Horoscope: ರಾಶಿಭವಿಷ್ಯ; ಈ ರಾಶಿಯವರು ಪ್ರೀತಿಯ ಮಾತುಗಳಿಂದ ಯಾರನ್ನು ಬೇಕಾದರೂ ಗೆಲ್ಲುತ್ತಾರೆ

ಒಂದಷ್ಟು ಮಂದಿ ಪ್ರತಿನಿತ್ಯ ತಮ್ಮ ಭವಿಷ್ಯ ನೋಡುತ್ತಾರೆ. ಹಾಗಿದ್ದರೆ, ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರಾಗಿದ್ದರೇ, 06 ಮಾರ್ಚ್​ 2024ರ ನಿಮ್ಮ ರಾಶಿಭವಿಷ್ಯ ಹೇಗಿದೆ? ನಿಮಗೆ ಶುಭ ಅಥವಾ ಅಶುಭ ದಿನವಾ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಎಂಬಿತ್ಯಾದಿ ಮಾಹಿತಿಗಳನ್ನು ಇಂದಿನ ರಾಶಿಭವಿಷ್ಯದಿಂದ ತಿಳಿದುಕೊಳ್ಳಿ.

Horoscope: ರಾಶಿಭವಿಷ್ಯ; ಈ ರಾಶಿಯವರು ಪ್ರೀತಿಯ ಮಾತುಗಳಿಂದ ಯಾರನ್ನು ಬೇಕಾದರೂ ಗೆಲ್ಲುತ್ತಾರೆ
ರಾಶಿಭವಿಷ್ಯ
Edited By:

Updated on: Mar 06, 2024 | 12:15 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮಾರ್ಚ್​​​​​ 06) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ: ಶತಭಿಷಾ, ಮಾಸ: ಮಾಘ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಉತ್ತರಾಷಾಢಾ, ಯೋಗ: ವ್ಯತಿಪಾತ್, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 47 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 40 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:44 ರಿಂದ 02:13ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 08:16 ರಿಂದ 09:46ರ ವರೆಗೆ, ಗುಳಿಕ ಕಾಲ ಬೆಳಗ್ಗೆ 11:15 ರಿಂದ ಮಧ್ಯಾಹ್ನ 12:44ರ ವರೆಗೆ.

ಮೇಷ ರಾಶಿ: ಇಂದು ನೀವು ಬಹಳ ತಜ್ಞತೆಯಿಂದ ಕೆಲಸ ಮಾಡುವಿರಿ. ಸಂಗಾತಿಯ ಆಯ್ಕೆಯ ಬಗ್ಗೆ ನಿಮಗೆ ಖುಷಿ ಇರುವುದು. ಕುಟುಂಬದ ಕಡೆಯಿಂದ ನಿಮಗೆ ಬೇಕಾದ ಸಹಕಾರವು ಸಿಗಲಿದೆ. ಹಳೆಯ ವಸ್ತುಗಳನ್ನು ಮಾರಾಟ ಮಾಡಿ ಭಾರವನ್ನು ಕಡಿಮೆ ಮಾಡಿಕೊಳ್ಳುವಿರಿ. ಯಾವುದೋ ಆಲೋಚನೆಯಲ್ಲಿ ನಿಮ್ಮ ಮನಸ್ಸು ಇರುವುದು. ಹೆಚ್ಚಿನ ಸೌಕರ್ಯದಿಂದ ನೀವು ಸೋಮಾರಿಯಾಗುವಿರಿ. ಎಷ್ಟೇ ತೊಂದರೆಯಾದರೂ ಇನ್ನೊಬ್ಬರಿಗೆ ನೋವನ್ನು ಕೊಡುವುದು ಇಷ್ಟವಾಗದು. ಕೇಳಿದವರಿಗೆ ನಿಮ್ಮ ಸಹಾಯವು ಸಿಗಲಿದೆ. ಕೇಳಿದ್ದಕ್ಕೆ ಮಾತ್ರ ನಿಮ್ಮ ಉತ್ತರವಿರಲಿ. ಕಳೆದ ಕೆಟ್ಟ ಕಾಲವನ್ನು ನೆನಪಿಸಿಕೊಳ್ಳುವಿರಿ. ಎಲ್ಲ ಸಂದರ್ಭದಲ್ಲಿಯೂ ನೀವು ಏಕತಾನತೆಯನ್ನು ಕಾಪಾಡಿಕೊಳ್ಳುವಿರಿ. ಉದ್ವೇಗದಿಂದ ಮುಕ್ತರಾಗಲು ಬಯಸುವಿರಿ.

