AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Astrology: ಈ ರಾಶಿಯವರು ಸೌಂದರ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಡುವಿರಿ

ರಾಶಿ ಭವಿಷ್ಯ, ಸೋಮವಾರ(ಅಕ್ಟೋಬರ್: 14): ಸ್ತ್ರೀಯರ ವಿಷಯದಲ್ಲಿ ನೀವು ಬಹಳ ಜಾಗರೂಕತೆಯಿಂದ ವ್ಯವಹರಿಸುವುದು ಉತ್ತಮ. ನಿಮಗೆ ಬರಬೇಕಾದ ಹಣವು ಬಾರದೇ ಹೋಗಬಹುದು. ಕೇಳಿ ಪಡೆಯಬೇಕಾದ ಸ್ಥಿತಿಯೂ ಬರಬಹುದು. ಅಜಾಡ್ಯದಿಂದ ನಿಮ್ಮ ಕಾರ್ಯವನ್ನು ಸಾಧಿಸಬಹುದು. ಹಾಗಾದರೆ ಅಕ್ಟೋಬರ್: 14ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Astrology: ಈ ರಾಶಿಯವರು ಸೌಂದರ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಡುವಿರಿ
ಈ ರಾಶಿಯವರು ಸೌಂದರ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಡುವಿರಿ
TV9 Web
| Edited By: |

Updated on: Oct 14, 2024 | 12:12 AM

Share

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಚಿತ್ರಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಶತಭಿಷಾ, ಯೋಗ: ಗಂಡ​, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 24 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 12 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 07:53 ರಿಂದ 09:22, ಯಮಘಂಡ ಕಾಲ ಬೆಳಿಗ್ಗೆ 10:50ರಿಂದ 12:18ರವರೆಗೆ, ಗುಳಿಕ ಕಾಲ ಮಧ್ಯಾಹ್ನ 01:47 ರಿಂದ 03:15 ರವರೆಗೆ.

ಧನು ರಾಶಿ: ನಿಮ್ಮ ದೂರದೃಷ್ಟಿಯಿಂದ ನಿಮ್ಮ ಗುರಿ ಬದಲಾಗುವುದು. ನಿರುದ್ಯೋಗಿಗಳಿಗೆ ಸ್ನೇಹಿತರಿಂದ ಸಹಕಾರವು ಸಿಗುವುದು. ಸ್ತ್ರೀಯರ ವಿಷಯದಲ್ಲಿ ನೀವು ಬಹಳ ಜಾಗರೂಕತೆಯಿಂದ ವ್ಯವಹರಿಸುವುದು ಉತ್ತಮ. ನಿಮಗೆ ಬರಬೇಕಾದ ಹಣವು ಬಾರದೇ ಹೋಗಬಹುದು. ಕೇಳಿ ಪಡೆಯಬೇಕಾದ ಸ್ಥಿತಿಯೂ ಬರಬಹುದು. ಅಜಾಡ್ಯದಿಂದ ನಿಮ್ಮ ಕಾರ್ಯವನ್ನು ಸಾಧಿಸಬಹುದು. ಆರೋಗ್ಯದಲ್ಲಿ ಆದ ವ್ಯತ್ಯಾಸದಿಂದ ನಿಮ್ಮ ಕಾರ್ಯವೂ ಮಂದಗತಿಯಲ್ಲಿ ಇಂದು ಸಾಗಬಹುದು. ಅಶಿಸ್ತಿನ ವ್ಯವಹಾರದಿಂದ ಸಹೋದ್ಯೋಗಿಗಳ ನಡುವೆ ವಾಗ್ವಾದವು ಆಗಬಹುದು. ಸೌಂದರ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ಕೊಡುವಿರಿ. ಅತಿಥಿ ಸತ್ಕಾರವನ್ನು ಬಹಳ ಪ್ರೀತಿಯಿಂದ ಮಾಡಿ. ನಿಮಗೆ ಸಾಧಿಸುವ ಛಲವಿದ್ದರೆ ಮಾತ್ರ ಉಪಕರಣಗಳು ನಿಮ್ಮ ಕೈ ಸೇರುವುದು. ಉದ್ಯಮಕ್ಕೆ ಸಂಬಂಧಿಸಿದ ನಿಮ್ಮ ಆಲೋಚನೆಯನ್ನು ಇತರರು ತಳ್ಳಿಹಾಕಬಹುದು. ನಿಮಗೆ ಆಗಬೇಕಾದ ಕಾರ್ಯಕ್ಕೆ ಹಣವೂ ಓಡಾಟವೂ ಅತಿಯಾಯಿತು ಎಂದು ಅನ್ನಿಸುವುದು. ವಿದ್ಯಾಭ್ಯಾಸದ ಪ್ರಗತಿಯು ಖುಷಿಕೊಡುವುದು.

