AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Horoscope: ಜನವರಿ 8ರಿಂದ 14ರ ತನಕ ವಾರ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ?

ಹೊಸ ವರ್ಷದ 2ನೇ ವಾರ ಅಂದರೆ ಜನವರಿ 08ರಿಂದ ಜ.14ರ ವರೆಗೆ ಯಾವ ರಾಶಿಯವರಿಗೆ ಲಾಭದಾಯಕ..? ಯಾವ ರಾಶಿಯವರಿಗೆ ನಷ್ಟ? ಎನ್ನುವುದನ್ನು ತಿಳಿದುಕೊಳ್ಳಿ.

Weekly Horoscope: ಜನವರಿ 8ರಿಂದ 14ರ ತನಕ ವಾರ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ?
ಪ್ರಾತಿನಿಧಿಕ ಚಿತ್ರImage Credit source: www.india.com
TV9 Web
| Edited By: |

Updated on: Jan 08, 2023 | 6:06 AM

Share

ಜನವರಿ 8ರಿಂದ 14ರ ತನಕ ವಾರ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ ಎನ್ನುವುದನ್ನು ಇಲ್ಲಿ ತಿಳಿಸಲಾಗಿದ್ದು, ಹೊಸ ವರ್ಷದ 2ನೇ ವಾರ ಅಂದರೆ ಜನವರಿ 08ರಿಂದ ಜ.14ರ ವರೆಗೆ ಯಾವ ರಾಶಿಯವರಿಗೆ ಲಾಭದಾಯಕ..? ಯಾವ ರಾಶಿಯವರಿಗೆ ನಷ್ಟ? ಎನ್ನುವುದನ್ನು ತಿಳಿದುಕೊಳ್ಳಿ.

ಇದನ್ನೂ ಓದಿ: Yearly Horoscope 2023: 12 ರಾಶಿಗಳ ವರ್ಷ ಭವಿಷ್ಯ ಹೇಗಿದೆ? ಯಾರಿಗಿದೆ ಅದೃಷ್ಟ?

ಮೇಷ

ನಿಮ್ಮ ರಾಶಿಯಲ್ಲಿ ರಾಹುವು ಸ್ಥಿತನಾಗಿದ್ದುದರಿಂದ‌ ದೇಹಾಲಸ್ಯವನ್ನೂ ದೇಹಪೀಡಯನ್ನೂ ನೀವು ಅನುಭವಿಸುವಿರಿ. ಸೊಂಟದ ಕೆಳಭಾಗದಲ್ಲಿ ನೋವು ನಿಮ್ಮನ್ನು ಕಾಡಲಿದೆ. ಗುರುವಿ ದ್ವಾದಶದಲ್ಲಿ ಇರುವವರೆಗೂ ಅಗೌರವ, ಸಂಪತ್ತಿನ ವ್ಯಯ, ಉನ್ನತಸ್ಥಾನಕ್ಕೆ ಏರದಿರುವ ಎಲ್ಲ ಹಿನ್ನಡೆಗಳೂ ಆಗಲಿವೆ. ಗುರುದರ್ಶನವನ್ನೂ, ಕಾರ್ತಿಕೇಯ ಆರಾಧನೆಯನ್ನೂ ಮಾಡಿ ಅನುಕೂಲಕರ ಸಂದರ್ಭಗಳನ್ನು ತಂದುಕೊಳ್ಳಬಹುದು. ದುರ್ಗಾದೇವಿಯು ಅಭಯವಿತ್ತು ನಿಮ್ಮ ಸಂಕಟಗಳನ್ನು ಪರಿಹರಿಸುವಳು.

