AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Horoscope: ವಾರ ಭವಿಷ್ಯ: ಏಪ್ರಿಲ್​ 22 ರಿಂದ 28 ರವರೆಗೆ ನಿಮ್ಮ ಭವಿಷ್ಯ ಹೀಗಿದೆ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು (Weekly Horoscope) ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯೂ ಇದೆ. ಏಪ್ರಿಲ್​ 22 ರಿಂದ 28 ರವರೆಗೆ ಯಾವ ರಾಶಿಯವರಿಗೆ ಯಾವ ಫಲ ಇದೆ? ಶುಭ-ಅಶುಭ ಇದೆಯಾ? ಎಂಬಿದ್ಯಾತಿ ಮಾಹಿತಿಯನ್ನು ತಿಳಿದುಕೊಳ್ಳಿ.

Weekly Horoscope: ವಾರ ಭವಿಷ್ಯ: ಏಪ್ರಿಲ್​ 22 ರಿಂದ 28 ರವರೆಗೆ ನಿಮ್ಮ ಭವಿಷ್ಯ ಹೀಗಿದೆ
ವಾರಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Apr 21, 2024 | 12:01 AM

Share

ಇದು ಏಪ್ರಿಲ್ ತಿಂಗಳ ನಾಲ್ಕನೇ ವಾರವಾಗಿದ್ದು ಏ. 22 ರಿಂದ 28 ರವರೆಗೆ ಇರಲಿದೆ. ವಿಶೇಷವಾಗಿ ಎರಡು ಗ್ರಹಗಳು ಪರಿವರ್ತನೆ ಆಗಲಿವೆ. ಸೂರ್ಯನು ತನ್ನ ಉಚ್ಚರಾಶಿಯಾದ ಮೇಷಕ್ಕೆ ಬರುವನು. ಶುಕ್ರನು ತನ್ನ ಮಿತ್ರನ ರಾಶಿಯಾದ ಕುಜನ ಮನೆಗೂ ಹಾಗೂ ಕುಜನೂ ತನ್ನ ಮಿತ್ರನಾದ ಗುರುವಿನ ರಾಶಿಗೂ ಚಲಿಸುವ ಕಾರಣ ಶುಭಫಲವು ಅಧಿಕವಾಗಿ ಈ ವಾರ ಎಲ್ಲರಿಗೂ ಇರುವುದು. ಆದರೆ ಆಯಾ ರಾಶಿಗಳ ಸ್ಥಾನದ ವ್ಯತ್ಯಾಸದಿಂದಾಗಿ ಅಶುಭವು ಕಾಣಿಸಿಕೊಳ್ಳುವುದು. ಅದಕ್ಕೆ ಬೇಕಾದ ದೈವಬಲವನ್ನು ತಂದುಕೊಂಡು ಮುಂದುವರಿದರೆ ಎಲ್ಲವೂ ಕ್ಷೇಮವೇ. ಎಲ್ಲ ಗ್ರಹರೂ ಏಕಾದಶ ಸ್ಥಾನದ ಫಲವನ್ನೇ ಕೊಡಲಿ. ಈ ವಾರ ಎಲ್ಲರಿಗೂ ಶುಭವಾಗಲಿ.

