Daily Horoscope 29 August 2024: ಮಕ್ಕಳ ವಿಚಾರದಲ್ಲಿ ನಿಮಗೆ ದೂರುಗಳು ಬರಬಹುದು
ಆಗಸ್ಟ್ 29, 2024ರ ನಿಮ್ಮ ರಾಶಿಭವಿಷ್ಯ: ಮಕ್ಕಳ ವಿಚಾರದಿಂದ ನಿಮಗೆ ದೂರುಗಳು ಬರಬಹುದು. ನಿಮ್ಮ ಉದ್ಯೋಗದ ನಿಮಗೆ ಅಸಮಾಧಾನ ಇರಲಿದೆ. ಎಲ್ಲರ ಜೊತೆ ಬೆರೆಯಲು ಇಚ್ಛಿಸಿದರೂ ನಿಮ್ಮನ್ನು ಯಾರೂ ಸೇರಿಸಿಕೊಳ್ಳರು. ವ್ಯಾಪಾರದ ಚಿಂತೆಯಲ್ಲಿ ನಿಮ್ಮನ್ನು ನೀವು ಮರೆಯುವಿರಿ. ಹಾಗಾದರೆ ಆಗಸ್ಟ್ 29ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.
ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2024 ಆಗಸ್ಟ್ 29) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ಶ್ರಾವಣ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಪುರ್ವಸು, ಯೋಗ: ಹರ್ಷಣ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:45 ಗಂಟೆ, ರಾಹು ಕಾಲ ಮಧ್ಯಾಹ್ನ 02:06 ರಿಂದ 03:39, ಯಮಘಂಡ ಕಾಲ ಬೆಳಗ್ಗೆ 06:22 ರಿಂದ 07:54ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:27 ರಿಂದ 11:00ರ ವರೆಗೆ.
ಮೇಷ ರಾಶಿ: ಇಂದು ಶ್ರಮಪಟ್ಟು ಮಾಡಿದ ಕೆಲಸವು ಕೊನೆಯ ಕ್ಷಣದಲ್ಲಿ ಹಾಳಾಗಬಹುದು. ಎಂದೋ ಬಳಸಿದ್ದನ್ನು ಇಂದು ಪಡೆಯುವಿರಿ. ನಿರುದ್ಯೋಗವು ನಿಮ್ಮ ಮನಸ್ಸಿಗೆ ಬಹಳ ಕಿರಿಕಿರಿಯಾಗಲಿದೆ. ಆಸಕ್ತಿಕರ ವಿಚಾರವನ್ನು ನೀವು ಇನ್ನೊಬ್ಬರ ಬಳಿ ಹೇಳಿಕೊಳ್ಳುವಿರಿ. ನಿಮ್ಮ ಮೇಲೆ ಕೆಲವು ಆಕ್ಷೇಪಗಳು ಬರಬಹುದು. ಕಾರ್ಯದಲ್ಲಿ ಶ್ರದ್ಧೆಯು ಕಾರಣಾಂತರಗಳಿಂದ ಕಡಿಮೆ ಆಗಬಹುದು. ಕಾಲ ಕಳೆದರು ಕರ್ಮ ಕಳೆಯದು. ತಿಳಿವಳಿಕೆಯ ಕೊರತೆಯಿಂದ ನೀವು ಕಷ್ಟಪಡಬೇಕಾದೀತು. ಏನೇ ಹೇಳಿದರೂ ನಿಮಗೆ ಬೇಕಾದುದನ್ನೇ ಮಾಡುವಿರಿ. ಹಿತಶತ್ರುಗಳಿಂದ ಕೆಲವು ವಿಚಾರಕ್ಕೆ ತೊಂದರೆಯಾಗಲಿದೆ. ಆರ್ಥಿಕವಾಗಿ ನಿಮ್ಮ ಅಲ್ಪ ವೃದ್ಧಿಯು ಸಂತಸವನ್ನು ಕೊಡಲಿದೆ. ದಾಂಪತ್ಯದಲ್ಲಿ ಕಲಹವಿದ್ದರೂ ತಣ್ಣಗಾಗಿ ಹೊಂದಾಣಿಕೆಯಿಂದ ಮುಂದುವರಿಯುವಿರಿ. ಸಣ್ಣ ವ್ಯಾಪರಿಗಳಿಗೆ ಪ್ರೋತ್ಸಾಹವು ಸಿಗಲಿದೆ. ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಮನೆಯಿಂದ ದೂರ ಕಳಿಸುವಿರಿ. ಭಿನ್ನಾಭಿಪ್ರಾಯಗಳನ್ನು ಸರಿಮಾಡಿಕೊಂಡು ಕುಟುಂಬವನ್ನು ನಡೆಸಬೇಕಾಗುವುದು.