ವೃಷಭ

ಸಂಪತ್ತಿನ ಆಗಮನ, ಗೌರವ, ಸ್ಥಾನಮಾನಗಳು ಪ್ರಾಪ್ತವಾಗುವ ಕಾಲ. ವಾಹನವನ್ನು ಚಲಾಯಿಸುವಾಗ ಸ್ವಲ್ಪ ಎಚ್ಚರವಿರಲಿ. ಹೊಸದೊಂದು ಪ್ರೇಮಪಯಣದ ಆರಂಭವಾಗುವ ಸಾಧ್ಯತೆ ಇದೆ. ಶತ್ರುಗಳ ನಿಮ್ಮ ಸೋಲನ್ನು ಕಾಯುತ್ತಿರಬಹುದು. ಧಾರ್ಮಿಕ ಕಾರ್ಯಗಳಲ್ಲಿ ನಿರಾಸಕ್ತಿ ಇರಬಹುದು. ಸೊಂಟದ ಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು ಅಥವಾ ಇರುವ ನೋವು ಹೆಚ್ಚಾಗಬಹುದು. ಗಣಪತಿಯ ಸ್ತೋತ್ರ ಮಾಡಿ. ಸಮೀಪದ ಗಣಪತಿಯ ಮಂದಿರಕ್ಕೆ ಹೋಗಿ ಪೂಜೆಯನ್ನು ಮಾಡಿಸಿ, ಪ್ರಿಯವಾದ ದೂರ್ವಾಪತ್ರವನ್ನು ಸಮರ್ಪಿಸಿ.

ಮಿಥುನ

ಭೂಮಿಯ ವ್ಯವಹಾರದಲ್ಲಿ ನಿಮಗೆ ನಷ್ಟವಾಗಲಿದೆ. ಭೂಮಿಯನ್ನು ಕಳೆದುಕೊಳ್ಳಲೂಬಹುದು. ಪಿತ್ರಾರ್ಜಿತ ಆಸ್ತಿಯ ಕುರಿತು ಮಾತುಗಳು ನಡೆಯಬಹುದು. ಮಕ್ಕಳ ಜೊತೆ ಕಲಹಗಳು ಆಗಬಹುದು. ಸಂತತಿಯ ವಿಚಾರವಾಗಿ ದಂಪತಿಗಳ ಮಧ್ಯದಲ್ಲಿ ವೈಮನಸ್ಯವು ಉಂಟಾಗಬಹದು. ನಿಮ್ಮವರು ನಿಮಗೆ ವಂಚಿಸುವ ಸಾಧ್ಯತೆ ಇದೆ. ಏಕಾದಶದ ರಾಹುವು ವಿದ್ಯುದುಪಕರಣ, ತಂತ್ರಾಂಶಗಳ ವ್ಯಾಪಾರ, ಆಹಾರಧನ್ಯಗಳ ವಿಕ್ರಯಗಳಿಂದ ಲಾಭವನ್ನು ನೀಡುವನು. ಮಹಾವಿಷ್ಣುವು ನಿಮ್ಮಿಂದ ಸೇವೆಯನ್ನು ಪಡೆದು ಶುಭವನ್ನು ಮಾಡುವನು. ಗಣಪತಿಯ ಧ್ಯಾನ, ದರ್ಶನಗಳು ನಿಮ್ಮ ಅನೇಕ ಕಂಟಕಗಳಿಗೆ ಮದ್ದಾಗಲಿದೆ.

ಕರ್ಕಾಟಕ

ನಿಮ್ಮ ಮನಸ್ಸು ಉಲ್ಲಾಸದಿಂದ ಈ ವಾರವು ಇರಲಿದೆ. ಬಂಧುಗಳ ಆಗಮನವು ನಿಮಗೆ ಕಿರಿಕಿರಿಯನ್ನು ನೀಡುವುದು. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು ಅಥವಾ ತಂದೆಯಿಂದ ನಿಮಗೆ ಬೇಸರವು ಉಂಟಾಗಬಹುದು. ವಿವಾಹವು ವಿಳಂಬವಾಗಲಿದೆ. ಸಹನೆಯನ್ನು ಉಳಿಸಿಕೊಳ್ಳಿ. ಧರ್ಮಕಾರ್ಯದಲ್ಲಿ ಹೆಚ್ಚು ಒಲವನ್ನು ತೋರಿಸಲಿದ್ದೀರಿ. ಯಂತ್ರಗಳಿಗೆ ಸಂಬಂಧಿಸಿದ ಕಾರ್ಯಗಳನ್ನು ಮಾಡುವವರಿಗೆ ಶುಭವಿದೆ. ಭೂಸಂಬಂಧಿಯ ವ್ಯವಹಾರಗಳು ಲಾಭವನ್ನು ತರಲಿವೆ. ಮೃತ್ಯುಂಜಯನ ಆರಾಧನೆಯನ್ನು ಮಾಡಿ.

