AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ಯಾರಿಂದಲೂ ಅತಿಯಾಗಿ ನಿರೀಕ್ಷೆ ಬೇಡ: ನಿಮ್ಮ ಕೆಲಸ ನೀವು ಮಾಡಿ

ಸೆಪ್ಟೆಂಬರ್​ 30,​ 2024ರ​​ ನಿಮ್ಮ ರಾಶಿಭವಿಷ್ಯ: ಮನೆಗೆ ಬಂದವರನ್ನು ಬರಿದಾಗಿ ಕಳುಹಿಸುವುದು ಬೇಡ. ಇಂದು ನೀವು ಹಣವನ್ನು ಖರ್ಚು ಮಾಡದೇ ಜಿಪುಣರಂತೆ ತೋರುವಿರಿ. ಧನದ‌ ಲಾಭವನ್ನು ನಿರೀಕ್ಷಿಸದೇ ಕೆಲಸವನ್ನು ಆರಂಭಿಸಿ. ನೀವು ಮಿಂಚಿನ‌ ವೇಗದಲ್ಲಿ ಮಾಡುವ ಕೆಲಸವು ಎಲ್ಲರಿಗೂ ಇಷ್ಟವಾಗುವುದು. ಹಾಗಾದರೆ ಸೆಪ್ಟೆಂಬರ್​ 30ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Horoscope: ಯಾರಿಂದಲೂ ಅತಿಯಾಗಿ ನಿರೀಕ್ಷೆ ಬೇಡ: ನಿಮ್ಮ ಕೆಲಸ ನೀವು ಮಾಡಿ
ಯಾರಿಂದಲೂ ಅತಿಯಾಗಿ ನಿರೀಕ್ಷೆ ಬೇಡ: ನಿಮ್ಮ ಕೆಲಸ ನೀವು ಮಾಡಿ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Sep 30, 2024 | 12:05 AM

Share

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಪೂರ್ವಾಫಲ್ಗುಣೀ, ಯೋಗ: ಶುಭ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 21 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 07:53 ರಿಂದ 09:23, ಯಮಘಂಡ ಕಾಲ ಬೆಳಿಗ್ಗೆ 10:53ರಿಂದ 12:22ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 01:52 ರಿಂದ 03:22 ರವರೆಗೆ.

ಮೇಷ ರಾಶಿ: ಎಲ್ಲವನ್ನೂ ನೀವು ಪ್ರೀತಿಯಿಂದ ವಿಶ್ವಾಸದಿಂದ ಪಡೆಯಲಾಗದು. ಯಾರ ಬೆಂಬಲಕ್ಕೂ ನೀವು ಸುಮ್ಮನೇ ಇರಲಾರಿರಿ. ಇಂದು ನಿಮಗೆ ದೇವತಾರಾಧನೆಯಲ್ಲಿ ಮನಸ್ಸಾಗುವುದು. ಸಿಟ್ಟಾಗಬೇಕಾದ ಸ್ಥಿತಿಯಲ್ಲಿಯೂ ನೀವು ಪ್ರಶಾಂತರಾಗಿರುವುದು‌ ಆಶ್ಚರ್ಯಕರ ಸಂಗತಿಯಾಗಿದೆ. ಮನೆಯ ಕೆಲಸದಲ್ಲಿ ನೀವು ಮಗ್ನರಾಗುವಿರಿ. ಮಕ್ಕಳಿಂದ ನಿಮಗೆ ಉದ್ಯಮಕ್ಕೆ ಅವಕಾಶ ಸಿಗುವುದು. ಉದ್ಯೋಗದ ನಿಮಿತ್ತ ನೌಕರರ ತುರ್ತು ಸಭೆಯನ್ನು ಕರೆಯಲಿದ್ದೀರಿ. ಮನೆ ಮತ್ತು ಕೆಲಸವನ್ನು ಸಮಾನವಾಗಿ ಇಟ್ಟುಕೊಳ್ಳಿ. ಕಟ್ಟಡವನ್ನು ನಿರ್ಮಾಣ ಮಾಡುವವರಿಗೆ ಹೆಚ್ಚು ಕೆಲಸವು ಇರಲಿದೆ. ಹಳೆಯ ಖಾಯಿಲೆಯಿಂದ ಬಳಲಬಹುದು. ಬೇಡವಾದ ವಸ್ತುಗಳನ್ನು ಮಾರಿ ಹಣವನ್ನು ಪಡೆಯುವಿರಿ. ಹಣದ ಲೆಕ್ಕಾಚಾರದಲ್ಲಿ ನಿಮಗೆ ಮೋಸವಾದುದ್ದು ತಿಳಿದುಬರುವುದು. ಯಾರದೋ ಉಪಕಾರಕ್ಕಾಗಿ ನೀವು ವೃಥಾ ತಿರುಗಾಡುವಿರಿ.

