AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನಾವಶ್ಯಕ ಕೊಂಕು ತೆಗೆಯುವವರ ಬಾಯಿ ಮುಚ್ಚಿಸಿದ ‘ಕೆಡಿ’ ಟೀಂ; ‘ಡೆವಿಲ್’ ಹಾದಿಯಲ್ಲಿ ಧ್ರುವ ಸಿನಿಮಾ

ಕೆಡಿ ತಂಡ ಆನ್‌ಲೈನ್ ನೆಗೆಟಿವ್ ವಿಮರ್ಶೆಗಳನ್ನು ತಡೆಯಲು ‘ಡೆವಿಲ್’ ಸಿನಿಮಾ ಮಾರ್ಗ ಅನುಸರಿಸಿದೆ. ಬುಕ್ ಮೈ ಶೋನಲ್ಲಿ ಸಿನಿಮಾಗಳ ರೇಟಿಂಗ್ ಆಯ್ಕೆಯನ್ನು ನಿಷ್ಕ್ರಿಯಗೊಳಿಸಿವೆ. ಈ ತಂತ್ರದಿಂದ ಅನಗತ್ಯ ಫ್ಯಾನ್ ವಾರ್, ಸುಳ್ಳು ವಿಮರ್ಶೆಗಳನ್ನು ತಡೆಗಟ್ಟಲು ಸಾಧ್ಯವಾಗಿದೆ. ಹಲವು ಕನ್ನಡ ಹಾಗೂ ತೆಲುಗು ಸಿನಿಮಾಗಳು ಈಗ ಇದೇ ಮಾದರಿ ಅನುಸರಿಸುತ್ತಿವೆ.

ಅನಾವಶ್ಯಕ ಕೊಂಕು ತೆಗೆಯುವವರ ಬಾಯಿ ಮುಚ್ಚಿಸಿದ ‘ಕೆಡಿ’ ಟೀಂ; ‘ಡೆವಿಲ್’ ಹಾದಿಯಲ್ಲಿ ಧ್ರುವ ಸಿನಿಮಾ
ಧ್ರುವ ಸರ್ಜ
ರಾಜೇಶ್ ದುಗ್ಗುಮನೆ
|

Updated on:May 01, 2026 | 3:12 PM

Share

ಯಾವುದೇ ಬಿಗ್ ಬಜೆಟ್ ಚಿತ್ರ ರಿಲೀಸ್ ಆಗುತ್ತದೆ ಎಂದರೆ ಅದಕ್ಕೆ ಕೊಂಕು ತೆಗೆಯುವವರು ಸಂಖ್ಯೆ ದೊಡ್ಡದಿರುತ್ತದೆ. ಈಗಿನ ಸೋಶಿಯಲ್ ಮೀಡಿಯಾ ಯುಗದಲ್ಲಿ ಇದನ್ನು ತಡೆಯುವುದು ಅಸಾಧ್ಯ. ನಾನಾ ರೀತಿಯ ಪ್ರಯತ್ನಗಳು ನಡೆದು ಕೊನೆಗೆ ಅದು ಸಾಧ್ಯವಾಗದೆ ಕೈ ಬಿಟ್ಟ ಅನೇಕ ಸಿನಿಮಾಗಳಿವೆ. ಆದರೆ, ‘ಡೆವಿಲ್’ ಸಿನಿಮಾ ಈ ಪ್ರಕ್ರಿಯೆಯಲ್ಲಿ ಯಶಸ್ಸು ಕಂಡಿತು. ಈಗ ‘ಕೆಡಿ’ ಸಿನಿಮಾ ಕೂಡ ಇದೇ ಮಾರ್ಗ ಅನುಸರಿಸಿದೆ.

‘ಕೆಡಿ’ ಸಿನಿಮಾ ಏಪ್ರಿಲ್ 30ರಂದು ರಿಲೀಸ್ ಆಯಿತು. ಸಿನಿಮಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪಾಸಿಟಿವ್ ವಿಮರ್ಶೆಗಳು ಸಿಗುತ್ತಿವೆ. ಈ ಮಧ್ಯೆ ಬುಕ್ ಮೈ ಶೋನಲ್ಲಿ ಸಿನಿಮಾಗೆ ರೇಟಿಂಗ್ ಕೊಡುವ ಆಯ್ಕೆಯನ್ನೇ ತೆಗೆಯಲಾಗಿದೆ. ಈ ಮೂಲಕ ‘ಕೆಡಿ’ ಬಗ್ಗೆ ಉದ್ದೇಶಪೂರ್ವಕವಾಗಿ ಕೆಟ್ಟ ವಿಮರ್ಶೆ ಕೊಡಲು ಪ್ಲ್ಯಾನ್ ಮಾಡಿದವರು ಸಂಚು ವಿಫಲವಾಗಿದೆ.