ವೃಷಭ ರಾಶಿ; ಇಂದು ನಿಮ್ಮ ಹಣವು ಯಾವುದೋ ಒಂದು ರೀತಿಯಲ್ಲಿ ಖರ್ಚಾಗುವ ಸಾಧ್ಯತೆ ಇದ್ದು, ಅದನ್ನು ನಿಭಾಯಿಸಿ. ದೇವರ ಉಪಾಸನೆಯಲ್ಲಿ ಆಲಸ್ಯವು ಅಧಿಕವಾಗುವುದು. ನಿಮ್ಮ ಮಾತಿನಿಂದ ಇನ್ನೊಬ್ಬರಿಗೆ ಬೇಸರಗವಾಗಲಿದ್ದು ಗೊತ್ತಾದ ಕೂಡಲೆ ಅದನ್ನು ನಿಲ್ಲಿಸಿ. ನಿಯಮ ಉಲ್ಲಂಘನೆ ಮಾಡಿ ದಂಡ ತುಂಬುವಿರಿ. ಉದ್ಯೋಗದಿಂದ ಕೆಲವರನ್ನು ಕೈ ಬಿಡುವಿರಿ. ನಿಮಗೆ ಸಿಗುವ ಅವಕಾಶಗಳು ಬೇರೆಯವರ ಪಾಲಾಗಬಹುದು. ಯಾವುದನ್ನೂ ಅಂದಿಕೊಂಡಷ್ಟು ಸುಲಭವಾಗಿ ಮಾಡಲಾಗದು. ಅತಿಯಾದ ಉತ್ಸಾಹದಲ್ಲಿರುವ ನಿಮಗೆ ಮನೆಯವರ ಮಾತು ಉತ್ಸಾಹ ಭಂಗವನ್ನು ಮಾಡುವ ಸಾಧ್ಯತೆ ಇದೆ. ಹಳೆಯ ಸ್ನೇಹಿತರನ್ನು ಭೇಟಿ ಮಾಡಿ ಸಹಾಯವನ್ನು ನೀವು ಕೇಳುವಿರಿ. ಆರೋಗ್ಯವನ್ನು ನೀವು ನಿರ್ಲಕ್ಷಿಸುವಿರಿ. ಸಾಮಾನ್ಯರಂತೆ ಅಸಾಮಾನ್ಯತೆಯನ್ನು ತೋರಿಸುವಿರಿ. ಅತಿಯಾದ ಮನೆಯ ಕೆಲಸದಿಂದ ಆಯಾಸವಾಗಬಹುದು. ನಿಮ್ಮ ಹೆಜ್ಜೆಗಳೆಲ್ಲ ಗುರುತಾಗಬೇಕು ಎಂದರೆ ಸಾಧ್ಯವಾಗದು. ಅನಿರೀಕ್ಷಿತ ವಾರ್ತೆಯನ್ನು ನೀವು ನಂಬಲಾರಿರಿ.
