AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ನಿತ್ಯ ಭವಿಷ್ಯ; ಅನಿರೀಕ್ಷಿತ ಬಂಧುಗಳ ಆಗಮನ, ಏಕಾಗ್ರತೆಯ ಕೊರತೆ ಕಾಡುವುದು

ನೀವು ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ ರಾಶಿಯವರಾಗಿದ್ದರೇ, 21 ಏಪ್ರಿಲ್​​ 2024ರ ನಿಮ್ಮ ರಾಶಿಭವಿಷ್ಯ ಹೇಗಿದೆ? ನಿಮಗೆ ಶುಭ ಅಥವಾ ಅಶುಭ ದಿನವಾ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಎಂಬಿತ್ಯಾದಿ ಮಾಹಿತಿಗಳನ್ನು ಇಂದಿನ ರಾಶಿಭವಿಷ್ಯದಿಂದ ತಿಳಿದುಕೊಳ್ಳಿ.

Horoscope: ನಿತ್ಯ ಭವಿಷ್ಯ; ಅನಿರೀಕ್ಷಿತ ಬಂಧುಗಳ ಆಗಮನ, ಏಕಾಗ್ರತೆಯ ಕೊರತೆ ಕಾಡುವುದು
ಪ್ರಾತಿನಿಧಿಕ ಚಿತ್ರ
ಗಂಗಾಧರ​ ಬ. ಸಾಬೋಜಿ
|

Updated on: Apr 21, 2024 | 12:10 AM

Share

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಏಪ್ರಿಲ್​​​​​ 21) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಅಶ್ವಿನೀ, ಮಾಸ: ಚೈತ್ರ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಉತ್ತರಾ ಫಲ್ಗುಣೀ, ಯೋಗ: ವ್ಯಾಘಾತ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 16 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 46 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 05:13 ರಿಂದ 06:05ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:31 ರಿಂದ 02:05 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:39 ರಿಂದ 05:13ರ ವರೆಗೆ.

ಮೇಷ ರಾಶಿ: ನಿಮ್ಮ ಬಿಡುವಿಲ್ಲದ ಕಾರ್ಯಗಳ ನಡುವೆಯೂ ಮಕ್ಕಳ ಜೊತೆ ಕಾಲ‌ಕಳೆಯಬೇಕಾಗುವುದು. ಅನಿಶ್ಚಯವಾಗಿದ್ದ ನಿಮ್ಮ ವಿವಾಹವು ಇಂದು ನಿಶ್ಚಯವಾಗಲಿದೆ. ನಿದ್ರಾಹೀನತೆಯಿಂದ ಆರೋಗ್ಯವು ಹಾಳಾಗಬಹುದು. ಸ್ನೇಹಿತರೊಂದಿಗೆ ಪ್ರಯಾಣವನ್ನು ಮಾಡುವಿರಿ. ಸ್ತ್ರೀರಿಂದ ಅಪಮಾನವಾಗಬಹುದು. ಬರಬೇಕಾದ ಸಂಪತ್ತು ಬರಲಿದೆ. ಮಕ್ಕಳ ಜಗಳದಲ್ಲಿ ಮಧ್ಯಪ್ರವೇಶಿಸಿ ಸಮಾಧಾನ ಮಾಡುವಿರಿ. ಆಪ್ತರಿಗೆ ಉಡುಗೊರೆ ಕೊಡಲಿದ್ದೀರಿ. ಬೇಕೆಂದೇ ವಿವಾದದಲ್ಲಿ ಸಿಕ್ಕಿಕೊಳ್ಳುವಿರಿ. ಅಕಾರಣವಾಗಿ ಬರುವ ಕೋಪವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವಿರಿ. ನಿಜವಾದ ಮಿತ್ರನ ಬಗ್ಗೆ ನಿಮಗೆ ಗೊತ್ತಾಗಲಿದೆ. ನೀವು ನಿಮ್ಮ ನಿಯಂತ್ರಣದಲ್ಲಿ ಇದ್ದರೆ ಯಾವ ಏರಿಳಿತವೂ ನಿಮ್ಮನ್ನು ಏನೂ ಮಾಡಲಾಗದು. ಯಾರನ್ನೂ ಹತ್ತಿರ ಬಿಟ್ಟಕೊಳ್ಳಲಾರಿರಿ. ಸುಖದ ನಿರೀಕ್ಷೆಯು ನಿಮ್ಮನ್ನು ಸಂತೋಷದಿಂದ ಇಡುವುದು. ಸಂಗಾತಿಯನ್ನು ದೂರ ಕಳಿಸಿಕೊಂಡು ಸಂಕಟಪಡುವಿರಿ.

