ದಿನ ಭವಿಷ್ಯ: ಇಂದು ಈ ರಾಶಿಯವರಿಂದ ಹಲವು ಪ್ರಯೋಜನವಿದ್ದರೂ ನಗಣ್ಯ
Horoscope Today June 29: ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ಗ್ರೀಷ್ಮ ಋತುವಿನ ಜ್ಯೇಷ್ಠ ಮಾಸದ ಶುಕ್ಲ ಪಕ್ಷದ ಪೂರ್ಣಿಮಾ ತಿಥಿಯ ಸೋಮವಾರದಂದು ಪ್ರಚೋದನೆ, ಶತ್ರುಗಳಿಂದ ಕಿರಿಕಿರಿ, ನಿಷ್ಪಕ್ಷಪಾತ, ಆಕರ್ಷಣೆ, ಭೂ ವಿವಾದ, ಹಣದ ಅಪಹರಣ, ಅತಿಥಿ ಸತ್ಕಾರ ಇದು ಇಂದಿನ ಭವಿಷ್ಯ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಜ್ಯೇಷ್ಠ, ಸೌರ ಮಾಸ : ಮಿಥುನ, ಮಹಾನಕ್ಷತ್ರ : ಆರ್ದ್ರಾ, ವಾರ : ಸೋಮ, ಪಕ್ಷ : ಶುಕ್ಲ, ತಿಥಿ : ಪೂರ್ಣಿಮಾ, ನಿತ್ಯನಕ್ಷತ್ರ : ಮೂಲಾ, ಯೋಗ : ಶುಕ್ಲ, ಕರಣ : ಭದ್ರ, ಸೂರ್ಯೋದಯ – 05 – 57 am, ಸೂರ್ಯಾಸ್ತ – 06 – 48 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:34 – 09:10, ಯಮಗಂಡ ಕಾಲ 10:47 – 12:23, ಗುಳಿಕ ಕಾಲ 13:59 – 15:36
ಮೇಷ ರಾಶಿ: ನಿಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ಮಾಡಿ. ಹಿರಿಯರ ದಿನವನ್ನು ಶ್ರದ್ಧೆಯಿಂದ ಮಾಡಿ. ಅನೇಕ ಲಾಭಗಳು ನಿಮಗಾಗಲಿವೆ. ಸುವಸ್ತುವಿನ ದಾನವನ್ನು ಮಾಡಿ ಪುಣ್ಯ ಸಂಗ್ರಹ ಮಾಡಿಕೊಳ್ಳುವಿರಿ. ಬುದ್ಧಿಪೂರ್ವಕವಾಗಿ ನೀವಿಂದು ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ನಿಮ್ಮ ಬಗ್ಗೆ ಅಸಮಾಧಾನದ ಮಾತುಗಳು ಕೇಳಿಬರಬಹುದು. ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಮನೆಯಿಂದ ದೂರ ಕಳಿಸುವಿರಿ.
ವೃಷಭ ರಾಶಿ: ಶತ್ರುಗಳು ನಿಮ್ಮ ಪತನವನ್ನು ನಿರೀಕ್ಷಿಸುತ್ತಿರುತ್ತಾರೆ. ಜಾರಿ ಬಿದ್ದು ನೋವನ್ನು ಅನುಭವಿಸುವಿರಿ. ನೀವಂದುಕೊಂಡ ಉದ್ಯೋಗವು ಸಿಗದೇ ಹೋಗಬಹದು. ನಿಮ್ಮ ಸ್ತರವನ್ನು ಅರಿತು ವರ್ತಿಸಬೇಕು. ಅತ್ತ ಕಡೆ ನಿಮ್ಮ ಗಮನ ಯಾವಾಗಲೂ ಬೇಕು. ಅನಿರೀಕ್ಷಿತ ಪ್ರಯಾಣವನ್ನು ಮಾಡಬೇಕಾಗಬಹುದು. ನಡೆದಾಡುವ ಹಾದಿಗಳು ಒಂದೇ ರೀತಿ ಇರದು ಎನ್ನುವುದು ಗಮನದಲ್ಲಿಟ್ಟುಕೊಳ್ಳಿ. ಅತಿಯಾದ ಮನೆಯ ಕೆಲಸದಿಂದ ಆಯಾಸವಾಗಬಹುದು.
