ದಿನ ಭವಿಷ್ಯ: ಇಂದು ಈ ರಾಶಿಯವರು ಮನೆಯ ಆರ್ಥಿಕ ಹೊಣೆಯನ್ನು ಹೊರಬೇಕಾಗುತ್ತದೆ…

Horoscope Today 24 August: ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಶುಕ್ಲ ಪಕ್ಷದ ದ್ವಾದಶೀ ತಿಥಿಯ ಸೋಮವಾರದಂದು ಸಹಾಯದ ಸಾರ್ಥಕತೆ, ಬಿಡುಗಡೆಯ ಭಾಗ್ಯ, ಸಂಪಾದನೆಯ ಅನಿವಾರ್ಯತೆ, ವ್ಯಾಪರ ಬದಲು, ಹಣಕ್ಕೆ ಚಿಂತೆ, ಉದ್ಯೋಗದಲ್ಲಿ ಭೀತಿ, ಅತಿಥಿ ಸತ್ಕಾರ ಇವೆಲ್ಲ ಇಂದಿನ ವಿಶೇಷ.

ದಿನ ಭವಿಷ್ಯ: ಇಂದು ಈ ರಾಶಿಯವರು ಮನೆಯ ಆರ್ಥಿಕ ಹೊಣೆಯನ್ನು ಹೊರಬೇಕಾಗುತ್ತದೆ...
ದಿನ ಭವಿಷ್ಯ
Edited By:

Updated on: Aug 24, 2026 | 12:22 AM

ಮೇಷ ರಾಶಿ:

ನಿಮ್ಮ ಮಾತು ಇತರರಿಗೆ ನೋವನ್ನು ಕೊಡಬಹುದು. ಆದಾಯದ ವಿಚಾರದಲ್ಲಿ ನಿಮಗೆ ಹತ್ತಾರು ಯೋಚನೆಗಳು ಬಂದರೂ ಅದನ್ನು ಕ್ರಮಬದ್ಧಗೊಳಿಸಲು ಪ್ರಯತ್ನಿಸಿ. ನಿಮ್ಮ ತಾಳ್ಮೆಯು ನಿಮಗೆ ಸಹಕಾರ ನೀಡುವುದು. ನಿರ್ಮಾಣಕ್ಕೂ ಅದರ ಖರ್ಚಿಗೂ ಸರಿಯಾದ ತಳೆ ಸಿಗದು. ಯಾರನ್ನೂ ಗೆಲ್ಲುವೆನು ಎಂಬ ಹುಂಬುತನ ಬೇಡ. ದೂರಾಗುವರನ್ನು ಬಿಟ್ಟುಕೊಡುವಿರಿ. ಸಿಟ್ಟಗೊಂಡು ಮಾತನಾಡಬೇಕಾದ ಅವಶ್ಯಕತೆ ಇಲ್ಲ. ಸಮಾಧಾನಚಿತ್ತರಾಗಿ ಮಾತನಾಡಿ.

ವೃಷಭ ರಾಶಿ:

ನಿಮಗೆ ಸಾಲ ಕೊಡಲು ಯಾರಾದರೂ ಮುಂದೆಬರಬಹುದು. ನಿಮ್ಮ ವಿವೇಕವು ಸರಿಯಾಗಿ ಇರಲಿ. ನಿಮ್ಮವರನ್ನೇ ನೀವು ನಂಬದ ಸ್ಥಿತಿಯಲ್ಲಿ ಇರಬಹುದು. ನಿಮ್ಮ ಸಿಟ್ಟು ಇಂದು ಕಾಣಿಸಿಕೊಳ್ಳದೇ ಇದ್ದೀತು. ನಿಮ್ಮದೇ ಬದ್ಧತೆಯನ್ನು ನೀವು ಬಿಟ್ಟುಕೊಡಲಾರಿರಿ. ಅನ್ನಿಸಿದ್ದನ್ನು ನೀವು ಇನ್ನೊಬ್ಬರಿಗೆ ಹೇಳುವಾಗ ತಡೆಯುವಿರಿ. ನಿಮ್ಮ ಕೈಲಾದ ಸಹಾಯವನ್ನು ಮಾಡಬೇಕಾದೀತು. ಅಂದುಕೊಂಡಿದ್ದನ್ನು ಸಾಧಿಸಲಾಗದು ಎಂಬ ಅಳುಕು ನಿಮ್ಮಲ್ಲಿ ಇರುವುದು.

