AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Astrology: ಗೊತ್ತಿಲ್ಲದೇ ಎಲ್ಲವನ್ನು ನಂಬುವುದು ಬೇಡ, ಯೋಚಿಸಿ ನಿರ್ಧಾರಕ್ಕೆ ಬನ್ನಿ

ರಾಶಿ ಭವಿಷ್ಯ ಸೋಮವಾರ(ಸೆ.30): ಸುಮ್ಮನೇ ಎಲ್ಲದಕ್ಕೂ ಒಪ್ಪಿಗೆಯನ್ನು ಕೊಡುವುದು ಬೇಡ. ಸಾಹಸಮಯವಾದ ಪ್ರವೃತ್ತಿಯನ್ನು ಇಟ್ಟುಕೊಳ್ಳುವುದು ಬೇಡ. ನಿಮ್ಮ‌ ಅಭಿಪ್ರಾಯವನ್ನು ಹಂಚಿಕೊಳ್ಳಿ. ನಿಮ್ಮ ಸ್ವಭಾವವನ್ನು ಬದಲಾಯಿಸಿಕೊಳ್ಳುವಿರಿ. ಹಾಗಾದರೆ ಸೆಪ್ಟೆಂಬರ್​ 30ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Astrology: ಗೊತ್ತಿಲ್ಲದೇ ಎಲ್ಲವನ್ನು ನಂಬುವುದು ಬೇಡ, ಯೋಚಿಸಿ ನಿರ್ಧಾರಕ್ಕೆ ಬನ್ನಿ
ಗೊತ್ತಿಲ್ಲದೇ ಎಲ್ಲವನ್ನು ನಂಬುವುದು ಬೇಡ, ಯೋಚಿಸಿ ನಿರ್ಧಾರಕ್ಕೆ ಬನ್ನಿ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Sep 30, 2024 | 12:12 AM

Share

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಪೂರ್ವಾಫಲ್ಗುಣೀ, ಯೋಗ: ಶುಭ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 21 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 07:53 ರಿಂದ 09:23, ಯಮಘಂಡ ಕಾಲ ಬೆಳಿಗ್ಗೆ 10:53ರಿಂದ 12:22ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 01:52 ರಿಂದ 03:22 ರವರೆಗೆ.

ಧನು ರಾಶಿ: ನಿಮ್ಮ ಆತ್ಮವಿಶ್ವಾಸವೇ ಏಕಾಗ್ರತೆಯನ್ನು ತರುವುದು. ಯಾರ ಮೇಲೂ ದ್ವೇಷ ಬರುವಂತಹ ಕೆಲಸವನ್ನು ಮಾಡುವುದು ಬೇಡ. ಇಂದು ನೀವು ವ್ಯವಹಾರದಲ್ಲಿ ಜಾಗರೂಕರಾಗಿ ಇರಬೇಕಸದೀತು. ಹಣವನ್ನು ತಪ್ಪಾದ ಕಡೆಯಲ್ಲಿ ಹೂಡುವಿರಿ. ಸುಮ್ಮನೇ ಎಲ್ಲದಕ್ಕೂ ಒಪ್ಪಿಗೆಯನ್ನು ಕೊಡುವುದು ಬೇಡ. ಸಾಹಸಮಯವಾದ ಪ್ರವೃತ್ತಿಯನ್ನು ಇಟ್ಟುಕೊಳ್ಳುವುದು ಬೇಡ. ನಿಮ್ಮ‌ ಅಭಿಪ್ರಾಯವನ್ನು ಹಂಚಿಕೊಳ್ಳಿ. ನಿಮ್ಮ ಸ್ವಭಾವವನ್ನು ಬದಲಾಯಿಸಿಕೊಳ್ಳುವಿರಿ. ನಿಮ್ಮ ವಸ್ತುಗಳ ಬಳಕೆಯನ್ನು ನೀವು ನಿರ್ಲಕ್ಷ್ಯದಿಂದ‌ ಮಾಡುವಿರಿ. ಸರಳ ಮಾತುಗಳನ್ನು ಆಡುವುದು ನಿಮಗೆ ಬಾರದು. ಹೊಸ ಕೆಲಸಕ್ಕೆ ಸೇರುವ ಉತ್ಸಾಹದಲ್ಲಿ ನೀವಿರುವಿರಿ. ಮಕ್ಕಳ ನಡುವೆ ವಾದವು ಬೆಳೆಯಬಹುದು. ನೀವು ಹಳೆಯ ಸ್ನೇಹಿತರನ್ನು ಭೇಟಿ ಮಾಡಲು ಹೋಗಬಹುದು. ಸ್ವಂತ ಬುದ್ಧಿಯಿಂದ ನಿಮ್ಮ ಕಾರ್ಯವನ್ನು ಮಾಡಿಕೊಳ್ಳಿ. ವ್ಯಾಪಾರಕ್ಕೆ ಯೋಗ್ಯವಾದ ಮಾತು ಇರಲಿ.

ಮಕರ ರಾಶಿ: ಒಮ್ಮೆಲೇ‌ ಅಧಿಕ ಲಾಭವನ್ನೂ ಇಂದು ಯಾರಿಂದಲೂ ನಿರೀಕ್ಷಿಸಬಾರದು. ನೀವು ಇಂದು ದೇವರ ಮೇಲೆ‌ ಸಂಪೂರ್ಣ ಭಾರ ಹಾಕಿ ನಿಮ್ಮ ಕಾರ್ಯವನ್ನು ಆರಂಭಿಸುವಿರಿ. ಪ್ರೇಮವನ್ನು ನೀವು ಒಪ್ಪಿಕೊಳ್ಳದೇ ನಿಮ್ಮದೇ ವಾದವನ್ನು ಮಾಡುವಿರಿ. ಸಂಗಾತಿಯ ಮಾತುಗಳು ನಿಮಗೆ ಕಿರಿಕಿರಿಯನ್ನು ತಂದೀತು. ಸುಲಭದ ಕೆಲಸಗಳನ್ನು ಸಂಕೀರ್ಣ ಮಾಡಿಕೊಳ್ಳುವಿರಿ. ಗೃಹನಿರ್ಮಾಣಕ್ಕೆ ಸ್ಥಳಪರಿಶೀಲನೆ ಆಗುವುದು. ಸಂಗಾತಿಯಿಂದ ಹಣದ ಸಹಾಯವನ್ನು ಪಡೆಯುವಿರಿ. ಶೋಧಕರಿಗೆ ಹೆಚ್ಚಿನ ಅವಕಾಶಗಳು ಸಿಗುವ ಸಾಧ್ಯತೆ ಇದೆ. ಸಾಮಾಜಿಕ ಕೆಲಸಗಳು ನಿಮಗೆ ಅಭ್ಯಾಸದಂತೆ‌ ಅಗುವುದು. ಬಂಧುಗಳ ಆಗಮನವು ಖುಷಿಕೊಡುವುದು. ಸಂಗಾತಿಯಾಗಲಿರುವವರು ಇಂದು ಭೇಟಿಯಾಗುವಿರಿ. ವಿದೇಶದಲ್ಲಿರುವ ಕುಟುಂಬದ ಸದಸ್ಯರಿಂದ ನಿಮಗೆ ಶುಭ ಸುದ್ದಿಯು ಬರುವುದು. ಉದ್ಯಮದಲ್ಲಿ ನಿಮಗೆ ಪ್ರಗತಿ ಕಾಣಿಸುವುದು. ಉಚಿತವಾದ ಸ್ಥಾನವು ಇಂದು ನಿಮಗೆ ಸಿಗಬಹುದು. ವಿಶ್ವಾಸವು ಘಾಸಿಯಾಗಿ ನಿಮಗೆ ಬೇಸರವಾಗುವುದು.

ಕುಂಭ ರಾಶಿ: ಇಂದು ನಿಮ್ಮ ಹಳೆಯ ವೈರವು ಮುರಿದುಬೀಳುವುದು. ನೆಮ್ಮದಿಗೆ ನಿಮ್ಮದೇ ಸೂತ್ರಗಳನ್ನು ನೀವು ಅನುಸರಿಸುವಿರಿ.‌ ಕೆಲವು ಅಭ್ಯಾಸವನ್ನು ಬಿಟ್ಟುಬಿಡುವಿರಿ. ಸ್ನೇಹಿತರ ಜೊತೆ ಹೆಚ್ಚಿನ ಸಮಯವನ್ನು ಕಳೆಯುವಿರಿ. ಸಂಸಾರವನ್ನು ನಿಭಾಯಿಸುವ ಕಲೆಯನ್ನು ನೀವು ತಿಳಿದುಕೊಳ್ಳಬಹುದು. ಔದ್ಯೋಗಿಕವಾದ ವಿಚಾರವನ್ನು ಮನೆಯಲ್ಲಿ ಸಹೋದರರ‌ ಜೊತೆ ಚರ್ಚಿಸುವಿರಿ. ತಾಯಿಯಿಂದ ನಿಮಗೆ ಹಿತವಚನವು ಸಿಗಲಿದೆ. ಯಾವುದನ್ನೂ ಗೊತ್ತಿಲ್ಲದೇ ನಂಬುವುದು ಬೇಡ. ನಿಮ್ಮ ವರ್ತನೆಯು ಎಂದಿಗಿಂತ ಭಿನ್ನವಾಗಿರುವುದು. ಕ್ಲಿಷ್ಟಕರ ಸನ್ನಿವೇಶಗಳನ್ನು ನೀವು ಸುಲಭವಾಗಿ ನಿಭಾಯಿಸುವ ಕಲೆಯನ್ನು ಅರಿತಿರುವಿರಿ. ಅನವಶ್ಯಕ ವಸ್ತುಗಳನ್ನು ಖರೀದಿಸಿ ದಂಡ ಮಾಡುವಿರಿ. ನೀವು ನಿಮ್ಮ ಹಿರಿಯರ ಸಲಹೆಯನ್ನು ಅನುಸರಿಸಿದರೆ ಉತ್ತಮವಾದುದನ್ನು ಪಡೆಯುವಿರಿ. ನಿಮ್ಮ ದೇಹಕ್ಕೆ ಆಯುಧದಿಂದ. ಬಲವಾಗಿ ಘಾಸಿಯಾಗಬಹುದು. ಆತುರದಲ್ಲಿ ಯಾವುದೇ ಕೆಲಸ ಮಾಡುವುದನ್ನು ಮುಖ್ಯ ಕಾರ್ಯಗಳೇ ಮರೆತುಹೋಗಬಹುದು.