ಮಿಥುನ ರಾಶಿ: ಉನ್ನತ ಚಿಂತನೆಗಳು ನಿಮ್ಮನ್ನು ಉತ್ತಮ ಸ್ತರಕ್ಕೆ ಕೊಂಡೊಯ್ಯುವುದು. ಇಂದು ನಿಮಗೆ ಭವಿಷ್ಯದ ಬಗ್ಗೆ ಬಹಳ ಆಲೋಚನೆ ಇರಲಿದೆ. ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕೆನಿಸುವುದು. ಒನ್ಬರನ್ನೇ ಸಹಾಯಕ್ಕಾಗಿ ಬೇಡುವುದು ಬೇಡ. ಸಂಗಾತಿಯ ಜೊತೆ ಕಾಲಕಳೆಯುವಿರಿ. ತಂದೆಯಿಂದ ಅಸಮಾಧನಾವಾದೀತು. ದೈವವೇ ನಿಮ್ಮನ್ನು ಅನುಕೂಲ ವಾತಾವರಣದ ಕಡೆ ಒಯ್ಯಲಿದೆ. ಉದ್ಯೋಗದಲ್ಲಿ ನಿಮ್ಮ ಸ್ಥಾನಕ್ಕೆ ಬರಲು ಯಾರಾದರೂ ಕಾಯುತ್ತಿರಬಹುದು.
ಕರ್ಕಾಟಕ ರಾಶಿ: ನೂತನ ಉದ್ಯೋಗವನ್ನು ಪ್ರಾರಂಭಿಸುವ ಅಲೋಚನೆ ಇದ್ದರೆ ಸದ್ಯ ಕೂಗೂಡುವುದು ಕಷ್ಟ. ಉದ್ಯೋಗಕ್ಕೆ ಸಂಬಂಧಿಸಿದಂತೆ ಗೊಂದಲಗಳನ್ನು ಪೂರ್ಣವಾಗಿ ಸರಿ ಮಾಡಿಕೊಳ್ಳಿ. ಬಿರುಕಿನ ಬಾಂಧವ್ಯದಿಂದ ಹೊರಬರುವಿರಿ. ಮಕ್ಕಳ ವಿಚಾರದಲ್ಲಿ ನಿಮಗೆ ಹೆಮ್ಮೆ ಎನಿಸಬಹುದು. ವಸ್ತುಗಳ ಖರೀದಿಯು ಖರ್ಚನ್ನು ಹೆಚ್ಚು ಮಾಡುವುದು. ಯಾರ ಜೊತೆಗೂ ನಿಮ್ಮ ವರ್ತನೆಯು ಸಹಜತವಾಗಿ ಇರದು. ಯಂತ್ರಗಳ ಕೆಲಸವು ನಿಮಗೆ ಸಾಕೆನಿಸಬಹುದು. ಆಸ್ತಿಯ ವಿಚಾರದಲ್ಲಿ ಆಕಸ್ಮಿಕ ತಿರುವು ಬರಬಹುದು.
