Astrology: ಈ ರಾಶಿಯವರ ಹಣದ ವ್ಯವಹಾರ ಶುಭವಾಗುವ ದಿನ
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸ ಕೃಷ್ಣ ಪಕ್ಷದ ಚತುರ್ದಶೀ / ಅಮಾವಾಸ್ಯಾ ತಿಥಿ, ಭಾನುವಾರ ಪರರಿಂದ ಪ್ರೇರಣೆ, ದುರಭ್ಯಾಸದಿಂದ ಆತಂಕ, ಮೌನವೇ ಕಲಹಕ್ಕೆ ಕಾರಣ ಇವೆಲ್ಲ ಈ ದಿನದ ಭವಿಷ್ಯ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ವಸಂತ, ಸೌರ ಮಾಸ: ಮೇಷ ಮಾಸ, ಮಹಾನಕ್ಷತ್ರ: ಅಶ್ವಿನೀ, ಮಾಸ: ಚೈತ್ರ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ಚತುರ್ದಶಿ/ ಅಮಾವಾಸ್ಯಾ, ನಿತ್ಯನಕ್ಷತ್ರ: ಅಶ್ವಿನೀ, ಯೋಗ: ವಿಷ್ಕಂಭ, ಕರಣ: ವಣಿಜ, ಸೂರ್ಯೋದಯ – 06:13 am, ಸೂರ್ಯಾಸ್ತ – 06: 47 pm, ಇಂದಿನ ಶುಭಾಶುಭಕಾಲ: ರಾಹು ಕಾಲ 17:13 – 18:47, ಯಮಘಂಡ ಕಾಲ 12:30 – 14:05, ಗುಳಿಕ ಕಾಲ 15:39 – 17:13
ಮೇಷ ರಾಶಿ: ಹಣವನ್ನು ಉಳಿಸಿಕೊಳ್ಳಲು ಹೂಡಿಕೆಯ ಅನಿವಾರ್ಯ. ನೀವು ಎಲ್ಲ ಕಾರ್ಯವನ್ನು ಪಾರದರ್ಶಕತೆಯಿಂದ ಇರಲು ಬಯಸುವಿರಿ. ಕಳೆದುಕೊಂಡಿದ್ದರ ಕುರಿತು ಚಿಂತಿಸುತ್ತ ಭವಿಷ್ಯವನ್ನು ಹಾಳುಮಾಡಿಕೊಳ್ಳಬೇಡಿ. ಅಪ್ರಚೋದಿತ ಮಾತುಗಳಿಂದಬ ಗೆಲವು. ಉತ್ತಮವಾದ ಮಾರ್ಗದ ಅನ್ವೇಷಣೆಯಲ್ಲಿ ಇರುವಿರಿ. ಮುಖ್ಯಸ್ಥರನ್ನು ಖುಷಿಪಡಿಸಲು ಧಾರಾಳ ಖರ್ಚು ಮಾಡಬಹುದು. ಹಳೆಯ ಕೌಟುಂಬಿಕ ಸಮಸ್ಯೆಗಳಿಗೆ ನ್ಯಾಯ ವ್ಯವಸ್ಥೆಯ ದಾರಿ ಉಪಯುಕ್ತವಾಗಬಹುದು. ಇತರರ ಅಭಿಪ್ರಾಯವನ್ನೂ ಪರಿಗಣಿಸಿ. ನಿಮ್ಮ ಕೆಲಸದ ಪರಿಣತಿಯಿಂದ ಜವಾಬ್ದಾರಿಗಳು ಹೆಚ್ಚುವುದು. ಹಣದ ಹರಿವು ನಿಮ್ಮ ಉತ್ಸಾಹವನ್ನು ಕುಂಠಿತಗೊಳಿಸದು. ಹತ್ತಿರವಿದ್ದಾಗ ಮಾತ್ರ ಗೊತ್ತಾಗುತ್ತದೆ. ನಿಮ್ಮ ಯೋಗ್ಯತೆ ತಕ್ಕ ಕೆಲಸವು ಸಿಗಲಿದ್ದು ಇನ್ನೊಬ್ಬರನ್ನು ಹೋಲಿಕೆ ಮಾಡುತ್ತ ನಿಮ್ಮ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುವುದು ಬೇಡ. ಕೆಲಸಕ್ಕಾಗಿ ನೀವು ಹಾಕಿಕೊಂಡ ಸಮಯವು ವ್ಯತ್ಯಸವಾಗುವುದು. ಒಂಟಿಯಾಗಿ ಎಲ್ಲಿಗಾದರೂ ಹೋಗುವ ಮನಸ್ಸಾಗುವುದು.