ಮಿಥುನ ರಾಶಿ; ಯೋಚನೆಯ ದಿಕ್ಕನ್ನು ಬದಲಿಸದರೆ ತೊಂದರೆಗಳಿಗೆ ಉತ್ತರವೂ ಸಿಗಲಿದೆ. ಇಂದು ಸರಿ ಮಾಡಲು ಸಾಧ್ಯವಾಗದಷ್ಟು ನಿಮ್ಮ ಮನಸ್ಸು ಕೆಡಲಿದೆ. ಲೆಕ್ಕಾಚಾರದ ವಿಷಯದಲ್ಲಿ ನೀವು ಹಿಂದುಳಿದಿರುವುದು ಎಲ್ಲರಿಗೂ ಗೊತ್ತಾಗುವುದು. ಸುಮ್ಮನೇ ಇಲ್ಲದ ನೆಪವನ್ನು ಹೇಳಿ ಕೆಲಸದಿಂದ ತಪ್ಪಿಸಿಕೊಳ್ಳುವಿರಿ. ಪ್ರಯಾಣದಲ್ಲಿ ಸುಖವಿರಲಿದೆ. ದಾಂಪತ್ಯದಲ್ಲಿ ಸಣ್ಣ ಮನಸ್ತಾಪಗಳು ಬಂದರೂ ಅಲ್ಲಿಯೇ ಶಾಂತವಾಗುವುದು. ಧಾರ್ಮಿಕ ಆಸಕ್ತಿಯು ಇಂದು ಕಡಿಮೆ ಇರಲಿದೆ. ವಿದ್ಯಾರ್ಥಿಗಳು ಗೊಂದಲವನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸುವಿರಿ. ಇಂದಿನ ಕೆಲಸವನ್ನು ಮುಗಿಸುವಾಗ ಸಂತೃಪ್ತಿ ಇರಲಿದೆ. ಭೂ ವ್ಯವಹಾರದಲ್ಲಿ ನಿಮ್ಮ ಯೋಜನೆಯ ಫಲಿಸುವುದು. ಉದ್ಯೋಗದಲ್ಲಿ ನಿಮ್ಮ ಸ್ಥಾನಕ್ಕೆ ಬರಲು ಯಾರಾದರೂ ಕಾಯುತ್ತಿರಬಹುದು. ಹಿತಶತ್ರುಗಳ ಕಿರುಕುಳವನ್ನು ನೀವು ಸಹಿಸಲಾರಿರಿ. ಯಾರ ಮೇಲಿನ ಸಿಟ್ಟಿಗೆ ನೀವೇ ಹತಾಶರಾಗುವಿರಿ.
ಕರ್ಕಾಟಕ ರಾಶಿ: ಇಂದು ನಿಮ್ಮ ಮನೆಯ ಹಿರಿಯರ ಸೇವೆಯಿಂದ ನೆಮ್ಮದಿ ಸಿಗುವುದು. ನೀವು ಯಾರದ್ದಾದರೂ ಬಾಯಿಗೆ ವಿಷಯವಾಗಬಹುದು. ಮನಸ್ಸಿಗೆ ಬಂದಂತೆ ಮಾತಮಾಡದೇ ಅರ್ಥವತ್ತಾದ ಮಾತುಗಳನ್ನು ಅಡುವುದು ಒಳ್ಳೆಯದು. ಕಛೇರಿಯಲ್ಲಿ ನಿಮ್ಮ ಮಾತುಗಳಿಗೆ ಅನಾದರವು ಸಿಗಲಿದೆ. ರಾಜಕೀಯ ಮಾಡುವವರೆಗೆ ಆತುರತೆ ಇರುವುದು ಕಷ್ಟ. ತಂತ್ರಜ್ಞರಾಗಿದ್ದರೆ ನಿಮಗೆ ಉದ್ಯೋಗವನ್ನು ಬಹಳ ಜಾಗರೂಕತೆಯಿಂದ ಮಾಡಬೇಕಾದೀತು. ದುಃಖದ ವಿಷಯವನ್ನು ನೀವು ಧೈರ್ಯವಾಗಿ ಕೇಳುವಿರಿ. ಸೊಂಟ ಭಾಗದ ಪೀಡೆಯಿಂದ ನಿಮಗೆ ಕಷ್ಟವಾದೀತು. ನಿಮಗೆ ಇಷ್ಟವಲ್ಲದ ವಿಷಯವನ್ನು ಒತ್ತಾಯಿಸಿದರೂ ಮಾಡಲು ಹೋಗುವುದಿಲ್ಲ. ಯಾರ ಜೊತೆಗೂ ನಿಮ್ಮ ವರ್ತನೆಯು ಸಹಜತವಾಗಿ ಇರದು. ಯಂತ್ರಗಳ ಕೆಲಸವು ನಿಮಗೆ ಸಾಕೆನಿಸಬಹುದು. ಆಸ್ತಿಯ ವಿಚಾರದಲ್ಲಿ ಆಕಸ್ಮಿಕ ತಿರುವು ಬರಬಹುದು. ಯಾವುದನ್ನೇ ಆದರೂ ಮಿತಿಯಲ್ಲಿ ಬಳಸಿದರೆ ಉತ್ತಮ.