ದರ್ಶನ್ ಅವರು ಜೈಲಿನಲ್ಲಿರುವ ಸಂದರ್ಭದಲ್ಲಿ ‘ಡೆವಿಲ್’ ಚಿತ್ರ ರಿಲೀಸ್ ಆಯಿತು. ಈ ಸಂದರ್ಭದಲ್ಲಿ ಚಿತ್ರಕ್ಕೆ ಕೆಲವರು ಕೆಟ್ಟದನ್ನು ಮಾಡುವ ಭಯ ತಂಡವನ್ನು ಕಾಡಿತ್ತು. ಹೀಗಾಗಿ, ‘ಡೆವಿಲ್’ ಟೀಂ ಕನ್ನಡದ ‘ಐಪ್ಲೆಕ್ಸ್’ ಮೂಲಕ ಕೋರ್ಟ್​​ಗೆ ತೆರಳಿ ಬುಕ್ ಮೈ ಶೋ ರೇಟಿಂಗ್ ಕೊಡದಂತೆ ಆದೇಶ ತಂದಿತ್ತು. ‘ಡೆವಿಲ್’ ಸಿನಿಮಾ ಈ ಪ್ರಯೋಗದಲ್ಲಿ ಯಶಸ್ಸು ಕಾಣುತ್ತಿದ್ದಂತೆ ಅನೇಕರು ಇದೇ ಮಾರ್ಗ ಅನುಸರಿಸಿದರು.

ಸುದೀಪ್ ಅಭಿನಯದ ‘ಮಾರ್ಕ್’, ಅರ್ಜುನ್ ಜನ್ಯ ನಿರ್ದೇಶನದ ‘45’, ಧನ್ವೀರ್ ನಟನೆಯ ‘ಹಯಗ್ರೀವ’ ಸಿನಿಮಾಗಳು ಇದೇ ತಂತ್ರ ಫಾಲೋ ಮಾಡಿದವು. ಈ ಪ್ರಯೋಗ ಅದೆಷ್ಟು ಯಶಸ್ಸು ಕಂಡಿತು ಎಂದರೆ ತೆಲುಗಿನ ‘ಮನ ಶಂಕರ ವರಪ್ರಸಾದ ಗಾರು’, ‘ಅನಗನಗ ಒಕರಾಜು’, ‘ನಾರಿ ನಾರಿ ನಡುಮ ಮುರಾರಿ’, ‘ಫಂಕಿ’, ‘ಕಪಲ್ ಫ್ರೆಂಡ್ಲಿ’ ಕೂಡ ಇದೇ ತಂತ್ರದ ಮೊರೆ ಹೋದವು. ಈಗ ‘ಕೆಡಿ’ ಸಿನಿಮಾಗೂ ಕೂಡ ಬುಕ್ ಮೈ ಶೋ ರೇಟಿಂಗ್ ಆಫ್ ಮಾಡಿಸಲಾಗಿದೆ. ಇದರ ಹಿಂದೆಯೂ ಐಪ್ಲೆಕ್ಸ್​ ಇದೆ ಎನ್ನಲಾಗಿದೆ.

ಇದನ್ನೂ ಓದಿ: ಸುದೀಪ್ ಎಂಟ್ರಿ ಸೂಪರ್, ‘ಕೆಡಿ 2’ ಚಿತ್ರಕ್ಕಾಗಿ ಕಾಯ್ತೀವಿ: ಕಿಚ್ಚನ ಅಭಿಮಾನಿಗಳು ಫುಲ್ ಖುಷ್

ಮುಂದಿನ ದಿನಗಳಲ್ಲಿ ಬಹುತೇಕ ಎಲ್ಲಾ ಸಿನಿಮಾಗಳನ್ನು ಇದನ್ನೇ ಫಾಲೋ ಮಾಡಬಹುದು. ಇದರಿಂದ ಫ್ಯಾನ್ಸ್ ವಾರ್ ತಪ್ಪುತ್ತದೆ. ಅನಾವಶ್ಯಕವಾಗಿ ಸಿನಿಮಾ ಬಗ್ಗೆ ನೆಗೆಟಿವ್ ವಿಮರ್ಶೆ ಹರಡುವುದಕ್ಕೂ ತಡೆ ಬಿದ್ದಂತೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:11 pm, Fri, 1 May 26

Follow Us
ಸಚಿವ ಮಧು ಬಂಗಾರಪ್ಪ ಕ್ಷೇತ್ರದಲ್ಲೇ ತಪ್ಪದ ಬಸ್ ಗೋಳು
ಸಚಿವ ಮಧು ಬಂಗಾರಪ್ಪ ಕ್ಷೇತ್ರದಲ್ಲೇ ತಪ್ಪದ ಬಸ್ ಗೋಳು
ಹೈದರಾಬಾದ್ ಮೆಟ್ರೋದಲ್ಲಿ 'ಟಾಕ್ಸಿಕ್' ಹವಾ; ಯಶ್ ಸಿನಿಮಾಗೆ ಭರ್ಜರಿ ಪ್ರಚಾರ
ಹೈದರಾಬಾದ್ ಮೆಟ್ರೋದಲ್ಲಿ 'ಟಾಕ್ಸಿಕ್' ಹವಾ; ಯಶ್ ಸಿನಿಮಾಗೆ ಭರ್ಜರಿ ಪ್ರಚಾರ
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!
ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ಮಾರ್ಕೆಟ್‌ನಲ್ಲಿ ಜನಸಾಗರ: ಟ್ರಾಫಿಕ್ ಜಾಮ್
ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ಮಾರ್ಕೆಟ್‌ನಲ್ಲಿ ಜನಸಾಗರ: ಟ್ರಾಫಿಕ್ ಜಾಮ್
ಈ ರಾಶಿಯವರಿಗೆ ಗಜಕೇಸರಿ ಯೋಗ, ವೃಶ್ಚಿಕಕ್ಕೆ ಧನಯೋಗ
ಈ ರಾಶಿಯವರಿಗೆ ಗಜಕೇಸರಿ ಯೋಗ, ವೃಶ್ಚಿಕಕ್ಕೆ ಧನಯೋಗ