ವೃಷಭ ರಾಶಿ: ಕೆಲವು ಸುದ್ದಿಗಳು ನಿಮ್ಮನ್ನು ಭ್ರಾಂತಗೊಳಿಸಬಹುದು. ಅಪರಿಚಿತ ವ್ಯಕ್ತಿಗಳು ನಿಮಗೆ ಬಹಳ ಆಪ್ತರಾಗುವರು. ಸಂಗಾತಿಯ ಪುನರಾವರ್ತಿತ ಘಟನೆಯಿಂದ ನಿಮಗೆ ಬಹಳ ಬೇಸರವಾಗುವುದು. ಸಂಗಾತಿಯ ಮಾತು ನಿಮಗೆ ಸಿಟ್ಟನ್ನ ತರಿಸೀತು. ನಿಮ್ಮನ್ನು ಕನಿಷ್ಠವಾಗಿಯೂ ಉದ್ಯಮದಲ್ಲಿ ಕಾಣಬಹುದು. ಯಾವುದೇ ಫಲಾಪೇಕ್ಷೆ ಇಲ್ಲದೇ ಸ್ನೇಹಿತರನ್ನು ಮಾಡಿಕೊಳ್ಳುವಿರಿ. ಇಂದಿನ ನಿಮ್ಮ ವ್ಯಾಪಾರವು ಎಂದಿಗಿಂತ ಹೆಚ್ಚು ಕಳೆಗಟ್ಟಲಿದೆ. ಹೂಡಕೆಯ ಹಣವು ನಿಮಗೆ ಸರಿಯಾಗಿ ಸಿಗಲಿದೆ. ನಿಮ್ಮನ್ನು ನೀವು ತೆರೆದುಕೊಳ್ಳಲು ಅವಕಾಶ ಸಿಗುವುದು. ನಿವೃತ್ತಿಯಾದವರಿಗೆ ಬರಬೇಕಾದ ಹಣವನ್ನು ಪಡೆಯಲು ತೊಂದರೆಯಾದೀತು. ನಿಮ್ಮ ನಿಯಮಗಳನ್ನು ನೀವೇ ಮುರಿದುಕೊಳ್ಳುವಿರಿ. ಮಕ್ಕಳ‌ ಮೇಲೆ ಅಶಿಸ್ತಿನ ಕಾರಣಕ್ಕೆ ಸಿಟ್ಟಾಗುವಿರಿ. ಮನೆಗೆ ಬಂದವರನ್ನು ಖಾಲಿ ಕೈಯಲ್ಲಿ ಕಳುಹಿಸಿ ಅನಂತರ ಪಶ್ಚಾತ್ತಾಪಪಡುವಿರಿ. ನಿಮ್ಮ ಕೆಲವು ಹೊಸ ಪ್ರಯತ್ನಗಳು ಫಲ ನೀಡುತ್ತವೆ. ನಿಮ್ಮ ವೈಯಕ್ತಿಕ ಕಾರ್ಯಗಳು ಹಲವು ಹಾಗಯೇ ಉಳಿದುಕೊಂಡಿರುವುದು.

ಮಿಥುನ ರಾಶಿ: ಕಛೇರಿಯಲ್ಲಿ ನಿಮ್ಮ ಸ್ಥಾನವನ್ನು ಉಳಿಸಿಕೊಳ್ಳಲುವಂತೆ ಇರಿ. ಸಂಗಾತಿಯ ಜೊತೆ ಕಲಹದ ಕಾರಣ ಎಲ್ಲವೂ ಅಸ್ತವ್ಯಸ್ತ ಆಗಬಹುದು.‌ ವಿಶ್ವಾಸಘಾತವು ನಿಮಗೆ ದುಃಖವನ್ನು ತರಿಸಬಹುದು. ಆಹಾರದ ಕೊರತೆಯಿಂದ ನಿಮಗೆ ಸಂಕಟವಾಗಲಿದೆ. ದುಡಿಮೆಯ ಬೆನ್ನೇರಿ ಸಂಬಂಧಗಳನ್ನು ಅಗೌರವದಿಂದ ಕಾಣುವ ಸ್ವಭಾವವನ್ನು ಬೆಳೆಸಿಕೊಂಡಿರುವಿರಿ. ಖಾಸಗಿ ಸಂಸ್ಥೆಯು ನಿಮಗೆ ಉನ್ನತ ಸ್ಥಾನವನ್ನು ಕೊಡಲಿದೆ. ನಿಮ್ಮ ಮತ್ತು ನೌಕರರ ನಡುವಿನ ಸಂಬಂಧವು ಹದ ತಪ್ಪಬಹುದು. ಸಿಕ್ಕ ಗೌರವಕ್ಕೆ ತಕ್ಕಂತೆ ನಿಮ್ಮ ವರ್ತನೆ ಇದ್ದರೆ ಒಳ್ಳೆಯದು. ವಿಶೇಷ ಕೆಲಸಕ್ಕೆ ಹೊರಡುವಾಗ ಕುಲದೇವರ ಸ್ಮರಣೆಯನ್ನು ಮರೆಯುವುದು ಬೇಡ. ನೇರ ನುಡಿಯಿಂದ ಎದುರಿನವರಿಗೆ ತೊಂದರೆಯಾದೀತು. ಭೂ ವ್ಯವಹಾರದಲ್ಲಿ ಕೈ ಹಾಕಲು ಹೋಗಲೇಬೇಡಿ. ಹಣವನ್ನು ಹೊಂದಿಸುವುದು ಇಂದು ಸುಲಭದ ಕೆಲಸವಲ್ಲ‌. ಅನ್ಯರ ಕಾರಣದಿಂದ ತಾಳ್ಮೆಯ ಕಟ್ಟೆ ಒಡೆಯಬಹುದು. ಆಪ್ತರನ್ನಾಗಿ ಸರಿಯಾದವರನ್ನು ಜೋಡಿಸಿಕೊಳ್ಳುವಿರಿ.