ಮೇಷ ರಾಶಿ : ಇದು ರಾಶಿ ಚಕ್ರದ ಮೊದಲನೇ ರಾಶಿಯಾಗಿದ್ದು, ಏಪ್ರಿಲ್ ತಿಂಗಳ ನಾಲ್ಕನೇ ವಾರದಲ್ಲಿ ನಿಮಗೆ ಗ್ರಹಗತಿಗಳ ಬದಲಾವಣೆಯಿಂದ ಸ್ವಲ್ಪ ಆನುಕೂಲ್ಯವೂ ಪ್ರಾತಿಕೂಲ್ಯವೂ ಇರಲಿದೆ. ನಿಮ್ಮ ರಾಶಿಗೆ ಬರುವ ಸೂರ್ಯ ಹಾಗೂ ಶುಕ್ರರು ಮಾನಸಿಕವಾಗಿ ನೆಮ್ಮದಿಯನ್ನು ಕೊಡುವರು. ಅಂದುಕೊಂಡ ಕೆಲಸವು ಒಂದೊಂದಾಗಿಯೇ ಆಗುವುದು. ಸರ್ಕಾರದ ಕಾರ್ಯವನ್ನು ಈ ವಾರವೇ ಪೂರ್ಣಮಾಡಿಕೊಳ್ಳುವುದು ಸೂಕ್ತ. ದ್ವಿತೀಯದಲ್ಲಿ ಕುಜ, ಬುಧ, ರಾಹುವಿದ್ದು ನಿಮಗೆ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಕೊಡುವರು. ಯಂತ್ರೋಪಕರಣಗಳು ಹಾಳಾಗುವುದು. ಸುಬ್ರಹ್ಮಣ್ಯನ ಆರಾಧನೆಯಿಂದ ಸುಖವನ್ನು ಪಡೆದುಕೊಳ್ಳಿ.

ವೃಷಭ ರಾಶಿ : ಏಪ್ರಿಲ್ ತಿಂಗಳ ನಾಲ್ಕನೇ ವಾರದಲ್ಲಿ ಈ ರಾಶಿಯವರಿಗೆ ಅನನುಕೂಲತೆಗಳು ಹೆಚ್ಚು ಕಾಣಿಸುವುದು. ಸೂರ್ಯ ಹಾಗೂ ಶುಕ್ರರು ಗುರುವಿನ ಜೊತೆ ಇರುವುದರಿಂದ ಮೂವರೂ ದ್ವಾದಶದಲ್ಲಿ ಇದ್ದು ಜೀವನದ ಬಗ್ಗೆ ಆಸಕ್ತಿ ಕಡಿಮೆ ಮಾಡುವುದು, ತಂದೆಗೆ ಸಂಬಂಧಿಸಿದಂತೆ ಹಣವನ್ನು ನೀಡುವುದನ್ನು ಮಾಡಿಸುವರು. ಸಂಗಾತಿಯಿಂದ ನಿಮಗೆ ಸುಖವು ಸಿಗದೇ ಇರುವುದು. ದಶಮದಲ್ಲಿ ಬುಧನು ಇರುವುದು ನಿಮ್ಮ ವೃತ್ತಿಯಲ್ಲಿ ಎಣಿಸಿಕೊಂಡ ಯಾವ ಕಾರ್ಯವೂ ಆಗದು. ಸಹೋದರರ ವಿಚಾರದಲ್ಲಿ ಸಮಾಧಾನ ಇರದು. ಮಹಾಗೌರಿಯ ಉಪಾಸನೆಯು ನಿಮಗೆ ನೆಮ್ಮದಿ ಕೊಡುವುದು.

ಮಿಥುನ ರಾಶಿ : ರಾಶಿ ಚಕ್ರದ ಮೂರನೇ ರಾಶಿಯಾಗಿ ಇರುವವರಿಗೆ ಏಪ್ರಿಲ್ ತಿಂಗಳ ನಾಲ್ಕನೇ ವಾರವು ಶುಭಫಲವು ಇರಲಿದೆ. ಏಕಾದಶದಲ್ಲಿ ಸೂರ್ಯ ಹಾಗೂ ಶುಕ್ರರು ಇದ್ದಾರೆ. ತಂದೆಯಿಂದ ಸಂಗಾತಿಯಿಂದ ನಿಮಗೆ ಅನುಕೂಲತೆಗಳು ಹೆಚ್ಚು. ಸರ್ಕಾರದ ಉದ್ಯೋಗದಲ್ಲಿ ಇರುವವರಿಗೆ ಉನ್ನತ ಸ್ಥಾನಕ್ಕೆ ಅವಕಾಶ ತೆರೆದುಕೊಳ್ಳುವುದು. ದಶಮದಲ್ಲಿ ರಾಹು, ಬುಧ, ಕುಜರು ಇರುವುದು ಉದ್ಯೋಗದಲ್ಲಿ ಅನಾಸಕ್ತಿ ಇರುವುದು. ಸ್ವಂತ ಉದ್ಯಮ ನಡೆಸುವವರಿಗೂ ಶ್ರಮವು ಹೆಚ್ಚು ಬೇಕಾದೀತು ಲಾಭ ಗಳಿಸಲು. ಸ್ವರಾಶ್ಯಧಿಪತಿಯಾದ ಬುಧನು ನೀಚನಾಗಿದ್ದು ಗುರುವಿನ ಆಶೀರ್ವಾದವು ಬೇಕಾಗುವುದು.

