Aquarius Yearly Horoscope 2025: ಈ ರಾಶಿಯವರಿಗೆ 2025ನೇ ವರ್ಷ ಫುಲ್ ಹ್ಯಾಪಿ, ಆದರೆ ಈ ನಾಲ್ಕು ವಿಚಾರದ ಬಗ್ಗೆ ಇರಲಿ ಗಮನ

ಕುಂಭ ರಾಶಿ ವರ್ಷ ಭವಿಷ್ಯ 2025: ಈ ವರ್ಷ ನಿಮಗೆ ಅನೇಕ ಶುಭಗಳು ಇದ್ದರೂ ಅಶುಭವೂ ಕಾಣಿಸುವುದು. ಆದರೆ ಅದನ್ನು ದಾಟುವ ಮನಃಸ್ಥಿತಿ ನಿಮ್ಮದಾಗಲಿದೆ. ದೈವಾನುಗ್ರಹವೂ ನಿಮ್ಮ ಜೊತೆಗಿರಲು ಹನುಮಾನ್ ಚಾಲೀಸ್ ಪಠಣ, ಸುವಸ್ತುಗಳ ದಾನದಿಂದ ಸಾಧ್ಯ. ಮನಸ್ಸಿಗೆ ಅತಿಯಾಗಿ ಕಿರಿ ಕಿರಿ ಎನಿಸಿದರೆ ನಾಗದೇವರಿಗೆ ಪೂಜೆ ಸಲ್ಲಿಸಿ. ಮುಖ್ಯವಾಗಿ ಈ ನಾಲ್ಕು ವಿಚಾರದ ಬಗ್ಗೆ ಹೆಚ್ಚು ಗಮನ ಇರಲಿ.

Aquarius Yearly Horoscope 2025: ಈ ರಾಶಿಯವರಿಗೆ 2025ನೇ ವರ್ಷ ಫುಲ್ ಹ್ಯಾಪಿ, ಆದರೆ ಈ ನಾಲ್ಕು ವಿಚಾರದ ಬಗ್ಗೆ ಇರಲಿ ಗಮನ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 03, 2025 | 2:19 PM

ರಾಶಿ ಚಕ್ರದ ಹನ್ನೊಂದನೆ ರಾಶಿಯವರಿಗೆ ಈ ವರ್ಷ ಮಿಶ್ರಫಲ. ಪಂಚಮಕ್ಕೆ ಹೋಗುವ ಗುರುವಿನ ಬಲ ಮತ್ತು ದೃಷ್ಟಿ ಎರಡೂ ಇರಲಿದೆ. ಸಾಡೆಸಾಥ್ ನ ಅಂತ್ಯ ಭಾಗ ಆರಂಭವಾಗಲಿದೆ. ಶನಿಯು ತನ್ನ ರಾಶಿಯನ್ನು ಬಿಟ್ಟು ದ್ವಿತೀಯ ಸ್ಥಾನಕ್ಕೆ ಹೋಗುವನು. ರಾಹುವು ನಿಮ್ಮ ರಾಶಿಗೆ ಬರಲಿದ್ದಾನೆ. ಕೇತುವು ಸಪ್ತಮಕ್ಕೆ ಹೋಗುವನು. ಆರ್ಥಿಕ ಹಾಗು ಆರೋಗ್ಯಕ್ಕೆ ಅಷ್ಟು ಪೂರಕವಾದುದಲ್ಲ. ಒಟ್ಟಾರೆ ನಿಮ್ಮ ವರ್ಷ ಸಂತೋಷಮಯವಾಗಿ ಇರಲಿದೆ.