ಮೀನ ರಾಶಿ; ಮಾಡಿದ ತಪ್ಪನ್ನೇ ಮತ್ತೆ ಮಾಡಿ, ಎಲ್ಲರ ಕೆಂಗಣ್ಣಿಗೆ ಗುರಿಯಾಗುವಿರಿ. ಇಂದು ನೀವು ಏಕಾಂತವಾಗಿ ಇರಲು ಆಗದು. ಸಾಮಾಜಿಕ ಕಳಕಳಿಯನ್ನು ನೀವು ಹೆಚ್ಚಿಸಿಕೊಳ್ಳುವಿರಿ. ಆದಾಯಕ್ಕಿಂತ ಖರ್ಚು ಹೆಚ್ಚಾಗಿ ಆತಂಕವಾಗಬಹುದು. ಕುಟುಂಬದ ಸದಸ್ಯರ ಪ್ರೀತಿಯು ಸಿಗಲಿದೆ. ಆಕಸ್ಮಿಕ ವಾರ್ತೆಯನ್ನು ನೀವು ಸಮಾಧಾನದಿಂದ ತೆಗೆದುಕೊಳ್ಳಬೇಕಾದೀತು.‌ ನಿಮ್ಮ ಕೆಲಸಕ್ಕೆ ಪ್ರಶಂಸೆಯು ಸಿಗಲಿದೆ. ಸಂಗಾತಿಯನ್ನು ಸಂತೋಷಪಡಿಸಲು ಇಷ್ಟಪಡುವಿರಿ‌. ನಿಮ್ಮ ಅಭಿರುಚಿಯು ಬದಲಾಗುವುದು. ಸನ್ನಿವೇಶಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಾದೀತು. ಅಲ್ಪ ಶ್ರಮದಿಂದ ಹೆಚ್ಚು ಗಳಿಸುವ ತಂತ್ರವನ್ನು ಹೂಡುವಿರಿ. ಸಹೋದರರು ನಿಮ್ಮ ಕಷ್ಟದಲ್ಲಿ ಭಾಗಿಯಾಗುವರು. ಯಾವದನ್ನೂ ಕ್ಷಣದಲ್ಲಿ ಬದಲಿಸಲಾಗದು. ನಿಮ್ಮ ಬಳಿ ಇರುವುದುನ್ನು ಕೊಡಲಾರಿರಿ. ಯಾವುದೇ ಹೂಡಿಕೆ ಸಂಬಂಧಿತ ಯೋಜನೆಯ ಬಗ್ಗೆ ನಿಮಗೆ ಮಾಹಿತಿ ಬಂದರೆ, ಅದರಲ್ಲಿ ಹಣವನ್ನು ಹೂಡಿಕೆ ಮಾಡುವುದು ಉತ್ತಮ.

