AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ದಿನ ಭವಿಷ್ಯ; ಈ ರಾಶಿಯವರು ಇಂದು ಅಪಹಾಸ್ಯಕ್ಕೆ ಸಿಲುಕುವಿರಿ

ಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ. ಏಪ್ರಿಲ್ 20 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ದಿನ ಭವಿಷ್ಯ; ಈ ರಾಶಿಯವರು ಇಂದು ಅಪಹಾಸ್ಯಕ್ಕೆ ಸಿಲುಕುವಿರಿ
ದಿನಭವಿಷ್ಯ
TV9 Web
| Edited By: |

Updated on: Apr 20, 2024 | 12:30 AM

Share

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಏಪ್ರಿಲ್​​​​​ 20) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಅಶ್ವಿನೀ, ಮಾಸ: ಚೈತ್ರ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಉತ್ತರಾ ಫಲ್ಗುಣೀ, ಯೋಗ: ಧ್ರುವ, ಕರಣ: ಬಾವಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 16 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 46 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 09:24 ರಿಂದ 10:58ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:05 ರಿಂದ 03:39 ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 06:17 ರಿಂದ  07:51ರ ವರೆಗೆ.

ಸಿಂಹ ರಾಶಿ : ಅತಿಯಾದ ಉತ್ಸಾಹದಿಂದ ನಿಮ್ಮ ಮೇಲೆ‌ ನಿಮಗೆ ನಿಯಂತ್ರಣ ಸಾಲದಾಗುವುದು. ಹಣವನ್ನು ಉಳಿಸಿಯೇ ಉಳಿಸುತ್ತೇನೆ ಎಂಬ ಹುಂಬುತನ ಬೇಡ. ಅಮೂಲ್ಯವಾದುದನ್ನು ಕಳೆದುಕೊಳ್ಳಬೇಕಾಗಬಹುದು. ಪ್ರವಾಹದ ದಿಕ್ಕಿನಲ್ಲೇ ಹೋದರೆ ದಡಸೇರಲು ಏನಾದರೂ ಆಧಾರ ಸಿಕ್ಕೀತು. ಸಿಕ್ಕುವ ಅಲ್ಪವೂ ನಷ್ಟವಾದೀತು. ಜೀವನದ ತೊಂದರೆಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳಿ. ನಿಮ್ಮವರು ನಿಮ್ಮಿಂದ ಏನನ್ನಾದರೂ ಬಯಸುವರು. ಪ್ರಭಾವಿ ವ್ಯಕ್ತಿಗಳು ಬಂಧುಗಳಾಗಿದ್ದು ಅವರಿಂದ ಬೇಕಾದ ಕೆಲಸವನ್ನು ಮಾಡಿಸಿಕೊಳ್ಳುವಿರಿ. ನಿಮ್ಮ ಸ್ಥಿರಾಸ್ತಿ ಮಾರಾಟದ ಬಗ್ಗೆ ಪೂರ್ಣವಾಗಿ ನಿಮಗೆ ಬೆಂಬಲ ಸಿಗದೇ ಹೋಗಬಹುದು. ಭೂಮಿಯ ವ್ಯವಹಾರದಲ್ಲಿ ಚುರುಕುತನ ಇರುವುದು. ಬಾಡಿಗೆ ಮನೆಯಲ್ಲಿ ನೀವಿದ್ದರೆ ಕಿರಿಕಿರಿಯಾದೀತು. ಮನೆಯ ಕೆಲಸಲ್ಲಿ ಸಮಯವು ಹೋಗಿದ್ದೇ ಗೊತ್ತಾಗದು. ಇಂದು ನೀವು ಹೆಚ್ಚು ಉತ್ಸಾಹ ಹಾಗೂ ನಗುಮುಖದಲ್ಲಿ ಇರುವುದು ಎಲ್ಲರಿಗೂ ಗೊತ್ತಾಗಲಿದೆ.