ಸಿಂಹ ರಾಶಿ: ನಿಮ್ಮ ಆರ್ಥಿಕತೆಯು ಏರಿಕೆಯಾಗಲಿದೆ. ನಿಮ್ಮವರ ಮೇಲೆ ನಿಮಗೆ ಬೇಸರ ಉಂಟಾಗಬಹುದು. ನಿಮ್ಮ ಹೃದಯ ವೈಶಾಲ್ಯವನ್ನು ತೋರಿಸುವಿರಿ. ವಿವಾಹವಾಗಬೇಕೆಂಬ ಆತುರ ಸರಿಯಲ್ಲ. ಆಡಿದ ಮಾತನ್ನೇ ಮತ್ತೆ ಮತ್ತೆ ಹೇಳಿ ಕಿರಿಕಿರಿ ತರಿಸುವಿರಿ. ಕಾಲ ಬಂದಾಗ ಎಲ್ಲವೂ ಸರಿಯಾಗುತ್ತದೆ. ಯಾರನ್ನೂ ಒತ್ತಾಯಕ್ಕೆ ಬಳಸಿಕೊಳ್ಳುವುದು ಬೇಡ. ಅತಿಯಾದ ಆಸೆಯಿಂದ ಮೋಸ ಹೋಗಬೇಕಾಗಬಹುದು. ಎಚ್ಚರಿಕೆ ಇಂದ ವ್ಯವಹರಿಸಿ. ನಿಮ್ಮ ಕೈ ಮೀರಿದ ಕೆಲಸದಲ್ಲಿ ನಿಮಗೆ ಆತಂಕ ಬೇಡ.
ಕನ್ಯಾ ರಾಶಿ: ವಿದೇಶಕ್ಕೆ ಹೋಗಲು ನಿಮಗೆ ಕಛೇರಿಯಲ್ಲಿ ಅನುಮೋದನೆ ಸಿಗಬಹುದು. ಸುಪ್ತ ಮನಸ್ಸಿನ ಮಾತು ನಿಜವಾಗಬಹುದು. ಗೊಂದಲವಿರುವ ವಿಚಾರದ ಬಗ್ಗೆ ಅತಿಯಾಗಿ ತಲೆ ಕಡಸಿಕೊಳ್ಳಬೇಡಿ. ಸ್ವಲ್ಪ ದಿನ ಅದನ್ನು ತಲೆಯಿಂದ ತೆಗದು ಹಾಕಿ. ನಿಮ್ಮ ಗೊಂದಲವನ್ನು ಇನ್ನೊಬ್ಬರಿಗೆ ಹೇರುವುದು ಬೇಡ. ನಿಮ್ಮ ಬೆಳವಣಿಗೆತಿಂದ ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ. ವೈದ್ಯವೃತ್ತಿಯಲ್ಲಿ ಒತ್ತಡವಿರುವುದು. ನೀವು ಕಷ್ಟವನ್ನೂ ಸಂತೋಷದಿಂದ ಕಳೆಯುವಿರಿ.
ತುಲಾ ರಾಶಿ: ಒಂಟಿಯಾಗೆ ಸುತ್ತಾಡುವ ಬಯಕೆ ಉಂಟಾಗಲಿದೆ. ಅಧಿಕ ಸುತ್ತಾಟದಿಂದ ಆಯಾಸವಾಗಬಹುದು. ಸ್ವಂತ ಖರ್ಚಿನಿಂದಲಾದರೂ ಬೇಕಾದುದನ್ನು ಕೊಡಿಸುವಿರಿ. ನಿಮ್ಮ ಶಕ್ತಿಯನ್ನು ಆಧರಿಸಿಕೊಂಡು ಮುಂದುವರಿಯಿರಿ. ಜೀವನಕ್ಕೆ ಅನುಭವಿಗಳ ಮಾರ್ಗದಶರ್ನವನ್ನು ಪಡೆದುಕೊಳ್ಳುವಿರಿ. ನಿಮ್ಮ ವಾಹನವು ದುರಸ್ತಿಗೆ ಬರಬಹುದು. ಹಣಕಾಸಿನ ವಿಚಾರಕ್ಕೆ ಸಂಗಾತಿಯ ಜೊತೆ ಮಾತಾಗಬಹುದು. ಇಂದು ಮನೋರಂಜನೆಯಿಂದ ನಿಮಗೆ ಸಮಾಧಾನ ಸಿಗಲಿದೆ.
