ಈ ರಾಶಿಯವರು ಪ್ರೀತಿಯಲ್ಲಿ ಒಬ್ಬಳನ್ನು ಕಳೆದುಕೊಂಡರೆ, ಮತ್ತೊಬ್ಬಳು ಸುಂದರಿ ಬರುತ್ತಾಳೆ: ಈ ಎರಡು ಗ್ರಹದ ಕಾರಣದಿಂದ
ಮೇ ತಿಂಗಳು ತುಲಾ ರಾಶಿಗೆ ಮಿಶ್ರ ಫಲಿತಾಂಶಗಳನ್ನು ತರಲಿದೆ. ಗುರುವಿನ ಅನುಗ್ರಹದಿಂದ ಅದೃಷ್ಟ, ಧನಲಾಭ, ಗೌರವ ಹೆಚ್ಚಲಿದೆ. ಆದರೆ ಶನಿ, ಕುಜ, ಬುಧ ಹಾಗೂ ರಾಹು-ಕೇತುವಿನ ಪ್ರಭಾವದಿಂದ ಆರೋಗ್ಯ ಸಮಸ್ಯೆಗಳು, ಮಾನಸಿಕ ಗೊಂದಲಗಳು ಎದುರಾಗಬಹುದು. ನಿತ್ಯ ವ್ಯಾಯಾಮ ಮತ್ತು ಪರಿಹಾರಗಳಿಂದ ಈ ಸವಾಲುಗಳನ್ನು ಎದುರಿಸಿ, ಕೊನೆಗೆ ಶುಭ ಫಲಗಳು ದೊರೆಯಲಿವೆ.

ಈ ತಿಂಗಳಲ್ಲಿ ತುಲಾ ರಾಶಿಯವರಿಗೆ ಗ್ರಹಗತಿಗಳ ಬದಲಾವಣೆ ಮತ್ತು ಅವುಗಳಿಂದ ಉಂಟಾಗುವ ಪ್ರಭಾವದ ಹೇಗಿದೆ ಎಂದು ನೋಡುವುದಾದರೆ, ಶುಕ್ರನ ಆಧಿಪತ್ಯದ ಈ ರಾಶಿಗೆ ಶುಕ್ರನು ಸ್ವಕ್ಷೇತ್ರಲ್ಲಿ, ಅಷ್ಟಮ ಸ್ಥಾನದಲ್ಲಿ ಇರುವನು. ಅಶುಭದ ನಡುವೆ ಸಣ್ಣ ಶುಭಗಳು ನಿಮಗೆ ಗೋಚರಿಸಲಿವೆ. ಗುರುವಿನ ದೃಷ್ಟಿ ನಿಮ್ಮ ರಾಶಿಯ ಮೇಲೆ ಇದ್ದು, ಸಮಸ್ಯೆಗಳು ನಿಮಗೆ ಅರಿವಿಗೆ ಬರದಂತೆ ಮಾಯವಾಗಿಬಿಡುತ್ತವೆ.
ಶುಭ ಫಲ
ಗುರು :
ಮೇ ತಿಂಗಳಿನಲ್ಲಿ ಗುರುವು ನಿಮ್ಮ ರಾಶಿಯಿಂದ ಭಾಗ್ಯ ಸ್ಥಾನವಾದ ನವಮದಲ್ಲಿ ಇದ್ದುದು ಇದು ಅತ್ಯಂತ ಶುಭಕರವಾದ ಬದಲಾವಣೆ. ಅದೃಷ್ಟವು ನಿಮ್ಮ ಕೈಹಿಡಿಯಲಿದೆ. ದೀರ್ಘಕಾಲದ ಸಮಸ್ಯೆಗಳು ಬಗೆಹರಿಯುತ್ತವೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚುತ್ತದೆ, ದೂರದ ಪ್ರಯಾಣದಿಂದ ಲಾಭವಾಗಲಿದೆ ಮತ್ತು ಉನ್ನತ ಶಿಕ್ಷಣ ಪಡೆಯುವವರಿಗೆ ಉತ್ತಮ ಅವಕಾಶಗಳು ಸಿಗಲಿವೆ.
ಶುಕ್ರ :
ನಿಮ್ಮ ರಾಶ್ಯಾಧಿಪತಿ ಶುಕ್ರನು ತನ್ನದೇ ಆದ ವೃಷಭ ರಾಶಿಯಲ್ಲಿ ಸಂಚರಿಸುವುದರಿಂದ ನಿಮಗೆ ಆಂತರಿಕ ಶಕ್ತಿ ನೀಡುತ್ತಾನೆ. ಅನಿರೀಕ್ಷಿತ ಧನಲಾಭ ಅಥವಾ ಪಿತ್ರಾರ್ಜಿತ ಆಸ್ತಿಯಿಂದ ಅನುಕೂಲವಾಗುವ ಸಾಧ್ಯತೆ ಇದೆ. ನಿಮ್ಮ ವ್ಯಕ್ತಿತ್ವದಲ್ಲಿ ಆಕರ್ಷಣೆ ಹೆಚ್ಚುತ್ತದೆ. ಸಂಶೋಧನೆ ಅಥವಾ ಗೂಢ ವಿಷಯಗಳಲ್ಲಿ ಆಸಕ್ತಿ ಇರುವವರಿಗೆ ಇದು ಸುವರ್ಣ ಕಾಲ.