ವೃಷಭ ರಾಶಿ: ವಿಶ್ವಾಸಾರ್ಹ ವ್ಯವಹಾರದಿಂದ ಅಧಿಕ ಲಾಭ. ಯಾರ ಮಾತನ್ನು ಒಪ್ಪಿದರೂ ನಿಮ್ಮ ಆಲೋಚನೆಯನ್ನು ಬದಲಾಯಿಸುವುದಿಲ್ಲ. ತಂದೆಯಿಂದ ಧನವು ವಿಳಂಬವಾಗಿ ಬರಬಹುದು. ಅನ್ಯರ ಕುಮ್ಮಕ್ಕಿನಿಂದ ನ್ಯಾಯಾಲಯದ ಅಲೆದಾಟವನ್ನು ಮಾಡಿ ಹಣವನ್ನು ವ್ಯರ್ಥಮಾಡಿಕೊಳ್ಳಬೇಡಿ. ತಂದೆಯ ಆರೋಗ್ಯದ ಬಗ್ಗೆ ನಿಮ್ಮ ಅಧಿಕಾರದ ಗರ್ವವನ್ನು ಪಕ್ಕಕ್ಕಿರಿಸಿ. ಸಂಬಂಧ ಬಲವಾಗಿಸಲು ಪ್ರೀತಿಯವರಿಗೆ ಸಮಯ ಮೀಸಲಿಡಿ. ಕೆಲಸದ ಒತ್ತಡದಲ್ಲಿ ಸಹಜವಾಗಿ ದೂಡಲ್ಪಡುವಿರಿ. ಹೊಸದಾಗಿ ಪ್ರೀತಿಯನ್ನು ವ್ಯಕ್ತಪಡಿಸಿ. ಮನಸೋ ಇಚ್ಛೆ ವ್ಯವಹಾರಕ್ಕೆ ಕಡಿವಾಣ ಹಾಕುವುದು ಸೂಕ್ತ. ಸಿಟ್ಟನ್ನು ಅಲ್ಪ ಸಮಯದಲ್ಲಿ ಶಮನ ಮಾಡಿಕೊಂಡು ಯಥಾಸ್ಥಿತಿಗೆ ಬರುವಿರಿ. ಹಳೆಯದನ್ನು ಹೊಸತನ್ನಾಗಿ ಮಾಡಿಕೊಳ್ಳುವ ಬಗ್ಗೆ ಯೋಚಿಸಿ. ಸಮಾರಂಭಗಳಿಗೆ ಆಹ್ವಾನ ಸಿಕ್ಕಿ ಸಂತಸ. ವಿದ್ಯಾರ್ಥಿಗಳು ಕೌಶಲಕ್ಕೆ ಪ್ರಶಂಸೆ ಲಭ್ಯವಾಗುವುದು. ಸಹೋದರರ ನಡುವೆ ಸೌಹಾರ್ದತೆ ಇರಲಿದೆ. ನಿಮ್ಮ ಮೇಲಿಟ್ಟ ನಂಬಿಕೆಯನ್ನು ಕಷ್ಟಪಟ್ಟು ಉಳಿಸಿಕೊಳ್ಳಬೇಕಾದೀತು.