ವೃಷಭ ರಾಶಿ: ಇಂದು ಮನಶ್ಚಾಂಚಲ್ಯವನ್ನು ಕಡಿಮೆ ಮಾಡಿಕೊಳ್ಳುವಿರಿ. ವಿದ್ಯಾರ್ಥಿಗಳು ಶಿಕ್ಷಣದಿಂದ ಉತ್ತಮ ವಾರ್ತೆಯನ್ನು ಕೇಳುವರು. ವಿಶೇಷವಾಗಿ ನೀವು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚು ಉತ್ಸಾಹವನ್ನು ತೋರುವಿರಿ. ಹಣದ ಆಸೆಗೆ ಏನನ್ನಾದರೂ ಮಾಡುವಿರಿ. ನಿಮ್ಮ ಮಿತವಾದ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವ ಅಗತ್ಯವಿದೆ. ಸಮಾಜಮುಖಿಯಾಗಿ ನಿಮ್ಮ ಕಾರ್ಯಗಳು ಹೆಚ್ಚು ಪ್ರಬಲವಾಗಬಹುದು. ಉದ್ಯೋಗದಲ್ಲಿ ಆಗುವ ಬದಲಾವಣೆಗಳನ್ನು ನೀವು ಸಹಿಸುವುದು ಕಷ್ಟವಾದೀತು. ಮಿತ್ರರ ಕೋಪಕ್ಕೆ ಕ್ಷಮೆಯನ್ನು ಕೇಳುವಿರಿ. ವಿವಾಹಕ್ಕೆ ಸಂಬಂಧಿಸಿದ ದೋಷಗಳನ್ನು ದೈವಜ್ಞರ ಬಳಿ ಕೇಳಿ ಸರಿಪಡಿಸಿಕೊಳ್ಳಿ. ಊಹಾಪೋಹಗಳಿಗೆ ಕಿವಿಗೊಡದೇ ನಿಮ್ಮ ಕಾರ್ಯದಲ್ಲಿ ಮುಂದುವರಿಯಿರಿ. ನೀವು ಇಂದು ಮಕ್ಕಳ ಜೊತೆ ಹೆಚ್ಚಿನ ಸಮಯವನ್ನು ಕಳೆಯುವಿರಿ. ವಿದ್ಯಾರ್ಥಿಗಳು ತಮಗೆ ಸಿಗಬೇಕಾದ ಲಾಭದಿಂದ ವಂಚಿತರಾಗುವರು. ಪ್ರೀತಿಯನ್ನು ಪ್ರಕಟಪಡಿಸಲು ಕಾಯುವಿರಿ.