ಕಟಕ ರಾಶಿ : ರಾಶಿ ಚಕ್ರದ ನಾಲ್ಕನೇ ರಾಶಿಯಾಗಿರುವ ಇದಕ್ಕೆ ಕೆಲವು ಅಹಿತಕರವಾದ ಸಂಗತಿಗಳು ನಡೆಯುವುದು. ‌ಮಾನಸಿಕವಾಗಿ ನೀವು ಕುಗ್ಗುವಿರಿ. ವೃತ್ತಿಯಲ್ಲಿ ಏರುಪೇರು ನಿಮಗೆ ಗೊಂದಲವನ್ನು ತರುವುದು. ಆರ್ಥಿಕವಾಗಿ ನೀವು ಹಿಮ್ಮುಖವಾಗುವ ಸಂಭವ ಇರಲಿದೆ. ಎಲ್ಲರೂ ನಿಮ್ಮ ಕಾಲೆಳೆದು ಮುಂದೆ ಬರುವರು. ಅತಿಯಾದ ಆತ್ಮವಿಶ್ವಾಸವು ಬೇಡ. ಸಂಗಾತಿಯ ಸಂಕಟಕ್ಕೆ ಧೃತಿಗೆಡುವುದು ಬೇಡ. ಕುಲದೇವರ ಆರಾಧನೆ ಹೆಚ್ಚು ಪ್ರಶಸ್ತವಾಗಲಿದೆ.

ಸಿಂಹ ರಾಶಿ : ಏಪ್ರಿಲ್ ತಿಂಗಳ ನಾಲ್ಕನೇ ವಾರವು ರಾಶಿ ಚಕ್ರದ ಐದನೇ ರಾಶಿಗೆ ಉತ್ತಮ ವಾರವಾಗಲಿದೆ. ನವಮದಲ್ಲಿ ಸೂರ್ಯ, ಶುಕ್ರ, ಗುರುವು ಇರುವುದು ನಿಮಗೆ ಭಾಗ್ಯವನ್ನು ಕೊಡುವರು. ಹೊಸ ಕಾರ್ಯವನ್ನು ಆರಂಭಿಸುವವರು ಈ ವಾರ ಶುರುಮಾಡಬಹುದು. ಆದರೆ ಯಾರಿಂದಲಾದರೂ ಸುಮ್ಮನೇ ಖರ್ಚು, ರಿಸ್ಕ್ ಎನ್ನುವ ವಿರೋಧವು ಬರಬಹುದು. ಆದರೆ ನಿಮ್ಮ ಸ್ಥೈರ್ಯವೇ ಉದ್ಯಮಕ್ಕೆ ಬೆಂಬಲವಾಗಿರುವುದು. ಸಾಲ ಮಾಡಿ ಇದನ್ನು ಆರಂಭಿಸುವಿರಿ. ಸಂಗಾತಿಯ ನಿಲುವುಗಳು ನಿಮಗೆ ಇಷ್ಟವಾಗದೇಹೋಗುವುದು. ಸೂರ್ಯೋಪಾಸನೆಯನ್ನು ಬೆಳಗಿನ ಜಾವದಲ್ಲಿ ಮಾಡಿ.