ಸಿಂಹ ರಾಶಿ; ಬದಲಾದ ನಿಮ್ಮ ವ್ಯಕ್ತಿತ್ವವೇ ನಿಮಗೆ ಅಚ್ಚರಿ ಮೂಡಿಸಬಹುದು. ನಿಮಗೆ ಕೇಳಿದ ಬಂದು ಮಾತುಗಳು ಅಪಮಾನಕರವಾಗಿದ್ದು ಏನನ್ನಾದರೂ ಮಾಡಬೇಕು ಎಂಬ ಹಂಬಲವು ಅತಿಯಾಗುವುದು. ಹಿರಿಯರ ಹಿತಕ್ಕಾಗಿ ನೀವು ನಿಮ್ಮ ಕಾರ್ಯಗಳನ್ನು ಬದಲಿಸಬೇಕಾಗುವುದು. ಮಕ್ಕಳ ವಿಚಾರದಿಂದ ನಿಮಗೆ ದೂರುಗಳು ಬರಬಹುದು. ನಿಮ್ಮ ಉದ್ಯೋಗದ ನಿಮಗೆ ಅಸಮಾಧಾನ ಇರಲಿದೆ. ಎಲ್ಲರ ಜೊತೆ ಬೆರೆಯಲು ಇಚ್ಛಿಸಿದರೂ ನಿಮ್ಮನ್ನು ಯಾರೂ ಸೇರಿಸಿಕೊಳ್ಳರು. ವ್ಯಾಪಾರದ ಚಿಂತೆಯಲ್ಲಿ ನಿಮ್ಮನ್ನು ನೀವು ಮರೆಯುವಿರಿ. ನಿಮ್ಮ ಮಾನಸಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಕೆಲವರಿಗೆ ಕಷ್ಟವಾದೀತು. ಅತಿಯಾದ ನಂಬಿಕೆಯಿದ ನಿಮ್ಮ ಇಂದಿನ ಕೆಲಸವು ಬೇರೆ ರೂಪ ಪಡೆದುಕೊಳ್ಳುವುದು. ಅತಿಯಾದ ಆಸೆಯಿಂದ ಮೋಸ ಹೋಗಬೇಕಾಗಬಹುದು. ಎಚ್ಚರಿಕೆ ಇಂದ ವ್ಯವಹರಿಸಿ. ಪ್ರೇಮವು ನಿಮಗೆ ಬಂಧನವಾಗಿ ಕಾಣಿಸುವುದು.
ಕನ್ಯಾ ರಾಶಿ; ಇಂದು ಮಾಡುವ ಕಾರ್ಯವು ನಿಮ್ಮ ಕುಟುಂಬಕ್ಕೆ ಯೋಗ್ಯವಾದ ಹೆಸರನ್ನು ತಂದುಕೊಡುವುದು. ಕೊಟ್ಟ ಮಾತಿಗೆ ಸರಿಯಾಗಿ ನಡೆದುಕೊಳ್ಳಬೇಕಾಗುವುದು. ಸಿಗದೇ ಇರುವುದರ ಬಗ್ಗೆ ನಿಮಗೆ ಮೋಹ ಬೇಡ. ಇನ್ನೂ ಉತ್ತಮವಾದುದು ಸಿಗುತ್ತದೆ ಎಂಬ ಭರವಸೆಯನ್ನು ಇಟ್ಟುಕೊಳ್ಳಿ. ಅತಿಥಿಗಳಿಗೆ ಸತ್ಕಾರವನ್ನು ನೀವು ಮಾಡುವಿರಿ. ಮನಸ್ಸು ಶಾಂತವಾಗುವುದು. ಕೋಪವನ್ನು ಕಡಿಮೆ ಮಾಡಿಕೊಂಡರೂ ಇನ್ನಷ್ಟು ತಾಳ್ಮೆ ಅವಶ್ಯಕ. ನಿಮ್ಮಮನಸ್ಸಿಗೆ ಬಾರದೇ ನೀವು ಏನನ್ನೂ ಕೊಡಲು ಹೋಗಬೇಡಿ. ಇಂದು ಕೊಡುವ ಅಶ್ರದ್ಧೆಯ ದಾನವೂ ನಿಷ್ಪ್ರಯೋಜನವಾಗುವುದು. ನಿಮ್ಮಿಂದ ಆಗದ್ದು ಯಾರಿಂದಲೂ ಆಗದು ಎಂಬ ತೀರ್ಮಾನಬೇಡ. ದಿನವನ್ನು ಬೇರೆ ರೀತಿಯಲ್ಲಿ ಕಳೆಯಲು ಬಯಸುವಿರಿ. ನಿಮ್ಮ ಬೆಳವಣಿಗೆತಿಂದ ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ. ವೈದ್ಯವೃತ್ತಿಯಲ್ಲಿ ಒತ್ತಡವಿರುವುದು. ನೀವು ಕಷ್ಟವನ್ನೂ ಸಂತೋಷದಿಂದ ಕಳೆಯುವಿರಿ. ನಿಮ್ಮ ಹೊಸ ವಸ್ತುಗಳನ್ನು ಬಳಸಲು ಮನಸ್ಸು ಹಿಂಜರಿಯುವುದು.