ರವಿ :
ತಿಂಗಳ ಆರಂಭದಲ್ಲಿ ರವಿ ತನ್ನ ಉಚ್ಛ ರಾಶಿಯಾದ ಮೇಷದಲ್ಲಿರುತ್ತಾನೆ. ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಹೊಸ ಪಾಲುದಾರಿಕೆಗಳು ದೊರೆಯಬಹುದು. ಆದರೆ ಸಂಗಾತಿಯೊಂದಿಗೆ ಸಣ್ಣಪುಟ್ಟ ಅಹಂ ಸಂಘರ್ಷಗಳಾಗದಂತೆ ಎಚ್ಚರ ವಹಿಸಿ. ಅಶುಭ ಫಲ
ಶನಿ, ಕುಜ ಮತ್ತು ಬುಧ :
ಈ ಮೂರು ಗ್ರಹಗಳು ನಿಮ್ಮ ರಾಶಿಯಿಂದ ಷಷ್ಠದಲ್ಲಿ ಅಂದರೆ ಶತ್ರು, ರೋಗ, ಋಣ ಸ್ಥಾನವಾಗಿದೆ. ಇದು ಸ್ವಲ್ಪ ಜಾಗರೂಕತೆಯಿಂದ ಇರಬೇಕಾದ ಸಮಯ. ರಕ್ತದೊತ್ತಡ, ಉಷ್ಣ ಸಂಬಂಧಿ ಕಾಯಿಲೆ ಅಥವಾ ಸ್ನಾಯುಗಳ ನೋವು ಕಾಣಿಸಿಕೊಳ್ಳಬಹುದು. ಕೆಲಸದ ಸ್ಥಳದಲ್ಲಿ ಗುಪ್ತ ಶತ್ರುಗಳ ಕಾಟ ಇರಬಹುದು. ಆದರೆ ಶನಿ 6ನೇ ಮನೆಯಲ್ಲಿ ಇರುವುದರಿಂದ ಅಂತಿಮವಾಗಿ ವಿಜಯ ನಿಮ್ಮದೇ ಆಗುತ್ತದೆ. ಅನಗತ್ಯ ಸಾಲ ಮಾಡುವುದನ್ನು ತಪ್ಪಿಸಿ. ರಾಹು-ಕೇತು :
ರಾಹು ಐದನೇ ಮನೆಯಲ್ಲಿ ಮತ್ತು ಕೇತು ಹನ್ನೊಂದನೇ ಮನೆಯಲ್ಲಿ ಇರುವುದರಿಂದ ಮಾನಸಿಕವಾಗಿ ಸ್ವಲ್ಪ ಗೊಂದಲಗಳು ಉಂಟಾಗಬಹುದು. ನಿದ್ರಾಹೀನತೆಯ ಸಮಸ್ಯೆ ಎದುರಾಗಬಹುದು.
ಆರನೇ ಮನೆಯಲ್ಲಿ ಗ್ರಹಗಳ ಸಂಯೋಗದಿಂದ ಪ್ರತಿದಿನ ಪ್ರಾಣಾಯಾಮ ಮತ್ತು ದೈಹಿಕ ವ್ಯಾಯಾಮಕ್ಕೆ ಆದ್ಯತೆ ನೀಡಿ. ಶನಿವಾರದಂದು ದೇವಸ್ಥಾನಕ್ಕೆ ಭೇಟಿ ನೀಡಿ ಎಳ್ಳೆಣ್ಣೆ ದೀಪ ಹಚ್ಚುವುದು ಮತ್ತು ಮಂಗಳವಾರ ಹನುಮಾನ್ ಚಾಲೀಸ್ ಪಠಿಸುವುದು ನಿಮ್ಮ ಸಂಕಷ್ಟಗಳನ್ನು ಕಡಿಮೆ ಮಾಡುತ್ತದೆ. ಗುರುವಿನ ಅನುಗ್ರಹವಿರುವುದರಿಂದ ಹೂಡಿಕೆಗೆ ಇದು ಪೂರಕ ಸಮಯ, ಆದರೆ ಯಾರನ್ನೂ ಅತಿಯಾಗಿ ನಂಬಿ ಹಣ ನೀಡಬೇಡಿ.
ಒಟ್ಟಿನಲ್ಲಿ ಮೇ ತಿಂಗಳು ನಿಮಗೆ ಏಳುಬೀಳುಗಳ ನಡುವೆಯೂ ಭಾಗ್ಯೋದಯವನ್ನು ನಿರೀಕ್ಷಿಸಬಹುದು.
– ಲೋಹಿತ ಹೆಬ್ಬಾರ್
Published On - 5:47 pm, Thu, 30 April 26




