Horoscope: ನಿತ್ಯ ಭವಿಷ್ಯ; ಈ ರಾಶಿಯವರು ವಿನಾಕಾರಣ ಮಿತ್ರರನ್ನು ದೂರ ಮಾಡಿಕೊಳ್ಳುವಿರಿ
ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರಾಗಿದ್ದರೇ, 20 ಏಪ್ರಿಲ್ 2024ರ ನಿಮ್ಮ ರಾಶಿಭವಿಷ್ಯ ಹೇಗಿದೆ? ನಿಮಗೆ ಶುಭ ಅಥವಾ ಅಶುಭ ದಿನವಾ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಎಂಬಿತ್ಯಾದಿ ಮಾಹಿತಿಗಳನ್ನು ಇಂದಿನ ರಾಶಿಭವಿಷ್ಯದಿಂದ ತಿಳಿದುಕೊಳ್ಳಿ.

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಏಪ್ರಿಲ್ 20) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಅಶ್ವಿನೀ, ಮಾಸ: ಚೈತ್ರ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಉತ್ತರಾ ಫಲ್ಗುಣೀ, ಯೋಗ: ಧ್ರುವ, ಕರಣ: ಬಾವಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 16 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 46 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 09:24 ರಿಂದ 10:58ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:05 ರಿಂದ 03:39 ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 06:17 ರಿಂದ 07:51ರ ವರೆಗೆ.
ಮೇಷ ರಾಶಿ: ನಿಂದಿಸಿ ನಿಮ್ಮ ಶಕ್ತಿಯನ್ನು ಕಡಿಮೆ ಮಾಡಲು ಬಯಸಬಹುದು. ಹೊಂದಾಣಿಕೆಯಿಂದ ಕಾರ್ಯವನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ಖುಷಿಯಾಗಿರುವಂತೆ ನಿಮ್ಮ ಸುತ್ತಲನ್ನು ರೂಪಿಸಿಕೊಳ್ಳಿ. ಸಹೋದರರ ಜೊತೆ ಆರ್ಥಿಕ ಸ್ಥಿತಿಯನ್ನು ಹಂಚಿಕೊಳ್ಳಿ. ಬೇರೆಯವರನ್ನು ಇರಿಯಲು ಹೊರಟ ಮಾತು ನಿಮ್ಮನ್ನೇ ಇರಿದೀತು. ನೀವು ಇಂದು ಮಕ್ಕಳಿಗಾಗಿ ಖರ್ಚು ಮಾಡುವುದು ಅಗತ್ಯವೂ ಅನಿವಾರ್ಯವೂ ಆದೀತು. ವಿರೋಧಿಗಳ ಮಧ್ಯದಲ್ಲಿ ನೀವು ಗೆಲ್ಲುವ ತವಕವು ಇರುವುದು. ಆದಾಯದ ಕಡೆಗೆ ವಿಶೇಷಗಮನವು ಇರಲಿದೆ. ನಿಮ್ಮಲ್ಲಿರುವ ಒಳ್ಳೆಯದನ್ನು ನಿಜವಾಗಿಯೂ ಪ್ರಶಂಸಿಸಲು ನಿಮ್ಮಿಬ್ಬರಿಗೂ ಸ್ವಲ್ಪ ಅಂತರದ ಅಗತ್ಯವಿದೆ. ಒಂದೇ ಕೆಲಸವನ್ನು ನಿರಂತರ ಮಾಡಿ ಶಿಸ್ತನ್ನು ರೂಢಿಸಿಕೊಳ್ಳಬೇಕಾಗುವುದು. ದೊಡ್ಡ ಕನಸನ್ನು ಇಟ್ಟುಕೊಳ್ಳುವುದು ಸೂಕ್ತವಾಗಬಹುದು. ಇತರರ ಧಾರ್ಮಿಕ ನಂಬಿಕೆಯನ್ನು ನೀವು ಘಾಸಿಮಾಡುವಿರಿ.
ವೃಷಭ ರಾಶಿ: ವಾಸ್ತವದಲ್ಲಿ ಬದುಕುವುದು ಮುಖ್ಯ. ಯಾವುದಕ್ಕೂ ಇಂತಹ ಸನ್ನಿವೇಶ ಎದುರಾದಾಗ ಮೊದಲು ಯೋಚಿಸಿ. ಪಿತ್ರಾರ್ಜಿತ ಸಂಪತ್ತಗಳು ಸಿಗುವ ಸಾಧ್ಯತೆ ಇದೆ. ಕುತೂಹಲದ ನಿಮ್ಮ ಸ್ವಭಾವವು ಇಂದು ಜಗಜ್ಜಾಹಿರಾಗಲಿದೆ. ತಂದೆಯ ಬಗ್ಗೆ ಗೌರವವು ಬರುವುದು. ನಿಮ್ಮ ನಂಬಿಕೆ ಇಂದು ಫಲವನ್ನು ಕೊಡುತ್ತದೆ. ಅನಂತರ ಅದರಿಂದ ಹೊರಬರುವುದು ಅಸಾಧ್ಯ. ಖರ್ಚಿನಿಂದಾಗಿ ಬೇಸರವು ಅಧಿಕವಾಗಬಹುದು. ನೀವು ನೋಡುವ ದೃಷ್ಟಿಯಿಂದ ಎಲ್ಲವೂ ಹಾಗೆ ಕಾಣಿಸುವುದು. ಮನಸ್ಸಿನ ಬಾರವು ನಿಮ್ಮ ಕೆಲಸವನ್ನು ಸ್ಥಗಿತ ಮಾಡೀತು. ಸಿಟ್ಟಿನಿಂದ ಎಲ್ಲವೂ ಬದಲಾದೀತು. ವಾಸ್ತವವನ್ನು ಅರಿಯುವ ಸ್ಥಿತಿಯನ್ನು ಕಳೆದುಕೊಳ್ಳುವಿರಿ. ವಿದೇಶದಲ್ಲಿ ಇರುವವರಿಗೆ ಆರೋಗ್ಯವು ಕೆಡಬಹುದು. ವ್ಯಾಪಾರಸ್ಥರು ಲಾಭವನ್ನು ಗಳಿಸುವತ್ತ ಯೋಜನೆ ರೂಪಿಸಿಕೊಳ್ಳುವುದು. ಬಂಧುಗಳ ಕಿರಿಕಿರಿಯನ್ನು ಸಹಿಸುವುದು ನಿಮಗೆ ಕಷ್ಟವಾದೀತು.
