AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ನಿತ್ಯ ಭವಿಷ್ಯ; ಆಪ್ತರು ಕಾರಣಾಂತರಗಳಿಂದ ದೂರಾಗಬಹುದು, ಇತರರ ಒತ್ತಾಯಕ್ಕೆ ಒಳಗಾಗಬೇಡಿ

ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರಾಗಿದ್ದರೇ, 19 ಮೇ​​ 2024ರ ನಿಮ್ಮ ರಾಶಿಭವಿಷ್ಯ ಹೇಗಿದೆ? ನಿಮಗೆ ಶುಭ ಅಥವಾ ಅಶುಭ ದಿನವಾ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಎಂಬಿತ್ಯಾದಿ ಮಾಹಿತಿಗಳನ್ನು ಇಂದಿನ ರಾಶಿಭವಿಷ್ಯದಿಂದ ತಿಳಿದುಕೊಳ್ಳಿ.

Horoscope: ನಿತ್ಯ ಭವಿಷ್ಯ; ಆಪ್ತರು ಕಾರಣಾಂತರಗಳಿಂದ ದೂರಾಗಬಹುದು, ಇತರರ ಒತ್ತಾಯಕ್ಕೆ ಒಳಗಾಗಬೇಡಿ
ಪ್ರಾತಿನಿಧಿಕ ಚಿತ್ರ
ಗಂಗಾಧರ​ ಬ. ಸಾಬೋಜಿ
|

Updated on: May 19, 2024 | 12:02 AM

Share

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮೇ​​​​​ 19) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಹಸ್ತಾ, ಯೋಗ: ಹರ್ಷಣ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 05 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 53 ನಿಮಿಷಕ್ಕೆ, ರಾಹು ಕಾಲ ಸಂಜೆ 05:17 ರಿಂದ 06:53ರ ವರೆಗೆ, ಯಮಘಂಡ ಕಾಲ 12:29 ರಿಂದ ಮಧ್ಯಾಹ್ನ 02:05ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:41 ರಿಂದ ಸಂಜೆ 05:17ರ ವರೆಗೆ.

ಮೇಷ ರಾಶಿ: ನೀವು ಅಪಾರ ಆತ್ಮವಿಶ್ವಾಸವನ್ನು ಪಡೆದಿದ್ದರೂ ಸರಿಯಾದ ಸಹಕಾರ ಸಿಗದೇ ಕಾರ್ಯವು ಪೂರ್ಣವಾಗದು ಅಥವಾ ಮತ್ತೇನಾದರೂ ಆಗಬಹುದು. ನಿಮ್ಮ ಸಕಾರಾತ್ಮಕ ಮತ್ತು ಸಮಕಾಲೀನ ಚಿಂತನೆಯು ಪ್ರಮುಖ ಕಾರ್ಯಗಳನ್ನು ಯೋಜಿತ ರೀತಿಯಲ್ಲಿ ಸಾಧಿಸಲು ಸಾಧ್ಯ. ಮಕ್ಕಳನ್ನು ಸ್ಪರ್ಧಾತ್ಮಕವಾಗಿ ತಯಾರಿ ಮಾಡಬೇಕಾಗಿ ಬರುವುದು. ಸಮಯಕ್ಕೆ ಸರಿಯಾಗಿ ಕಾರ್ಯಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ಸೋಮಾರಿತನವು ನಿಮ್ಮ ಕ್ರಿಯೆಗಳನ್ನು ತಪ್ಪಿಸಲು ಪ್ರಯತ್ನಿಸುವಂತೆ ಮಾಡುತ್ತದೆ. ವ್ಯಾಪಾರದಲ್ಲಿ ಚಟುವಟಿಕೆಗಳು ಸ್ವಲ್ಪ ನಿಧಾನವಾಗಿರುತ್ತವೆ. ಬಂಧುಗಳ ಆರೋಗ್ಯದ ಆರೈಕೆಯನ್ನು ನೀವು ಮಾಡಬೇಕಾದೀತು. ನಿಕಟವರ್ತಿಗಳ ಮಾತನ್ನು ನಗಣ್ಯ ಮಾಡುವಿರಿ. ಅವಾಚ್ಯ ಮಾತುಗಳಿಂದ ನಿಮ್ಮನ್ನು ಯಾರಾದರೂ ನಿಂದಿಸಬಹುದು.‌ ಅಲಕ್ಷ್ಯ ಮಾಡಿದರೆ ಉತ್ತಮ. ಗೊತ್ತಿಲ್ಲದೇ ನಿಮ್ಮದಲ್ಲದ ವಸ್ತುವನ್ನು ತೆಗೆದುಕೊಳ್ಳುವಿರಿ.