ವೃಷಭ ರಾಶಿ: ನಿಮ್ಮ ಅಂತಶ್ಶಕ್ತಿಯೇ ನಿಮ್ಮ ನಿಜವಾದ ಬಲವಾದುದರಿಂದ ಯಾವ ಸಮಸ್ಯೆಗಳಿಗೂ ನಿರಾತಂಕವಾಗಿ ಇರುವಿರಿ. ಹೊಸತನವನ್ನು ರೂಢಿಸಿಕೊಳ್ಳುವ ನಿಮ್ಮ ಆಸಕ್ತಿಯನ್ನು ಕಂಡ ಜನರಿಂದ ಮೆಚ್ಚುಗೆಯನ್ನು ಗಳಿಸುವಿರಿ. ಸೌಂದರ್ಯಪ್ರಜ್ಞೆಯು ನಿಮಗೆ ವರದಾನವೆಂದೇ ತಿಳಿಯುತ್ತದೆ. ಆರೋಗ್ಯವನ್ನು ಗಮನದಲ್ಲಿ ಇಟ್ಟುಕೊಂಡು ನಿಮ್ಮ ಕಾರ್ಯಗಳನ್ನು ಮಾಡಿರಿ. ಸಂತಸದ ವಾರ್ತೆ ನಿಮ್ಮನ್ನು ಅರಸಿ ಬರಬಹುದು. ಅದನ್ನು ಗಣನೆಗೆ ತೆಗೆದುಕೊಳ್ಳದೇ ಮುಂದುವರಿಯುವಿರಿ. ಸೂಕ್ಷ್ಮತೆಯನ್ನು ಅರಿತು ವ್ಯವಹಾರವನ್ನು ಮಾಡಿ. ಕಳೆದುಕೊಂಡಿದ್ದನ್ನು ನೀವು ಪುನಃ ಪಡೆದುಕೊಳ್ಳುವ ಪ್ರಯತ್ನದಲ್ಲಿ ನೀವು ಇರುವಿರಿ. ಲೆಕ್ಕಕ್ಕೆ ಸಿಗದೇ ಇರುವ ಎಷ್ಟೋ ಹಣವನ್ನು ಕಳೆದುಕೊಳ್ಳಬೇಕಾಗುವುದು. ಅತಿಯಾದ ಸಂತೋಷದ ಕ್ಷಣವು ನಿಮ್ಮ ಪಾಲಿಗೆ ಇರಲಿದೆ. ದೀರ್ಘಕಾಲದ ಸ್ನೇಹವು ಮತ್ತೆ ಹೊಸದಾಗಿ ಆರಂಭವಾಗಲಿದೆ.