ಮಿಥುನ ರಾಶಿ: ನಿಮ್ಮ ಕೆಲಸವೇ ನಿಮಗೆ ಹೆಮ್ಮೆ ತರುವುದು. ಇಂದು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಬೇರಡ ಕಡೆ ಹೋಗುವುದು ಅನಿವಾರ್ಯ ಆಗಬಹುದು. ತಂದೆಯಿಂದ ಯಾವುದೋ ಕಾರ್ಯಕ್ಕೆ ಧನವನ್ನು ನಿರೀಕ್ಷಿಸುವಿರಿ. ಎಂತಹ ಆರೋಪವನ್ನೂ ಗೆಲ್ಲುವುದು ನಿಮಗೆ ಗೊತ್ತಿದೆ. ಉದ್ಯೋಗದಲ್ಲಿ ತೊಂದರೆ ಬಂದರೂ ನಿರೀಕ್ಷೆಯ ಬೆಳಕು ಕಾಣುವಿರಿ. ಸುತ್ತಲಿರುವ ಜನರಿಂದ ದೂರವಿರಿ, ಅವರ ಮಾತುಗಳಿಗೆ ಕಿವಿಗೊಡಬೇಡಿ. ಮೋಸದ ಆಟದಿಂದ ಎಚ್ಚರಿಕೆಯಿಂದಿರಿ. ಭವಿಷ್ಯದ ಚಿಂತೆ ಖಿನ್ನತೆಗೆ ದಾರಿ ಮಾಡಬಹುದು. ಸಾಮಾಜಿಕ ಕಾರ್ಯದಿಂದ ಗೌರವವನ್ನು ಪಡೆಯಲಿದ್ದೀರಿ. ಸಹೋದರ ನಡುವೆ ನಡೆಯುತ್ತಿದ್ದ ಶೀಲತಲ ಸಮರವು ಇಂದು ಸ್ಫೋಟವಾಗಬಹುದು. ಮಧ್ಯವರ್ತಿಗಳ ಸಹಾಯದಿಂದ ಶಾಂತವಾಗಲಿದೆ. ಧಾರ್ಮಿಕ ಕಾರ್ಯವನ್ನು ನಿರ್ಮಲ ಮನಸ್ಸಿನಿಂದ ಮಾಡುವಿರಿ. ಯಾರ ಜೊತೆಯೂ ಮಿತಿಮೀರಿದ ಸಲುಗೆ ಬೇಡ. ಆಪ್ತರು ನಿಮ್ಮನ್ನು ಬಿಡಬಹುದು. ಕೆಲವು ಔದ್ಯೋಗಿಕ ಸಮಸ್ಯೆಯನ್ನು ಮೇಲಧಿಕಾರಿಗಳ ಮೂಲಕ ಬಗೆ ಹರಿಸಿಕೊಳ್ಳಿ. ನಿಮ್ಮ ನೋವಿಗೆ ಯಾರಾದರೂ ಸ್ಪಂದಸುವರು.
ಕರ್ಕಾಟಕ ರಾಶಿ: ಏಳು ಬೀಳುಗಳು ಹೊಸತಲ್ಲದಿದ್ದರೂ ಒಮ್ಮೊಮ್ಮೆ ಆತಂಕ ನುಸುಳುವುದು. ಇಂದು ನೀವು ಕಛೇರಿಯ ಕಾರಣಕ್ಕೆ ಪರ ಊರಿಗೆ ಹೋಗಬೇಕಾಗಿ ಬರಬಹುದು. ಹಸಿವಿನಿಂದ ನಿಮಗೆ ಇಂದು ಕಷ್ಟವಾಗುವುದು. ಭೂಮಿ ದಾಖಲೆಗಳು ಬದಲಾಗಬಹುದು. ಫಲವನ್ನು ನಿರೀಕ್ಷಿಸದೇ ಕಾರ್ಯವನ್ನು ಮಾಡಿ. ಹಳೆಯ ವ್ಯಕ್ತಿಯೊಂದಿಗೆ ಮತ್ತೆ ಸಂಪರ್ಕ ಆಗಬಹುದು. ಈ ಬದಲಾವಣೆ ನಿಮ್ಮ ಜೀವನದಲ್ಲಿ ಹೊಸ ಬೆಳಕು ತರುತ್ತದೆ. ಅದೃಷ್ಟ ಸಹಾಯ ಮಾಡಲಿದೆ. ಆದರೆ ಸ್ವಲ್ಪ ಪ್ರಯತ್ನವೂ ಬೇಕಾಗುತ್ತದೆ. ಹೊಸ ವ್ಯಕ್ತಿಗಳ ಭೇಟಿಯಿಂದ ಆರ್ಥಿಕ ಸಹಾಯದ ಹಲವು ಯೋಜನೆಗಳು ಮುನ್ನಡೆಯುತ್ತವೆ. ವ್ಯಾಪರದಲ್ಲಿ ನಷ್ಟವನ್ನು ಅನುಭವಿಸಬೇಕಾಗಬಹುದು. ವಿಘ್ನನಿವಾರಕನಿಗೆ ನಮಸಿ ಕಾರ್ಯವನ್ನು ಆರಂಭಿಸಿ. ವ್ಯಾವಹಾರಿಕ ಜಂಜಾಟವು ನಿಮ್ಮ ಉದ್ವೇಗಕ್ಕೆ ಕಾರಣವಾಗುವುದು. ನೀವು ಇಂದು ಯಾವುದೇ ಅಪೇಕ್ಷೆ ಇಲ್ಲದೇ ಕೆಲಸವನ್ನು ಮಾಡಲಾರಿರಿ. ಸ್ಥಿರಾಸ್ತಿಯ ಭಾಗವನ್ನು ಉಳಿಸಿಕೊಳ್ಳುವುದು ಕಷ್ಟವಾಗುವುದು. ರಾಜಕೀಯ ಹುಚ್ಚುತನ ಬೇಡ.
ಸಿಂಹ ರಾಶಿ: ನಿಮ್ಮ ಗುರಿಗೆ ಸಾಧನವಾದ ಎಲ್ಲರನ್ನೂ ಗೌರವಿಸುವಿರಿ. ಉದ್ಯೋಗದಲ್ಲಿ ನಿಮಗೆ ಬದಲಾವಣೆ ಬೇಕು ಎನಿಸುವುದು. ಅಪರಿಚಿತ ದೂರವಾಣಿಯ ಕರೆಯಿಂದ ನಿಮಗೆ ಲಾಭವಾಗುವುದು. ವಿದೇಶದ ವ್ಯಾಪಾರದ ಕುರಿತು ಚರ್ಚಿಸುವಿರಿ. ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯುವುದು ಉತ್ತಮ. ನಿಮ್ಮ ಕಷ್ಟಕ್ಕೆ ಆದವರೇ ಜೊತೆಯಲ್ಲಿ ಇರುವರು. ಸಂಬಂಧಗಳಲ್ಲಿ ನಿಷ್ಠೆ ಹಾಗೂ ಪ್ರಾಮಾಣಿಕತೆ ಇತರರ ನಂಬಿಕೆಗೆ ಕಾರಣವಾಗುತ್ತದೆ. ನಿಮ್ಮ ಆತ್ಮಸಾಕ್ಷಿಯಂತೆ ನಡೆದುಕೊಳ್ಳಿ. ದೇಹ ಮತ್ತು ಮನಸ್ಸಿಗೆ ವಿಶ್ರಾಂತಿಯನ್ನು ಕೊಡುವುದನ್ನು ಮರೆಯದಿರಿ. ಒತ್ತಡ ಹೆಚ್ಚಾದಾಗ ವಿಶ್ರಾಂತಿಯೇ ಮದ್ದು. ಪರಸ್ಥಳವಾಸವು ಎದುರಾಗಬಹುದು. ರಾಜಕಾರಣವನ್ನು ವೃತ್ತಿಯಾಗಿ ನೀವು ಸ್ವೀಕರಿಸುವ ಸಾಧ್ಯತೆ ಇದೆ. ಹೊಸ ವಾಹನದ ಖರೀದಿಯಿಂದ ಸಂತೋಷವಾಗುವುದು. ನಿಮ್ಮ ಸ್ವಭಾವವನ್ನು ದುರುಪಯೋಗ ಮಾಡಿಕೊಳ್ಳಬಹುದು. ನಿಮ್ಮ ಮೌನವು ಕುಟುಂಬದಲ್ಲಿ ಭಯವನ್ನು ಉಂಟುಮಾಡೀತು. ನಿರಂತರ ಕಾರ್ಯದಿಂದ ದೇಹಕ್ಕೆ ಆಯಾಸವಾಗಬಹುದು. ಸುಖಜೀವನದ ನಿರೀಕ್ಷೆಯಲ್ಲಿ ಇರುವಿರಿ.
