ದಿನ ಭವಿಷ್ಯ: ಇಂದು ಈ ರಾಶಿಯವರು ಹೆಚ್ಚು ಪಡೆಯುವುದಕ್ಕಿಂತ ಉತ್ತಮವಾದುದನ್ನು ಪಡೆಯುವರು

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಕೃಷ್ಣ ಪಕ್ಷದ ದಶಮೀ ತಿಥಿಯ ಭಾನುವಾರದಂದು ಖಿನ್ನತೆಯ ವಿಮುಕ್ತಿ, ಚಂಚಲತೆ, ಅಧಿಕಾರ ಅಪೇಕ್ಷೆ, ಮನೆಗೆ ಹಣದ ಖರ್ಚು, ಮಾತನ್ನು ಕೇಳದಿರುವುದು, ಸಿದ್ಧತೆ, ಸ್ತ್ರೀಯರಿಂದ ಶೋಧ ಇವೆಲ್ಲವೂ ಈ ದಿನದ ಭವಿಷ್ಯ.

ದಿನ ಭವಿಷ್ಯ: ಇಂದು ಈ ರಾಶಿಯವರು ಹೆಚ್ಚು ಪಡೆಯುವುದಕ್ಕಿಂತ ಉತ್ತಮವಾದುದನ್ನು ಪಡೆಯುವರು
ದಿನ ಭವಿಷ್ಯ
Edited By:

Updated on: Sep 06, 2026 | 12:30 AM

ಮೇಷ ರಾಶಿ:

ಉಪಕಾರ ಮಾಡಲು ಹೋಗಿ ಆಪತ್ತಿನಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಸ್ನೇಹಿತರ ಜೊತೆ ನಿಮ್ಮ ನೋವನ್ನು ಹಂಚಿಕೊಳ್ಳುವಿರಿ. ತಂದೆಯ ಜೊತೆ ಸಮಾರಂಭಗಳಿಗೆ ಹೋಗುವಿರಿ. ನಿಮ್ಮ ವಾದವು ಸರಿಯೆನಿಸೀತು. ಸ್ತ್ರೀಯರಿಗೆ ಅಲಂಕಾರಿಕ ವಸ್ತುಗಳು ಸಿಗಬಹುದು. ಕರ್ತವ್ಯಕ್ಕೆ ನಿಮ್ಮ ಮನಸ್ಸನ್ನು ಕೊಟ್ಟುಕೊಳ್ಳುವಿರಿ. ಸಂಗಾತಿಯ ಜೊತೆ ದೂರ ಪ್ರಯಾಣದ ಅಪೇಕ್ಷಣೀಯನ್ನು ವ್ಯಕ್ತಪಡಿಸುವಿರಿ.

ವೃಷಭ ರಾಶಿ:

ಹಣವನ್ನು ಗಳಿಸುವ ಆಸೆಯು ತೀರ್ವವಾಗಿದ್ದರೂ ಸಫಲವಾಗುವುದಿಲ್ಲ‌. ವಸ್ತುಗಳ ಮಾರಾಟದ ನಿಮಿತ್ತ ನೀವು ಪರ ಊರಿಗೆ ಹೋಗಲಿದ್ದೀರಿ. ಸುಳ್ಳನ್ನು ಕೆಲವು ಕಾಲ ಹೇಳಿದರೆ ಕೇಳಿಯಾರು. ಉತ್ಕಟ ಇಚ್ಛೆ ಬಂದರೆ ಸುಳಿವುಗಳು ತಾನಾಗಿಯೇ ಸಿಗುವುದು. ಮತ್ತೆ ನಂಬಿಕೆ ನಷ್ಟವಾದೀತು. ನಿಮ್ಮ ಸ್ವಭಾವಕ್ಕೆ ಹಿಂದಿಕೊಳ್ಳುವವರು ಸಿಗುವುದು ಕಷ್ಟವಾದೀತು. ವಿನೀತಭಾವವು ನಿಮ್ಮನ್ನು ಇಷ್ಟಪಡುವಂತೆ ಮಾಡಬಹುದು. ಏನಾದರೂ ಎದುರಿಸುತ್ತೇನೆ ಎಂಬ ದಾರ್ಢ್ಯವು ನಿಮ್ಮಲ್ಲಿ ಇರಲಿದೆ.

