AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Horoscope: ಏಪ್ರಿಲ್ ತಿಂಗಳ ಮೊದಲ ವಾರ ಯಾವ ರಾಶಿಗೆ ಶುಭ? ಯಾರಿಗೆ ಅಶುಭ?

ಏಪ್ರಿಲ್ 2026ರ ಮೊದಲ ವಾರದ ರಾಶಿ ಭವಿಷ್ಯದೊಂದಿಗೆ ನಿಮ್ಮ ವಾರವನ್ನು ಯೋಜಿಸಿ. ಈ ವಾರ ಸಾಲದ ಚಿಂತೆ, ಕೌಟುಂಬಿಕ ಸಂಬಂಧಗಳು, ಸಂಗಾತಿಯಿಂದ ಅಸಹಾಯಕತೆ ಮತ್ತು ಧಾರ್ಮಿಕ ನಂಬಿಕೆಗಳಿಗೆ ಒತ್ತು ಸಿಗಲಿದೆ. ಪ್ರತಿಯೊಂದು ರಾಶಿ ಚಿಹ್ನೆಗೂ ಆರ್ಥಿಕ, ಕುಟುಂಬ, ಆರೋಗ್ಯ ಮತ್ತು ವೃತ್ತಿಜೀವನದ ಬಗ್ಗೆ ನಿರ್ದಿಷ್ಟ ಸಲಹೆಗಳನ್ನು ನೀಡಲಾಗಿದೆ. ನಿಮ್ಮ ಗೌರವವನ್ನು ಕಾಳಜಿಯಿಂದ ಉಳಿಸಿಕೊಳ್ಳಲು ಇದು ಸಕಾಲ.

Weekly Horoscope: ಏಪ್ರಿಲ್ ತಿಂಗಳ ಮೊದಲ ವಾರ ಯಾವ ರಾಶಿಗೆ ಶುಭ? ಯಾರಿಗೆ ಅಶುಭ?
Weekly Horoscope
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Apr 05, 2026 | 2:32 PM

Share

ಇದು 2026ರ ಏಪ್ರಿಲ್ ನ ಮೊದಲ ವಾರದಲ್ಲಿ ಸಾಲದ ಚಿಂತೆ, ನೆಂಟರ ಆಗಮನ, ಸಂಗಾತಿಯಿಂದ ಅಸಹಾಯಕತೆ, ಧಾರ್ಮಿಕ ನಂಬಿಕೆಗೆ ಹೆಚ್ಚು ಪ್ರಾಶಸ್ತ್ಯ ಸಿಗಲಿದೆ. ಸಿಗುವ ಗೌರವವನ್ನು ಕಾಳಜಿಯಿಂದ ಪಡೆಯುವ ಹೊಣೆಗಾರಿಕೆಯೂ ಈ ವಾರದ್ದು.

ಮೇಷ:

ಹೊಸ ಉದ್ಯೋಗ ಪ್ರಯತ್ನಕ್ಕೆ ಮನ್ನಣೆ ಸಿಗಲಿದೆ. ಕುಟುಂಬದಲ್ಲಿ ಶುಭ ಕಾರ್ಯದ ಚರ್ಚೆ ನಡೆಯಲಿದ್ದು, ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವುದು ಸೂಕ್ತ.

ವೃಷಭ:

ಭೂಮಿ ಅಥವಾ ವಾಹನ ಖರೀದಿ ಯೋಗವಿದೆ. ದೂರದ ಪ್ರಯಾಣದಿಂದ ಲಾಭವಾಗಲಿದೆ. ಸಂಗಾತಿಯೊಂದಿಗೆ ಮಧುರ ಬಾಂಧವ್ಯ ವೃದ್ಧಿಸಲಿದ್ದು, ಹಿರಿಯರ ಆಶೀರ್ವಾದ ಬೆನ್ನಿಗಿರುತ್ತದೆ.

ಮಿಥುನ:

ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭ ಕಂಡುಬರಲಿದೆ. ಹಳೆಯ ಸಾಲಗಳಿಂದ ಮುಕ್ತಿ ಪಡೆಯುವ ಕಾಲವಿದು. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಿಗಲಿದೆ, ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ.

ಕರ್ಕಾಟಕ:

ಕಚೇರಿಯಲ್ಲಿ ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ಮನೆಯಲ್ಲಿ ಸಣ್ಣಪುಟ್ಟ ಕಲಹಗಳು ಉಂಟಾಗಬಹುದು, ತಾಳ್ಮೆಯಿಂದ ವರ್ತಿಸುವುದು ಉನ್ನತ ಫಲ ನೀಡುತ್ತದೆ.