ಕನ್ಯಾ ರಾಶಿ: ಯಾವುದನ್ನೂ ಪೂರ್ಣಮನಸ್ಸಿನಿಂದ ಮಾಡಲಾರಿರಿ. ಇಂದು ನೀವು ದಾಂಪತ್ಯದಲ್ಲಿ ಕಲಹ ಸಹಜವೆಂದು ಸುಮ್ಮನಿರಬೇಡಿ. ಮರ್ಯಾದೆಯನ್ನು ಉಳಿಸಿಕೊಳ್ಳುವುದು ಕಷ್ಟವಾದೀತು. ಹಿರಿಯರಿಂದ ಅವಮಾನವಾಗುವ ಸಾಧ್ಯತೆ ಇದೆ. ಹಣದ ವ್ಯವಹಾರ ಶುಭವಾಗುವ ದಿನ. ನಿಮ್ಮ ಮಾತುಗಳು ಗುಣಮಟ್ಟದ್ದಾಗಿರಲಿ. ಸಂಗಾತಿಯೊಂದಿಗೆ ಗೌಪ್ಯ ವಿಷಯ ಹಂಚಿಕೆ ವೇಳೆ ಎಚ್ಚರಿಕೆ ಇರಲಿ. ಪ್ರೇಮ ನಿಖರತೆ ನೀಡುತ್ತದೆ. ಸ್ನೇಹಿತರಿಂದ ವೃತ್ತಿಯಲ್ಲಿ ಬೆಂಬಲ ಸಿಗಲಿದೆ. ಸಂಗಾತಿಯೊಂದಿಗೆ ಸಮಯ ಕಳೆಯುವುದು ಸಂತೋಷ ತಂದೀತು. ಇಂದು ನಿಮ್ಮನ್ನು ಕಂಡರೆ ಸಮಸ್ಯೆಗಳು ಬಂದಂತೆ ಕಾಣಬಹುದು. ತಾಳ್ಮೆ ಬೇಕು. ಸಮಯವು ಎಲ್ಲವನ್ನೂ ಸರಿ ಮಾಡುತ್ತದೆ. ನೀವಾಗಿಯೇ ಕೆರೆದು ಮಾಯದ ಹುಣ್ಣನ್ನು ಮಾಡಿಕೊಳ್ಳಬೇಡಿ. ಕೇವಲ ಕೊರತೆಯನ್ನು ನೀವು ಹೆಚ್ಚು ಚಿಂತಿಸುವಿರಿ. ವ್ಯಾಪರದ ನಷ್ಟಕ್ಕೆ ಸಮಸ್ತ ತಂತ್ರವನ್ನು ಮಾಡುವಿರಿ. ಅತಿಯಾದ ಕೋಪದ ಕಾರಣ ನೀವು ಒಂಟಿಯಾಗಬೇಕಾದೀತು. ಕಹಿ ಘಟನೆಯನ್ನು ಮರೆಯಲು ಬಹಳ ಶ್ರಮ ಪಡುವಿರಿ. ವಿದ್ಯಾಭ್ಯಾಸದಲ್ಲಿ ಹಿನ್ನಡೆಯನ್ನು ಕಾಣಲಿದ್ದು ಕುಟುಂಬದಲ್ಲಿ ಅಸಮಾಧಾನ ಇರಲಿದೆ.