ಮಿಥುನ ರಾಶಿ:

ದಾರಿ ಸರಿಯಿಲ್ಲ ಎಂದ ಮಾತ್ರಕ್ಕೆ ಬದಲಿಸಬೇಕೆಂದು ಅಲ್ಲ. ಸರಿ‌ಮಾಡಿಕೊಂಡೂ ಹೋಗಬಹುದು. ಅಸಹಜ ವರ್ತನೆಯು ಮನೆಯಲ್ಲಿ ಸಂದೇಹಕ್ಕೆ ಕಾರಣವಾಗುವುದು. ಹಿರಿಯರನ್ನು ಅನಾದರದಿಂದ ನೋಡಬೇಡಿ. ನಿಮ್ಮ ಅಸಮಾಧಾನವನ್ನು ಆಪ್ತರ ಬಳಿ ಹೇಳಿಕೊಳ್ಳಿ. ಉದ್ಯೋಗದಲ್ಲಿ ಎದುರಾದ ಸನ್ನಿವೇಶಗಳನ್ನು ಶಾಂತ ಮಾಡುವಿರಿ. ಆರೋಗ್ಯವು ಉಪಶಮನವಾಗುವ ಯಾವ ಲಕ್ಷಣವೂ ನಿಮಗೆ ಕಾಣಿಸದು.

ಕರ್ಕಾಟಕ ರಾಶಿ:

ಇಂದು ಅನವಶ್ಯಕ ಖರ್ಚಿನ ಕಡೆ ಗಮನವಿರದು. ಹೆಚ್ಚು ಕೋಪವನ್ನು ತೋರಿಸಲಿದ್ದೀರಿ‌. ಸ್ಥಿರಾಸ್ತಿಯನ್ನು ಕೊಡುವ ಆಲೋಚನೆಯನ್ನು ಮಾಡುವಿರಿ. ಮನೆಗೆ ನಿಮ್ಮಿಂದ ಅಲ್ಪ ಧನ ಸಹಾಯ ಸಿಗುವುದು.‌ ವಾಹನ ಖರೀದಿಯ ಬಗ್ಗೆ ಆಲೋಚನೆ ಇರಲಿದೆ. ಬಹಳ ಹಿಂದಿನ ಆಸೆಯನ್ನು ಸಂಗಾತಿಯು ಪೂರೈಸುವನು. ಬಂಧುಗಳ ಮಾತಿನಿಂದ ನಿಮಗೆ ತೊಂದರೆ ಆಗಬಹುದು. ಭಯದಲ್ಲಿ ನೀವು ಬಹಳ ಇಂದಿನ ದಿನವನ್ನು ಕಳೆಯಬೇಕಾದೀತು.

ಸಿಂಹ ರಾಶಿ:

ಅಂದುಕೊಂಡ ಸಮಯಕ್ಕೆ ಕೆಲಸಗಳು ಆಗದು ಎಂದು ಬೇಸರವಾಗಲಿದೆ. ಅದೃಷ್ಟಕ್ಕಾಗಿ ಕಾಯದೇ ಕಾರ್ಯದಲ್ಲಿ ಪ್ರವೃತ್ತರಾಗಿ. ತಾನಾಗಿಯೇ ಎಲ್ಲವೂ ಸೇರಿಕೊಳ್ಳುವುದು. ಅನೇಕ ದಿನಗಳಿಂದ ಉದ್ಯೋಗ ನಿರ್ವಹಣೆಯು ಬೇಸರ ತರಿಸಿದ್ದು ಹೊರ ಕಡೆ ಸುತ್ತಾಡುವ, ವಿರಾಮ ಪಡೆಯುವ ಮನಸ್ಸಾಗಲಿದೆ. ಆಗಿಹೋದುದಕ್ಕೆ ಕಾರಣವನ್ನು ಹುಡುಕುತ್ತ ಕುಳಿತುಕೊಳ್ಳಬೇಡಿ. ಮುಂದಿನದ್ದರ ಬಗ್ಗೆ ಆಲೋಚನೆ ಇರಲಿ.

ಕನ್ಯಾ ರಾಶಿ:

ಮನೆಯ ಹಿರಿಯರ ವಿರುದ್ಧ ಮಾತನಾಡುವಿರಿ. ನಿಮ್ಮ ಮಾತುಗಳನ್ನು ಸ್ಪಷ್ಟವಾಗಿ ತಿಳಿಸಿ. ಗೋಡೆಯ ಮೇಲಿನ ದೀಪದಂತೆ ಆಗುವುದು ಬೇಡ. ತಪ್ಪುಗಳನ್ನು ತಿದ್ದಿಕೊಳ್ಳಲು ಅವಕಾಶ ಕೊಡುವುದು ಉತ್ತಮ. ಸಂಗಾತಿಗೆ ನಿಮ್ಮ ಕಡೆಯಿಂದ ಅಚ್ಚರಿಯ ಉಡುಗೊರೆ ಸಿಗಬಹುದು. ಉದ್ಯಮವನ್ನು ನಡೆಸುವುದು ಕಷ್ಟವೆನಿಸಬಹುದು. ಖಾಸಗಿತನದ ಸಂಸ್ಥೆಯ ಮಾಲಿಕರಾಗುವ ಆಹ್ವಾನ ಬರಲಿದೆ.