ವೃಷಭ ರಾಶಿ: ಮಕ್ಕಳಿಂದ ಋಣಾತ್ಮಕವಾದದ್ದನ್ನು ತಿಳಿದುಕೊಳ್ಳುವುದು ನಿರಾಶಾದಾಯಕವಾಗಿರುತ್ತದೆ. ಈ ಸಮಯದಲ್ಲಿ ಯಾರಿಂದಲೂ ಸಾಲ ಪಡೆಯುವುದು ಸೂಕ್ತವಲ್ಲ. ಇದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು. ನಿಮ್ಮ ಕೆಲಸಕ್ಕೆ ಹೆಚ್ಚಿನ ಶ್ರಮ ಬೇಕಾಗುತ್ತದೆ. ಸಹೋದ್ಯೋಗಿಗಳ ಜೊತೆ ಸೌಹಾರ್ದತೆ ಇರಲಿ. ಹೆಚ್ಚು ಒತ್ತಡವನ್ನು ತೆಗೆದುಕೊಳ್ಳಬೇಡಿ. ಯಾರ ಒತ್ತಾಯಕ್ಕೋ‌ ಮಣಿಯಬೇಡಿ. ಆರ್ಥಿಕ‌ ಸಂಕಷ್ಟವನ್ನು ಎದುರಿಸುತ್ತಿದ್ದು ಸ್ಥಿರಾಸ್ತಿಯನ್ನು ಮಾರಾಟ ಮಾಡಲೂ ನಿಮಗೆ ಕಷ್ಟವಾದೀತು. ನಿಮ್ಮ ಜೊತೆಗಿರುವವರೇ ನಿಮ್ಮ ವಸ್ತುವನ್ನು ಅಪಹರಿಸುವರು. ಪ್ರೇಮವು ನಿಮಗೆ ಹಾಯೆನಿಸುವುದು. ವೃತ್ತಿಯ ಏಕತಾನತೆಯಿಂದ ಹೊರಬರಲು ಬಯಸುವಿರಿ. ಆಪ್ತರು ಕಾರಣಾಂತರಗಳಿಂದ ದೂರಾಗಬಹುದು. ಸಕಾರಾತ್ಮಕ ಆಲೋಚನೆಯನ್ನು ನೀವು ಹೆಚ್ಚು ಮಾಡಿ. ಪ್ರಯಾಣದಲ್ಲಿ ಆರೋಗ್ಯದ ಸಮಸ್ಯೆ ಕಾಡುವುದು.

ಮಿಥುನ ರಾಶಿ: ಸರಳತೆಯನ್ನು ರೂಢಿಸಿಕೊಳ್ಳುವ ಅಗತ್ಯವಿದೆ. ವ್ಯಕ್ತಿತ್ವದಿಂದ ನೀವು ಸಮಾಜದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಳ್ಳುತ್ತೀರಿ. ಕೌಟುಂಬಿಕ ಕಲಹಗಳನ್ನು ಬಗೆಹರಿಸಿಕೊಳ್ಳಲು ಇದು ಸೂಕ್ತ ಸಮಯ. ಈ ಕ್ಷಣದಲ್ಲಿ ಇದು ನಿಮಗೆ ಅನುಕೂಲಕರ ಮತ್ತು ಆಹ್ಲಾದಕರ ಪರಿಸ್ಥಿತಿಯಾಗಲಿದೆ. ಹತ್ತಿರದ ಸಂಬಂಧಿಯಿಂದ ದುಃಖದ ಸುದ್ದಿಯನ್ನು ಸ್ವೀಕರಿಸಬೇಕಾಗಬಹುದು. ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ. ‌ಯಾರ ಜೊತೆಗೂ ಬೆರೆಯಲು ಇಷ್ಟವಾಗದು. ಪ್ರಯಾಣವು ಹಿತವಾಗದೇ ಇರುವುದು. ನಿಮಗೆ ಬೇಕಾದುದನ್ನು ಕೇಳಿ ಪಡೆಯುವಿರಿ. ನಿಮ್ಮ ಮನಸ್ಸಿನ ಮೇಲೆ ಆಕ್ರಮಣಗಳು ಆಗಬಹುದು. ಇಂದು ಒತ್ತಡವಿಲ್ಲದೇ ಕಾರ್ಯವನ್ನು ಮುಗಿಸುವಿರಿ. ದುರಭ್ಯಾಸವನ್ನು ರೂಢಿಸಿಕೊಂಡಿದ್ದು ಅರಿವಿಗೆ ಬರುವುದು. ನಿಮಗೆ ಪರೀಕ್ಷೆಯ ದಿನವಾಗಿರುವುದು. ಆತ್ಮವಿಶ್ವಾಸದ ಕೊರತೆಯನ್ನು ನೀಗಿಸಿಕೊಳ್ಳುವುದು ಮುಖ್ಯವಾಗುವುದು. ನಿಮ್ಮ ಸಾಮಾಜಿಕ ಕಾರ್ಯಕ್ಕೆ ಬೆಂಬಲವನ್ನು ಅಪೇಕ್ಷಿಸುವಿರಿ.