ತುಲಾ ರಾಶಿ: ಇಂದು ನಿಮಗೆ ಒಳ್ಳೆಯತನಕ್ಕೆ ಯಾವ ಫಲವಿಲ್ಲ ಎಂಬ ಬೇಸರವಾಗಬಹುದು. ಇಷ್ಟವಿಲ್ಲದಿದ್ದರೂ ಕೆಲವನ್ನು ನೀವು ಮಾಡಬೇಕಾಗಿಬರಬಹುದು. ಎಲ್ಲ ನಿರರ್ಥಕ ಎನ್ನುವ ಭಾವನೆಯು ನಿಮ್ಮಲ್ಲಿ ಬರಬಹುದು. ನೀವು ದುಃಖದ ಅನಂತರ ಸುಖವಿದೆ ಎಂಬ ಕಾರಣಕ್ಕೆ ಎಲ್ಲ ನೋವನ್ನೂ ಸಹಿಸಿಕೊಳ್ಳುವಿರಿ. ನಿಮ್ಮ ಅಸಾಮರ್ಥ್ಯವನ್ನು ಒಪ್ಪಿಕೊಳ್ಳಲಾರಿರಿ. ಸಂಸಾರದಲ್ಲಿ ಸಾರವಿಲ್ಲ ಎನ್ನಿಸಬಹುದು. ಭೂಮಿಯ ವ್ಯವಹಾರವು ಅಲ್ಪಮಟ್ಟಿಗೆ ಲಾಭ ಮಾಡುವುದು. ಕಾನೂನಿನ ಮಾರ್ಗದಲ್ಲಿ ನಿಮ್ಮ ಎಲ್ಲ ಕೆಲಸಗಳೂ ಇರಲಿ. ಎಷ್ಟು ಹೇಳಿದರೂ ಅರ್ಥವಾಗದ ವಿಷಯವು ಒಂದು ಘಟನೆಯ ಮೂಲಕ ಅರ್ಥವಾದೀತು. ಹೂಡಿಕೆಯಿಂದ ಮೋಸಹೋಗುವ ಸಾಧ್ಯತೆ ಇದೆ. ಹಣಕಾಸಿನ ವಿಚಾರಕ್ಕೆ ಸಂಗಾತಿಯ ಜೊತೆ ಮಾತಾಗಬಹುದು. ಇಂದು ಮನೋರಂಜನೆಯಿಂದ ನಿಮಗೆ ಸಮಾಧಾನ ಸಿಗಲಿದೆ. ಕೆಲವು ವಿಚಾರಗಳಿಗೆ ಸುಮ್ಮನೇ ಪ್ರತಿಕ್ರಿಯೆ ನೀಡಬೇಕಿಲ್ಲ. ನಿಮ್ಮ ನಿರ್ಧಾರಗಳೇ ನಿಮಗೆ ಅಸಮಾಧಾನ ಕೊಡಬಹುದು.