ವೃಶ್ಚಿಕ ರಾಶಿ: ವಾಹನಕ್ಕೋಸ್ಕರ ಸಾಲಮಾಡುವ ಸ್ಥಿತಿ. ಬಂಧುಗಳ ಸಹಕಾರ ಸಿಗದೇ ಅವರನ್ನು ದ್ವೇಷಿಸಬಹುದು. ಸಾಮಾಜಿಕ ಕಾರ್ಯಗಳಲ್ಲಿ ಸಲ್ಪ ಕಾಲ ತೊಡಗುವಿರಿ. ಅತಿಯಾದ ಹಠವು ಒಳ್ಳೆಯದಲ್ಲ. ನೀವು ಏನನ್ನಾದರೂ ಪಡೆಯಲು ಪ್ರಯತ್ನಿಸಿದರೆ ಕೂಡಲೇ ಸಿಗುತ್ತದೆ ಎಂಬ ಭ್ರಮೆ ಬೇಡ. ದ್ವಂದ್ವದಲ್ಲಿ ನಿಮ್ಮ ಮನಸ್ಸು ಇರಲಿದೆ. ದೇವರ ವಿಷಯದಲ್ಲಿ ನಂಬಿಕೆ ಕಡಿಮೆ ಆಗಬಹುದು. ಆಲಸ್ಯದಿಂದ ಮಾಡಬೇಕಾದ ಕೆಲಸವನ್ನು ಮಾಡದೇ ಇರುವಿರಿ. ಪ್ರವಾಸ ಹೋಗುವ ಮನಸ್ಸಾದೀತು. ಅಧಿಕಾರಿಗಳು ನಿಮ್ಮ ಉದ್ಯಮವನ್ನು ಪರಿಶೀಲಿಸಬಹುದು.
ಧನು ರಾಶಿ: ಸಾಮಾಜಿಕವಾಗಿ ನಿಮ್ಮ ಕಾರ್ಯವನ್ನು ಗುರುತಿಸಿ ಸಮ್ಮಾನಿಸಬಹುದು. ಹೂಡಿಕೆಯನ್ನು ಮಾಡಿ ಹಣವನ್ನು ಉಳಿಸಿಕೊಳ್ಳುವುದು ಉತ್ತಮ. ಹೊಂದಣೆಯನ್ನು ಅಲ್ಪ ಪ್ರಮಾಣದಲ್ಲಿ ಮಾಡಿಕೊಳ್ಳುವಿರಿ. ಇಂದಿನ ಒತ್ತಡವನ್ನು ಚೆನ್ನಾಗಿ ನಿಭಾಯಿಸಬಲ್ಲಿರಿ. ಉದ್ಯೋಗವನ್ನು ಬಿಡುವ ಮನಸ್ಸಾಗಬಹುದು. ಆಕಸ್ಮಿಕವಾಗಿ ಧನಲಾಭವು ನಿಮಗೆ ಆಶ್ಚರ್ಯವನ್ನು ಉಂಟುಮಾಡಬಹುದು. ಮನಸ್ಸಿನ ಸ್ಥಿರತೆಯಲ್ಲಿ ಅಭಾವವಿದ್ದು ನಿಮ್ಮ ಗುರಿಯೂ ಬದಲಾಗುವುದು.