ಕಟಕ ರಾಶಿ: ಪರಿಸ್ಥಿತಿ ಅನುಕೂಲಕರವಾಗಿದೆ. ಯುವಕರು ತಮ್ಮ ವೃತ್ತಿಜೀವನದ ಬಗ್ಗೆ ತಿಳಿದಿರಬೇಕು. ಯಾರೊಂದಿಗಾದರೂ ವಿವಾದಕ್ಕೆ ಸಿಲುಕುವುದು ನಿಮಗೆ ನೋವುಂಟು ಮಾಡುತ್ತದೆ. ನೀವು ನಿಮ್ಮ ಕೆಲಸವನ್ನು ಮುಂದುವರಿಸಿದರೆ ಒಳ್ಳೆಯದು. ವಾಹನ ದುರಸ್ತಿಯಿಂದ ನೀವು ಹಣವನ್ನು ಕಳೆದುಕೊಳ್ಳುವಿರಿ. ಮನೆಯ ಹಿರಿಯ ಸದಸ್ಯರನ್ನು ಗೌರವಿಸಿ ಮತ್ತು ಅವರ ಮಾರ್ಗದರ್ಶನವನ್ನು ಅನುಸರಿಸಿ. ವೃತ್ತಿಕ್ಷೇತ್ರದ ಎಲ್ಲ ಕೆಲಸಗಳು ಸರಿಯಾಗಿ ನಡೆಯುತ್ತವೆ. ಕೆಲವು ವಿಚಾರಕ್ಕೆ ಬುದ್ಧಿಯು ಸೂಚಿಸದೇ ಇರಬಹುದು. ನಿಮ್ಮ ಶ್ರಮಕ್ಕೆ ಯೋಗ್ಯ ವರಮಾನ ಸಿಗದು ವ್ಯವಹಾರವು ಪ್ರಾಮಾಣಿಕವಾಗಿ ಇರಲಿ. ಕುಟುಂಬವರ ಜೊತೆ ಸಮಯವನ್ನು ಕಳೆಯುವುದು ಆಗದು. ಆಪ್ತರ ಬಗ್ಗೆ ನಿಮ್ಮ ಭಾವನೆ ನಕಾರಾತ್ಮಕವಾಗಿ ಇರುವುದು. ಕಾನೂನಿನ ಚೌಕಟ್ಟಿನಲ್ಲಿ ನಿಮ್ಮ ನಡೆವಳಿಕೆ ಇರಲಿ. ಕಾರಣಾಂತರಗಳಿಂದ ನಿಮ್ಮ ಜೀವನದ ಮಾರ್ಗವು ಬದಲಾಗುವುದು. ಸಮಯವನ್ನು ಸದುಪಯೋಗ ಮಾಡಿಕೊಳ್ಳುವುದು ಮುಖ್ಯ.