ವೃಶ್ಚಿಕ ರಾಶಿ; ಭವ್ಯ ಗೃಹದ ಕನಸನ್ನು ಯಾರ ಬಳಿಯಾದರೂ ಹೇಳಿಕೊಳ್ಳುವಿರಿ. ಮಕ್ಕಳ ಮೇಲೆ ಅಕ್ಕರೆ ಬಂದೀತು. ವಿರೋಧಿಗಳ ನಡೆಯೇ ನೀವು ನಿಮ್ಮ ನಡೆಯನ್ನು ಬಿಡಲು ಒಪ್ಪುವುದಿಲ್ಲ. ಕಾರ್ಯಗಳನ್ನು ಹಂಚಿಕೆ ಮಾಡಿ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ನಿಮ್ಮ ಎಲ್ಲ ಕೆಲಸಗಳೂ ಸಮಯಕ್ಕೆ ಸರಿಯಾಗಿ ಮುಗಿಸಿಕೊಳ್ಳುವುದು ಕಷ್ಟವಾಗುವುದು. ಸಹೋದರಿಯ ಮಾತನಲ್ಲಿ ನಿಮಗೆ ಕುಹಕವಿರುವುದು ಗೊತ್ತಾಗಿ ಜಗಳವಾಡುವಿರಿ. ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸಲು ಇಚ್ಛಿಸುವಿರಿ. ನಿಮ್ಮ ಕೆಲಸದಲ್ಲಿ ಮತ್ತಷ್ಟು ಒತ್ತಡ ಇರಲಿದೆ. ಸಮಾಜಮುಖೀ ಕೆಲಸಗಳನ್ನು ನೀವು ನಿಲ್ಲಿಸುವಿರಿ. ಎಲ್ಲವೂ ನಿಮ್ಮಿಂದಲೇ ಆಗಿದೆ ಎಂಬ ಭಾವವಿರುವುದು. ನೀವು ಕಳೆದ ದಿನಗಳನ್ನು ಅವಲೋಕನ ಮಾಡಿ ಸಂತಸಗೊಳ್ಳುವಿರಿ. ಆಲಸ್ಯದಿಂದ ಮಾಡಬೇಕಾದ ಕೆಲಸವನ್ನು ಮಾಡದೇ ಇರುವಿರಿ. ಯಾರದೋ ಮಾತನ್ನು ನೀವು ನಿಮ್ಮದಾಗಿಸಿಕೊಳ್ಳುವಿರಿ. ಪ್ರವಾಸ ಹೋಗುವ ಮನಸ್ಸಾದೀತು. ಅಧಿಕಾರಿಗಳು ನಿಮ್ಮ ಉದ್ಯಮವನ್ನು ಪರಿಶೀಲಿಸಬಹುದು.
ಧನು ರಾಶಿ; ಇಂದು ನಿಮ್ಮ ನಡತೆಯು ಸಾಮಾನ್ಯರಂತೆ ಕಂಡರೂ ಪ್ರಭಾವವು ಅಧಿಕವಾಗಿರುತ್ತದೆ. ಮುಖ್ಯ ಸ್ಥಾನದಿಂದ ಕೆಲಗೆ ಇಳಿಯುವ ಸಂದರ್ಭವು ಬರಬಹುದು. ಬಹಳ ದಿನಗಳ ಅನಂತರ ನಿಮಗೆ ಒಳ್ಳೆಯ ಪ್ರೀತಿ ದೊರೆಯಲಿದೆ. ಇದು ನಿಮ್ಮ ಸಂತೋಷವನ್ನು ಹೆಚ್ಚು ಮಾಡುವುದು. ಕುಟುಂಬ ಹಲವಾರು ಕೆಲಸಗಳಿದ್ದರೂ ಅತ್ತ ಗಮನ ಹೋಗುವುದು ಕಷ್ಟವಸದೀತು. ನಕಾರಾತ್ಮಕ ಆಲೋಚನೆಗಳು ನಿಮಗೆ ಸಹಜವಾಗಿ ಇರಲಿದೆ. ನಿಮ್ಮ ಸಾಮರ್ಥ್ಯವನ್ನು ತೋರಿಸಲು ಸಕಾಲವಲ್ಲ. ನಿಮಗೆ ಗೊತ್ತಿಲ್ಲದ ನಿಮ್ಮದೇ ಸಂಗತಿಗಳು ನಿಮಗೆ ಅಚ್ಚರಿಯನ್ನು ತಂದುಕೊಟ್ಟೀತು. ದುರದೃಷ್ಟಕ್ಕೆ ಕಾರಣವನ್ನು ಹುಡುಕಿ ಪ್ರಯೋಜನವಿಲ್ಲ. ಅಧಿಕಾರಯುತವಾದ ಮಾತುಗಳನ್ನು ಕಡಿಮೆ ಮಾಡಿ, ಸಹಜವಾಗಿ ಮಾತನಾಡಿ ಕೆಲಸವನ್ನು ಮಾಡಿಸಿಕೊಳ್ಳಿ. ಒತ್ತಡಗಳು ಎಂದಿಗಿಂತ ಕಡಿಮೆ ಇರಲಿವೆ. ಇಲ್ಲವಾದರೆ ಅಜೀರ್ಣವಾದೀತು. ಆಕಸ್ಮಿಕವಾಗಿ ಧನಲಾಭವು ನಿಮಗೆ ಆಶ್ಚರ್ಯವನ್ನು ಉಂಟುಮಾಡಬಹುದು. ಬೇಕಾದುದನ್ನು ಬೇಕಾದಷ್ಟೇ ಬಳಸಿ.