ಮಕರ ರಾಶಿ: ನಿಮ್ಮ ದೃಷ್ಟಿಯು ಬದಲಾದರೆ ಎಲ್ಲವೂ ಬದಲಾಗುವುದು. ಕಛೇರಿಯ ವ್ಯವಹಾರವು ನಿಮಗೆ ಚಿಂತೆಯನ್ನು ಹೆಚ್ಚು ಮಾಡಬಹುದು. ನಿಮ್ಮ ಯೋಜನೆಯನ್ನು ಕಾರ್ಯಗತಗೊಳಿಸಲು ನೀವು ಸಫಲರಾಗುವಿರಿ. ಸ್ನೇಹಿತರ ಜೊತೆ ಅನೌಪಚಾರಿಕ ಮಾತುಗಳನ್ನು ಆಡುವಿರಿ. ಸಹವಾಸದೋಷದಿಂದ ನಿಮಗೆ ಕಷ್ಟವಾದೀತು. ಕುಟುಂಬದ ಜೊತೆ ಹೆಚ್ಚು ಸಮಯವನ್ನು ಕಳೆಯಲು ಇಷ್ಟಪಡುವಿರಿ. ಮಕ್ಕಳ ಸಂತೋಷದಲ್ಲಿ ನೀವು ಭಾಗಿಯಾಗಿ. ನೈಮಿತ್ತಿಕ ಕರ್ಮಗಳನ್ನು ನೀವು ಮಾಡಲೇಬೇಕಾಗುವುದು. ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಸಮ್ಮಾನವನ್ನು ಪಡೆಯುವರು. ಸ್ನೇಹಸಂಬಂಧವು ಇನ್ನಷ್ಟು ಬಲವಾಗುವುದು. ದುಃಖದ ಸನ್ನಿವೇಶಗಳನ್ನು ನೀವು ಸಂತೋಷದ ಸಂದರ್ಭವಾಗಿ ಪರಿವರ್ತಿಸುವಿರಿ. ಇಷ್ಟದ ಜನರನ್ನು ಭೇಟಿಯಾಗಲು ಹೋಗಬಹುದು. ಕುಟುಂಬಕ್ಕೆ ನಿಮ್ಮಿಂದ ಆಗಬೇಕಾದ ಕಾರ್ಯಗಳ ಬಗ್ಗೆ ತಿಳಿದುಕೊಳ್ಳುವಿರಿ. ನಿಮ್ಮ ವಿದೇಶ ಪ್ರವಾಸವು ಕಾರಣಾಂತರಗಳಿಂದ ರದ್ದಾಗುವುದು. ಆಕಾಶಕ್ಕೆ ಉಗಿದರೆ ನಿಮಗೇ ತೊಂದರೆ.

ಕುಂಭ ರಾಶಿ: ಗೊತ್ತಿಲ್ಲದ ವ್ಯವಹಾರದಿಂದ ನಿಮಗೆ ಮುಖಭಂಗವಾಗಬಹುದು. ಆತುರದಲ್ಲಿ ಏನನ್ನಾದರೂ ಮಾಡಿಕೊಳ್ಳುವ ಸಾಧ್ಯತೆ ಇದೆ. ಇಂದು ಸಂಭ್ರಮದ ವಾತಾವರಣದಲ್ಲಿ ಸಮಯವನ್ನು ಕಳೆಯುವಿರಿ. ಅನಗತ್ಯ ಮಧ್ಯಪ್ರವೇಶದಿಂದ ಗೌರವ ಕಡಿಮೆಯಾಗುವುದು. ಮನೆಯ ಕೆಲಸವು ಅಧಿಕವಾಗಿ ಆಯಾಸವಾಗಬಹುದು. ನಿಮ್ಮ ಬಯಕೆಗಳನ್ನು ಪೂರೈಸಲಿಕೊಳ್ಳಲು ಇತರರ ಸಹಾಯವನ್ನು ಕೇಳುವಿರಿ. ಕಛೇರಿಯ ಕೆಲಸಗಳು ನಿಗದಿತ ಸಮಯಕ್ಕೆ ಮುಕ್ತಾಯವಾಗುವುದು. ನಿಮ್ಮ ಹಳೆಯ ವಸ್ತುಗಳನ್ನು ಮಾರಾಟ ಮಾಡಿ, ಹೊಸತನ್ನು ಪಡೆಯುವಿರಿ. ವಿವಾಹದ ಮಾತುಕತೆಗಳು ನಿಮಗೆ ಸಂತೋಷವನ್ನು ನೀಡುವುದು. ಭವಿಷ್ಯದ ಬಗ್ಗೆ ಅನಗತ್ಯವಾದ ಆಲೋಚನೆಗಳು ಬರಬಹುದು. ಸ್ತ್ರೀಯರ ಸಹಾಯದಿಂದ ನಿಮ್ಮ ಕಛೇರಿಯ ಕಾರ್ಯವು ಸರಿಯಾಗುವುದು. ನಿಮ್ಮ ಹೇಳಿಕಯನ್ನು ಇಂದು ಬದಲಾಯಿಸುವಿರಿ. ಬಂಧುಗಳ ವಿಚಾರಕ್ಕೆ ಆರ್ಥಿಕನಷ್ಟವಾಗುವುದು. ಸಂಗಾತಿಯ ಬಗ್ಗೆ ಪೂರ್ವಾಗ್ರಹವು ಇರುವ ಕಾರಣ ಯಾವ ಇಷ್ಟವಾಗದು.