Follow Us
ಚಿನ್ನದ ಬ್ಯಾಗ್ ಇದ್ದ ಬಸ್ಸನ್ನು ಫಾಲೋ ಮಾಡಿ ದೋಚಿದ್ದು ಹೇಗೆ ಗೊತ್ತಾ?
ಚಿನ್ನದ ಬ್ಯಾಗ್ ಇದ್ದ ಬಸ್ಸನ್ನು ಫಾಲೋ ಮಾಡಿ ದೋಚಿದ್ದು ಹೇಗೆ ಗೊತ್ತಾ?
ದೆಹಲಿಗೆ ಹೋಗಿ ಡಯೆಟ್ ಮರೆತ ರಾಗಿಣಿ ದ್ವಿವೇದಿ; ಭರ್ಜರಿ ಊಟ ಸವಿದ ನಟಿ
ದೆಹಲಿಗೆ ಹೋಗಿ ಡಯೆಟ್ ಮರೆತ ರಾಗಿಣಿ ದ್ವಿವೇದಿ; ಭರ್ಜರಿ ಊಟ ಸವಿದ ನಟಿ
ಪಾಕ್ ಆಟಗಾರನನ್ನು ಖರೀದಿಸಿದ ಕಾವ್ಯ ಮಾರನ್​ಗೆ ಭಾರತೀಯರಿಂದ ಹಿಡಿಶಾಪ
ಪಾಕ್ ಆಟಗಾರನನ್ನು ಖರೀದಿಸಿದ ಕಾವ್ಯ ಮಾರನ್​ಗೆ ಭಾರತೀಯರಿಂದ ಹಿಡಿಶಾಪ
ಪುಟ್ಟ ಬಾಲಕಿಯ ಕೈಯಲ್ಲೇ ಮೊಬೈಲ್ ಸ್ಫೋಟ; ಇಲ್ಲಿದೆ ವಿಡಿಯೋ
ಪುಟ್ಟ ಬಾಲಕಿಯ ಕೈಯಲ್ಲೇ ಮೊಬೈಲ್ ಸ್ಫೋಟ; ಇಲ್ಲಿದೆ ವಿಡಿಯೋ
ಲಕ್ಕುಂಡಿ ನಿಧಿ ರಹಸ್ಯ ಕೊನೆಗೂ ಬಯಲು, ಚಿನ್ನ ಎಷ್ಟು ಕೋಟಿ ಮೌಲ್ಯದ್ದು?
ಲಕ್ಕುಂಡಿ ನಿಧಿ ರಹಸ್ಯ ಕೊನೆಗೂ ಬಯಲು, ಚಿನ್ನ ಎಷ್ಟು ಕೋಟಿ ಮೌಲ್ಯದ್ದು?
ಮಧ್ಯಪ್ರಾಚ್ಯ ಯುದ್ಧದಿಂದ ಅಕ್ಕಿ ಉದ್ಯಮಕ್ಕೂ ಹೊಡೆತ!
ಮಧ್ಯಪ್ರಾಚ್ಯ ಯುದ್ಧದಿಂದ ಅಕ್ಕಿ ಉದ್ಯಮಕ್ಕೂ ಹೊಡೆತ!
ವಾಣಿಜ್ಯ ಸಿಲಿಂಡರ್ ಕೊರತೆ: ಕಟ್ಟಿಗೆ ಒಲೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​
ವಾಣಿಜ್ಯ ಸಿಲಿಂಡರ್ ಕೊರತೆ: ಕಟ್ಟಿಗೆ ಒಲೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​
ರೈಲಿನ ಕಿಟಕಿಯ ಸರಳುಗಳ ಮಧ್ಯೆ ಎಳನೀರು ಒಳಗೆಳೆಯಲು ವ್ಯಕ್ತಿಯ ಹರಸಾಹಸ
ರೈಲಿನ ಕಿಟಕಿಯ ಸರಳುಗಳ ಮಧ್ಯೆ ಎಳನೀರು ಒಳಗೆಳೆಯಲು ವ್ಯಕ್ತಿಯ ಹರಸಾಹಸ
ಸಿಲಿಂಡರ್ ಶಾರ್ಟೇಜ್; ರಾಜ್​​ಕುಮಾರ್ ನೆಚ್ಚಿನ ಹೋಟೆಲ್​​ಗೆ ಬೀಗ
ಸಿಲಿಂಡರ್ ಶಾರ್ಟೇಜ್; ರಾಜ್​​ಕುಮಾರ್ ನೆಚ್ಚಿನ ಹೋಟೆಲ್​​ಗೆ ಬೀಗ
ಮುಂಬೈನಲ್ಲಿರುವ ಮಹಾರಾಷ್ಟ್ರ ವಿಧಾನ ಭವನಕ್ಕೆ ಬಾಂಬ್ ಬೆದರಿಕೆ
ಮುಂಬೈನಲ್ಲಿರುವ ಮಹಾರಾಷ್ಟ್ರ ವಿಧಾನ ಭವನಕ್ಕೆ ಬಾಂಬ್ ಬೆದರಿಕೆ