Love Horoscope: ಪ್ರೇಮಿಗಳಿಗೆ ಫೆ.14ರವರೆಗೆ ಎಚ್ಚರಿಕೆ, ನಿಮ್ಮ ಸಂಬಂಧದಲ್ಲಿ ಮಹತ್ವದ ತಿರುವು
ಫೆಬ್ರವರಿ 8 ರಿಂದ 14 ರವರೆಗಿನ ಈ ಪ್ರೇಮ ವಾರವು ನಿಮ್ಮ ಸಂಬಂಧದಲ್ಲಿ ಮಹತ್ವದ ತಿರುವು ನೀಡಲಿದೆ. ಪ್ರೇಮಿಗಳ ದಿನದ ಸಂಭ್ರಮದಲ್ಲಿ ಉತ್ಸಾಹ, ಸವಾಲುಗಳ ಮಿಶ್ರಣವಿರಲಿದೆ. ಕೆಲವರಿಗೆ ಪ್ರೀತಿಯಲ್ಲಿ ಯಶಸ್ಸು ಕಂಡರೆ, ಇನ್ನು ಕೆಲವರಿಗೆ ನಿರಾಶೆ ಎದುರಾಗಬಹುದು. ಈ ವಾರದ ನಿಮ್ಮ ರಾಶಿಫಲದ ಸಂಪೂರ್ಣ ಮಾಹಿತಿ, ಪ್ರೀತಿ ಮತ್ತು ಸಂಬಂಧಗಳಲ್ಲಿನ ಪ್ರಮುಖ ಅಂಶಗಳನ್ನು ತಿಳಿದು, ಭವಿಷ್ಯದ ಬಗ್ಗೆ ಸ್ಪಷ್ಟತೆ ಪಡೆಯಿರಿ.

ಫೆಬ್ರವರಿ 08ರಿಂದ ಫೆಬ್ರವರಿ 14ರ ವರೆಗೆ ಈ ತಿಂಗಳ ಎರಡನೇ ವಾರವಾಗಿದ್ದು. ಪ್ರೇಮಕ್ಕೆ ಸಂಬಂಧಿಸಿದಂತೆ ಉತ್ಸಾಹ ನಿಮ್ಮಲ್ಲಿ ಕಾಣಿಸುವುದು. ಪ್ರೇಮಿಗಳ ದಿನದ ಸಿದ್ಧತೆಯಲ್ಲಿ ಇರುವ ನಿಮಗೆ ಎಲ್ಲವೂ ಕೂಡಿಬರಬೇಕೆಂದಿಲ್ಲ. ಕೆಲವರಿಗೆ ಅಸೆ ಭಂಗವಾಗಲಿದೆ. ಭವಿಷ್ಯದ ಬಗ್ಗೆ ನಿರ್ದಿಷ್ಟತೆ ನಿಮ್ಮದಾಗಿಲಿ.
ಮೇಷ:
ಸಂಬಂಧದಲ್ಲಿ ಕೊಂಚ ಬಿಸಿ ಇರಲಿದೆ. ಅತಿಯಾದ ಕೋಪ ಪ್ರೀತಿಯನ್ನು ದೂರ ಮಾಡಬಹುದು. ಸಂಗಾತಿಯ ಮಾತಿಗೆ ದನಿಗೂಡಿಸಿ, ವಾರಾಂತ್ಯದ ವೇಳೆಗೆ ಪರಿಸ್ಥಿತಿ ತಣ್ಣಗಾಗಲಿದೆ.
ವೃಷಭ:
ಪ್ರೀತಿಯ ಹೂವು ಅರಳುವ ಕಾಲವಿದು. ಸಂಗಾತಿಯೊಂದಿಗೆ ಐಷಾರಾಮಿ ಸಮಯ ಕಳೆಯುವಿರಿ. ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ದುಬಾರಿ ಉಡುಗೊರೆಗಿಂತ ನಿಮ್ಮ ‘ಸಮಯ’ ನೀಡಿದಲ್ಲಿ ಸಂಬಂಧ ಗಟ್ಟಿಯಾಗುವುದು.
ಮಿಥುನ:
ಈ ವಾರ ಸಂವಹನವೇ ನಿಮ್ಮ ಅಸ್ತ್ರ. ಮನಬಿಚ್ಚಿ ಮಾತನಾಡಿ. ಸಣ್ಣ ತಪ್ಪು ತಿಳುವಳಿಕೆಗಳು ಕಾಡಬಹುದು, ಆದರೆ ನಿಮ್ಮ ಚಾಕಚಕ್ಯತೆಯಿಂದ ಅದನ್ನು ಸರಿಪಡಿಸಿಕೊಳ್ಳುವಿರಿ.
ಕರ್ಕಾಟಕ:
ಭಾವನಾತ್ಮಕ ಬೆಂಬಲ ಸಿಗುವ ವಾರ. ನಿಮ್ಮ ಸಂಗಾತಿಯೇ ನಿಮಗೆ ಶಕ್ತಿಯಾಗಲಿದ್ದಾರೆ. ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಪ್ರೇಮಿಗಳ ದಿನವನ್ನು ಸಂಭ್ರಮಿಸುವಿರಿ.