ಮಿಥುನ ರಾಶಿ:

ಸಾಮಾಜಿಕ ಕಾರ್ಯದಲ್ಲಿ ತಾರತಮ್ಯವನ್ನು ತೋರಿಸುವುದು ಬೇಡ. ಎಲ್ಲವನ್ನೂ ಮಾತಿನಿಂದಲೇ ಬಗೆಹರಿಸಲಾಗದು. ನೀವು ನಿಮ್ಮ ಹಳೆಯ ದಿನಗಳನ್ನು ನೆನಪಿಸಿಕೊಳ್ಳುವಿರಿ. ನಿಮಗೆ ಅದು ಬಹಳ ಆಪ್ತವಾಗಲಿದೆ. ಯಾರ ಶ್ರೇಯಸ್ಸನ್ನಾದರೂ ಬಯಸಿದರೆ, ವೈಯಕ್ತಿಕವಾಗಿ ಅದನ್ನು ಮಾಡಿ. ಏನೂ ಗೊತ್ತಿಲ್ಲದೇ ಯಾರ ಪರ ವಹಿಸುವ ಅಗತ್ಯವಿರದು. ಯಾರ‌ ಮಾತನ್ನೂ ಕೇಳದೇ ನಿಮ್ಮದೇ ದಾರಿಯಲ್ಲಿ ನಡೆಯುವಿರಿ. ನಿಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರಗತಿ ಇರಲಿದೆ.

ಕರ್ಕಾಟಕ ರಾಶಿ:

ನಿಮ್ಮ ಸಂತೋಷದ ಸುದ್ದಿಯನ್ನು ಇತರರಿಗೂ ಹಂಚುವಿರಿ. ನಿಮ್ಮ ಆಲೋಚನೆಗಳನ್ನು ಮನೆಯವರ ಮೇಲೆ‌ಹೇರಲು ಹೋದರೆ ಕಲಹವೇ ಆದೀತು. ನೈತಿಕ ಬೆಂಬಲ ಸಿಗುವುದು ಕಷ್ಟ. ಹಣಕಾಸಿನ‌ ಕೊರತೆ ಇದ್ದರೂ ನೆಮ್ಮದಿಯ ಜೀವನ ಇರಲಿದೆ. ರಾಜಕೀಯದವರ ಬೆಂಬಲ ಸಿಗಲಿದೆ. ಅದನ್ನು ಸದುಪಯೋಗ ಮಾಡಿಕೊಳ್ಳುವುದು ಉತ್ತಮ. ನಿಮಗೆ ಆಯ್ಕೆಗಳನ್ನು ಮಾಡಲು ಗೊಂದಲವಿರಬಹುದು. ನಿಮ್ಮ‌ ಮೇಲಿರುವ ಭಾವನೆಯು ದೂರಾಗಬಹುದು.

ಸಿಂಹ ರಾಶಿ:

ಇಂದು ನಿಮ್ಮ ಉತ್ಸಾಹವೇ ನಿಮಗೆ ಶಾಪವಾದೀತು. ತುಂಬಾ ದಿನಗಳಿಂದ ಕಾಡುವ ಸಮಸ್ಯೆಗೆ ಇಂದು ಪರಿಹಾರ ದೊರಕಲಿದೆ. ನಿಮ್ಮ ಉದ್ಯೋಗಕ್ಕೆ ಬೇಕಾದ ಸಲಹೆಗಳನ್ನು ನೀವು ತೆಗೆದುಕೊಳ್ಳಬೇಕಾಗಬಹುದು. ಪ್ರಚೋದನಾತ್ಮಕ ಹೇಳಿಕೆಗೆ ಸಮಾಧಾನ ಹೇಳಬೇಕಾಗುವುದು. ಹೆಚ್ಚಿನ ಕೆಲಸಗಳನ್ನು ನೀವು ಮುಂದೂಡಲಿದ್ದೀರಿ. ಎಲ್ಲದಕ್ಕೂ ನೀವು ಇನ್ನೊಬ್ಬರನ್ನು ಬೊಟ್ಟು ಮಾಡಿಸಲಿದ್ದೀರಿ. ವಿದ್ಯಾರ್ಥಿಗಳು ಸಾಮರ್ಥ್ಯವನ್ನು ತೋರಿಸುವಿರಿ. ಹಣಸಂಪಾದನೆಯ ವಿಚಾರವೇ ತಲೆಯಲ್ಲಿ ಓಡಾಡಲಿದೆ‌.

ಕನ್ಯಾ ರಾಶಿ:

ತಂತ್ರಜ್ಞಾನದಿಂದ ನಿಮ್ಮ ಕೆಲವು ತೊಂದರೆಗಳನ್ನು ದೂರಮಾಡಿಕೊಳ್ಳುವಿರಿ. ಸಮಯದ ಬೆಲೆಯನ್ನು ನೀವು ಇಂದು ಅರ್ಥಮಾಡಿಕೊಳ್ಳುವಿರಿ. ನಿಮ್ಮ ಬಗ್ಗೆ ಇರುವ ಭಾವನೆಗಳು ಬದಲಾಗಬಹುದು. ಕುಟುಂಬವು ಮನಸ್ತಾಪದಿಂದ ಮುಕ್ತವಾಗಿ ಸಹಜಸ್ಥಿತಿಗೆ ಮರಳುವುದು. ಇಷ್ಟಪಟ್ಟಿದ್ದನ್ನು ನೀವು ಪಡೆದುಕೊಳ್ಳುವಿರಿ. ಕುಟುಂಬದಿಂದ‌ ನಿಮಗೆ ಬೇಕಾದ ಸಹಕಾರ ಸಿಗಲಿದೆ. ಮಕ್ಕಳು ನಿಮ್ಮನ್ನು ಪ್ರೀತಿಸುವರು. ಅನಾರೋಗ್ಯದ ಕಾರಣ ಉತ್ಸಾಹದ ಯಾವ ಕಾರ್ಯವನ್ನೂ ಮಾಡಲಾಗದು.

ತುಲಾ ರಾಶಿ:

ಚೆನ್ನಾಗಿರುವ ವ್ಯವಸ್ಥೆಯನ್ನು ಇನ್ನೂ ಚೆನ್ನಾಗಿ ಮಾಡಲು ಹೋಗಿ ಹಾಳು ಮಾಡುವಿರಿ. ಮಾನಸಿಕ ತೊಂದರೆಯನ್ನು ಅನುಭವಿಸುವಿರಿ. ತಾಳ್ಮೆಯಿಂದ ಇರುವುದು ಇಂದು ನಿಮಗೆ ಕಷ್ಟವಾದೀತು. ಇನ್ನೊಬ್ಬರ ಮಾತಿಗೆ ಅವಕಾಶವನ್ನು ಮಾಡಿಕೊಡಿ. ಕೃಷಿಯಲ್ಲಿ ನೀವು ಹೊಸ ವಿಧಾನವನ್ನು ರೂಪಿಸಿಕೊಳ್ಳುವಿರಿ‌‌. ಆತಂಕವಿರುವ ಕಾರ್ಯಕ್ಕೆ ಯಾರ‌ ಪ್ರೋತ್ಸಾಹದ ಮಾತನ್ನೂ ಕೇಳುವುದು ಬೇಡ. ಮಕ್ಕಳ‌ ವಿಚಾರವಾಗಿ ಅನವಶ್ಯಕ ಖರ್ಚು ಮಾಡುವುದು ಬೇಡ. ಅವಶ್ಯಕತೆಯನ್ನು ನೋಡಿ.