ತುಲಾ ರಾಶಿ:

ಕಾರ್ಯದ ನಿಮಿತ್ತ ವ್ಯರ್ಥ ಓಡಾಟವನ್ನು ಮಾಡುವಿರಿ. ಮನಸ್ಸಿಗೆ ಅನುಕೂಲಕರವಾದ ವಾತಾವರಣವು ಸಿಗದೇ ಇರಬಹುದು. ಸರಿಯಾದ ಸಮಯಕ್ಕೆ ಬುದ್ಧಿ ಸೂಚಿಸದೇ ಇದ್ದೀತು. ದುರ್ವ್ಯಸನವನ್ನು ರೂಢಿಸಿಕೊಳ್ಳುವ ಸಾಧ್ಯತೆ ಇದೆ. ಆತ್ಮವಿಶ್ವಾಸವನ್ನು ಪ್ರಯತ್ನಪೂರ್ವಕವಾಗಿ ಬೆಳೆಸಿಕೊಳ್ಳಬೇಕಾಗುವುದು. ದೊಡ್ಡವರ ವಿಚಾರದಲ್ಲಿ ನೀವು ಇಂದು ತಗ್ಗಿ ಬಗ್ಗಿ ನಡೆಯಬೇಕಾದೀತು. ಸ್ನೇಹಿತರ ಮಾತುಗಳು ನಿಮ್ಮ ದಾರಿ ತಪ್ಪಿಸಬಹುದು.

ವೃಶ್ಚಿಕ ರಾಶಿ:

ಇಂದು ನಿಮ್ಮ ಪ್ರತಿಭೆಯ ಪ್ರದರ್ಶನವಾಗಲಿದೆ‌. ಸಣ್ಣ ಪುಟ್ಟ ತೊಂದರೆಗಳಿಗೆ ನೀವು ಇಂದು ಹಿಂದೆ ಹೆಜ್ಜೆ ಇಡುವ ಅವಶ್ಯಕತೆ ಇಲ್ಲ. ಇಲ್ಲ ಸಲ್ಲದ‌ ನೆಪಗಳು ಸುಲಭವಾಗಿ ಸಿಗಬಹುದು. ಸಂಗಾತಿಯ ನಡುವಣ ಕಲಹವನ್ನು ನೀವು ಸರಿ ಮಾಡಿಕೊಳ್ಳಿ. ನೀರಿನಿಂದ ನೀವು ಭಯಪಡುವಿರಿ. ಆರೋಗ್ಯದಲ್ಲಿ ವ್ಯತ್ಯಾಸವಾಗಲಿದ್ದು ಮನೆಯಲ್ಲಿ ಮದ್ದನ್ನು ಮಾಡಿಕೊಂಡು ಆರಾಮಾಗಿರಿ. ಕುಟುಂಬದ ಬಗ್ಗೆ ನಿಮಗೆ ಅಭಿಮಾನದ ಕೊರತೆ ಕಾಣುವುದು.

ಧನು ರಾಶಿ:

ನಿಮಗಾದ ವಂಚನೆಯನ್ನು ಸರಿ ಮಾಡಿಕೊಳ್ಳಲು ಕಾನೂನಿಗೆ ವಿರುದ್ಧವಾಗಿ ಹೋಗುವಿರಿ. ಸಾರ್ವಜನಿಕವಾಗಿ ಸ್ಥಾನಮಾನವನ್ನು ಪಡೆಯಲು ಹಂಬಲಿಸುವಿರಿ. ರಾಜಕಾರಣ ಗಾಳಿ ಬೀಸಲಿದೆ. ಸಹೋದರ ನಡುವಿನ ಸ್ನೇಹ ಭಾವವು ದೂರಾಗಬಹುದು. ಸರ್ಕಾರದಲ್ಲಿ ಆಗಬೇಕಾದ ನಿಮ್ಮ ಕೆಲಸವು ವೇಗವಾಗಲಿದೆ. ಜೊತೆ ಇರುವವರ ಮೇಲೆ‌ ನಂಬಿಕೆ ಕಡಿಮೆ ಆದೀತು. ಏನಾದರೂ ಬೇಡದ ಸಂಗತಿಗಳನ್ನು ಬಗೆಗೆ ನಿಮ್ಮ‌ ಆಲೋಚನೆಗಳು ಇರುತ್ತವೆ.