ಸಿಂಹ:
ಸಂಬಂಧದಲ್ಲಿ ನಿಮ್ಮದೇ ಮೇಲುಗೈ ಇರಬೇಕೆಂಬ ಹಠ ಬೇಡ. ಸಂಗಾತಿಗೆ ಸ್ವಲ್ಪ ಸ್ವಾತಂತ್ರ್ಯ ನೀಡಿ. ಅವರ ಸಣ್ಣ ಸಾಧನೆಗಳನ್ನು ಹೊಗಳುವ ಮೂಲಕ ಅವರ ಮನಗೆಲ್ಲಬಹುದು.
ಕನ್ಯಾ:
ಪ್ರೇಮಕ್ಕಿಂತ ಪ್ರಾಯೋಗಿಕತೆಗೆ ಹೆಚ್ಚು ಒತ್ತು ನೀಡುವಿರಿ. ಪ್ರೀತಿಪಾತ್ರರಿಗೆ ನಿಮ್ಮ ಕೆಲಸದ ನಡುವೆಯೂ ಸ್ವಲ್ಪ ಸಮಯ ಮೀಸಲಿಡಿ. ವಾರಾಂತ್ಯದಲ್ಲಿ ಸಣ್ಣ ಪ್ರವಾಸದ ಯೋಗವಿದೆ.
ತುಲಾ:
ಪ್ರೇಮ ಲೋಕದಲ್ಲಿ ನೀವು ರಾಜ, ರಾಣಿಯರಂತೆ ಮನೋಹರವಾಗಿ ನಿಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಿದೆ. ನಿಮ್ಮ ಆಕರ್ಷಣೆ ಹೆಚ್ಚಲಿದೆ.
ವೃಶ್ಚಿಕ:
ಸಂಬಂಧದಲ್ಲಿ ತೀವ್ರತೆ ಇರಲಿದೆ. ಅಸೂಯೆ ಮತ್ತು ಸಂಶಯಕ್ಕೆ ಜಾಗ ನೀಡಬೇಡಿ. ಸಂಗಾತಿಯನ್ನು ಪೂರ್ಣವಾಗಿ ನಂಬಿ, ಪ್ರೀತಿಯಲ್ಲಿ ಹೊಸ ಆಯಾಮವನ್ನು ಕಾಣುವಿರಿ.
ಧನು:
ಹೊಸ ಸಾಹಸಗಳಿಗೆ ಈ ವಾರ ಮುನ್ನುಡಿ. ಸಂಗಾತಿಯೊಂದಿಗೆ ದೂರಪ್ರಯಾಣ ಹೋಗುವಿರಿ. ಅವಿವಾಹಿತರಿಗೆ ಹಳೆಯ ಗೆಳೆಯ/ಗೆಳತಿಯಿಂದ ಪ್ರೇಮ ನಿವೇದನೆಯಾಗುವ ಸಾಧ್ಯತೆ ಇದೆ.
ಮಕರ:
ಗಂಭೀರ ಚರ್ಚೆಗಳಿಗೆ ಇದು ಸಮಯವಲ್ಲ. ಸಂಬಂಧದಲ್ಲಿ ಹಾಸ್ಯ ಮತ್ತು ಲವಲವಿಕೆ ಇರಲಿ. ಸಂಗಾತಿಯ ಇಷ್ಟ-ಕಷ್ಟಗಳಿಗೆ ಸ್ಪಂದಿಸಿದರೆ ವಾರ ಪೂರ್ತಿ ನೆಮ್ಮದಿ ಇರಲಿದೆ.
ಕುಂಭ:
ನೀವು ಈ ವಾರ ಅನಿರೀಕ್ಷಿತ ಪ್ರೇಮ ಪ್ರಸ್ತಾಪವನ್ನು ಎದುರಿಸಬಹುದು. ಸೃಜನಾತ್ಮಕವಾಗಿ ಪ್ರೀತಿಯನ್ನು ವ್ಯಕ್ತಪಡಿಸಿ. ಸಂಗಾತಿಯೊಂದಿಗೆ ಹಂಚಿಕೊಳ್ಳುವ ಪ್ರತಿ ಕ್ಷಣವೂ ನೆನಪಿನಲ್ಲಿ ಉಳಿಯಲಿದೆ.
ಮೀನ:
ಕನಸುಗಳ ಲೋಕದಲ್ಲಿ ತೇಲುವಿರಿ. ನಿಮ್ಮ ಭಾವನೆಗಳನ್ನು ಕವಿತೆ ಅಥವಾ ಪತ್ರದ ಮೂಲಕ ತಿಳಿಸಿ. ಸಂಗಾತಿಯ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವುದು ಸಂಬಂಧವನ್ನು ಮತ್ತಷ್ಟು ಮಧುರವಾಗಿಸುತ್ತದೆ.
– ಲೋಹಿತ ಹೆಬ್ಬಾರ್