ಸಿಂಹ:

ಸಮಾಜದಲ್ಲಿ ಗೌರವ ಪ್ರತಿಷ್ಠೆಗಳು ಹೆಚ್ಚಾಗಲಿವೆ. ರಾಜಕೀಯ ವ್ಯಕ್ತಿಗಳಿಗೆ ಶುಭ ಕಾಲ. ಹೂಡಿಕೆಯಿಂದ ಲಾಭ ದೊರೆಯಲಿದೆ, ಆದರೆ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.

ಕನ್ಯಾ:

ವೃತ್ತಿ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಸಂಗಾತಿಯ ಸಲಹೆಯು ಸಂಕಷ್ಟದಿಂದ ಪಾರು ಮಾಡಲಿದೆ. ಬೆನ್ನು ನೋವಿನಂತಹ ಸಣ್ಣ ಸಮಸ್ಯೆಗಳು ಕಾಡಬಹುದು, ವಿಶ್ರಾಂತಿ ಅಗತ್ಯ.

ತುಲಾ:

ಶತ್ರುಗಳ ಮೇಲೆ ಜಯ ಸಾಧಿಸುವಿರಿ. ದೇವತಾ ಕಾರ್ಯಗಳಲ್ಲಿ ಆಸಕ್ತಿ ಮೂಡಲಿದೆ. ಸ್ಥಗಿತಗೊಂಡಿದ್ದ ಕಾಮಗಾರಿಗಳು ಪುನರಾರಂಭಗೊಳ್ಳಲಿವೆ. ಹಣಕಾಸಿನ ವ್ಯವಹಾರದಲ್ಲಿ ಜಾಗರೂಕತೆಯಿರಲಿ.

ವೃಶ್ಚಿಕ:

ಮಾನಸಿಕ ನೆಮ್ಮದಿಗಾಗಿ ಪ್ರವಾಸ ಕೈಗೊಳ್ಳುವಿರಿ. ಆಪ್ತ ಸ್ನೇಹಿತರಿಂದ ನೆರವು ಸಿಗಲಿದೆ. ಕೃಷಿ ಚಟುವಟಿಕೆಯಲ್ಲಿ ನಿರತರಾದವರಿಗೆ ಉತ್ತಮ ಆದಾಯವಿದೆ. ಮೌನದಿಂದ ಕೆಟ್ಟ ಪರಿಸ್ಥಿತಿಗಳನ್ನು ನಿಭಾಯಿಸಿ.

ಧನು:

ಹೊಸ ವ್ಯವಹಾರ ಆರಂಭಿಸಲು ಸಕಾಲವಿದು. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬಂದು ಮನಸ್ಸಿಗೆ ಹರ್ಷ ತರಲಿದೆ.

ಮಕರ:

ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ವಿನಾಕಾರಣ ಬೇರೆಯವರ ಜಗಳದಲ್ಲಿ ಭಾಗಿಯಾಗಬೇಡಿ. ಆಸ್ತಿ ವಿವಾದಗಳು ಸುಗಮವಾಗಿ ಬಗೆಹರಿಯುವ ಸಾಧ್ಯತೆಯಿದೆ. ತಾಯಿಯ ಆರೋಗ್ಯ ಸುಧಾರಿಸಲಿದೆ.

ಕುಂಭ:

ಸೃಜನಶೀಲ ಕೆಲಸಗಳಿಗೆ ಮನ್ನಣೆ ಸಿಗಲಿದೆ. ವಿದೇಶ ಪ್ರಯಾಣದ ಕನಸು ನನಸಾಗಬಹುದು. ಆರ್ಥಿಕ ಮುಗ್ಗಟ್ಟು ದೂರವಾಗಿ ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ.

ಮೀನ:

ದೈಹಿಕ ವ್ಯಾಯಾಮದಿಂದ ಚೈತನ್ಯ ಸಿಗಲಿದೆ. ಕಳೆದುಹೋದ ವಸ್ತುಗಳು ಮರಳಿ ಪಡೆಯುವಿರಿ. ಪ್ರೇಮ ಜೀವನದಲ್ಲಿ ಯಶಸ್ಸು ಸಿಗಲಿದೆ. ಗುಪ್ತ ಶತ್ರುಗಳ ಬಗ್ಗೆ ಎಚ್ಚರವಿರಲಿ.