ಆರೋಗ್ಯ :

ಈ ವರ್ಷ ನಿಮಗೆ ಆರೋಗ್ಯ ಬಗ್ಗೆ ಆರಂಭದ ದಿನಗಳಲ್ಲಿ ಗಮನ ಕೊಡದೇ ಇದ್ದರೂ ಅನಂತರ ಬೇಕು. ವಿಶೇಷವಾಗಿ ಮಾನಸಿಕ ಅರೋಗ್ಯ ಬಹಳ ಮುಖ್ಯ. ವಿವಿಧ ಕ್ಲೇಶವನ್ನು ಸಹಿಸುವ ಮನೋಧರ್ಮವಿರಬೇಕು. ರಾಹು ದಶೆಯಾದರೆ ಕಷ್ಟವಾಗುವುದು.

ಪ್ರೇಮ ಮತ್ತು ವಿವಾಹ :

ಮೇ ತಿಂಗಳ ಅನಂತರ ವಿವಾಹವಾಗಲು ಯೋಜನೆ ಮಾಡಬಹುದು, ಗುರುಬಲವಿದೆ. ಪ್ರೇಮವು ನಿಮ್ಮನ್ನು ಗೊಂದಲಕ್ಕೆ ಒಯ್ಯುವುದು. ತೀರ್ಮಾನ ಕಷ್ಟ. ಅನೇಕ ಕಟ್ಟುಪಾಡುಗಳನ್ನು ಒಪ್ಪಬೇಕು. ರವಿದಶೆಯವರಿಗೆ ಅನುಕೂಲತೆ ಹೆಚ್ಚು. ದಾಂಪತ್ಯದಲ್ಲಿ ಅಸಮಾಧಾನ ಬರುವುದು, ಹಿರಿಯರ ಜೊತೆ ಕುಳಿತು ಮನಸ್ತಾಪವನ್ನು ಸರಿಮಾಡಿಕೊಳ್ಳಬಹುದು.

ಉದ್ಯೋಗ ಮತ್ತು ಆರ್ಥಿಕತೆ :

ಆರಂಭಿಕ ದಿನಗಳಲ್ಲಿ ಉದ್ಯೋಗದಲ್ಲಿ ಅಧಿಕ ಆದಾಯವನ್ನೋ ಅಥವಾ ಸ್ಥಾನಮಾನವನ್ನೋ ನಿರೀಕ್ಷಿಸಲು ಸಾಧ್ಯವಿಲ್ಲ. ಆದರೆ ಅನಂತರ ವೃದ್ಧಿಯನ್ನು ಕಾಣುವಿರಿ. ತಂತ್ರಜ್ಞ, ಯಂತ್ರಜ್ಞರಿಗೆ ಅನುಕೂಲಕರ ವರ್ಷ. ಆರ್ಥಿಕತೆ ಸುಧಾರಣೆ ಆಗಿಲಿದೆ. ಹಣದ ಹರಿವನ್ನು ನೀವು ಕಾಣಬಹುದು.

ಕುಟುಂಬ ವ್ಯವಸ್ಥೆ :

ಹಿರಿಯ ಮಾರ್ಗದರ್ಶನ ಸಿಗುವ ಕಾರಣ ನೀವು ಅತಿಯಾಗಿ ಏನನ್ನೂ ಮಾಡುವುದಾಗಲಿ, ಹೇಳುವುದಾಗಲಿ ಮಾಡಲಾರಿರಿ. ಆನಂದದ ವಾತಾವರಣ ಮನೆಯಲ್ಲಿ ಇರಲಿದೆ. ಅದನ್ನು ಅನುಭವಿಸಿ, ಪಾಠವನ್ನು ಕಲಿಯುವಿರಿ.

ಶತ್ರುಬಾಧೆ :

ಆರಂಭದಲ್ಲಿ ಶತ್ರುವಿನಿಂದ ತೊಂದರೆ. ಕುಜ ದಶೆಯವರಿಗೆ ಬೇರೆ ಬೇರೆ ರೀತಿಯಲ್ಲಿ ಶತ್ರುಗಳನ್ನು ಎದುರಿಸಬೇಕಾಗುವುದು. ಉದ್ಯೋಗ, ವ್ಯವಹಾರ, ಕುಟುಂಬ ಎಲ್ಲದರಲ್ಲೂ ಶತ್ರುತ್ವ ಕಷ್ಟವಾಗುವುದು. ಎಲ್ಲಿಯೂ ಯಾರೂ ಎದುರಿಂದ ಮಾಡಲಾರರು. ಪರೋಕ್ಷವಾಗಿ ನಿಮ್ಮ ಎಲ್ಲ ಕೆಲಸಕ್ಕೆ ವಿಘ್ನ.

