Sagittarius Yearly Horoscope 2025: ಈ ರಾಶಿಯವರು ಪ್ರೀತಿಸಿ ಆತುರದಿಂದ ವಿವಾಹಕ್ಕೆ ಮುಂದಾಗಬೇಡಿ

ಧನು ರಾಶಿ ವರ್ಷ ಭವಿಷ್ಯ 2025: ಧನು ರಾಶಿಯವರಿಗೆ ವರ್ಷಾರಂಭದಲ್ಲಿ ನಿಮಗೆ ಅದೃಷ್ಟ ತಕ್ಕಂತೆ ಮಟ್ಟಿಗೆ ಇರುವುದು ಏಪ್ರಿಲ್ ನಲ್ಲಿ ಉನ್ನತ ಸ್ಥಾನ, ಗೌರವಗಳು ಹುಡುಕಿಕೊಂಡು ಬರುವುವು. ಗುರು ದಶೆಯವರು ಎಲ್ಲ ರೀತಿಯಿಂದ ಸಕಾರಾತ್ಮಕ ಅಂಶವನ್ನು ಪಡೆಯುವರು. ಕಳೆದ ಎಲ್ಲ ದುಃಖವೂ ಸುಖವಾಗಿ ಮಾರ್ಪಾಡಾಗುವುದು. ಇದರ ಜತೆಗೆ ನಿಮ್ಮ ಆರೋಗ್ಯ, ಕುಟುಂಬ ವೃತ್ತಿಯ ಬಗ್ಗೆ ಇಲ್ಲಿದೆ ಮಾಹಿತಿ.

Sagittarius Yearly Horoscope 2025: ಈ ರಾಶಿಯವರು ಪ್ರೀತಿಸಿ ಆತುರದಿಂದ ವಿವಾಹಕ್ಕೆ ಮುಂದಾಗಬೇಡಿ
ಸಾಂದರ್ಭಿಕ ಚಿತ್ರ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 03, 2025 | 11:59 AM

ಕಳೆದ ವರ್ಷಕ್ಕಿಂತ ಈ ವರ್ಷ ಭಿನ್ನವಾಗಿದೆ. ಗ್ರಹಗತಿಗಳು ತಮ್ಮ ಸ್ಥಾನವನ್ನು ಬದಲಿಸಿ ಅಶುಭದಿಂದ ಶುಭವನ್ನು ನೀಡುವರು. ಹಾಗಾಗಿ ದುಃಖಗಳನ್ನು ಮರೆತು ಸುಖವಾಗಿ ಬಾಳಲು ಬೇಕಾದ ಮನಃಸ್ಥಿತಿಯನ್ನು ಬೆಳೆಸಿಕೊಳ್ಳಿ. ಗುರುವು ಈ ವರ್ಷ ಸಪ್ತಮಕ್ಕೂ ಶನಿಯು ಚತುರ್ಥಕ್ಕೂ ರಾಹುವು ತೃತೀಯಕ್ಕೂ ಕೇತುವುದು ನವಮಕ್ಕೂ ಬರಲಿದ್ದಾರೆ. ಒಂದೊಂದೆ ಶುಭಗಳು ನಿಮ್ಮನ್ನು ಬಂದು ಸೇರುವುದು. ವಿಶೇಷವಾಗಿ ಗುರುವು ತನ್ನ ರಾಶಿಯನ್ನೇ ನೋಡುವ ಕಾರಣ ಮಾನಸಿಕವಾದ ದೃಢತೆ ನಿಮ್ಮದಾಗಲಿದೆ. ಎಂತಹ ಸಂದರ್ಭ ಬಂದರೂ ಎದುರಿಸದೇ ಹಿಂದೇಟು ಹಾಕಲಾರಿರಿ.

ಆರೋಗ್ಯ :

ವರ್ಷದ ಮಧ್ಯಾವಧಿಯವರೆಗೂ ಆರೋಗ್ಯದಲ್ಲಿ ಪೂರ್ಣಪ್ರಮಾಣದ ಚೇತರಿಕೆ ಕಾಣಿಸದು.‌ ಹಂತವಾಗಿ ನಿಮ್ಮ ಅನುಭವಕ್ಕೆ ಬರುವುದು. ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು.‌ ಇಲ್ಲವಾದರೆ ಮತ್ತೇನಾದರೂ ಆಗುವ ಸಾಧ್ಯತೆ ಇದೆ.

ಪ್ರೇಮ ಮತ್ತು ವಿವಾಹ :

ಪ್ರೇಮಪಾಶದಲ್ಲಿ ಬಿದ್ದರೆ ಆತುರದಿಂದ ವಿವಾಹಕ್ಕೆ ಮುಂದಾಗಬೇಡಿ. ಸ್ವಲ್ಪ ಕಾಲ ಕಳೆಯಲಿ. ಅದು ಹಾಗೆಯೆ ಉಳಿದರೆ ಜೂನ್ ಅನಂತರ ವಿವಾಹದ ಯೋಚನೆ ಮಾಡಿ. ಗುರು ಶುಕ್ರರ ಸಂಯೋಗವಾದಾಗ ವಿವಾಹ ಘಟಿಸುವುದು ನಿಮಗೆ. ಗುರು ದಶೆಯಾಗಿದ್ದರೆ ಉತ್ತಮ‌ಕುಲದ ಸ್ತ್ರೀಯ ಜೊತೆ ವಿವಾಹ.