– ಲೋಹಿತ ಹೆಬ್ಬಾರ್ – 8762924271 (what’s app only)

Follow Us
ಪಿಸ್ತೂಲ್ ಹಿಡಿದು ಹೋದ ವ್ಯಕ್ತಿ, ಟ್ರಾಫಿಕ್ ಜಾಮ್ ಫುಲ್ ಕ್ಲಿಯರ್
ಪಿಸ್ತೂಲ್ ಹಿಡಿದು ಹೋದ ವ್ಯಕ್ತಿ, ಟ್ರಾಫಿಕ್ ಜಾಮ್ ಫುಲ್ ಕ್ಲಿಯರ್
ದಾವಣಗೆರೆ ಬೈಎಲೆಕ್ಷನ್​​: ಅಸಮಾಧಾನ ಆರೋಪಕ್ಕೆ ಜಮೀರ್​​ ಫಸ್ಟ್​​ ರಿಯಾಕ್ಷನ್
ದಾವಣಗೆರೆ ಬೈಎಲೆಕ್ಷನ್​​: ಅಸಮಾಧಾನ ಆರೋಪಕ್ಕೆ ಜಮೀರ್​​ ಫಸ್ಟ್​​ ರಿಯಾಕ್ಷನ್
47ನೇ ವಯಸ್ಸಿನಲ್ಲಿ ನಟಿ ಜ್ಯೋತಿಕಾ ವರ್ಕೌಟ್ ಹೇಗಿದೆ ನೋಡಿ; ವಿಡಿಯೋ ವೈರಲ್
47ನೇ ವಯಸ್ಸಿನಲ್ಲಿ ನಟಿ ಜ್ಯೋತಿಕಾ ವರ್ಕೌಟ್ ಹೇಗಿದೆ ನೋಡಿ; ವಿಡಿಯೋ ವೈರಲ್
ಬಂಡೀಪುರ ಸಫಾರಿಗೆ ಹೋದ ಪ್ರವಾಸಿಗರಿಗೆ ಡಬಲ್ ಧಮಾಕ
ಬಂಡೀಪುರ ಸಫಾರಿಗೆ ಹೋದ ಪ್ರವಾಸಿಗರಿಗೆ ಡಬಲ್ ಧಮಾಕ
ಕಾರು ನಿಲ್ಲಿಸಲು ಸಹಾಯ ಮಾಡಲು ಹೋಗಿ ಸಾವಿನ ಮನೆ ಕದ ತಟ್ಟಿದ ಮಹಿಳೆ
ಕಾರು ನಿಲ್ಲಿಸಲು ಸಹಾಯ ಮಾಡಲು ಹೋಗಿ ಸಾವಿನ ಮನೆ ಕದ ತಟ್ಟಿದ ಮಹಿಳೆ
ಮಲಗಿದ್ದ ನಾಯಿ ಮೇಲೆ ದಾಳಿ ಮಾಡಿದ ಚಿರತೆ! ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ
ಮಲಗಿದ್ದ ನಾಯಿ ಮೇಲೆ ದಾಳಿ ಮಾಡಿದ ಚಿರತೆ! ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ
ಸಿದ್ದರಾಮಯ್ಯಗೆ ಹೆಚ್​​ಡಿಕೆ ಸವಾಲ್​​: ಕೇಂದ್ರ ಸಚಿವ ಹೇಳಿದ್ದೇನು?
ಸಿದ್ದರಾಮಯ್ಯಗೆ ಹೆಚ್​​ಡಿಕೆ ಸವಾಲ್​​: ಕೇಂದ್ರ ಸಚಿವ ಹೇಳಿದ್ದೇನು?
ಹಲ್ಲಿಲ್ಲದ, ವಯಸ್ಸಾದ ನಾಯಿಗಳಿಗೇಕೆ ಸಂತಾನ ಹರಣ ಚಿಕಿತ್ಸೆ?
ಹಲ್ಲಿಲ್ಲದ, ವಯಸ್ಸಾದ ನಾಯಿಗಳಿಗೇಕೆ ಸಂತಾನ ಹರಣ ಚಿಕಿತ್ಸೆ?
ಉಪಚುನಾವಣೆ: ಬಿಜೆಪಿ ಅಭ್ಯರ್ಥಿ ವಿರುದ್ಧ NSUI ಅಪಪ್ರಚಾರ ಆರೋಪ
ಉಪಚುನಾವಣೆ: ಬಿಜೆಪಿ ಅಭ್ಯರ್ಥಿ ವಿರುದ್ಧ NSUI ಅಪಪ್ರಚಾರ ಆರೋಪ
ವೇಗ ಅತೀ ವೇಗ... ಅತ್ಯಂತ ವೇಗದಲ್ಲಿ ಚೆಂಡೆಸದ 23 ವರ್ಷದ ಯುವ ವೇಗಿ
ವೇಗ ಅತೀ ವೇಗ... ಅತ್ಯಂತ ವೇಗದಲ್ಲಿ ಚೆಂಡೆಸದ 23 ವರ್ಷದ ಯುವ ವೇಗಿ