ಕನ್ಯಾ ರಾಶಿ : ನಿಮ್ಮ ಜೊತೆಗಿನ‌ ಕಲಹಕ್ಕಾಗಿಯೇ ಪರಿಚಿತರು ಮಾತನಾಡಬಹುದು. ಅದನ್ನು ಅಷ್ಟಕ್ಕೇ ನಿಲ್ಲಿಸುವ ಜಾಣ್ಮೆ ನಿಮ್ಮದು. ಉದ್ಯೋಗದಲ್ಲಿ ಲಾಭ ಹೆಚ್ಚಲಿದೆ. ದೈವವೇ ನಿಮ್ಮ ಭವಿಷ್ಯವನ್ನು ಕಂಡು ಪೂರ್ವಭಾವಿಯಾಗಿ ಹಣವನ್ನು ಕೂಡಿಡಿಸುವಂತೆ ಪ್ರೇರಿಸಿತ್ತು. ಆ ಹಣವನ್ನು ಅನಾರೋಗ್ಯದಿಂದ ಗುಣವಾಗಲು ಬಳಸಬಹುದಾಗಿದೆ. ಯೋಜನಾ ಬದ್ಧಕಾರ್ಯಗಳನ್ನು ಮಾಡಿ. ಪ್ರಯೋಜನವು ಸರಿಯಾದ ಕಾಲಕ್ಕೆ ಸಿಗುತ್ತದೆ. ತೀರ್ಥಯಾತ್ರೆಗೆ ಹೋಗಲು ತಯಾರಾಗಿರಿ. ಪ್ರೇಮಿಸಿದವರು ತಮ್ಮ ಕುಟುಂಬಕ್ಕೆ ಅದನ್ನು ತಿಳಿಸಿ ಅವರಿಂದ ಒಪ್ಪಿಗೆ ಪಡೆಯುವರು. ನಿಮಗೆ ದ್ವಂದ್ವಗಳು ಒಂದು ಸರಿಯಾದ ನಿರ್ಧಾರಕ್ಕೆ ಬರಲು ಅನುಕೂಲ ಮಾಡಿಕೊಡುವುದಿಲ್ಲ. ನಿಮಗೆ ಸಿಕ್ಕ ಜವಾಬ್ದಾರಿಯನ್ನು ತಪ್ಪಿಸಿಕೊಳ್ಳಲು ಮಾರ್ಗವನ್ನು ಹುಡುಕುವಿರಿ. ನಿಮಗೆ ಸಿಗಬೇಕಾದ ಹಣವು ಸಿಗದೇ ಇರುವುದರಿಂದ ಬೇಸರ ಬೇಡ. ಸ್ತ್ರೀಯರ ಬಗ್ಗೆ ನಿಮಗೆ ಅನುಕಂಪವಿದ್ದರೂ ಅದನ್ನು ಹೇಳಿಕೊಳ್ಳಲಾಗದು. ಅಪಹಾಸ್ಯಕ್ಕೆ ಸಿಲುಕುವಿರಿ.

ತುಲಾ ರಾಶಿ : ಇಂದು ಬಂಧುಗಳ ಚುಚ್ಚು ಮಾತು ನಿಮಗೆ ಹಿಡಿಸದು. ಅಲ್ಪ ವ್ಯತ್ಯಾಸದಿಂದ ಹೆಚ್ಚಿನ ಬಾಧೆಯನ್ನು ಪಡಬೇಕಾದೀತು. ಆಪ್ತರು ಹಣವನ್ನು ಕೇಳಿದಾಗ ಇಲ್ಲ ಎನ್ನಲಾಗದು. ಕೊಟ್ಟರೆ ಆರ್ಥಿಕ ಸ್ಥಿತಿಯ ಹದ ಕೆಡುವುದು. ಉಭಯಸಂಕಟದಲ್ಲಿ ನೋಯಬೇಕಾಗಬಹುದು. ವೈವಾಹಿಕ ಜೀವನವು ಉಸಿರುಗಟ್ಟಿಸಿದಂತೆನಿಸಬಹುದು. ಹಳೆಯ ಘಟನೆಯನ್ನು ನೆನೆದು ಕೊರಗಬೇಡಿ. ಹರುಷಕ್ಕೆ ಹತ್ತರು ದಾರಿಗಳಿವೆ. ನಿಮ್ಮ ಇಂದಿನ ಉದ್ಯಮಕ್ಕೆ ಕೆಲವು ಅನಗತ್ಯ ಸಲಹೆಗಳು ಬರಬಹುದು. ಆದಾಯದ ಮೂಲವನ್ನು ಹೆಚ್ಚು ಮಾಡುವ ಸನ್ನಿವೇಶವು ಬರಬಹುದು. ವಾಹನ ಚಾಲನೆಯಲ್ಲಿ ಎಚ್ಚರ ತಪ್ಪಬಹುದು. ಅಂಗಳವನ್ನೇ ಹಾರಲಾರದವನು ಆಕಾಶವನ್ನು ಹಾರಿಯಾನು ಎಂದು ನಿಮ್ಮನ್ನು ಲೇವಡಿ ಮಾಡಬಹುದು. ಇದು ನಿಮಗೆ ಸಾಧನೆಗೆ ಪ್ರೇರಣೆಯೂ ಆಗಬಹುದು. ಅನಗತ್ಯ ವಿಚಾರಗಳನ್ನು ನಿಮ್ಮಿಂದ ದೂರವಿರಿಸಿ.