ಮಿಥುನ ರಾಶಿ: ನಿಮಗೇ ನಿಮ್ಮ ವಿದ್ಯಾಭ್ಯಾಸದ ಬಗ್ಗೆ ಹಿಂಜರಿಕೆ ಉಂಟಾಗಬಹುದು.‌ ಉತ್ತಮವಾದ ವಿದ್ಯಾಭ್ಯಾಸವನ್ನು ಮಾಡಲು ಮನಸ್ಸು ಮಾಡುವಿರಿ. ಸ್ನೇಹಿತರ ವರ್ತನೆಯು ನಿಮಗೆ ವಿಚಿತ್ರವೆನಿಸಬಹುದು. ಒಂಟಿಯಾಗಿ ದೂರದ ಪ್ರಯಾಣವನ್ನು ಮಾಡಲು ಇಚ್ಛಿಸುವಿರಿ. ನಟರಿಗೆ ಉತ್ತಮವಾದ ಅವಕಾಶಗಳು ಬರಲಿವೆ. ಹೊಸದಾದ ವಾಹನವನ್ನು ಖರೀದಿಸುವಿರಿ. ಪ್ರಭಾವೀವ್ಯಕ್ತಿಗಳು ನಿಮ್ಮನ್ನು ಭೇಟಿಯಾಗಲು ಬರಬಹುದು. ವ್ಯಾಪಾರದ ನಷ್ಟವನ್ನು ಇನ್ನಾವುದರಿಂದಲೇ ತುಂಬಿಕೊಳ್ಳುವಿರಿ. ಮನೆಯ ವಸ್ತುಗಳನ್ನು ಇನ್ನೊಬ್ಬರಿಗೆ ಕೊಡಲು ಇಚ್ಛಿಸುವುದಿಲ್ಲ. ನಿಮ್ಮ ಶ್ರಮವು ಯಾರಿಗೂ ಕಾಣಿಸದೇ ಹೋಗಬಹುದು. ಹೂಡಿಕೆಯನ್ನು ನಿಲ್ಲಿಸುವ ಮನಸ್ಸಾಗುವುದು. ನಿಮಗೆ ಆಗದವರ ಮೇಲೆ ಸಲ್ಲದ ದೂರನ್ನು ಕೊಡುವಿರಿ. ತೀರ್ಥಕ್ಷೇತ್ರಗಳಿಗೆ ಹೋಗುವ ಮನಸ್ಸಾಗುವುದು. ನೀರಿನ ವಿಷಯದಲ್ಲಿ ಜಾಗಾರೂಕತೆ ಇರಲಿ. ಶಿಸ್ತನ್ನು ಕಾಪಾಡಿಕೊಂಡು ಕೆಲಸ ಮಾಡಿಕೊಳ್ಳುವಿರಿ.

ಕರ್ಕ ರಾಶಿ: ಏನೇ ಮಾಡಿದರೂ ಚಾಂಚಲ್ಯವನ್ನು ನಿಯಂತ್ರಿಸಲಾಗದೇ ಏಕಾಗ್ರತೆಯ ಕೊರತೆ ನಿಮ್ಮನ್ನು ಬಹಳವಾಗಿ ಕಾಡಬಹುದು. ಎತ್ತರದ ಯಾವುದಾರೂ ಪ್ರದೇಶಕ್ಕೆ ಹೋಗಬೇಕು ಎಂದು ಅನ್ನಿಸಬಹುದು. ಉದ್ಯೋಗದ ಸ್ಥಳದಲ್ಲಿ ಶಿಸ್ತಿನ ಕೆಲಸಕ್ಕೆ ಪ್ರಶಂಸೆ ಸಿಗಲಿದೆ. ಪ್ರಭಾವೀ ನಾಯಕರ ಭೇಟಿಯಿಂದ ನಿಮ್ಮ‌ ಮುಂದಿನ ಯೋಜನೆಗೆ ಸಹಕರಿಯಾಗಬಹುದು. ಮಕ್ಕಳ ನಡತೆಯಿಂದ ನಿಮ್ಮ ಮೇಲೆ ಆಪಾದನೆಗಳು ಬರಬಹುದು. ಸಭೆಗಳಿಗೆ ಭಾಗವಹಿಸಲು ಆಹ್ವಾನವು ಬರಬಹುದು. ಸಂಗಾತಿಯಿಂದ ಹಣವನ್ನು ಪಡೆಯಲಿದ್ದೀರಿ. ಪಾಲುದಾರಿಕೆಯನ್ನು ಪಡೆಯುವ ಮೊದಲು ಸಾಧ್ಯಾಸಾಧ್ಯತೆಗಳ ಬಗ್ಗೆ ಗಮನವಿರಲಿ. ನಿಮ್ಮ ಉದ್ಯೋಗಕ್ಕೆ ಯಾರಿಂದಲಾದರೂ ಹೂಡಿಕೆಯನ್ನು ಮಾಡಿಸಿಕೊಳ್ಳುವಿರಿ. ಪ್ರಭಾವೀ ವ್ಯಕ್ತಿಗಳಿಂದ ನಿಮಗೆ ವಂಚನೆಯಾಗಿದೆ ಎಂದನಿಸಬಹುದು.

