Propose Day 2026 Date: ಪ್ರಪೋಸ್ ಡೇ ಯಾವಾಗ? ಪ್ರೇಮಿಗಳ ಈ ಮಹತ್ವದ ದಿನದ ಹಿನ್ನೆಲೆಯ ಬಗ್ಗೆ ತಿಳಿಯಿರಿ
Valentine’s Week 2026: ಫೆಬ್ರವರಿ 14 ರಂದು ಆಚರಿಸಲಾಗುವ ಪ್ರೇಮಿಗಳ ದಿನಕ್ಕೂ ಮೊದಲು ವ್ಯಾಲೆಂಟೈನ್ ವೀಕ್ ಅನ್ನು ಆಚರಿಸಲಾಗುತ್ತದೆ. ವ್ಯಾಲೆಂಟೈನ್ ವೀಕ್‌ನ ಪ್ರತಿಯೊಬ್ಬ ಪ್ರೇಮಿಗಳಿಗೂ ಬಹಳ ವಿಶೇಷವಾಗಿದೆ. ಪ್ರೇಮಿಗಳ ವಾರದ ಎರಡನೇ ದಿನವನ್ನು ಪ್ರಪೋಸ್ ದಿನವೆಂದು ಆಚರಿಸಲಾಗುತ್ತದೆ. ಈ ವಿಶೇಷ ದಿನವು ಹೊಸ ಪ್ರೇಮಕಥೆಗಳ ಆಶಾದಾಯಕ ಆರಂಭಕ್ಕೆ ಹೆಸರುವಾಸಿಯಾಗಿದ್ದು, ಪ್ರಪೋಸ್ ಡೇ ಆರಂಭವಾದದ್ದು ಹೇಗೆ, ಈ ದಿನದ ಹಿನ್ನೆಲೆಯೇನು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯಿರಿ.

ವ್ಯಾಲೆಂಟೈನ್ಸ್ ವೀಕ್ ಈಗಾಗಲೇ ಆರಂಭವಾಗಿದ್ದು, ಪ್ರೇಮಿಗಳ ಪಾಲಿಗೆ ಪ್ರೇಮಿಗಳ ವಾರದ ಪ್ರತಿಯೊಂದು ದಿನವೂ ತುಂಬಾ ವಿಶೇಷವಾಗಿದೆ. ಅದರಲ್ಲೂ ಪ್ರೇಮಿಗಳಿಗೆ ಪ್ರಪೋಸ್ ಡೇ (Propose Day) ಅಪಾರ ಮಹತ್ವದ್ದಾಗಿದೆ. ಇದನ್ನು ಪ್ರೀತಿಯ ಭಾವನೆಗಳನ್ನು ವ್ಯಕ್ತಪಡಿಸಲು, ಮದುವೆಯನ್ನು ಪ್ರಸ್ತಾಪಿಸಲು ಶ್ರೇಷ್ಠ ದಿನವೆಂದು ಪರಿಗಣಿಸಲಾಗಿದೆ. ಪ್ರತಿ ವರ್ಷ ಪ್ರೇಮಿಗಳ ವಾರದ ಎರಡನೇ ದಿನದಂದು ಪ್ರಪೋಸ್ ಡೇ ಯನ್ನು ಆಚರಿಸಲಾಗುತ್ತದೆ. ಈ ದಿನದಂದು, ಜನರು ತಮ್ಮ ಪ್ರೀತಿ ಅಥವಾ ಸಂಗಾತಿಗೆ ತಮ್ಮ ಆಳವಾದ ಭಾವನೆಗಳನ್ನು ಪದಗಳಲ್ಲಿ ವ್ಯಕ್ತಪಡಿಸುತ್ತಾರೆ. ಒಟ್ಟಾರೆಯಾಗಿ ಈ ವಿಶೇಷ ದಿನವು ಹೊಸ ಪ್ರೇಮಕಥೆಗಳ ಆಶಾದಾಯಕ ಆರಂಭಕ್ಕೆ ಹೆಸರುವಾಸಿಯಾಗಿದ್ದು, ಈ ಪ್ರಪೋಸ್ ಡೇ ಯ ಇತಿಹಾಸ ಮತ್ತು ಮಹತ್ವವೇನು ಎಂಬುದನ್ನು ತಿಳಿಯೋಣ ಬನ್ನಿ.
ಪ್ರಪೋಸ್ ಡೇ ಯನ್ನು ಏಕೆ ಆಚರಿಸಲಾಗುತ್ತದೆ?