ಸಿಂಹ

ಅಷ್ಟಮದ ಗುರುವು ನಿಮ್ಮ ಗೌರವಕ್ಕೆ ಧಕ್ಕೆ ತರಬಹುದು. ಆದಷ್ಟು ಎಚ್ಚರಿಕೆಯಿಂದ ವ್ಯವಹರಿಸುವುದು, ಮಾತನಾಡುವುದು ಉತ್ತಮ. ಶತ್ರುಗಳು, ರೋಗಗಳು ಉಳಿಮುಖವಾಗಲಿವೆ. ಇದರ ಸಂತೋಷವು ನಿಮ್ಮ ಮುಖದಲ್ಲಿ ಕಾಣಬಹುದಾಗಿದೆ. ತಾಯಿಯ ಸಲುವಾಗಿ ಹಣವನ್ನು ಖರ್ಚುಮಾಡಬೇಕಾಗಿ ಬರಬಹುದು ಅಥವಾ ಕೃಷಿಗೆ ನಿಮ್ಮ ಹಣವು ವ್ಯಯವಾಗಲಿದೆ. ಕುಲಗುರುವಿನ ದರ್ಶನವನ್ನು ಪಡೆಯಿರಿ. ಲಕ್ಷ್ಮೀ ಸ್ತೋತ್ರವನ್ನು ಪಠಿಸಿ.

ಕನ್ಯಾ

ಸ್ವಯಾರ್ಜಿತ ಸಂಪತ್ತು ಕ್ಷುಲ್ಲಕ ಕಾರಣಕ್ಕೆ ವ್ಯಯವಾಗಿವ ಸಾಧ್ಯತೆ ಇದೆ. ಪುತ್ರರಿಂದ ಸಂಕಟವನ್ನು ಅನುಭವಿಸುವಿರಿ. ಸಾಮರ್ಥ್ಯವು ಬೂದಿ ಮುಚ್ಚಿದ ಕೆಂಡದಂತೆ ಇರಲಿದೆ. ತಂದೆಯ ಕಡೆಯ ದಾಯಾದಿಗಳು ನಿಮ್ಮನ್ನು ಭೇಟಿಯಾಗಲಿದ್ದಾರೆ. ವಿವಾಹಕ್ಕೆ ಶುಭವಾಗಲಿದೆ. ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಯಂತ್ರೋಪಕರಣಗಳು ಲಾಭವನ್ನು ತಂದುಕೊಡಲಿದೆ. ಕುಟುಂಬದ ಕೆಲಸಕ್ಕೆ ಖರ್ಚಾಗಲಿದೆ. ಗಣಪತಿಯು ಸಂಕಟವನ್ನು ದೂರೀಕರಿಸಲು ಸಮರ್ಥನು. ಶಂಕರನ ಧ್ಯಾನ ಮಂಗಲವನ್ನು ತರುವುದು.