ಸಿಂಹ ರಾಶಿ: ಇಂದು ಅನಿರೀಕ್ಷಿತ ಬಂಧುಗಳ ಆಗಮನದಿಂದ ಯೋಜಿತವಾದ ಕಾರ್ಯಗಳನ್ನು ಬದಲಾಯಿಸುವಿರಿ. ಕೈಗೆ ಸಿಕ್ಕ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತೆ ಆಗುವುದು. ನಾಲ್ಕು ಜನರ ಮಾತುಗಳನ್ನು ಕೇಳಿ ಸರಿ ಯಾವುದು ಎನ್ನುವ ಗೊಂದಲಕ್ಕೆ ನೀವು ಬರಬಹುದು. ಇಂದು ಉದ್ಯೋಗಿಗಳಿಗೆ ಕಛೇರಿಯಲ್ಲಿ ಎಲ್ಲರ ಜೊತೆ ಉತ್ತಮ ಸಮಯ ಕಳೆಯುವ ಅವಕಾಶವು ಸಿಗುವುದು. ತಪ್ಪನ್ನು ಮಾಡಿ ಅನಂತರ ಅದನ್ನು ಸರಿ ಮಾಡಿಕೊಳ್ಳಲು ವಿವಿಧ ಪ್ರಯತ್ನವನ್ನು ಮಾಡುವಿರಿ. ನೀರಿನಿಂದ ಭಯವು ಉಂಟಾಗುವುದು. ಕಛೇರಿಯ ಕಾರ್ಯವನ್ನು ಮನೆಯಲ್ಲಿ ಇದ್ದು ಮಾಡಬೇಕಾಗಬಹುದು. ಇಂದು ವ್ಯಾಪಾರವನ್ನು ಮಾಡುವ ಮನಸ್ಸು ಇಲ್ಲದಿದ್ದರೂ ಮನೆಯಲ್ಲಿ ಕುಳಿತು ಬೇಸರವಾಗಬಹುದು. ವಾಹನದಿಂದ ನಷ್ಟವಾಗುವುದು.

ಕನ್ಯಾ ರಾಶಿ: ನಿಮ್ಮನ್ನು ನೀವು ಇಂದು ಯಾವುದಾದರೂ ಸತ್ಕಾರ್ಯದಲ್ಲಿ ಜೋಡಿಸಿಕೊಳ್ಳಿ. ಸಾಲವನ್ನು ಮಾಡುವ ಸ್ಥಿತಿಯು ಅನಿರೀಕ್ಷಿತವಾಗಿ ಎದುರಾಗಬಹುದು. ವ್ಯರ್ಥವಾದ ಸುತ್ತಾಟವು ನಿಮಗೆ ಬೇಸರ ತರಿಸಬಹುದು. ಯಾರನ್ನೋ ನಂಬಿ ಮೋಸಹೋಗುವ ಸಾಧ್ಯತೆ ಇರುತ್ತದೆ. ಗಳಿಕೆ ಭರದಲ್ಲಿ ಸೂಕ್ತವಾದ ಕಾರ್ಯಗಳನ್ನು ಆಯ್ಕೆ ಮಾಡಿಕೊಳ್ಳಿ. ವಿದ್ಯಾರ್ಥಿಗಳು ಅಭ್ಯಾಸದಲ್ಲಿ ತೊಡಗಲು ಶ್ರಮವನ್ನು ವಹಿಸಬೇಕು. ಚಂಚಲವಾದ ಮನಸ್ಸು ನಿಮ್ಮನ್ನು ಓದಲು ಬಿಡದು. ಒಂಟಿಯಾಗಿ ದಿನವನ್ನು ಕಳೆಯದೇ ಸ್ನೇಹಿತರ ಜೊತೆ ಸೇರಿಕೊಳ್ಳುವಿರಿ. ಹಳೆಯ ವಾಹನವನ್ನು ಪಡೆದುಕೊಳ್ಳುವಿರಿ. ಹಿರಿಯರಿಗೆ ಎದುರು ಮಾತನಾಡಿ ಅನಂತರ ಪಶ್ಚಾತ್ತಾಪಪಡುವಿರಿ. ನೆನಪಿನ ಶಕ್ತಿಗೆ ಸೂಕ್ತವಾದ ಪರಿಹಾರವನ್ನು ಮೊದಲು ಮಾಡಿಕೊಳ್ಳಬೇಕಾಗುವುದು. ಬೇಡವಾದುದರ ಬಗ್ಗೆ ಆಸೆ ಬೇಡ. ಮಾತುಗಾರರು ಎಂದಿನ ವಾಚಾಳಿತನವನ್ನು ಕಡಿಮೆಮಾಡುವರು.

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