ಬಲಾಬಲ ಪ್ರದರ್ಶಿಸುವ ಅವಶ್ಯಕತೆ ಡಿಕೆ ಶಿವಕುಮಾರ್ ಅವರಿಗಿಲ್ಲ: ಡಿಕೆ ಸುರೇಶ್
ಬಲಾಬಲ ಪ್ರದರ್ಶಿಸುವ ಅವಶ್ಯಕತೆ ಡಿಕೆ ಶಿವಕುಮಾರ್ ಅವರಿಗಿಲ್ಲ: ಡಿಕೆ ಸುರೇಶ್
ಪೊಲಾರ್ಡ್, ಪೂರನ್ ಸಿಡಿಲಬ್ಬರ: ಫೈನಲ್​ಗೆ MI ಪಡೆ
ಪೊಲಾರ್ಡ್, ಪೂರನ್ ಸಿಡಿಲಬ್ಬರ: ಫೈನಲ್​ಗೆ MI ಪಡೆ
ಶಿವಣ್ಣನಿಗೆ ವಿಶ್ ಮಾಡಲು ಚಿಕ್ಕಮಗಳೂರಿನಿಂದ ಬಂದ ಕಾಫಿ ನಾಡು ಚಂದು
ಶಿವಣ್ಣನಿಗೆ ವಿಶ್ ಮಾಡಲು ಚಿಕ್ಕಮಗಳೂರಿನಿಂದ ಬಂದ ಕಾಫಿ ನಾಡು ಚಂದು
ಆರೋಗ್ಯವಂತ ಬಾಣಂತಿಯರ ಹಾಲನ್ನು ಮಾತ್ರ ಸಂಗ್ರಹಿಸಲಾಗುತ್ತದೆ: ವೈದ್ಯಾಧಿಕಾರಿ
ಆರೋಗ್ಯವಂತ ಬಾಣಂತಿಯರ ಹಾಲನ್ನು ಮಾತ್ರ ಸಂಗ್ರಹಿಸಲಾಗುತ್ತದೆ: ವೈದ್ಯಾಧಿಕಾರಿ
Wimbledon 2025: ನೊವಾಕ್ ನಾಗಾಲೋಟಕ್ಕೆ ಸಿನ್ನರ್ ಬ್ರೇಕ್
Wimbledon 2025: ನೊವಾಕ್ ನಾಗಾಲೋಟಕ್ಕೆ ಸಿನ್ನರ್ ಬ್ರೇಕ್
ಕೇಂದ್ರ ನೀಡುವ 5 ಕೇಜಿ ಅಕ್ಕಿ ಹಂಚುವ ಯೋಗ್ಯತೆ ರಾಜ್ಯ ಸರ್ಕಾರಕ್ಕಿಲ್ಲ: ಜೋಶಿ
ಕೇಂದ್ರ ನೀಡುವ 5 ಕೇಜಿ ಅಕ್ಕಿ ಹಂಚುವ ಯೋಗ್ಯತೆ ರಾಜ್ಯ ಸರ್ಕಾರಕ್ಕಿಲ್ಲ: ಜೋಶಿ
ಪತಿಯನ್ನು ನದಿಗೆ ತಳ್ಳಿದ ಪತ್ನಿ, ಆಮೇಲೆ ನಡೆಯಿತು ಯಾರೂ ಊಹಿಸದ ಘಟನೆ!
ಪತಿಯನ್ನು ನದಿಗೆ ತಳ್ಳಿದ ಪತ್ನಿ, ಆಮೇಲೆ ನಡೆಯಿತು ಯಾರೂ ಊಹಿಸದ ಘಟನೆ!
ಶಿವರಾಜ್​ಕುಮಾರ್ ಜನ್ಮದಿನ; ಮಧ್ಯರಾತ್ರಿ ಅಭಿಮಾನಿಗಳ ಜೊತೆ ಕೇಕ್ ಕಟ್
ಶಿವರಾಜ್​ಕುಮಾರ್ ಜನ್ಮದಿನ; ಮಧ್ಯರಾತ್ರಿ ಅಭಿಮಾನಿಗಳ ಜೊತೆ ಕೇಕ್ ಕಟ್
ಸಂಜು ಬಸಯ್ಯ ಪತ್ನಿಗೆ ಯುವಕನಿಂದ ಅಶ್ಲೀಲ ಸಂದೇಶ; ಬುದ್ಧಿ ಕಲಿಸಿದ ನಟ
ಸಂಜು ಬಸಯ್ಯ ಪತ್ನಿಗೆ ಯುವಕನಿಂದ ಅಶ್ಲೀಲ ಸಂದೇಶ; ಬುದ್ಧಿ ಕಲಿಸಿದ ನಟ
ಆಲ್ಕೋಹಾಲ್ ಬಾಟಲಿ ಕದಿಯಲು ಹೋಗಿ ಕಿಟಕಿ ಸರಳಲ್ಲಿ ತಲೆ ಸಿಲುಕಿಸಿಕೊಂಡ ಕುಡುಕ
ಆಲ್ಕೋಹಾಲ್ ಬಾಟಲಿ ಕದಿಯಲು ಹೋಗಿ ಕಿಟಕಿ ಸರಳಲ್ಲಿ ತಲೆ ಸಿಲುಕಿಸಿಕೊಂಡ ಕುಡುಕ