಮ ಯಕೃತ್ತು ಇನ್ನೂ ಹೆಚ್ಚು ಕೆಲಸವನ್ನು ಮಾಡಬೇಕು ಎನ್ನುವ ಸಂಕೇತವನ್ನು ನೀಡುತ್ತದೆ, ನೀವು ನಿಮ್ಮ ಆಹಾರದಲ್ಲಿ ಬದಲಾವಣೆ ಮಾಡಬೇಕು, ಇಲ್ಲವೇ ತಡರಾತ್ರಿ ಮದ್ಯ ಸೇವನೆ ಮಾಡಬೇಡಿ.

ಬೆಳಗಿನ ಜಾವ 3 ರಿಂದ 5 ಗಂಟೆಯ ನಡುವೆ ಎಚ್ಚರವಾದರೆ ನಿಮ್ಮ ಶ್ವಾಸಕೋಶವನ್ನು ಉತ್ತಮವಾಗಿ ಕೆಲಸ ಮಾಡುತ್ತಿರುವ ಸಮಯ ಅದು, ಅದು ದೇಹಕ್ಕೆ ಮುಂದಿನ ದಿನಕ್ಕೆ ಶಕ್ತಿಯನ್ನು ತುಂಬುತ್ತದೆ. ರಾತ್ರಿ ಪದೇ ಪದೇ ಕೆಮ್ಮು ಬರುತ್ತಿದ್ದರೆ, ಗಂಟಲು ಒಣಗುತ್ತಿದ್ದರೆ ನಿಮ್ಮ ಆಹಾರದ ಬಗ್ಗೆ ನೀವು ಆಲೋಚಿಸಬೇಕು. ನೀವು ನಿತ್ಯ 1 ಗಂಟೆಗಳ ಕಾಲ ವಾಕಿಂಗ್ ಮಾಡಬೇಕು, ಮಲಗುವ ಮೂರು ಗಂಟೆಗಳ ಮುನ್ನ ಸ್ವಲ್ಪ ನಡೆಯಿರಿ, ದೇಹದಲ್ಲಿರುವ ಒತ್ತಡದ ಹಾರ್ಮೋನುಗಳನ್ನು ಅದು ಬಿಡುಗಡೆ ಮಾಡುತ್ತದೆ.

ಬೆಳಗ್ಗೆ 5 ರಿಂದ 7 ಗಂಟೆ ಇದು ನಿಮ್ಮ ಕರುಳನ್ನು ಶುದ್ಧೀಕರಿಸುವ ಸಮಯವಾಗಿರುತ್ತದೆ, ಇದು ಜೀರ್ಣಾಂಗ ವ್ಯವಸ್ಥೆಯಿಂದ ವಿಷಕಾರಿ ತ್ಯಾಜ್ಯವನ್ನು ಹೊರಹಾಕುವ ಮೂಲಕ ದೇಹವನ್ನು ಶುದ್ಧೀಕರಿಸುವ ಜವಾಬ್ದಾರಿಯನ್ನು ಹೊಂದಿರುವುದರಿಂದ ಒಮ್ಮೆ ಎಚ್ಚರವಾದಾಗ ಆ ಕಾರ್ಯಗಳಿಗೆ ಬ್ರೇಕ್ ಬಿದ್ದಂತಾಗುತ್ತದೆ. ಏಳು ಗಂಟೆಗೆ ಎಚ್ಚರಗೊಂಡರೆ ಅದು ಸಹಜ. ತಡವಾಗಿ ಮಲಗಿದಾಗಲೂ ಇದು ಸಂಭವಿಸುತ್ತದೆ. ನೀವು ದಿನವಿಡೀ ಸಾಕಷ್ಟು ನೀರನ್ನು ಕುಡಿಯದಿದ್ದರೆ ನಿದ್ರೆಯಿಂದ ಬೇಗ ಎಚ್ಚರಗೊಳ್ಳುತ್ತೀರಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