Horoscope: ನಿತ್ಯಭವಿಷ್ಯ; ಒಂದೇ ವಿಚಾರಕ್ಕೆ ದಾಂಪತ್ಯದಲ್ಲಿ ಭಿನ್ನಮತವಿರುವುದು
Rashi Bhavishya: ಒಂದಷ್ಟು ಮಂದಿ ಪ್ರತಿನಿತ್ಯ ತಮ್ಮ ಭವಿಷ್ಯ ನೋಡುತ್ತಾರೆ. ಹಾಗಿದ್ದರೆ, ನೀವು ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ ರಾಶಿಯವರಾಗಿದ್ದರೇ, 22 ಮಾರ್ಚ್ 2024ರ ನಿಮ್ಮ ರಾಶಿಭವಿಷ್ಯ ಹೇಗಿದೆ? ನಿಮಗೆ ಶುಭ ಅಥವಾ ಅಶುಭ ದಿನವಾ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಎಂಬಿತ್ಯಾದಿ ಮಾಹಿತಿಗಳನ್ನು ಇಂದಿನ ರಾಶಿಭವಿಷ್ಯದಿಂದ ತಿಳಿದುಕೊಳ್ಳಿ.

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮಾರ್ಚ್ 22) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಶುಕ್ಲ, ವಾರ : ಶುಕ್ರ, ತಿಥಿ :ತ್ರಯೋದಶೀ, ನಿತ್ಯನಕ್ಷತ್ರ : ಮಘಾ, ಯೋಗ : ಧೃತಿ, ಕರಣ : ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 36 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 11:09 ರಿಂದ ಸಂಜೆ 12:39ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 15:41 ರಿಂದ 05:12ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 08:07 ರಿಂದ 09:38 ರ ವರೆಗೆ.
ಮೇಷ ರಾಶಿ : ನಿಮ್ಮ ನಕಾರಾತ್ಮಕ ಹೇಳಿದ ಮಾತುಗಳನ್ನು ನೀವು ಸಹಿಸಲಾರಿರಿ. ಎಲ್ಲ ವಿಷಯದಲ್ಲಿಯೂ ಸಂಶಯವಿರುವುದು. ಆಪ್ತರಲ್ಲಿ ಅಹಂಕಾರಪಡುವುದು ಬೇಡ. ಭಡ್ತಿಯ ನಿರೀಕ್ಷೆಯಲ್ಲಿಯೇ ಇರುವಿರಿ. ಸ್ವತಂತ್ರವಾದ ನಿರ್ಧಾರವು ನಿಮಗೆ ಪೂರಕವೂ ಆಗಿ, ನೆಮ್ಮದಿಯನ್ನು ಕೊಡುವುದು. ಆದಾಯದ ಮೂಲವು ಗೌಪ್ಯವಾಗಿ ಇಟ್ಟುಕೊಳ್ಳಿ. ನಿಮ್ಮ ಶಾಂತ ಮನಸ್ಸಿನಿಂದ ಸಂಕಷ್ಟವನ್ನು ಎದುರಿಸುವಿರಿ. ಆಸ್ತಿ ಖರೀದಿ ವಿಚಾರದಲ್ಲಿ ಎಚ್ಚರಿಕೆ ಇರಲಿ. ಆಚಾತುರ್ಯದಿಂದ ಏನನ್ನೂ ಮಾಡಲು ಹೋಗುವುದು ಬೇಡ. ದಿನದ ಕಾರ್ಯವನ್ನು ನೀವು ಅವಲೋಕಿಸಿಕೊಂಡು ಹೆಜ್ಜೆ ಇಡುವುದು ಉತ್ತಮ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಸಂದೇಹ ಬರಬಹುದು. ಭೂಮಿಯ ಬಗ್ಗೆ ಆಸಕ್ತಿಯು ಕಡಿಮೆ ಇರುವುದು. ಆದರೂ ಬಂಧುಗಳು ಒತ್ರಾಯಿಸಬಹುದು. ನಿಮ್ಮ ಅಭಿಮಾನಕ್ಕೆ ಘಾಸಿಯಾದೀತು.
ವೃಷಭ ರಾಶಿ : ವಿವಾದಕ್ಕೆ ಕ್ಷುಲ್ಲಕ ಕಾರಣವು ಇರುವುದು. ಯಾರ ವಿರುದ್ಧವಾದರೂ ಗೆದ್ದು ಅಹಂಕಾರ ತೋರುವಿರಿ. ಇಂದು ಕಿರಿಕಿರಿಯ ವಾತಾವರಣವು ಇರಲಿದ್ದು, ಎಲ್ಲವೂ ಸಮಸ್ಯೆಯಂತೆ ತೋರೀತು. ಆರ್ಥಿಕತೆಯ ಬಗ್ಗೆ ಅತಿಯಾದ ಚಿಂತನೆಯನ್ನು ಮಾಡುವಿರಿ. ನಿಮ್ಮದಾದ ಸ್ವಂತ ಉದ್ಯೋಗವನ್ನು ಬೆಳೆಸುವ ಕಡೆ ನಿಮ್ಮ ಗಮನವಿರಲಿ. ನಿಮ್ಮ ವಿರುದ್ಧ ತಂತ್ರಗಳು ನಡೆಯಲಿದ್ದು ನಿಮಗೆ ಗೊತ್ತಾಗದು. ಅನಿರೀಕ್ಷಿತ ಘಟನೆಯು ನಿಮ್ಮನ್ನು ಬೆಚ್ಚಿಬೀಳಿಸುವುದು. ಹೊಸ ವ್ಯಕ್ತಿಯ ಪರಿಚಯು ನಿಮ್ಮ ಬೇಸರವನ್ನು ದೂರ ಮಾಡೀತು. ನಿಮ್ಮ ಬಗ್ಗೆ ಇರುವ ಅಭಿಮಾನವನ್ನು ನೀವೇ ಕಳೆದುಕೊಳ್ಳಬಹುದು. ನಿಮ್ಮರ ಬಗ್ಗೆ ನಿಮಗೆ ಸಕಾರಾತ್ಮಕ ಭಾವವು ಇರದು. ಹಳೆಯ ಸಾಲಗಳಿಗೆ ನೀವೇ ಮುಕ್ತಿ ಕೊಡಿಸುವಿರಿ.