ವೃಶ್ಚಿಕ ರಾಶಿ : ಭವಿಷ್ಯದ ಬಗ್ಗೆ, ಮಕ್ಕಳ ಬಗ್ಗೆ ಯೋಚನೆ ಅಧಿಕವಿರುವುದು. ದೂರದ ಪ್ರಯಾಣಕ್ಕೆ ಹೋಗುವ ಸಾಧ್ಯತೆ ಇದೆ. ನಿಮಗೆ ಇನ್ನಷ್ಟು ಬಲ, ಸ್ಫೂರ್ತಿ ಸಿಗುವುದು. ಸಂಬಂಧಿಕರ ಹಾಗೂ ಸ್ನೇಹಿತರಿಂದ ಕೂಡಿಕೊಂಡು ಮನಬಿಚ್ಚಿ ಹರಟೆ ಹೊಡೆದು ಹೋಗುತ್ತೀರಿ. ಯಂತ್ರೋಪಕರಣಗಳ ಬಳಕೆ ಅಧಿಕವಾಗಲಿದೆ. ಇಂದು ನೀವು ಖರೀದಿಸುವ ವಸ್ತುವಿಗೆ ಹೆಚ್ಚು ಹಣವನ್ನು ಕೊಟ್ಟು ಸಂಪತ್ತನ್ನು ಹಾಳುಮಾಡಿಕೊಳ್ಳುವಿರಿ. ಸಮಯಕ್ಕೆ ಸರಿಯಾಗಿ ಆಹಾರವನ್ನು ಸ್ವೀಕರಿಸಿ. ಹಿನ್ನಡೆಯಾದ ಕಾರ್ಯಕ್ಕೆ ಬೇಸರ ಬೇಡ. ನೀವು ಶಿಸ್ತಿಗೆ ಒಳಪಟ್ಟಷ್ಟು ನಿಮ್ಮ ಕೆಲಸಗಳು ಸುಲಲಿತವಾಗುವುದು. ಕೆಲವು ಸಂದರ್ಭಗಳು ನಿಮ್ಮ ಪರೀಕ್ಷೆಗಾಗಿ ಬರಲಿದ್ದು ಅದನ್ನು ಎದುರಿಸುವುದು ನಿಮ್ಮ ಮೇಲಿದೆ. ಮೂರ್ಖರಂತೆ ವರ್ತಿಸಿ ಎಲ್ಲರ ನಡುವೆ ನಗೆಪಾಟಲಾಗುವಿರಿ. ಸಂಗಾತಿಯ ಹೆಸರಿನಲ್ಲಿ ಸ್ಥಿರಾಸ್ತಿಯನ್ನು ಖರೀದಿಸುವಿರಿ. ಎಷ್ಟೇ ಸೌಕರ್ಯವಿದ್ದರೂ ಇನ್ನಷ್ಟು ಬೇಕೆನಿಸಬಹುದು. ಆರ್ಥಿಕ ಸ್ಥಿತಿಯು ನಿಮಗೆ ಸಮಾಧಾನ ಕೊಡುವುದು.

ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