ವೃಶ್ಚಿಕ ರಾಶಿ:

ಮಕ್ಕಳ ಆರೋಗ್ಯದ ಕಾರಣದಿಂದ ನೀವು ಕಛೇರಿಗೆ ವಿರಾಮ‌ ಹಾಕಬೇಕಸದೀತು. ನಿಮ್ಮ ತಪ್ಪನ್ನು ಒಪ್ಪಿಕೊಳ್ಳದೇ ಎಲ್ಲರನ್ನೂ ಶಪಸುವದು ಸರಿಯಲ್ಲ. ಹೇಳಿದಷ್ಟು ಸುಲಭವಾಗಿ ಮಾಡಲಾಗದು ಎನ್ನುವುದು ಗೊತ್ತಾಗಲಿದೆ. ನಿಮ್ಮವರ ಸಲಹೆಯನ್ನು ಪಡೆದು ಕೆಲಸಕ್ಕೆ ಹೋಗುವುದು ಒಳ್ಳೆಯದು. ನಿಮಗೆ ಕಿರಿಕರಿಯಾಗುವ ಸ್ಥಳದಿಂದ‌ ದೂರವಿರಲು ಪ್ರಯತ್ನಿಸುವಿರಿ. ದೇಹವನ್ನು ದಂಡಿಸುವುದು ಪ್ರಮಾಣಬದ್ಧವಾಗಿರಲಿ. ಸರಿಯಾದ ಮಾರ್ಗವನ್ನು ಅನುಸರಿಸಿ.

ಧನು ರಾಶಿ:

ನಿಮ್ಮ ವಸ್ತುವನ್ನು ಯಾರಿಗೂ ಕೊಡುವ ಮನಸ್ಸಾಗದು‌. ಆಸ್ತಿಯ ವಿಚಾರದಲ್ಲಿ ಕಲಹಗಳು ಉಂಟಾಗಬಹುದು. ನಿಮ್ಮ ಆಲೋಚನೆಗಳನ್ನು ಸಂಗಾತಿಯು ತಿದ್ದಲು ಪ್ರಯತ್ನಿಸಬಹುದು. ಏನೇ ಪಡೆದುಕೊಳ್ಳುವುದಿದ್ದರೂ ಸರಿಯಾದ ಮಾರ್ಗದಿಂದ ಪಡೆಯಲು ಪ್ರಯತ್ನಿಸಿ. ಕಲೆಗಳಲ್ಲಿ ಕೌಶಲ ತೋರಿಸುವಿರಿ. ನಂಬಿಕೆಯ ಕೊರತೆಯು ಅತಿಯಾಗಿ ಕಾಡಬಹುದು. ಭೂಮಿಯ ಖರೀದಿಗೆ ಸಹೋದರನ ಸಹಕಾರ ಪಡೆಯುವಿರಿ.‌

ಮಕರ ರಾಶಿ:

ವ್ಯವಹಾರದಲ್ಲಿ ಯಾರಾದರೂ ನಿಮ್ಮನ್ನು ಮಾತಿನಿಂದ ಮರುಳುಮಾಡಬಹುದು. ಹಣದ ಪ್ರಾಮುಖ್ಯವನ್ನು ತಿಳಿದುಕೊಳ್ಳುವ ಸಮಯವಿಂದು. ಹಣವನ್ನು ನೀವು ಹೂಡಿಕೆಯಲ್ಲಿ ಇಡುವ ಸಾಧ್ಯತೆ ಇದೆ. ಸಾಲದ ಹಣವನ್ನು ಪಾವತಿಸಿ ಸ್ವಲ್ಪ ಖುಷಿಪಡುವಿರಿ. ಸತ್ಯವನ್ನು ಆಡಲು ನೀವು ಹಿಂಜರಿಯುವಿರಿ. ಸರಳವನ್ನು ನೀವು ಕ್ಲಿಷ್ಟಕರವಾಗಿಸಿಕೊಳ್ಳುವಿರಿ. ನಿಮ್ಮ ಖಾಸಗಿ ತನಕ್ಕೆ ತೊಂದರೆಯಾಗಲಿದೆ. ವಂಚನೆಯ ಸುಳಿವನ್ನು ಮೊದಲೇ ಪಡೆಯುವಿರಿ.