ಮಕರ ರಾಶಿ; ನಿಮ್ಮ ಕಾರ್ಯದ ದಕ್ಷತೆಯಿಂದ ಉನ್ನತ ಸ್ಥಾನವು ಸಿಗುವುದು. ನಿಮ್ಮ ಸಣ್ಣ ಕಾರ್ಯವನ್ನೂ ದೊಡ್ಡದಾಗಿ ಬಿಂಬಿಸುವಿರಿ. ಭಾವಪರಶವಾರಾಗಿ ಇಂದು ನಿಮ್ಮ ಸುಖ, ದುಃಖಗಳನ್ನು ಹೇಳಿಕೊಳ್ಳುವಿರಿ. ದಿನವನ್ನು ಉತ್ತಮವಾಗಿಸಿಕೊಳ್ಳಲು ನೀವು ಬಯಸುವಿರಿ. ಎಲ್ಲರ ಜೊತೆ ಪ್ರೀತಿಯಿಂದ ಮಾತನಾಡಲು ಇಷ್ಟಪಡುವಿರಿ. ನಿಮ್ಮ ಭಾವನೆಗಳಿಗೆ ಬೆಲೆ ಕೊಡುವವರನ್ನು ಹೆಚ್ಚು ಇಷ್ಟಪಡುವಿರಿ. ಸ್ವಾರ್ಥವನ್ನು ಬಿಟ್ಟು ಕೆಲಸ ಮಾಡಿದರೆ ಹೆಚ್ಚು ಒಳ್ಳೆಯದು. ಇದರಿಂದ ನಿಮ್ಮನ್ನು ಇಷ್ಟಪಡುವವರ ಸಂಖ್ಯೆ ಹೆಚ್ಚಾಗಬಹುದು. ಇನ್ನೊಬ್ಬರ ಕೆಲಸವನ್ನು ಮಾಡಿಕೊಡಲು ಭಯವಾಗಬಹುದು. ಸಂಪತ್ತನ್ನು ಸದುಪಯೋಗ ಮಾಡಿಕೊಳ್ಳಲು ಮಾರ್ಗವನ್ನು ಹುಡುಕಿಕೊಳ್ಳಿ. ಮಕ್ಕಳ ಸಾಧನೆಯು ಖುಷಿ ಕೊಡುವುದು. ಕೆಲಸವು ಅಪೂರ್ಣವಾಗಿ ನೀವು ಆದಷ್ಟು ಬೇಗ ಮುಗಿಸುವ ತವಕದಲ್ಲಿ ಇರುವಿರಿ. ದಾಂಪತ್ಯದ ವಿರಸವು ಬಗೆ ಹರಿಯಬಹುದು. ಕೌಟುಂಬಿಕ ಹಿನ್ನೆಲೆ ನಿಮಗೆ ಸಹಕಾರಿಯಾಗಲಿದೆ.
ಕುಂಭ ರಾಶಿ: ಇಂದು ನಿಮ್ಮವರ ಅವಶ್ಯಕತೆ ತಿಳಿಯುವುದು. ಸಂಗಾತಿಯನ್ನು ಬಿಟ್ಟು ಇರುವುದು ನಿಮಗೆ ಕಷ್ಟಕರವಾದೀತು. ನಿಮ್ಮನ್ನು ಮಾತುಗಳಿಂದ ಪೀಡಿಸಬಹುದು. ಆದರೆ ಇಂದು ಮೌನವೇ ಹೆಚ್ಚು ಪ್ರಿಯವಾದೀತು. ನಿಮ್ಮ ಎರಡು ಬಗೆಯ ಮನಃಸ್ಥಿತಿಯು ಕೆಲವರಿಗೆ ಇಷ್ಟವಾಗದೇ ಹೋದೀತು. ಗುಂಪುಗಾರಿಕೆಯಿಂದ ನಿಮ್ಮಲ್ಲಿ ಕಲಹವಾಗುವುದು. ಕುಟುಂಬದ ಹತ್ತಿರದವರನ್ನು ಕಳೆದುಕೊಳ್ಳಬಹುದು. ಕುಟುಂಬದ ಆಪ್ತರಲ್ಲಿ ನಿಮ್ಮ ಮನಸ್ಸನ್ನು ಹಂಚಿಕೊಳ್ಳುವಿರಿ. ದಾಂಪತ್ಯದಲ್ಲಿ ಮಕ್ಕಳ ಕಾರಣದಿಂದ ಸಂತೋಷವನ್ನು ಕಾಣುವಿರಿ. ಕಾನೂನಿಗೆ ಸಂಬಂಧಿಸಿದ ವಿಚಾರಕ್ಕೆ ನಿಮಗೆ ಕೆಲವು ಸಂದೇಶಗಳನ್ನು ನಿವಾರಿಸಿಕೊಳ್ಳುವಿರಿ. ನಿಮ್ಮ ಸಮಸ್ಯೆಗೆ ಪರಿಹಾರ ಸಿಗದಿದ್ದರೂ ಸಮಾಧಾನವಂತೂ ಸಿಗಲಿದೆ. ಅವರಿಗೆ ಬೇಸರವಾಗುವಂತೆ ನೋಡಿಕೊಳ್ಳಬೇಡಿ. ಅಪರಿಚಿತರ ಜೊತೆ ಜಗಳವಾಡಿ ಸಮಯವನ್ನು ವ್ಯರ್ಥ ಮಾಡುವಿರಿ. ಕಾರ್ಯದಿಂದ ಪರಿಣತಿಯನ್ನು ಪಡೆಯುವಿರಿ. ಪ್ರೀತಿಗೆ ಯೋಗ್ಯರನ್ನು ಹುಡುಕುವಿರಿ.