ಮೀನ ರಾಶಿ: ನೀವು ಇಂದು ಯಾವದನ್ನೂ ಪರಿಸ್ಥಿತಿಯ ಮೇಲೆ‌ ಅಳೆಯಲು ಹೋಗುವುದು ಬೇಡ. ಗೊಂದಲದ ಕಾರಣದಿಂದ ಯಾವುದನ್ನೂ ಪೂರ್ಣವಾಗಿ ನಿರ್ಧಾರ ಮಾಡಲಾಗಸು. ನೀವು ಸ್ಥಾನಮಾನದ ಪ್ರಾಪ್ತಿಗಾಗಿ ಯಾರನ್ನಾದರೂ ದೂರವಿರಿ. ಶೋಧಕವರ್ಗಕ್ಕೆ ಉತ್ತಮ ಪ್ರಶಂಸೆಯು ಸಿಗಬಹುದು. ಪುಣ್ಯಕ್ಷೇತ್ರ ದರ್ಶನಕ್ಕೆ ಸ್ನೇಹಿತರ ಜೊತೆ ಹೋಗುವ ಮನಸ್ಸಾಗುವುದು. ಸ್ನೇಹಿತರನ್ನು ರಕ್ಷಿಸಲು ಹೋಗಿ ನೀವು ಅಪಾಯಕ್ಕೆ ಸಿಲುಕುವಿರಿ. ಅನಿರೀಕ್ಷಿತ ಧನಲಾಭವು ಸಂತೋಷವನ್ನು ಕೊಡುವುದು. ಸಂಗಾತಿಯ ಮನೋಭಾವವನ್ನು ಅರ್ಥಮಾಡಿಕೊಳ್ಳಲು ಕಷ್ಟಪಡುವಿರಿ. ನಿಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಿ. ಆರ್ಥಿಕವಾಗಿ ಸಬಲರಾಗಲು ಗೌಪ್ಯ ವ್ಯಾಪಾರವನ್ನು ನಡೆಸಬಹುದು. ನಿಮಗೆ ಸಿಗದಿರುವ ವಸ್ತುವು ಯಾರಿಗೂ ಸಿಗಬಾರದು ಎಂಬ ಹಠದ ಸ್ವಭಾವವನ್ನು ಬೆಳೆಸಿಕೊಳ್ಳುವಿರಿ. ತಂತ್ರಜ್ಞರಿಗೆ ಸಿಹಿ ಸುದ್ದಿಯು ಕಾದಿರುವುದು. ನಿಮ್ಮ ಹೊಸ ಪ್ರಯತ್ನಕ್ಕೆ ಕುಟುಂಬದ ಬೆಂಬಲವು ಸಿಗುವುದು. ಅಲ್ಪಾವಧಿಯಲ್ಲಿ ಹೆಚ್ಚು ಪಡೆಯಬೇಕು ಎನ್ನುವ ಅತಿಯಾದ ಆಸೆ ಬೇಡ.