ಕುಂಭ ರಾಶಿ:

ಆಪ್ತರ ಜೊತೆ ಉದ್ಯೋಗಕ್ಕೆ ಸಂಬಂಧಿಸಿದ ಸಮಾಲೋಚನೆಯನ್ನು ನಡೆಸುವಿರಿ. ಇಂದಿನ ಬೆಳಗ್ಗೆ ಹೆಚ್ಚಿನ ಉತ್ಸಾಹ ಇರಲಿದೆ. ಅನುಕೂಲಕರ ವಾತಾವರಣವನ್ನು ನೀವು ಸೃಷ್ಟಿಸಿಕೊಂಡು ಇರುವಿರಿ. ನಿಮಗೆ ಆರ್ಥಿಕವಾಗಿ ಬಲವಾಗಲು ಆಲೋಚಿಸುವಿರಿ. ನಿಮ್ಮ ನಿರೀಕ್ಷೆ ಸುಳ್ಳಾಗದು. ಆಯಾಸವು‌ ಅಧಿಕವಾಗಿದ್ದರೂ ಆಲಸ್ಯದಿಂದ ಮೇಲೇರುವ ಯೋಚನೆ‌ಮಾಡುವಿರಿ. ಸರಳವಾದ ಕೆಲಸಗಳನ್ನು ಮಾಡುವಿರಿ. ಆದಾಯಕ್ಕೆ ನಾನಾ ಮೂಲವನ್ನು ಆಯ್ಕೆ ಮಾಡಿಕೊಳ್ಳುವಿರಿ.

ಮೀನ ರಾಶಿ:

ಯಾರನ್ನೋ ಗೆಲ್ಲುವುದು ಸುಲಭದ ತುತ್ತಲ್ಲ. ಹಣದ ಸಮಸ್ಯೆಗಳಿಂದ ಮುಕ್ತರಾಗುವಿರಿಸಿ. ನಿಮ್ಮನ್ನು ಇಂದು ಕೆಲವರು ಭೇಟಿಯಾಗಲಿದ್ದಾರೆ. ನಿಮ್ಮ ವ್ಯಕ್ತಿತ್ವವನ್ನು ನೀವು ಪರಿಚಯಿಸುವಿರಿ. ನೀವು ನೆಮ್ಮದಿಯನ್ನು ಕಳೆದುಕೊಳ್ಳಲು ಕೆಲವು ಸಂಗತಿಗಳು ಆಗಬಹುದು. ಆಸ್ತಿಯ ಗೌಪ್ಯತೆಯನ್ನು ರಹಸ್ಯವಾಗಿರಿಸಿ. ಜಾಣ್ಮೆಯಿಂದ ಸವಾಲನ್ನು ಎದುರಿಸಬೇಕಾಗಬಹುದು. ಉನ್ನತ ವಿದ್ಯಾಭ್ಯಾಸದ ಪ್ರಯುಕ್ತ ಹೊರಗಡೆ ಇರಲಿರುವಿರಿ. ನಿಮ್ಮ ಕಾರ್ಯವು ಆಗಬೇಕಾದರೆ ಓಡಾಟ ಅನಿವಾರ್ಯವಾಗಲಿದೆ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಶ್ರಾವಣ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಮಘಾ, ವಾರ : ಸೋಮ, ಪಕ್ಷ : ಶುಕ್ಲ, ತಿಥಿ : ದ್ವಾದಶೀ, ನಿತ್ಯನಕ್ಷತ್ರ : ಉತ್ತರಾಷಾಢ, ಯೋಗ : ವಿಷ್ಕಂಭ, ಕರಣ : ಗರಜ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 34 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:42 – 09:16, ಯಮಗಂಡ ಕಾಲ 10:49 – 12:22, ಗುಳಿಕ ಕಾಲ 13:55 – 15:28

-ಲೋಹಿತ್ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us