ಮಿಥುನ ರಾಶಿ : ಒಂದೇ ವಿಚಾರಕ್ಕೆ ದಾಂಪತ್ಯದಲ್ಲಿ ಭಿನ್ನಮತವಿರುವುದು. ಯಾವುದನ್ನೂ ನೀವು ಅಂದುಕೊಂಡಷ್ಟು ಸುಲಭವಾಗಿ ಮಾಡಲಾಗದು. ನಿಮ್ಮ ಮಕ್ಕಳ ಬಗೆಯ ವ್ಯಾಮೋಹವು ಅವರನ್ನು ಕೆಟ್ಟದ್ದಕ್ಕೆ ತಳ್ಳಬಹುದು. ಇಂದು ನೀವು ಸಾತ್ತ್ವಿಕರಂತೆ ತೋರುವಿರಿ. ಇಷ್ಟವಾಗದವರು ನಿಮ್ಮೆದುರಿಗೆ ಬರುವಾಗ ಕಣ್ತಪ್ಪಿಸಿಕೊಳ್ಳುವಿರಿ. ಸ್ವಂತ ವಾಹನದಲ್ಲಿ ಒಂಟಿಯಾಗಿ ಓಡಾಡುವಾಗ ಎಚ್ಚರಿಕೆ ಇರಲಿ. ನಿಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅತ್ತ ಕಡೆ ಹೆಚ್ಚು ಪ್ರಯತ್ನಿಸಿ. ಮಿತ್ರರ ಸಹಯೋಗದಿಂದ ಭೂಮಿಯ ಖರೀದಿಯನ್ನು ಮಾಡುವಿರಿ. ಹಿಂದೆ ಮಾಡಿದ ಕಾರ್ಯಕ್ಕಾಗಿ ಇಂದು ಒಳ್ಳೆಯ ಫಲವು ದೊರೆಕಿದ ಸಂತೋಷದಲ್ಲಿ ಇರುವಿರಿ. ನಿಮ್ಮ ದಿನವನ್ನು ಹೊಸ ರೀತಿಯಲ್ಲಿ ಕಳೆಯಲು ಇಚ್ಛಿಸುವಿರಿ. ಕಳೆದುಕೊಂಡಿದ್ದನ್ನು ಮರಳಿ ಪಡೆಯುವ ಬಗ್ಗೆ ಯತ್ನವು ಪ್ರಬಲವಾಗಿ ಇರುವುದು.
ಕಟಕ ರಾಶಿ : ನಿಮ್ಮ ಸ್ವಂತ ಉದ್ಯಮವನ್ನು ಮಾಡಲು ಹಲವರ ಬೆಂಬಲವು ಇರಲಿದೆ. ಮಾನಸಿಕ ಒತ್ತಡವನ್ನು ನಿವಾರಿಸಿಕೊಳ್ಳಲು ಬೇಕಾದ ಕ್ರಮವನ್ನು ಮಾಡಬೇಕಾಗುವುದು. ನಿಮ್ಮ ವ್ಯಾಪಾರಕ್ಕೆ ಹೊಸ ದಿಕ್ಕನ್ನು ಕೊಡಬೇಕಾದೀತು. ತಂತ್ರಜ್ಞರು ತಮ್ಮ ಕಾರ್ಯವನ್ನು ವಿಸ್ತರಿಸಲು ಹಂಬಲಿಸಬಹುದು. ಉನ್ನತ ಮಟ್ಟದವರ ಜೊತೆ ಸಭೆಯಲ್ಲಿ ಭಾಗವಹಿಸುವಿರಿ. ನಿಮ್ಮ ಅವ್ಯಕ್ತ ಭೀತಿಯನ್ನು ನೀವು ಹೊರಹಾಕದಿದ್ದರೂ ಅರಿವಿಗೆ ಬರುವುದು. ಹೊಸ ವಸ್ತುಗಳು ಯಾವುದಾದರೂ ನಿಮಗೆ ಉಡುಗೊರೆಯಾಗಿ ಸಿಗಬಹುದು. ಬಂಧುಗಳ ಆರೋಗ್ಯದ ವಿಚಾರಣೆಗೆ ತಿರುಗಾಟ ಮಾಡಬೇಕಾಗುವುದು. ನಿಮ್ಮ ಬಗ್ಗೆ ಹಗುರಾದ ಭಾವವು ಬರಬಹುದು. ಮನೆಯಲ್ಲಿ ಧಾರ್ಮಿಕ ಕಾರ್ಯಗಳಿಂದ ಶಾಂತಿ ಲಭಿಸುವುದು. ನಿಮ್ಮ ನೆಚ್ಚಿನವರ ಭೇಟಿಯು ಅಕಸ್ಮಾತ್ ಆಗಿ ಆಗಬಹುದು.