ಕನ್ಯಾ ರಾಶಿ : ರಾಶಿ ಚಕ್ರದ ಆರನೇ ರಾಶಿಯಾಗಿದ್ದು, ಅಶುಭಫಲವು ಅಧಿಕವಾಗಿರಲಿದೆ. ಸಂಗಾತಿಯ ಕಡೆಯಿಂದ ವಿರೋಧಗಳನ್ನು ಸಹಿಸುವುದು ಕಷ್ಟವಾಗುವುದು. ಎಲ್ಲದಕ್ಕೂ ವಿರೋಧ ಬರುವುದು. ಸರ್ಕಾರದ ಕಾರ್ಯವು ಕ್ಲಿಷ್ಟಕರ ಎನಿಸವುದು. ಜ್ವರಾದಿಗಳು ಬರಬಹುದು. ಮಾತುಗಳನ್ನು ಆಡಲೂ ನಿಮಗೆ ಕಷ್ಟವಾಗುವುದು, ಅಪಮಾನದ ಭಯದಿಂದ. ಯಾರಿಂದಲೂ ತುರ್ತು ಸಹಾಯವನ್ನು ಪಡೆದುಕೊಳ್ಳುವುದು ಕಷ್ಟವಾಗುವುದು. ಸುದರ್ಶನ ಯಂತ್ರವನ್ನು ನಿಮ್ಮ ಜೊತೆಯಲ್ಲಿ ಇರಿಸಿಕೊಂಡು ಮುಂದೆ ಸಾಗಿ.

ತುಲಾ ರಾಶಿ : ಈ ರಾಶಿವರಿಗೆ ಏಪ್ರಿಲ್ ತಿಂಗಳ ನಾಲ್ಕನೆ ವಾರವು ಹೆಚ್ಚು ಶುಭವಿರುವ ವಾರವಾಗಿದೆ. ಸಪ್ತಮದಲ್ಲಿ ಸೂರ್ಯ, ಶುಕ್ರ ಹಾಗೂ ಗುರುವಿದ್ದು ವಿವಾಹಾದಿ ಶುಭಕಾರ್ಯಗಳೂ ನಡೆಯಲಿವೆ. ತಂದೆಯಿಂದ ನಿಮಗೆ ಬೇಕಾದ ಸಹಕಾರವೂ ಪ್ರಾಪ್ತಿಯಾಗಿ ಸಂತೋಷವಿರುವುದು. ಸಂಗಾತಿಯ ನಡತೆ, ಮಾತುಗಳು ನಿಮಗೆ ಇಷ್ಟವಾಗುವುದು. ಆದರೆ ಬಂಧುಗಳು ನಿಮಗೆ ಶತ್ರುಗಳಂತೆ ಅನ್ನಿಸಬಹುದು. ಅವರ ಮೇಲಿರುವ ಪ್ರೀತಿಯು ದ್ವೇಷವಾಗುವುದು. ಅವರ ಮಾತುಗಳು ನಿಮ್ಮನ್ನು ಸಿಟ್ಟಾಗಿಸುವುದು. ಮಹಾವಿಷ್ಣುವಿನ ಅರ್ಚನೆಯನ್ನು ಮಾಡಿ.

ವೃಶ್ಚಿಕ ರಾಶಿ : ರಾಶಿ ಚಕ್ರದಲ್ಲಿ ಈ ವಾರವು ಆಗುವ ಬದಲಾವಣೆಗಳನ್ನು ನೀವು ನಿರೀಕ್ಷೆಯಲ್ಲಿ ಇಟ್ಟುಕೊಂಡಿರುವ ಕಾರಣ ಶುಭಾಶುಭ ಮಿಶ್ರವು ಇರಲಿದೆ. ಚತುರ್ಥದಿಂದ ಪಂಚಮಕ್ಕೆ ಕುಜನು ಚಲಿಸಿದ ಕಾರಣ ಮಕ್ಕಳು ನಿಮಗೆ ಭಾರ ಎನಿಸುವಂತೆ ಆಗುವುದು. ಹೇಳಿದ ಮಾತನ್ನು ಕೇಳದೇ ಎಲ್ಲವಕ್ಕೂ ಪ್ರತ್ಯುತ್ತರ ಕೊಡುವುದು ನಿಮಗೆ ಸಿಟ್ಟು ತರಿಸುವುದು. ಬಂಧುಗಳೂ ನಿಮಗೆ ಪೂರಕವಾಗಿರದೇ ನಿಮ್ಮದೇ ತಪ್ಪು ಎನ್ನುವಂತೆ ಬಿಂಬಿಸುವರು. ಸ್ಥಗಿತವಾಗಿದ್ದ ಸರ್ಕಾರಿ‌ ಕಾರ್ಯವು ಅಸರಂಭವಾದರೂ ಅಂತ್ಯ ಕಾಣದು.‌ ಏನಾದರೂ ನೆಪಗಳು ಅಡ್ಡ ಬರುವುದು. ಕಾರ್ತಿಕೇಯನ ಸ್ಮರಣೆಯನ್ನು ಬಿಡದೇ ಮಾಡಿ.