ತುಲಾ

ದೇಹದಲ್ಲಿ ಆಗುವ ವ್ಯತ್ಯಾಸವು ಅನಾರೋಗ್ಯಕ್ಕೆ ಕಾರಣವಾಗಬಹುದು. ವೈದ್ಯರ ಭೇಟಿ ಮಾಡಿ ಸಲಹೆಯನ್ನು ಪಡೆಯಿರಿ. ಶತ್ರುಗಳು ನಿಮಗೆ ತೊಂದರೆಗಳನ್ನು ಉಂಟುಮಾಡಲಿದ್ದಾರೆ. ವಿವಾಹ ವಿಳಂಬವಾಗಲಿದೆ. ಭೂವ್ಯವಹಾರದಲ್ಲಿ ನಷ್ಟವನ್ನು ಅನುಭವಿಸುವಿರಿ. ಸಹೋದರರ ಬಾಂಧವ್ಯವು ತಂದೆಯ ಮೂಲಕ ಗಟ್ಟಿಯಾಗಲಿದೆ. ನೌಕಾಯಾನಿಗರಿಗೆ ಸುವಾರ್ತೆ ಸಿಗಲಿದೆ. ಶ್ರೀರಾಮನ ಸ್ತೋತ್ರ ಮಾಡಿ. ಕುಲದೇವರನ್ನು ಪ್ರಾರ್ಥಿಸಿ.

ವೃಶ್ಚಿಕ

ವಿವಾಹವನ್ನು ಇಚ್ಚಿಸುವವರಿಗೆ ಈಗ ಶುಭವಿದೆ. ಪಂಚಮದ ಗುರು ಅನುಕೂಲವನ್ನೇ ಮಾಡಿಕೊಡುವನು. ಹಣದ ಹರಿವೂ ಚೆನ್ನಾಗಿರಲಿದೆ. ಉನ್ನತ ಸ್ಥಾನಕ್ಕೆ ಹೋಗುವ ಬಯಕೆಯುಳ್ಳವರು ಅಥವಾ ಕೆಲಸವನ್ನು ಬದಲಿಸಿಕೊಳ್ಳಲು ಇಷ್ಟಪಡುವವರು ಪ್ರಯತ್ನಿಸಬಹುದು. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವು ಇರಲಿದೆ. ಆನಾರೋಗ್ಯದ ಕಾರಣದಿಂದ ಹಣದ ವ್ಯಯವಾಗಲಿದೆ. ಷಷ್ಠದ ರಾಹು ಅರಿಭಯಂಕರನಾಗಿರುವನು.

ಧನು

ಇನ್ನು ನಿಮಗೆ ಬಲದ ಕಾಲ ಮಾತ್ರವಲ್ಲ, ಅತಿಬಲದ ಕಾಲವೂ ಬರಲಿದೆ. ಇಷ್ಟು ದಿನದ ದುಃಖಗಳನ್ನು ಕಂಡು, ಭವಿಷ್ಯದ ಕನಸನ್ನು ಕಂಡುಕೊಂಡಿದ್ದರೆ ಅವೆಲ್ಲವೂ ಸಫಲವಾಗುತ್ತಾ ಹೋಗುತ್ತದೆ. ವಿದ್ಯಾರ್ಥಿಗಳು ಹಿಂದಿ‌ನ ಘಟನೆಯನ್ನು ಮರೆತು ಉತ್ತಮ ಭವಿಷ್ಯಕ್ಕೆಂದು ಹೆಜ್ಜೆ ಹಾಕಿ.‌ ಯಶಸ್ಸು ನಿಮ್ಮದಾಗಲಿದೆ. ಪೂರ್ವಪುಣ್ಯಗಳು ಫಲವನ್ನು ನೀಡಲಿವೆ. ಉನ್ನತ ವಿದ್ಯಾಭ್ಯಾಸಕ್ಕೆ ವಿದೇಶವನ್ನೂ ಆಯ್ಕೆ ಮಾಡಿಕೊಂಡು ಹೋಗಬಹುದಾಗಿದೆ.

