Horoscope: ಈ ರಾಶಿಯವರು ಸಂಬಂಧವಿಲ್ಲದ ವಿಚಾರದಲ್ಲಿ ಹಣವನ್ನು ಕಳೆದುಕೊಳ್ಳುವಿರಿ
ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ಡಿಸೆಂಬರ್ 02) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.
ಇಂದಿನ ರಾಶಿ ಭವಿಷ್ಯ (Horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ಡಿಸೆಂಬರ್ 02) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಅನೂರಾಧಾ, ಮಾಸ: ಕಾರ್ತಿಕ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಪುಷ್ಯಾ, ಯೋಗ: ಬ್ರಹ್ಮ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 43 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 00 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:33 ರಿಂದ 10:57 ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 01:47 ಗಂಟೆ 03:11 ನಿಮಿಷಕ್ಕೆ, ಗುಳಿಕ ಕಾಲ ಬೆಳಗ್ಗೆ 06:43 ರಿಂದ 08:08ರ ವರೆಗೆ.
ಸಿಂಹ ರಾಶಿ : ನೂತನ ಮಿತ್ರರ ಆಗಮನವಾಗಲಿದೆ. ಮನೋರಂಜನೆ ಕಾರ್ಯಕ್ರಮದಲ್ಲಿ ಭಾಗವಹಿಸುವಿರಿ. ನಿಮ್ಮನ್ನು ನಿಂದಿಸುವವರಿಗೆ ಉತ್ತರವನ್ನು ಕೆಲಸದ ಮೂಲಕ ತಿಳಿಸುವಿರಿ. ಮನೆಯಲ್ಲಿ ಬಂಧುಗಳ ಸಮಾಗಮದಿಂದ ಸಂತೋಷವಾಗುವುದು. ದಿನ ಮಾನಸಿಕ ಒತ್ತಡದಿಂದ ನೀವು ಹೊರಬರಲು ಕಷ್ಟವಾದೀತು. ಮನೋರಂಜನೆಯಲ್ಲಿ ನೀವು ಪಾಲ್ಗೊಳ್ಳುವಿರಿ. ಖರ್ಚಿನ ಮೇಲೆ ನಿಯಂತ್ರಣ ಸಾಧಿಸಬೇಕೆಂದಿದ್ದರೂ ಮತ್ತೆಲ್ಲೋ ಹರಿದು ಹೋಗುವುದು. ಅನವಶ್ಯಕ ಮಾತುಗಳನ್ನು ನಿಲ್ಲಿಸಿ. ವೈವಾಹಿಕ ಜೀವನದ ಸುಖವು ಸಪ್ಪೆ ಎನಿಸಬಹುದು. ಭೂಮಿಯ ವ್ಯವಹಾರಕ್ಕೆ ಯಾರ ಜೊತೆಗಾದರೂ ಸೇರಿಕೊಳ್ಳುವಿರಿ. ನಿಮ್ಮ ಗುಣಮಟ್ಟವನ್ನು ಕಾಯ್ದುಕೊಳ್ಳಲು ಪ್ರಯತ್ನಿಸುವಿರಿ. ಮಕ್ಕಳನ್ನು ಪಡೆಯುವ ಬಯಕೆ ಇರುವುದು. ಆರೋಗ್ಯದಲ್ಲಿ ವ್ಯತ್ಯಾಸವಾಗಿ ವೈದ್ಯರ ಸಲಹೆಯನ್ನು ಪಡೆದುಕೊಳ್ಳುವಿರಿ. ನೂತನ ವಸ್ತುಗಳ ಖರೀದಿಯನ್ನು ನೀವು ಮಾಡುವಿರಿ.
ಕನ್ಯಾ ರಾಶಿ : ಇಂದು ಎಲ್ಲರ ಮೇಲೂ ಅನುಮಾನದಿಂದಲೇ ಇರುವಿರಿ. ನೀವು ಕೊಟ್ಟ ಭರವಸೆಯನ್ನು ಪೂರ್ಣ ಮಾಡಲಾಗದು. ಇಷ್ಟದ ವಸ್ತುವನ್ನು ಖರೀದಿಸಿ ಅದನ್ನು ಸರಿಯಾಗಿ ಉಳಿಸಿಕೊಳ್ಳುವಿರಿ. ಜಾಣ್ಮೆಯು ಇಂದು ನಿಮ್ಮ ಉಪಯೋಗಕ್ಕೆ ಬರುವುದು. ಸ್ತ್ರೀಯರು ಅವರಿಗೆ ಬೇಕಾದ ಕಾರ್ಯವನ್ನು ಬಹಳ ನಾಜೂಕಿನಿಂದ ಮಾಡಿಸಿಕೊಳ್ಳುವರು. ಸಾರ್ವಜನಿಕ ಕ್ಷೇತ್ರದಲ್ಲಿ ಇಂದು ಹೆಚ್ಚು ಕಾಣಿಸಿಕೊಳ್ಳುವಿರಿ. ವ್ಯಾಪರದಲ್ಲಿ ಗ್ರಾಹಕರ ಜೊತೆ ಕಲಹವಾಗುವ ಸಾಧ್ಯತೆ ಇದೆ. ಅತಿಯಾದ ಪ್ರೀತಿಯಿಂದ ನಿಮಗೇ ತೊಂದರೆಯಾಗುವುದು. ಹಣದ ಸಂಪಾದನೆಗೆ ವಿವಿಧ ಮಾರ್ಗಗಳು ಇದ್ದರೂ ಅದಾವುದೂ ನಿಮಗೆ ಸರಿ ಕಾಣಿಸದು. ಇಡೀ ದಿನದ ನಿಮ್ಮ ಶ್ರಮವು ವ್ಯರ್ಥವಾಗಬಹುದು. ಸ್ನೇಹ ಬಳಗವನ್ನು ದೊಡ್ಡದಾಗಿಸಿಕೊಳ್ಳುವಿರಿ. ನಿರ್ಮಾಣದ ಕಾರ್ಯವು ಬಹಳ ನಿಧಾನವಾಗುವುದು. ನಿಮಗಾಗದ ಕೆಲಸವನ್ನು ಬೇರೆಯವರು ಮಾಡುವರು.