ಮೀನ ರಾಶಿ; ಇಂದು ನೀವು ಭೂಮಿಯ ವಿಚಾರವಾಗಿ ಕಲಹವನ್ನು ಮಾಡುವಿರಿ. ಕಡಿಮೆ ಸ್ನೇಹಿತರನ್ನು ಹೊಂದಿದ್ದರೂ ಅವರನ್ನು ಬಹಳ ಚೆನ್ನಾಗಿ ಇಟ್ಟುಕೊಳ್ಳುವಿರಿ. ವಿದ್ಯೆಯೇ ನಿಮಗೆ ನೆರವಾಗುವುದು. ಅನಗತ್ಯ ಕಾರ್ಯಗಳತ್ತ ಮನಸ್ಸು ಹೋದರೂ ಮತ್ತೆ ಕಾರ್ಯದಲ್ಲಿ ಮಗ್ನರಾಗಿರಿ. ಸಂಗಾತಿಯು ನಿಮ್ಮ ಹಳೆಯ ವಿಚಾರವನ್ನು ಮತ್ತೆ ನೆನಪಿಸಿ ಮುಜುಗರವನ್ನು ಉಂಟುಮಾಡುವಳು. ಕೆಲಸದ ಸ್ಥಳದಲ್ಲಿ ಕೆಲವು ಕೆಲಸಗಳನ್ನು ಹೆಚ್ಚುವರಿಯಾಗಿ ಮಾಡಬೇಕಾದೀತು. ನಿರುದ್ಯೋಗದ ಬಿಸಿಯು ನಿಮಗೆ ತಟ್ಟಬಹುದು. ಪ್ರಣಯದ ವಿಚಾರವನ್ನು ನೀವು ನಿರ್ಲಜ್ಜೆಯಿಂದ ಹೇಳಿಕೊಳ್ಳುವಿರಿ. ನಿರೀಕ್ಷಿಸಿದಂತೆ ಎಲ್ಲವೂ ನಡೆಯುವುದು ಕಷ್ಟವಾದೀತು. ಅಧಿಕ ನಿರೀಕ್ಷೆಯನ್ನು ಬಿಟ್ಟುಬಿಡುವುದು ಒಳ್ಳೆಯದು. ದಾಂಪತ್ಯದಲ್ಲಿ ನೆಮ್ಮದಿ ಇಲ್ಲದೇ ಪರಸ್ಪರ ಕಲಹವಾಗಬಹುದು. ಹಿರಿಯರಿಂದ ಯೋಗ್ಯ ಸಲಹೆಯನ್ನು ಪಡೆದು ಮುಂದುವರಿಯಿರಿ. ನಿಮ್ಮಿಂದ ಸಹಾಯ ಪಡೆಯಲು ನಿಮ್ಮನ್ನು ಹೊಗಳುವರು. ಮನೆಯ ಸಮಸ್ಯೆಗೆ ಪರಿಹಾರ ಕಾಣುವಲ್ಲಿ ಜೀವನ ಸಂಗಾತಿಯು ಸಂಪೂರ್ಣ ಬೆಂಬಲವು ಇರುವದು.
ಲೋಹಿತ ಹೆಬ್ಬಾರ್ – 8762924271 (what’s app only)