ಮಿಥುನ ರಾಶಿ: ಇಂದು ನಿಮಗೆ ತಪ್ಪಿತಸ್ಥ ಭಾವನೆ ಬರಬಹುದು. ಕ್ರಿಯಾತ್ಮಕ ಚಟುವಟಿಕೆಯಿಂದ ನಿಮಗೆ ಪ್ರಶಂಸೆ ಸಿಗಲಿದೆ. ಹೆಚ್ಚಿನ ಆದಾಯವನ್ನು ನೀವು ನಿರೀಕ್ಷಿಸುವಿರಿ. ಪ್ರೀತಿಯ ಮಾತುಗಳಿಂದ ಯಾರನ್ನೂ ಗೆಲ್ಲುವಿರಿ. ಯಾರ ಮೇಲೂ ಅತಿಯಾದ ಹೇರಿಕೆ ಬೇಡ. ಸ್ವತಂತ್ರವಾಗಿ ಇರಲು ಬಿಡಿ. ದೂರದ ಊರಿನಲ್ಲಿ ಅನಾಥಪ್ರಜ್ಞೆಯು ನಿಮ್ಮನ್ನು ಕಾಡಬಹುದು. ಒತ್ತಡದಿಂದ ನಿಮ್ಮ ಕಾರ್ಯವು ಮಂದಗತಿಯಲ್ಲಿ ಸಾಗುವುದು. ಯಂತ್ರಜ್ಞರು ಇಂದು ಬಹಳ ಒತ್ತಡದಿಂದ ಇರುವರು. ಸ್ವಲ್ಪ ಮಾನಸಿಕ ಆಲಸ್ಯವು ಇರುವುದು. ಗೊಂದಲವನ್ನು ಇನ್ನೊಬ್ಬರ ಬಳಿ ಹೇಳಿ. ನಿಮ್ಮ ಮಾತನ್ನು ಸಂಗಾತಿಯು ತಳ್ಳಿಹಾಕಿದ್ದು ನಿಮಗೆ ಬೇಸರ ತಂದೀತು. ಪರಿಹಾರವನ್ನು ಕಂಡುಕೊಳ್ಳಬಹುದು. ನಿಮ್ಮ ಜಾಣ್ಮೆಯಿಂದ ನಿಮ್ಮ ಸಂಸ್ಥೆಯು ಹೆಚ್ಚಿನ ಯಶಸ್ಸನ್ನು ಗಳಿಸಬಹುದು. ನಿಮ್ಮನ್ನು ಯಾರಾದರೂ ಪ್ರಶ್ನಿಸಬಹುದು‌.

ಕಟಕ ರಾಶಿ: ನಿಮ್ಮ ಪ್ರಗತಿಯಲ್ಲಿ ತೊಂದರೆ ಕಾಣಿಸಿಕೊಂಡರೂ ಅದನ್ನು ಎದುರಿಸುವ ಹುಮ್ಮಸ್ಸು ಇರುವುದು. ಉನ್ನತ ವಿದ್ಯಾಭ್ಯಾಸದ ಕನಸನ್ನು ಪೂರ್ಣ ಮಾಡಿಕೊಳ್ಳುವಿರಿ. ಸ್ವಾಭಿಮಾನಕ್ಕೆ ಕುಂದುಂಟುಮಾಡಬಹುದು. ಯಾವ ಕಾರ್ಯಕ್ಕೂವ ನಿಮಗೆ ಪೂರ್ಣ ಧೈರ್ಯವಿರದು. ಸಂಗಾತಿಯ ಬಂಧುಗಳು ಮನೆಗೆ ಆಗಮಿಸಬಹುದು. ಹೊಸ ಯೋಜನೆಯನ್ನು ನಿಮ್ಮದಾಗಿಸಿಕೊಳ್ಳುವಿರಿ. ಶುಭ ಕಾರ್ಯದಲ್ಲಿ ನೀವು ಭಾಗವಹಿಸುವಿರಿ. ಸಣ್ಣ ಮಕ್ಕಳಿಂದ ನೆಮ್ಮದಿಯು ಸಿಗಲಿದೆ. ಜೀವನು ಸಪ್ಪೆಯಾದಂತೆ ಅನ್ನಿಸೀತು. ಹೊಸ ಜನ, ಹೊಸ ಸ್ಥಳ ಹಾಗೂ ಹೊಸ ವಿಚಾರದ ಕಡೆ ಗಮನವು ಬೇಕೆನಿಸುವುದು. ನಿಮ್ಮ ಯಶಸ್ಸನ್ನು ಮನೆಯವರು ಸಂಭ್ರಮಿಸಬಹುದು. ರಾಜಕಾರಣದತ್ತ ನಿಮ್ಮ ಒಲವು ಹೆಚ್ಚಾಗುವುದು. ಪ್ರಭಾವಿ ವ್ಯಕ್ತಿಗಳು ನಿಮ್ಮನ್ನು ಪರಿವರ್ತಿಸುವರು. ಸಹಾಯಕ್ಕೆ ಯಾರೂ ಬಾರದೇ ಇರಬಹುದು.

ಜ್ಯೋತಿಷ್ಯ ಸುದ್ದಿಗಳನ್ನು ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