ತುಲಾ ರಾಶಿ : ಆರೋಗ್ಯವನ್ನು ನೀವು ಅತಿಯಾಗಿ ನಿರ್ಲಕ್ಷಿಸುವಿರಿ. ಶ್ರದ್ಧೆಯಿಲ್ಲದ ಕೆಲಸವನ್ನು ನೀವು ಮಾಡಬೇಕಾಗುವುದು. ನಿಮ್ಮ ಸುಳ್ಳು ವದಂತಿಗಳು ಹರಡುವುದು. ನಿರ್ಮಾಣ ವ್ಯವಸ್ಥೆಯಲ್ಲಿ ಇರುವವರಿಗೆ ಸ್ವಲ್ಪ ಹಿನ್ನಡೆಯಾಗಲಿದೆ. ಹಳೆಯ ವಸ್ತುಗಳ ಮೇಲೆ ನಿರ್ಮೋಹವುಂಟಾಗುವುದು. ಸಂಬಂಧವಿಲ್ಲದ ವಿಚಾರದಲ್ಲಿ ನೀವು ಹಣವನ್ನು ಕಳೆದುಕೊಳ್ಳುವಿರಿ. ದುರಭ್ಯಾಸವು ಅತಿಯಾಗಿ ಮನೆಯಲ್ಲಿ, ಬಂಧುಗಳಿಂದ ನಿಮಗೆ ನಿಂದನೆಯಾಗಲಿದೆ. ಯಾರದೋ ಮಾತನ್ನು ಕೇಳಿ ಇಂದು ಕುಟುಂಬದವರ ಜೊತೆ ಕಲಹವಾಡುವಿರಿ. ಮನೆಯ ಆಡಳಿತವನ್ನು ನೋಡಿಕೊಳ್ಳುವ ಸಂದರ್ಭವು ಬರಬಹುದು. ನಿಮ್ಮ ತಿಳಿವಳಿಕೆಯನ್ನೇ ಪೂರ್ಣ ಸತ್ಯ ಎಂದು ತಿಳಿಯುವುದು ಬೇಡ. ಸಂಗಾತಿಗೆ ನಿಮ್ಮ ನಡವಳಿಕೆಯಲ್ಲಿ ವ್ಯತ್ಯಾಸವು ಕಾಣಿಸುವುದು. ನಿಮ್ಮ ಸಮಯವನ್ನು ಸದುಪಯೋಗ ಮಾಡಿಕೊಳ್ಳುವ ದಾರಿ ಹುಡುಕಿ.
ವೃಶ್ಚಿಕ ರಾಶಿ : ಆಪ್ತರಿಂದಲೇ ವಂಚನೆಯಾಗಬಹುದು. ಇದನ್ನು ತಿಳಿದು ಬೇಸರಗೊಳ್ಳುವಿರಿ. ಪ್ರಯಾಣದಿಂದ ಹಿಂದಿರುಗುವ ಸಂದರ್ಭವು ಬರಬಹುದು. ಪ್ರಾಣಿಗಳಿಂದ ನಿಮಗೆ ಇಂದು ಭೀತಿ ಎದುರಾಗಬಹುದು. ವಾಹನದ ಕಾರಣಕ್ಕೆ ಮನೆಯಲ್ಲಿ ಕಲಹವಾಗಬಹುದು. ಹೂಡಿಕೆಯಿಂದ ನಿಮಗೆ ಲಾಭಾಂಶವು ಸಿಗುವುದು. ವಿದ್ಯಾರ್ಥಿಗಳು ಓದಿನ ಬಗ್ಗೆ ಹೆಚ್ಚು ಆಸಕ್ತಿ ಇದ್ದರೂ ಓದಿ ಜೀರ್ಣಿಸಿಕೊಳ್ಳಲು ಆಗದು. ಲೆಕ್ಕಪತ್ರದ ವಿಚಾರದಲ್ಲಿ ಪಾರದರ್ಶಕತೆ ಇರಲಿ. ಯಾರನ್ನೋ ಸಂಶಯಿಸುತ್ತ ಕುಳಿತುಕೊಳ್ಳುವಿರಿ. ನಿಮ್ಮ ಮನಸ್ಸಿಗೆ ತೋಚಿದ್ದನ್ನು ಹೇಳಬೇಕಾದಲ್ಲಿ ಮಾತ್ರ ಹೇಳಿ. ಇಂದಿನ ನಿಮ್ಮ ವ್ಯವಹಾರವು ಅಧಿಕವಾದ ಯಾವ ಲಾಭವನ್ನೂ ತಂದುಕೊಡದು. ಶಿಸ್ತನ್ನು ರೂಢಿಸಿಕೊಳ್ಳುವ ಅನಿವಾರ್ಯತೆ ಎದುರಾದೀತು. ಯಾವುದನ್ನೂ ಕುರುಡಾಗಿ ನಂಬುವುದು ಬೇಡ. ಧಾರ್ಮಿಕ ವಿಚಾರದಲ್ಲಿ ನಂಬಿಕೆಯನ್ನು ಕಳೆದುಕೊಳ್ಳುವಿರಿ.