ಮಕರ ರಾಶಿ: ವಂಚನೆಯಿಂದ ನಿಮ್ಮ ಹಣ ನಷ್ಟ ಮಾಡಿಕೊಳ್ಳುವಿರಿ. ಮನೆಯಲ್ಲಿ ಮಕ್ಕಳ ಜೊತೆ ಸುಂದರ ವಾತಾವರಣವಿರುತ್ತದೆ. ಸಂಗಾತಿಯಿಂದ ದೂರ ಉಳಿಯಬೇಕಾದ ಸ್ಥಿತಿ ಬರಬಹುದು. ಕುಟುಂಬದಲ್ಲಿ ನಿಮ್ಮ ಬಗ್ಗೆ ಆಡಿಕೊಂಡಾರು. ಸಹೋದ್ಯೋಗಿಗಳು ನಿಮ್ಮ ಮೇಲೆ ಕೆಲಸದ ಭಾರವನ್ನು ಹೊರಿಸಬಹುದು. ದಾಂಪತ್ಯದ ವಿರಸವು ಬಗೆ ಹರಿಯಬಹುದು. ಕುಟುಂಬದ ನೆಮ್ಮದಿಯು ನಿಮ್ಮ ಕಠೋರ ಮಾತಿನಿಂದ ವಿಚಲಿತವಾಗುವುದು.
ಕುಂಭ ರಾಶಿ: ಸಹೋದರರ ಜೊತೆ ಕಲಹವಾಗಿ ಕೆಲವು ಕಾಲ ಮೌನವಹಿಸುವಿರಿ. ಕೆಟ್ಟವರ ಸಹವಾಸದಿಂದ ಕೆಟ್ಟ ಹೆಸರೇ ಬರಲಿದೆ. ಆರ್ಥಿಕತೆಯ ಬಗ್ಗೆ ಇರುವ ನಿಮ್ಮ ಧೋರಣೆ ಬದಲಾಗುವುದು. ಮನೆಯ ಕಾರ್ಯದಲ್ಲಿ ನೀವು ಭಾಗಿಯಾಗುವಿರಿ. ನಿಗದಿತ ಸಮಯಕ್ಕೆ ನಿಮ್ಮ ಕೆಲಸಗಳು ಮುಗಿಯದು. ಮುಂದೆ ಮಾಡಿದರಾಯಿತು ಎಂಬ ಮಾನಸಿಕ ಸ್ಥಿತಿಯನ್ನು ಬಿಡುವುದು ಒಳ್ಳೆಯದು. ತಂದೆಯಿಂದ ಹಿತವಚನವು ಸಿಗಬಹುದು. ಅವರಿಗೆ ಬೇಸರವಾಗುವಂತೆ ನೋಡಿಕೊಳ್ಳಬೇಡಿ.
ಮೀನ ರಾಶಿ: ನೀವು ಪ್ರಯತ್ನಿಸಿದ ಕಾರ್ಯಗಳು ಫಲಿಸುವುದು ಎಂಬ ನಂಬಿಕೆ ಇರುವುದು. ವಾಹನವನ್ನು ಓಡಿಸುವ ಎಚ್ಚರಿಕೆಯಿಂದ ಇರಿ. ಚರ್ಚಿತ ವಿಚಾರವನ್ನೇ ಚರ್ಚಿಸಿ ಪ್ರಯೋಜನವಾಗದು. ನೀವು ಮಾಡಲು ಹೊರಟ ಕೆಲಸದ ಮೇಲೇ ಹೆಚ್ಚು ಗಮನವಿರಲಿ. ಅನ್ಯ ವಿಚಾರದಲ್ಲಿ ನೀವು ತಲೆ ಹಾಕಿ ಮುಖ್ಯ ಕೆಲಸವನ್ನು ಮರೆಯಬಹುದು. ನಿಮ್ಮಿಂದ ಸಹಾಯ ಪಡೆಯಲು ನಿಮ್ಮನ್ನು ಹೊಗಳುವರು. ಮನೆಯ ಸಮಸ್ಯೆಗೆ ಪರಿಹಾರ ಕಾಣುವಲ್ಲಿ ಜೀವನ ಸಂಗಾತಿಯು ಸಂಪೂರ್ಣ ಬೆಂಬಲವು ಇರುವದು.
ಲೋಹಿತ್ ಹೆಬ್ಬಾರ್ – 8762924271 (what’s app only)