ಜನರು ತಮ್ಮ ಆಳವಾದ ಭಾವನೆಗಳನ್ನು ವ್ಯಕ್ತಪಡಿಸಲು ಮತ್ತು ತಮ್ಮ ನೆಚ್ಚಿನ ವ್ಯಕ್ತಿಗೆ ಅವರನ್ನು ಪ್ರೀತಿಸುತ್ತೇನೆ ಅಥವಾ ಅವರೊಂದಿಗೆ ಜೀವಮಾನವಿಡೀ ಸಂಬಂಧವನ್ನು ಮುಂದುವರಿಸಲು ಬಯಸುತ್ತೇನೆ ಎಂದು ಹೇಳಲು ಪ್ರಪೋಸ್ ಡೇಯನ್ನು ಆಚರಿಸಲಾಗುತ್ತದೆ. ಈ ದಿನವನ್ನು ಪ್ರೀತಿ, ವಿಶ್ವಾಸ ಮತ್ತು ಹೊಸ ಸಂಬಂಧಗಳ ಆರಂಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅನೇಕ ಜನರು ಈ ದಿನದಂದು ತಮ್ಮ ಪ್ರೇಮವನ್ನು ಪ್ರಸ್ತಾಪ ಮಾಡುತ್ತಾರೆ, ಪ್ರಪೋಸ್ ಮಾಡುತ್ತಾರೆ, ಆದರೆ ಅನೇಕ ದಂಪತಿಗಳು ತಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನಿರ್ಧರಿಸುತ್ತಾರೆ. ಈ ರೀತಿಯಾಗಿ, ಪ್ರೀತಿಯನ್ನು ವ್ಯಕ್ತಪಡಿಸಲು, ಪ್ರಾಮಾಣಿಕತೆ ಮತ್ತು ಸಂಬಂಧಗಳಲ್ಲಿ ಭಾವನಾತ್ಮಕ ಸಂಪರ್ಕವನ್ನು ಹೆಚ್ಚಿಸಲು ಪ್ರಪೋಸ್ ದಿನವನ್ನು ಆಚರಿಸಲಾಗುತ್ತದೆ.
ಪ್ರಪೋಸ್ ಡೇ ಹೇಗೆ ಪ್ರಾರಂಭವಾಯಿತು?
ವರ್ಷಗಳಿಂದ, ಪ್ರೇಮಿಗಳ ವಾರದ ಎರಡನೇ ದಿನದಂದು ಪ್ರಪೋಸ್ ಡೇ ಆಚರಿಸಲಾಗುತ್ತಿದೆ. ಇದು ಶತಮಾನಗಳ ಹಿಂದೆ ಹುಟ್ಟಿಕೊಂಡಿದ್ದರೂ, ಈ ಪಾಶ್ಚಿಮಾತ್ಯ ಸಂಪ್ರದಾಯವು ಭಾರತದಲ್ಲಿಯೂ ಸಾಕಷ್ಟು ಜನಪ್ರಿಯವಾಗಿದೆ. ಇತಿಹಾಸಕಾರರು ಪ್ರೇಮಿಗಳ ದಿನದ ಆಚರಣೆಯು ಮಧ್ಯಕಾಲೀನ ಯುರೋಪಿನಿಂದಲೂ ಆರಂಭವಾಗಿದೆ ಎಂದು ನಂಬುತ್ತಾರೆ. ಆ ಅವಧಿಯಲ್ಲಿ ರಾಜಕುಮಾರರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಈ ಸಮಯವನ್ನು ಹೆಚ್ಚಾಗಿ ಆರಿಸಿಕೊಳ್ಳುತ್ತಿದ್ದರು. ಕ್ರಮೇಣ, 14 ಮತ್ತು 15 ನೇ ಶತಮಾನಗಳ ಹೊತ್ತಿಗೆ, ಫೆಬ್ರವರಿ ತಿಂಗಳು ಪ್ರೀತಿ ಮತ್ತು ಸಂಬಂಧಗಳ ಆರಂಭಕ್ಕೆ ಮೀಸಲಾದ ಸಮಯವೆಂದು ಪರಿಗಣಿಸಲ್ಪಟ್ಟಿತು.