Follow Us
‘ವಸುದೇವ ಕುಟುಂಬ’ ಧಾರಾವಾಹಿ ಸಂಭಾವನೆ ವಿವಾದ: ವಿವರಿಸಿದ ನಟಿ ಚೈತ್ರಾ
‘ವಸುದೇವ ಕುಟುಂಬ’ ಧಾರಾವಾಹಿ ಸಂಭಾವನೆ ವಿವಾದ: ವಿವರಿಸಿದ ನಟಿ ಚೈತ್ರಾ
ಬೆಂಗಳೂರಿನ ಈ ಆಟೋ ಚಾಲಕನಿಗೆ ಆಟೋವೇ ಮನೆ, ಮೆಟ್ರೋ ನಿಲ್ದಾಣವೇ ಆಸರೆ
ಬೆಂಗಳೂರಿನ ಈ ಆಟೋ ಚಾಲಕನಿಗೆ ಆಟೋವೇ ಮನೆ, ಮೆಟ್ರೋ ನಿಲ್ದಾಣವೇ ಆಸರೆ
ಲೋಡ್ ಆಗಿದ್ದ ಬಂದೂಕು ಹಿಡಿದು ಯುವಕರ ಹುಚ್ಚಾಟ! ವಿಡಿಯೋ ವೈರಲ್
ಲೋಡ್ ಆಗಿದ್ದ ಬಂದೂಕು ಹಿಡಿದು ಯುವಕರ ಹುಚ್ಚಾಟ! ವಿಡಿಯೋ ವೈರಲ್
ಇನ್ಫೋಸಿಸ್ ನಾರಾಯಣ ಮೂರ್ತಿ ಹೇಳಿಕೆಗೆ ಹರಿಪ್ರಸಾದ್ ಕೆಂಡಾಮಂಡಲ
ಇನ್ಫೋಸಿಸ್ ನಾರಾಯಣ ಮೂರ್ತಿ ಹೇಳಿಕೆಗೆ ಹರಿಪ್ರಸಾದ್ ಕೆಂಡಾಮಂಡಲ
ಲಾಂಗ್ ವೀಕೆಂಡ್: ಬೆಂಗಳೂರು-ನೆಲಮಂಗಲ ಹೈವೇಯಲ್ಲಿ ಭಾರೀ ಟ್ರಾಫಿಕ್ ಜಾಮ್!
ಲಾಂಗ್ ವೀಕೆಂಡ್: ಬೆಂಗಳೂರು-ನೆಲಮಂಗಲ ಹೈವೇಯಲ್ಲಿ ಭಾರೀ ಟ್ರಾಫಿಕ್ ಜಾಮ್!
ಮಲೆ ಮಹದೇಶ್ವರ ಬೆಟ್ಟದಿಂದ ಬರುತ್ತಿದ್ದ ಬಸ್​​ ಪಲ್ಟಿ: ತಪ್ಪಿದ ಭಾರಿ ಅನಾಹುತ
ಮಲೆ ಮಹದೇಶ್ವರ ಬೆಟ್ಟದಿಂದ ಬರುತ್ತಿದ್ದ ಬಸ್​​ ಪಲ್ಟಿ: ತಪ್ಪಿದ ಭಾರಿ ಅನಾಹುತ
ಯುವತಿ ಬಾಳಲ್ಲಿ 'ಕೈ' ನಾಯಕನ ಚೆಲ್ಲಾಟ?: ದೈಹಿಕ ಸಂಪರ್ಕ ಬೆಳೆಸಿ ವಂಚನೆ ಆರೋಪ
ಯುವತಿ ಬಾಳಲ್ಲಿ 'ಕೈ' ನಾಯಕನ ಚೆಲ್ಲಾಟ?: ದೈಹಿಕ ಸಂಪರ್ಕ ಬೆಳೆಸಿ ವಂಚನೆ ಆರೋಪ
ಬೆಸ್ಕಾಂ ವಿದ್ಯತ್ ದರ ಇಂದಿನಿಂದ ಏರಿಕೆ, ಲಕ್ಷಾಂತರ ಗ್ರಾಹಕರಿಗೆ ಶಾಕ್
ಬೆಸ್ಕಾಂ ವಿದ್ಯತ್ ದರ ಇಂದಿನಿಂದ ಏರಿಕೆ, ಲಕ್ಷಾಂತರ ಗ್ರಾಹಕರಿಗೆ ಶಾಕ್
ಕುರಿ ಪ್ರತಾಪ್ ಈ ಫನ್ ವಿಡಿಯೋ ನೋಡಿದ್ರೆ ನೀವು ನಗೋದು ಪಕ್ಕಾ
ಕುರಿ ಪ್ರತಾಪ್ ಈ ಫನ್ ವಿಡಿಯೋ ನೋಡಿದ್ರೆ ನೀವು ನಗೋದು ಪಕ್ಕಾ
ಕಮರ್ಷಿಲ್ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ಕಾಫಿ ಬೆಲೆ ಗಗನಕ್ಕೇರುತ್ತಾ?
ಕಮರ್ಷಿಲ್ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ಕಾಫಿ ಬೆಲೆ ಗಗನಕ್ಕೇರುತ್ತಾ?