ಧನು ರಾಶಿ : ಈ ರಾಶಿಯವರಿಗೆ ಏಪ್ರಿಲ್ ತಿಂಗಳ ನಾಲ್ಕನೆಯ ವಾರವು ಸುಖದ ವಾರವಾಗಿರಲಿದೆ. ಪಂಚದಲ್ಲಿ ಮೂರು ಗ್ರಹರ ಯೋಗವು ಈ ವಾರ ಆಗಲಿದ್ದು ಮನೋಭೀಷ್ಟಗಳನ್ನು ಸಿದ್ಧಿಸಿಕೊಳ್ಳುವ ವಾರವೂ ಆಗಿದೆ. ಮಕ್ಕಳಿಂದ ಬರಬಹುದಾದ ಶುಭಗಳು ನಿಮಗೆ ಉತ್ಸಾಹವನ್ನು ಕೊಡುವುದು. ಚತುರ್ಥದಲ್ಲಿ ಬುಧನು ಬಂಧುಗಳಿಂದ ಕ್ಲೇಶವು ಬರುವುದು. ಅದನ್ನು ನಿವಾರಿಸಿಕೊಳ್ಳುವುದೂ ನಿಮಗೆ ಕಷ್ಟ. ಒತ್ತಡ ಎಂದೆನಿಸಬಹುದು. ಅತಿಯಾದಾಗ ಅದು ತಾನಾಗಿಯೇ ಸ್ಫೋಟವಾಗುತ್ತದೆ. ಹಾಗಾಗಿ ಒತ್ತಡವನ್ನು ಯಾವುದರೊಂದು ರೀತಿಯಲ್ಲಿ ನಿಯಂತ್ರಿಸಿಕೊಳ್ಳಿ. ಗುರುವು ತನ್ನ ಮನೆಯನ್ನು ಬದಲಿಸುತ್ತಿದ್ದಾನೆ. ಜಾಗರೂಕತೆ ಮುಖ್ಯ. ಲಕ್ಷ್ಮೀ ನಾರಾಯಣರ ಆರಾಧನೆಯೇ ನಿಮಗೆ ಪ್ರಾಮುಖ್ಯವಾಗಿರಲಿ.

ಮಕರ ರಾಶಿ : ಇದು ನಾಲ್ಕನೇ ವಾರವಾಗಿದ್ದು ರಾಶಿಚಕ್ರದಲ್ಲಿ ಉಂಟಾದ ಚಲನದಿಂದ ನಿಮ್ಮ ಜೀವನದಲ್ಲಿಯೂ ಬದಲಾವಣೆ ಆಗುವುದು. ಚತುರ್ಥದಲ್ಲಿ ಸೂರ್ಯನಿದ್ದುದು ತಾಯಿಗೆ ಅನಾರೋಗ್ಯ ಆಗುವುದು. ತಂದೆಯಿಂದ ಬೆಂಬಲವನ್ನು ಪಡೆಯುವಿರಿ. ತೃತೀಯದಲ್ಲಿ ಬುಧ, ಕುಜ ಹಾಗೂ ರಾಹುಗಳಿದ್ದಾರೆ. ನೀವು ಅಂದುಕೊಂಡಿದ್ದನ್ನು ಬಹಳ ಶ್ರಮದಿಂದ ಸಾಧಿಸಬೇಕಾಗುವುದು. ಸಹೋದರರ ನಡುವೆ ಭಿನ್ನಾಭಿಪ್ರಾಯವು ಕಾಣಿಸುವುದು. ಉದ್ವೇಗಕ್ಕೆ ಒಳಗಾಗದೇ ಎಲ್ಲವನ್ನೂ ನಿಭಾಯಸುವುದು ಮುಖ್ಯ. ಶಿವನ ಉಪಾಸನೆಯಿಂದ ನಿಮ್ಮ ಸಂಕಟಗಳು ದೂರಾಗುವುದು.