ಇನ್ನೊಂದು ಇತಿಹಾಸದ ಪ್ರಕಾರ ಆಸ್ಟ್ರಿಯಾದ ಆರ್ಚ್‌ಡ್ಯೂಕ್ ಮ್ಯಾಕ್ಸಿಮಿಲಿಯನ್ 1477 ರಲ್ಲಿ ಬರ್ಗಂಡಿಯ ಮೇರಿಗೆ ಪ್ರಪೋಸ್ ಮಾಡಿದರು ಎಂದು ಹೇಳಲಾಗುತ್ತದೆ. ಈ ವಿಶೇಷ ಕ್ಷಣವನ್ನು ಗುರುತಿಸಲು ಅವರು ಅವಳಿಗೆ ವಜ್ರದ ಉಂಗುರವನ್ನು ಉಡುಗೊರೆಯಾಗಿ ನೀಡಿದರು. ಹೀಗೆ ಮ್ಯಾಕ್ಸಿಮಿಲಿಯನ್ ಮೇರಿಗೆ ವಜ್ರದ ಉಂಗುರ ತೊಡಿಸಿ ವಿವಾಹ ಪ್ರಸ್ತಾಪ ಮಾಡಿದ ಕಾರಣ ಪ್ರತಿ ವರ್ಷ ಫೆಬ್ರವರಿ ೮ ರಂದು ಪ್ರಪೋಸ್ ಡೇ ಆಚರಿಸಲಾಗುತ್ತದೆ. ಇದಲ್ಲದೆ, 1816೧೬ ರಲ್ಲಿ, ರಾಜಕುಮಾರಿ ಷಾರ್ಲೆಟ್ ತನ್ನ ಭಾವಿ ಪತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಕೂಡ ಇದೇ ದಿನದಂದು.
ಇದನ್ನೂ ಓದಿ: ಪ್ರೇಮಿಗಳ ವಾರದ ಮೊದಲೇ ದಿನವೇ ರೋಸ್ ಡೇ; ಈ ದಿನದ ಇತಿಹಾಸ, ಮಹತ್ವವೇನು?
ಪ್ರಪೋಸ್ ದಿನವನ್ನು ಹೇಗೆ ಆಚರಿಸಲಾಗುತ್ತದೆ?
ಜನರು ತಮ್ಮದೇ ಆದ ರೀತಿಯಲ್ಲಿ ಪ್ರಪೋಸ್ ದಿನವನ್ನು ಆಚರಿಸುತ್ತಾರೆ. ಕೆಲವರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ, ತಮ್ಮ ಸಂಗಾತಿಯೊಂದಿಗೆ ತಮ್ಮ ಹೃದಯಪೂರ್ವಕ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ, ಸಂಬಂಧವನ್ನು ಪ್ರಾರಂಭಿಸಲು ಅಥವಾ ಮುಂದುವರಿಸಲು ಪ್ರಸ್ತಾಪಿಸುತ್ತಾರೆ. ಇನ್ನು ಕೆಲವರು ಗುಲಾಬಿ, ಚಾಕೊಲೇಟ್, ಕಾರ್ಡ್ ಅಥವಾ ಸಣ್ಣ ಉಡುಗೊರೆಯನ್ನು ನೀಡುವ ಮೂಲಕ ಪ್ರೇಮ ಪ್ರಸ್ತಾಪವನ್ನು ಮಾಡುತ್ತಾರೆ. ಇನ್ನು ಕೆಲವರು ಸುಂದರವಾದ ಸಂದೇಶ, ಕವಿತೆ ಅಥವಾ ಕೈಬರಹದ ಪ್ರೇಮ ಪತ್ರದ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಈ ದಿನದಂದು ಪ್ರೇಮಿಗಳು ಪರಸ್ಪರ ಬದ್ಧರಾಗಿ ತಮ್ಮ ಬಂಧವನ್ನು ಮತ್ತಷ್ಟು ಬಲಪಡಿಸುತ್ತಾರೆ.
ಪ್ರಪೋಸ್ ಡೇಯ ಮಹತ್ವವೇನು?
- ಪ್ರಪೋಸ್ ಡೇ ಮನಸ್ಸಿನಲ್ಲಿರುವ ಭಾವನೆ, ಪ್ರೀತಿಯನ್ನು ವ್ಯಕ್ತಪಡಡಿಸಲಿರುವ ಒಂದು ವೇದಿಕೆಯಾಗಿದೆ.
- ಪ್ರಪೋಸ್ ಡೇ ಪ್ರೇಮಪಕ್ಷಿಗಳಿಗೆ ಭಯವನ್ನೆಲ್ಲಾ ಪಕ್ಕಕ್ಕಿಟ್ಟು ಪ್ರೀತಿಯನ್ನು ವ್ಯಕ್ತಪಡಿಸಲು ಒಂದು ಧೈರ್ಯವನ್ನು ನೀಡುತ್ತದೆ.
- ಈ ದಿನ ಸಂಗಾತಿಗಳಿಬ್ಬರ ಸಂಬಂಧಕ್ಕೆ ಹೊಸ ತಾಜಾತನ ಮತ್ತು ಬದ್ಧತೆಯನ್ನು ತರುತ್ತದೆ.
- ಈ ದಿನವನ್ನು ಪ್ರೀತಿ, ವಿಶ್ವಾಸ ಮತ್ತು ಹೊಸ ಸಂಬಂಧಗಳ ಆರಂಭದ ಸಂಕೇತವೆಂದು ಪರಿಗಣಿಸಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