ಉದ್ಯೋಗ ಮತ್ತು ಆರ್ಥಿಕತೆ :

ಸಾಹಸ ಕಾರ್ಯಗಳಿಂದ ಅಥವಾ ಒಬ್ಬ ಕೆಳಗೆ ಮತ್ತು ನೀಚ ಕೃತ್ಯದಿಂದ ಧನಸಂಪಾದನೆ ಆಗುವುದು. ಪ್ರಾಮಾಣಿಕತೆ ಇದ್ದರೆ ನಿಮಗೇ ಒಳ್ಳೆಯದು. ಔದ್ಯೋಗಿಕ ಬದಲಾವಣೆ ನಿಮಗೆ ಬೇಕೆನಿಸುವುದು. ಬುಧ ದಶೆಯವರು ತಮಗೆ ಬೇಕಾದ ಕೆಲಸವನ್ನು ಬೇಗ ಪಡೆಯುವರು.

ಕುಟುಂಬ ವ್ಯವಸ್ಥೆ :

ಕುಟುಂಬದ ಯಾವ ವಿಚಾರಕ್ಕೂ ಅತಿಯಾದ ಯೋಚನೆ ಯೋಜನೆ ಮಾಡಲಾರಿರಿ. ಅದು ಹೋದಂತೆ ಸುಮ್ಮನಾಗುವಿರಿ. ಸರಿದಾರಿಗೆ ತರುವ ಮನಸ್ಸೂ ದೂರಾಗುವುದು. ಮಾತು ಕೇಳುವುದು ಆಗದು. ನಿಮ್ಮ ಬಗ್ಗೆ ಆದರ ಕಡಿಮೆಯಾಗಬಹುದು.

ಶತ್ರುಬಾಧೆ :

ಈ ವರ್ಷ ಶತ್ರುಗಳಿಂದ ಮುಕ್ತರಾಗದೇ ಇದ್ದರೂ ಅವರು ತಟಸ್ಥರಾಗಿ ಇರುವರು. ಯಾವುದೇ ಪೀಡೆಯನ್ನು ಕೊಡುವ ಮನಸ್ಸು ಮಾಡರು. ಸ್ತ್ರೀಯರ ಬಗ್ಗೆ ಎಚ್ಚರಿಕೆ ಅಗತ್ಯ.

ಅದೃಷ್ಟ :

ವರ್ಷಾರಂಭದಲ್ಲಿ ನಿಮಗೆ ಅದೃಷ್ಟ ತಕ್ಕಂತೆ ಮಟ್ಟಿಗೆ ಇರುವುದು ಏಪ್ರಿಲ್ ನಲ್ಲಿ ಉನ್ನತ ಸ್ಥಾನ, ಗೌರವಗಳು ಹುಡುಕಿಕೊಂಡು ಬರುವುವು. ಗುರು ದಶೆಯವರು ಎಲ್ಲ ರೀತಿಯಿಂದ ಸಕಾರಾತ್ಮಕ ಅಂಶವನ್ನು ಪಡೆಯುವರು. ಕಳೆದ ಎಲ್ಲ ದುಃಖವೂ ಸುಖವಾಗಿ ಮಾರ್ಪಾಡಾಗುವುದು.

ಹೀಗೆ ಒಳ್ಳೆಯದನ್ನು ಪಡೆಯಲು ಎಲ್ಲ ರೀತಿಯಿಂದ ತಯಾರಾಗಿ. ಜೀವನ ಇಷ್ಟೇ ಎಂದು ಅಂದುಕೊಳ್ಳದೇ ಹೊಸ ಯೋಜನೆಗೆ ಬೇಕಾದ ಬಲವನ್ನು ಪಡೆಯಿರಿ. ದೈವವೂ ನಿಮಗೆ ಸಹಾಯ ಮಾಡಲಿದೆ. ಸುಮ್ನನೆ ಇದ್ದರೆ ಯಾರೂ ಬಾರರು. ಗುರುಚರಿತ್ರೆಯನ್ನು ಪಠಿಸಿ ಎಲ್ಲ ರೀತಿಯಿಂದ ಭವಿಷ್ಯದ ದೃಷ್ಟಿಯಿಂದಲೂ ಶುಭವೇ.

-ಲೋಹಿತ ಹೆಬ್ಬಾರ್, ಇಡುವಾಣಿ

ಗ್ಯಾರಂಟಿಗಳಿಗೆ ನನ್ನ ವಿರೋಧವಿಲ್ಲ, ನಿಲ್ಲಿಸಬೇಡಿ, ಮುಂದುವರೆಸಿ: HDK
ಗ್ಯಾರಂಟಿಗಳಿಗೆ ನನ್ನ ವಿರೋಧವಿಲ್ಲ, ನಿಲ್ಲಿಸಬೇಡಿ, ಮುಂದುವರೆಸಿ: HDK
ಪತಿ ಜೊತೆ ಗೌತಮಿ, ಕದ್ದು ನೋಡಿದ ದೋಸ್ತರಿಗೆ ಕಂಡಿದ್ದೇನು?
ಪತಿ ಜೊತೆ ಗೌತಮಿ, ಕದ್ದು ನೋಡಿದ ದೋಸ್ತರಿಗೆ ಕಂಡಿದ್ದೇನು?
Daily Devotional: ಹಣಕಾಸಿನ ಸಮಸ್ಯೆಗಳಿಗೆ ಪರಿಹಾರ ಇಲ್ಲಿದೆ, ವಿಡಿಯೋ ನೋಡಿ
Daily Devotional: ಹಣಕಾಸಿನ ಸಮಸ್ಯೆಗಳಿಗೆ ಪರಿಹಾರ ಇಲ್ಲಿದೆ, ವಿಡಿಯೋ ನೋಡಿ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್