ಕುಂಭ ರಾಶಿ : ಇದು ತಿಂಗಳ ನಾಲ್ಕನೇ ವಾರವಾಗಿದ್ದು ಈ ರಾಶಿಯವರಿಗೆ ಕೆಲವು ಅಸಮಾಧವು ಇರಲಿ. ದ್ವಿತೀಯದಲ್ಲಿ ರಾಹು, ಬುಧ, ಕುಜರ ಸಮಾಗಮದಿಂದ ಸಂಪತ್ತಿನಲ್ಲಿ ತೊಂದರೆ ಆಗುವುದು. ಬರಬೇಕಾದ ಸಂಪತ್ತು ಸಮಯಕ್ಕೆ ಬಾರದೇ ಇರುವುದು. ಕಲಹಾದಿಗಳು ಆಗಬಹುದು. ತೃತೀಯದಲ್ಲಿ ಸೂರ್ಯ, ಶುಕ್ರ, ಗುರುವಿರುವುದರಿಂದ ನಿಮ್ಮ ಸಾಮರ್ಥ್ಯ ಪರಿಚಯವನ್ನೂ ಇತರರಿಗೆ ಮಾಡಿಸುವಿರಿ. ಚುರುಕುತನದ ಅವಶ್ಯಕತೆ ಖಂಡಿತವಾಗಿ ಇದೆ. ವಿವಾಹಿತರು ಸಂಗಾತಿಯ ಜೊತೆಗೆ ಸ್ವಲ್ಪ ಸಿಟ್ಟು, ಸಂತೋದ ಜೊತೆ ಕಾಲವನ್ನು ಕಳೆಯುವಿರಿ. ನಾಗದೇವರ ಆರಾಧನೆ ಮಾಡಿ, ಕ್ಷೀರ ನೈವೇದ್ಯ ಮಾಡಿ.

ಮೀನ ರಾಶಿ : ಇದು ಏಪ್ರಿಲ್ ತಿಂಗಳ ನಾಲ್ಕನೇ ವಾರ. ಗ್ರಹಗಳು ಬದಲಾವಣೆಯನ್ನು ಹೊಂದಿವೆ. ನಿಮ್ಮ ರಾಶಿಯು ರಾಹು, ಕುಜ, ಬುಧರಿಂದ ಕೂಡಿರಲಿದೆ. ಬುಧನು ನೀಚನಾಗಿದ್ದು ದೇಹಾರೋಗ್ಯವನ್ನು ಕೆಡಿಸುವನು.‌ ಮನಸ್ಸಿಗೂ ಸಮಾಧಾನವಿರದು. ಬಂಧುಗಳಿಂದ‌ ಕಿರಿಕಿರಿ, ಭೂಮಿಗೆ ಸಂಬಂಧಿಸದ ಕಲಹವು ನಿಮ್ಮನ್ನು ಹೈರಾಣ ಮಾಡುವುದು. ದ್ವಿತೀಯದಲ್ಲಿ ಶುಕ್ರ, ಗುರು, ಸೂರ್ಯರು ಇರುವ ಕಾರಣ ಇದೆಲ್ಲದಕ್ಕೂ ಮುಕ್ತಿ ಸಿಗುತ್ತಾ ನೆಮ್ಮದಿ ಒಡೆಯುವಿರಿ. ಆದರೆ ಎದುರಿಸುವ ತಾಳ್ಮೆ‌ಅತ್ಯವಶ್ಯಕ. ಶನಿಯು ನಿಮ್ಮೆಲ್ಲ‌ ಕಾರ್ಯಗಳನ್ನು ವಿಳಂಬ ಮಾಡುವನು. ವಿಷ್ಣುಸಹಸ್ರನಾಮವನ್ನು ಪಠಿಸಿ.

-ಲೋಹಿತ ಹೆಬ್ಬಾರ್ – 8762924271 (what’s app only)

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