ಕರ್ಕಾಟಕ ರಾಶಿ: ಮನೆಗೆ ಬಂದವರನ್ನು ಬರಿದಾಗಿ ಕಳುಹಿಸುವುದು ಬೇಡ. ಇಂದು ನೀವು ಹಣವನ್ನು ಖರ್ಚು ಮಾಡದೇ ಜಿಪುಣರಂತೆ ತೋರುವಿರಿ. ಧನದ‌ ಲಾಭವನ್ನು ನಿರೀಕ್ಷಿಸದೇ ಕೆಲಸವನ್ನು ಆರಂಭಿಸಿ. ನೀವು ಮಿಂಚಿನ‌ ವೇಗದಲ್ಲಿ ಮಾಡುವ ಕೆಲಸವು ಎಲ್ಲರಿಗೂ ಇಷ್ಟವಾಗುವುದು. ಮಕ್ಕಳನ್ನು ತಿದ್ದುವ ಕೆಲಸದಲ್ಲಿ ಸಮಯವು ಹೋಗುವುದು. ನಿಮ್ಮ‌ ಸ್ವಭಾವದ ದುರುಪಯೋಗವಾಗಲಿದೆ. ನಗುಮುಖವು ನಿಮ್ಮ ವ್ಯಾಪಾರಕ್ಕೆ ಪೂರಕ. ಗಂಭೀರವಾದ ಚಿಂತನೆಯನ್ನು ಮಾಡುವುದು ನಿಮಗೆ ಇಷ್ಟವಿಲ್ಲದ ಕೆಲಸವಾಗಲಿದೆ. ಸಮಾರಂಭದಲ್ಲಿ ಆಪ್ತರ ಸಮಾಗಮವಾಗಲಿದೆ. ಹಳೆಯ ಗೆಳತಿಯು ಸಿಗಬಹುದು. ನಿಮ್ಮ ವೈಯಕ್ತಿಕ ವಿಚಾರವನ್ನು ಇತರರಿಗೆ ತಿಳಿದುಕೊಳ್ಳುವ ಕುತೂಹಲ ಇರಲಿಕ್ಕಿದೆ. ಯಾರಿಂದಲೂ ಅತಿಯಾಗಿ ನಿರೀಕ್ಷಿಸದೇ ಕೆಲಸವನ್ನು ಮಾಡಿ. ಬೇಕಾದವರನ್ನು ಮಾತಿನಿಂದ ದೂರ ಮಾಡಿಕೊಳ್ಳುವಿರಿ. ನಿಮ್ಮ ಅತಿಯಾದ ಮಾತು ಕಿರಿಕಿರಿ‌ ಮಾಡೀತು. ಕಛೇರಿಯಲ್ಲಿ ನಿಮ್ಮ ಅಭಿಪ್ರಾಯವೂ ಮುಖ್ಯವಾಗಬಹುದು.

ಆಳಂದ ಮತಗಳ್ಳತನ: ಚಾರ್ಜ್​ಶೀಟ್ ಬಗ್ಗೆ ಸುಭಾಷ್ ಗುತ್ತೇದಾರ್ ಮಗ ಹೇಳಿದ್ದೇನು?
ಆಳಂದ ಮತಗಳ್ಳತನ: ಚಾರ್ಜ್​ಶೀಟ್ ಬಗ್ಗೆ ಸುಭಾಷ್ ಗುತ್ತೇದಾರ್ ಮಗ ಹೇಳಿದ್ದೇನು?
ರಾಶಿಕಾ ಕ್ಯಾಪ್ಟನ್ ಆಗಿದ್ದು ಇಷ್ಟ ಆಗಿಲ್ಲ ಎಂದ ಸೂರಜ್; ಆಪ್ತರಲ್ಲೇ ಕಿತ್ತಾಟ
ರಾಶಿಕಾ ಕ್ಯಾಪ್ಟನ್ ಆಗಿದ್ದು ಇಷ್ಟ ಆಗಿಲ್ಲ ಎಂದ ಸೂರಜ್; ಆಪ್ತರಲ್ಲೇ ಕಿತ್ತಾಟ
ರಾಶಿಗಳಿಗನುಗುಣವಾಗಿ ಕಷ್ಟಗಳಿಂದ ಪಾರಾಗುವುದು ಹೇಗೆ ಗೊತ್ತಾ?
ರಾಶಿಗಳಿಗನುಗುಣವಾಗಿ ಕಷ್ಟಗಳಿಂದ ಪಾರಾಗುವುದು ಹೇಗೆ ಗೊತ್ತಾ?
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..