ಮಿಥುನ ರಾಶಿ: ವಿದ್ಯಾರ್ಥಿಗಳು ಹೊಸ ಕಲಿಕೆಗೆ ತೆರೆದುಕೊಳ್ಳುವ ಮೊದಲು ಸಾಧಕ ಬಾಧಕಗಳ ಬಗ್ಗೆ ಗಮನವಿರಲಿ. ಬಲ್ಲವರಾದ ತಾವು ಸದಾ ಪ್ರಯತ್ನಶೀಲರು. ನಿರಂತರ ಪ್ರಯತ್ನಕ್ಕೆ ಫಲವಿಲ್ಲದಿಲ್ಲ. ಸಮಯವನ್ನು ನೀರೀಕ್ಷಿಸುತ್ತ ಕಾಲ ಕಳೆಯಬೇಕು. ಆಪದ್ಧನ ಇಂದು ತನ್ನ ಅಸ್ತಿತ್ವವನ್ನು ತೋರಿಸಲಿದೆ. ಇದರ ಜೊತೆ ವ್ಯಯದ ದುಃಖವು ನಿಮಗೆ ಆಗುತ್ತದೆ. ಪ್ರಣಯವನ್ನು ಪ್ರಕಟಿಸಲು ಹೋಗಬೇಡಿ. ಇಂದು ನಿಮಗೆ ಹಿರಿಯರ ಉಪದೇಶವು ಅಧಿಕವಾಗಿ ಇರುವುದು. ವಿವಾದವಾಗುವ ವಿಚಾರದಲ್ಲಿ ನೀವು ದೂರವಿರುವಿರಿ. ಉದ್ಯೋಗಾವಕಾಶಗಳನ್ನು ಬಿಡುವಿರಿ. ಇನ್ನೊಬ್ಬರ ಬಗ್ಗೆ ನಿಮಗೆ ಅನುಕಂಪ ಹೆಚ್ಚಾದೀತು. ನಿಮ್ಮ ಏಕಾಗ್ರತೆಗೆ ಭಂಗಬರಬಹುದು. ಜನರ ಜೊತೆ ಮಾತನಾಡುವಾಗ ನಿಮ್ಮ ಮಾತುಗಳು ಸ್ಪಷ್ಟವಾಗಿ ಇರಲಿ. ಭವಿಷ್ಯದ ಬಗ್ಗೆ ಏನೇನೋ ಕಲ್ಪನೆಯನ್ನು ಇಟ್ಟುಕೊಂಡು ಹತಾಶರಾಗಬೇಕಾಗುವುದು. ನಿಮ್ಮ ಮನಸ್ಸಿಗೆ ಬಾರದೇ ಇರುವ ಯಾವುದನ್ನೂ ನೀವು ಒಪ್ಪಿಕೊಳ್ಳಲಾರಿರಿ.
ಕರ್ಕ ರಾಶಿ: ಇಂದು ನೀವು ಆತುರದಲ್ಲಿ ಇರುವಿರಿ. ನಿಮ್ಮ ಹಿಂದೆ ಕಹಿಯಾದ ಮಾತುಗಳನ್ನು ಯಾರಾದರೂ ಆಡುವುದಹ ಕೇಳಿಬರಬಹುದು. ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ನಿಮ್ಮ ಹೆಸರು ಕೇಳಿಬರಲಿದೆ. ಸಮಯ ಸುಮ್ಮನೇ ವ್ಯರ್ಥವಾಗುತ್ತಿದೆ. ನಿಮ್ಮ ಕುಟುಂಬದ ಆಲೋಚನೆಯು ಅಧಿಕವಾಗಿ ಇರುವುದು. ಪ್ರಯತ್ನಿಸಿದ ಕಾರ್ಯಗಳಿಗೆ ನೀವು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುವುದು. ಮಹಿಳೆಯರ ಸಂಘವು ಹೆಚ್ಚಾಗಬಹುದು. ವಿನಾಕಾರಣ ಮಿತ್ರರನ್ನು ದೂರ ಮಾಡಿಕೊಳ್ಳುವಿರಿ. ಕೃಷಿಯಲ್ಲಿ ಆಸಕ್ತಿ ಉಂಟಾಗಬಹುದು. ರಮಣೀಯ ಸ್ಥಳಕ್ಕೆ ಸಂಗಾತಿಯ ಜೊತೆ ಹೋಗಲಿದ್ದೀರಿ. ಒಂದೇ ರೀತಿ ಜೀವನ ಶೈಲಿಯಿಂದ ಆಚೆ ಬರುವುದು ನಿಮಗೆ ಮುಖ್ಯವಾದೀತು. ನಿಮ್ಮ ಮಿತಿಯಲ್ಲಿ ನೀವು ಇರುವುದು ಸೂಕ್ತ. ವಕೀಲ ವೃತ್ತಿಯವರಿಗೆ ಸ್ವಲ್ಪ ಸಮಾಧಾನ ಇರುವುದು.