ಮಕರ

ನಿಮಗೆ ಸಿಗುವ ಅವಕಾಶಗಳನ್ನು ಬಹಳ ಜಾಗರೂಕತೆಯಿಂದ ನಿಭಾಯಿಸಿ. ಆತುರಪಟ್ಟು ಅನರ್ಥವನ್ನು ಮಾಡಿಕೊಳ್ಳಬೇಡಿ. ಕಾರ್ಯಕ್ಷೇತ್ರ ಅಥವಾ ಕಾರ್ಯವೇ ಬದಲಾಗುವ ಸಾಧ್ಯತೆ ಇದೆ. ಸಂತಾನವಾರ್ತೆಯನ್ನು ಕೇಳುವಿರಿ. ಅತಿಯಾದ ಖರ್ಚಿನಿಂದ ಕಂಗೆಟ್ಟಿದ್ದ ನೀವು, ಅದನ್ನು ಕಡಿಮೆ ಮಾಡಿಕೊಂಡು ನಿಶ್ಚಿಂತಡಯಿಂದ ಇರುವಿರಿ. ಶಾಂತ ಸ್ವಭಾವದ, ಸುಂದರ ಸಂಗಾತಿಯು ನಿಮಗೆ ಸಿಗಲಿದ್ದಾರೆ. ತಂದೆಗೆ ನಿಮ್ಮಿಂದ ಧನದ ಸಹಾಯವಾಗಲಿದೆ.

ಕುಂಭ

ಸ್ವಯಾರ್ಜಿತ ಸಂಪತ್ತನ್ನು ಅನುಭವಿಸುವಿರಿ. ನಿಮ್ಮ ಅಸ್ತಿತ್ವವು ಅನೇಕರಿಗೆ ತಿಳಿಯಲಿದೆ. ಕುಟುಂಬದಲ್ಲಿ ಸಣ್ಣ ಕಲಹವೂ ಆಗಬಹುದು. ಸವಾಲುಗಳು ನಿಮಗೆ ಸಹಜವಾಗಿದ್ದರಿಂದ ಬರುವ ಸವಾಲನ್ನು ಲೀಲಾಜಾಲವಾಗಿ ಎದುರಿಸುವಿರಿ. ಮನೆಯ ನಿರ್ಮಾಣ ಕಾರ್ಯದಲ್ಲಿ ವಿಳಂಬವಾಗಬಹುದು. ಮಕ್ಕಳಿಂದ ಧನಸಹಾಯವಾಗಲಿದೆ. ಸರ್ಕಾರಿ ಉದ್ಯೋಗದ ಅಪೇಕ್ಷಿತರಿಗೆ ಶುಭವಾರ್ತೆಯು ಕಿವಿಗೆ ಬೀಳಲಿದೆ. ಕಲಾವಿದರಿಗೆ ಹಣದ ವ್ಯಯವಾಗಲಿದೆ.

ಮೀನ

ಅತಿಯಾದ ಪ್ರಯಾಣದ ಹುಚ್ಚು ಇರಲಿದೆ. ಹಾಗೆಯೇ ದೂರದ ಊರಿಗೆ ಪ್ರಯಾಣವನ್ನೂ ಮಾಡಲಿದ್ದೀರಿ. ವೃತ್ತಿಯಲ್ಲಿ ಕೆಲವು ಬದಲಾವಣೆ ಸುದ್ದಿಗಳು ಕೇಳಿಬರಬಹುದು. ಅದಕ್ಕೆ ಭಯಪಡದೇ ನಿಮ್ಮ ಎಂದಿನ ಧೈರ್ಯವನ್ನೇ ಗಟ್ಟಿಯಾಗಿಸಿಕೊಳ್ಳಿ.‌ ನಾನಾ ದಾರಿಗಳು ನಿಮಗಾಗಿ ತೆರೆದಿರುತ್ತದೆ. ಮಕ್ಕಳಿಂದ ನಿಮಗೆ ಕೆಲವು ಮಾತಗಳು ಬರಬಹುದು. ಚಿಂತಿಸಬೇಕಾದ ಅಗತ್ಯವಿಲ್ಲ. ವಯೋಸಹಜ ಮಾತುಗಳು ಎಂದು ಸುಮ್ಮನಾಗಿ. ಕಾಲವು ಉತ್ತರಿಸುತ್ತದೆ.

ಲೋಹಿತಶರ್ಮಾ ಇಡುವಾಣಿ

ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