ಅದೃಷ್ಟ :

ಎಂತಹ ಕಷ್ಟಗಳು ಬಂದರೂ ಅದಕ್ಕೆ ಬೇಕಾದ ದಾರಿ ಸಿಗುವುದೇ ಅದೃಷ್ಟ. ಅದರಿಂದ ನೀವು ಸುರಕ್ಷಿತವಾಗುವಿರಿ. ಯಾವುದಾದರೂ ಒಂದು ರೀತಿಯಲ್ಲಿ ನಿಮಗೆ ಸುಖದ ದಾರಿ ಕಾಣಿಸುವುದು. ಶುಕ್ರದಶೆಯವರಿಗೆ ಅದೃಷ್ಟದ ಪರಿಣಾಮ ಅರಿವಿಗೆ ಬರುವುದು.

ಹೀಗೆ ಈ ವರ್ಷ ನಿಮಗೆ ಅನೇಕ ಶುಭಗಳು ಇದ್ದರೂ ಅಶುಭವೂ ಕಾಣಿಸುವುದು. ಆದರೆ ಅದನ್ನು ದಾಟುವ ಮನಃಸ್ಥಿತಿ ನಿಮ್ಮದಾಗಲಿದೆ. ದೈವಾನುಗ್ರಹವೂ ನಿಮ್ಮ ಜೊತೆಗಿರಲು ಹನುಮಾನ್ ಚಾಲೀಸ್ ಪಠಣ, ಸುವಸ್ತುಗಳ ದಾನದಿಂದ ಸಾಧ್ಯ. ಮನಸ್ಸಿಗೆ ಅತಿಯಾಗಿ ಕಿರಿ ಕಿರಿ ಎನಿಸಿದರೆ ನಾಗದೇವರಿಗೆ ಪೂಜೆ ಸಲ್ಲಿಸಿ.

– ಲೋಹಿತ ಹೆಬ್ಬಾರ್, ಇಡುವಾಣಿ

ಗ್ಯಾರಂಟಿಗಳಿಗೆ ನನ್ನ ವಿರೋಧವಿಲ್ಲ, ನಿಲ್ಲಿಸಬೇಡಿ, ಮುಂದುವರೆಸಿ: HDK
ಗ್ಯಾರಂಟಿಗಳಿಗೆ ನನ್ನ ವಿರೋಧವಿಲ್ಲ, ನಿಲ್ಲಿಸಬೇಡಿ, ಮುಂದುವರೆಸಿ: HDK
ಪತಿ ಜೊತೆ ಗೌತಮಿ, ಕದ್ದು ನೋಡಿದ ದೋಸ್ತರಿಗೆ ಕಂಡಿದ್ದೇನು?
ಪತಿ ಜೊತೆ ಗೌತಮಿ, ಕದ್ದು ನೋಡಿದ ದೋಸ್ತರಿಗೆ ಕಂಡಿದ್ದೇನು?
Daily Devotional: ಹಣಕಾಸಿನ ಸಮಸ್ಯೆಗಳಿಗೆ ಪರಿಹಾರ ಇಲ್ಲಿದೆ, ವಿಡಿಯೋ ನೋಡಿ
Daily Devotional: ಹಣಕಾಸಿನ ಸಮಸ್ಯೆಗಳಿಗೆ ಪರಿಹಾರ ಇಲ್ಲಿದೆ, ವಿಡಿಯೋ ನೋಡಿ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್