AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ನೀವು ಅತಿಯಾಗಿ ಬ್ಯೂಟಿ ಪಾರ್ಲರ್‌ ಅವಲಂಬಿಸುವುದು ನಿಮ್ಮ ಅನಾರೋಗ್ಯಕ್ಕೆ ಕಾರಣವಾಗಬಹುದು ಎಚ್ಚರ ವಹಿಸಿ

ಸಾಮಾನ್ಯವಾಗಿ ಇಂತದ ಸಮಸ್ಯೆಯಿಂದ ಬಳಲುತ್ತಿರುವವರಲ್ಲಿ ತಲೆತಿರುಗುವಿಕೆ, ವಾಕರಿಕೆ ಮತ್ತು ವಾಂತಿಯಾಗುವ ಸಾಧ್ಯತೆಗಳಂತಹ ರೋಗಲಕ್ಷಣಗಳು ಕಂಡುಬರುತ್ತದೆ.

Health Tips: ನೀವು ಅತಿಯಾಗಿ ಬ್ಯೂಟಿ ಪಾರ್ಲರ್‌ ಅವಲಂಬಿಸುವುದು ನಿಮ್ಮ ಅನಾರೋಗ್ಯಕ್ಕೆ ಕಾರಣವಾಗಬಹುದು ಎಚ್ಚರ ವಹಿಸಿ
Health Care Image Credit source: iStock
TV9 Web
| Edited By: |

Updated on: Nov 02, 2022 | 11:30 AM

Share

ಇತ್ತೀಚೆಗೆ  50 ವರ್ಷದ ಮಹಿಳೆಗೆ ಬ್ಯೂಟಿ ಪಾರ್ಲರ್ ನ ಚಿಕಿತ್ಸೆಯಿಂದಾಗಿ ಸ್ಟ್ರೋಕ್ ಸಿಂಡ್ರೋಮ್ ರೋಗಲಕ್ಷಣಗಳನ್ನು ಕಂಡುಬಂದಿದೆ ಎಂದು ಹೈದರಾಬಾದ್‌ನ ನರವಿಜ್ಞಾನಿ ಡಾ ಸುಧೀರ್ ಕುಮಾರ್ ಹೇಳಿದ್ದಾರೆ. ಈ ಮಹಿಳೆಗೆ ತಲೆತಿರುಗುವಿಕೆ, ವಾಕರಿಕೆ ಮತ್ತು ವಾಂತಿಯ ಲಕ್ಷಣಗಳು ಬ್ಯೂಟಿ ಪಾರ್ಲರ್‌ನಲ್ಲಿ ಶಾಂಪೂವಿನಿಂದ ಕೂದಲನ್ನು ತೊಳೆಯುತ್ತಿರುವಾಗ ಪ್ರಾರಂಭವಾಗಿತ್ತು ಮತ್ತು ಚಿಕಿತ್ಸೆ ನೀಡಿದ ನಂತರ ರೋಗಲಕ್ಷಣಗಳು ಸುಧಾರಿಸಲು ಕಾರಣವಾಯಿತು ಎಂದು ಈ ಪ್ರಕರಣವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಸಾಮಾನ್ಯವಾಗಿ ಬ್ಯೂಟಿ ಪಾರ್ಲರ್ ಗಳಲ್ಲಿ ಹೇರ್ ವಾಶ್ ಮಾಡುವಾಗ ಕುತ್ತಿಗೆಯನ್ನು ವಾಶ್ ಬೇಸಿನ್ ಕಡೆಗೆ ಸಂಪೂರ್ಣವಾಗಿ ಬಾಗಿಸಲಾಗುತ್ತದೆ. ಇದು ಕುತ್ತಿಗೆಯಲ್ಲಿನ ರಕ್ತ ಪರಿಚಲನೆಗೆ ಅಡ್ಡಿಪಡಿಸುತ್ತದೆ. ಬೆನ್ನು ಮೂಳೆಯ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರು ಆದಷ್ಟು ಎಚ್ಚರ ವಹಿಸಿ. ಅದರ ಜೊತೆಗೆ ಕೂದಲಿನ ಹೊಳಪಿಗಾಗಿ ಅತಿಯಾದ ರಾಸಯನಿಕಗಳನ್ನೊಳಗೊಂಡ ಶ್ಯಾಂಪೂಗಳ ಬಳಕೆ ನಿಮ್ಮನ್ನು ಅನಾರೋಗ್ಯಕ್ಕೆ ತುತ್ತಾಗಿಸುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಏನಿದು ಸ್ಟ್ರೋಕ್? ಇದರ ರೋಗಲಕ್ಷಣಗಳು:

ಕಾರಣಗಳು: ಕೂದಲನ್ನು ಬಲವಾಗಿ ಎಳೆದಾಗ, ಕುತ್ತಿಗೆಯನ್ನು ಎಳೆದಾಗ, ಹಿಂಭಾಗಕ್ಕಕೆ ಬಾಗಿಸಿದಾಗ ಇದು ಹೆಚ್ಚಾಗಿ ಸಂಭವಿಸುವ ಸಾಧ್ಯತೆ ಇದೆ. ಇಂತಹ ಎಳೆತದ ಚಲನೆಯು ಕೋಮಲ ನಾಳಗಳನ್ನು ಗಾಯಗೊಳಿಸುವಂತೆ ಮಾಡುತ್ತದೆ ಮತ್ತು ಮೆದುಳಿಗೆ ರಕ್ತ ಪೂರೈಕೆಗೆ ಅಡ್ಡಿಯಾಗುತ್ತದೆ. ಇದು ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ. ಈ ರೀತಿಯ ಗುಣ ಲಕ್ಷಣಗಳನ್ನು ವೈದ್ಯಕೀಯ ವ್ಯವಸ್ಥೆಯಲ್ಲಿ ವರ್ಟೆಬ್ರಲ್ ಆರ್ಟರಿ ಡಿಸೆಕ್ಷನ್ ಎಂದು ಕರೆಯಲಾಗುತ್ತದೆ ಎಂದು ಮೀರಾ ರೋಡ್‌ನ ವೊಕಾರ್ಡ್ ಆಸ್ಪತ್ರೆಯ ನರವಿಜ್ಞಾನಿ ಮತ್ತು ಪಾರ್ಶ್ವವಾಯು ತಜ್ಞ ಡಾ.ಪವನ್ ಪೈ ಇಂಡಿಯನ್ ಎಕ್ಸ್ ಪ್ರೆಸ್ಸ್ ಡಾಟ್ ಕಾಮ್ ಗೆ ಮಾಹಿತಿ ನೀಡಿದರು.

ತಡೆಗಟ್ಟುವಿಕೆ: ಸಾಮಾನ್ಯವಾಗಿ ಮಹಿಳೆಯರು ಪಾರ್ಲರ್‌ಗಳಲ್ಲಿ, ಸಲೂನ್‌ಗಳಲ್ಲಿದ್ದಾಸಾಮಾನ್ಯವಾಗಿ ಇಂತದ ಸಮಸ್ಯೆಯಿಂದ ಬಳಲುತ್ತಿರುವವರಲ್ಲಿ ತಲೆತಿರುಗುವಿಕೆ, ವಾಕರಿಕೆ ಮತ್ತು ವಾಂತಿಯಾಗುವ ಸಾಧ್ಯತೆಗಳಂತಹ ರೋಗಲಕ್ಷಣಗಳು ಕಂಡುಬರುತ್ತದೆ.ಗ ತಲೆಯನ್ನು ಗಟ್ಟಿಯಾಗಿ ತಿರುಗಿಸದಂತೆ ನೋಡಿಕೊಳ್ಳಿ ಮತ್ತು ಕೂದಲು ತೊಳೆಯುವಾಗ ನಿಮಗೆ ತಲೆತಿರುಗುವಿಕೆ ಕಂಡುಬಂದರೆ, ತಕ್ಷಣ ಮಲಗಿಕೊಳ್ಳಿ. ವ್ಯಕ್ತಿಯನ್ನು ಯಾವುದೇ ವಿಳಂಬ ಮಾಡದೆ ತಕ್ಷಣ ವೈದ್ಯರ ಬಳಿಗೆ ಕರೆದೊಯ್ಯಬೇಕು. ಕೂದಲು ತೊಳೆಯುವ ಸಮಯದಲ್ಲಿ ಕುತ್ತಿಗೆಯನ್ನು ಹಿಮ್ಮುಖವಾಗಿ ವಿಸ್ತರಿಸುವುದನ್ನು ತಪ್ಪಿಸುವುದು ಸೂಕ್ತವಾಗಿದೆ ಎಂದು ಡಾ.ಪೈ ಹೇಳಿದರು.

ಇದನ್ನು ಓದಿ: ನಿಮ್ಮ ಕುತ್ತಿಗೆಯಲ್ಲಿ ಪದೇ ಪದೇ ನೋವು ಕಾಣಿಸಿಕೊಳ್ಳುತ್ತಿದೆಯೇ? ಈ ಕಾಯಿಲೆಯ ಲಕ್ಷಣವಾಗಿರಬಹುದು

ಇದರ ಜೊತೆಗೆ ಆರೋಗ್ಯಕರ ಜೀವನಶೈಲಿ, ಉತ್ತಮ ಆಹಾರ , ಪ್ರತಿದಿನ, ಒಬ್ಬರು ಕನಿಷ್ಠ ಏಳು ಗಂಟೆಗಳ ನಿದ್ರೆ, ಯಾವುದೇ ರೀತಿಯ ವ್ಯಾಯಾಮ – ಜಿಮ್, ಯೋಗ ಅಥವಾ ಪ್ರಾಣಾಯಾಮ ಮಾಡುವುದು ಅಗತ್ಯ ಎಂದು ಸಲಹೆ ನೀಡುತ್ತಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Follow Us
TV9 Web
TV9 Web

TV9 Kannada

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್