ಮಕರ ರಾಶಿ:

ನಿಮ್ಮ ಮಾತುಗಳು ಇನ್ನೊಬ್ಬರಲ್ಲಿ ಕರುಣೆಯನ್ನು ಉಂಟುಮಾಡುವುದು. ಇಂದಿನ ನಿಮ್ಮ ಕಾರ್ಯಪರತೆಯಿಂದ ಸಂಸ್ಥೆಯು ಯಶಸ್ಸನ್ನು ಸಾಧಿಸಬಹುದು. ನಿಮ್ಮ ಆಲೋಚನೆಗಳು ನಿಮ್ಮ ವ್ಯಕ್ತಿತ್ವವನ್ನು ರೂಪಿಸಿದೆ. ಪತ್ರವ್ಯವಹಾರವೇ ನಿಮಗೆ ಸರಿಯಾದ ದಾರಿಯಾಗಬಹುದು. ನಿಯಮ ಉಲ್ಲಂಘನೆ ಮಾಡದೇ ನಿಮ್ಮ ಕಾರ್ಯಗಳನ್ನು ಮಾಡಿ. ಇಂದು ಸಂಗಾತಿಯ ನಡುವೆ ಭಿನ್ನಾಭಿಪ್ರಾಯಗಳು ಏಳಬಹುದು. ಒಬ್ಬರು ತಟಸ್ಥರಾಗಿ. ವಿವಾದವನ್ನು ಮಾಡಿಕೊಳ್ಳಲು ಹೋಗಬೇಡಿ.

ಕುಂಭ ರಾಶಿ:

ಯಾರ ಮೇಲೂ ದ್ವೇಷವನ್ನು ಸಾಧಿಸುವುದು ಬೇಡ. ಇಂದು ನೀವು ಮಕ್ಕಳ ಜೊತೆ ಖುಷಿಯಿಂದ ಕಾಲ ಕಳೆಯುವಿರಿ. ಅನಿದ್ದನ್ನು ಹೇಳಿಕೊಂಡು ಮನಸ್ಸು ನಿರಾಳವಾಗಲಿದೆ. ಅನಿಸಿದ್ದನ್ನು ಹೇಳಿ ಅನಂತರ ಪಶ್ಚಾತ್ತಾಪಪಡುವಿರಿ. ವ್ಯವಹಾರದಿಂದ ವಂಚಿತರಾಗುವಿರಿ. ತಾಯಿಯು ನಿಮಗೆ ಬೇಕಾದ ಸಹಕಾರವನ್ನು ಕೊಡುವಳು. ನೀವು ಖರೀದಿಸುವ ಭೂಮಿಯ ದಾಖಲೆಯನ್ನು ಸಮಾಧಾನಚಿತ್ತದಿಂದ ಕೂಲಂಕಷವಾಗಿ ಪರಿಶೀಲಿಸಿ.

ಮೀನ ರಾಶಿ:

ನಿಮ್ಮ ಜೀವನಕ್ಕೆ ಇಂದು ಯಾರಾದರೂ ಆಸರೆ ಬೇಕೆನಿಸಬಹುದು. ನಿಮ್ಮದಲ್ಲದ ವಿಚಾರದಲ್ಲಿ ಸಲಹೆಯನ್ನು ಕೊಡಲು ಹೋಗುವುದು ಬೇಡ. ಯಾರದೋ ಅಸೆಗೆ ನೀವು ಬಲಿಯಾಗಬಹುದು. ವಾಹನದಿಂದ ಅಲ್ಪ ಲಾಭವೂ ನಿಮಗೆ ಸಮಾಧಾನ ತರಬಹುದು. ಪ್ರಭಾವಿಗಳ ಜೊತೆ ವೈಯಕ್ತಿಕ ಸಂಬಂಧವನ್ನು ಬೆಳೆಸಿಕೊಳ್ಳುವಿರಿ. ಅನಪೇಕ್ಷಿತ ವಿಷಯವನ್ನು ಯಾರ ಜೊತೆಯೂ ಮಾತನಾಡಬೇಡಿ. ನಿಮ್ಮ‌‌ ಕೆಲಸದ ಬಗ್ಗೆ ಗಮನ ಹೆಚ್ಚಿರಲಿ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಶ್ರಾವಣ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಪೂರ್ವಾಫಲ್ಗುಣೀ, ವಾರ : ಭಾನು ಪಕ್ಷ : ಕೃಷ್ಣ, ತಿಥಿ : ದಶಮೀ, ನಿತ್ಯನಕ್ಷತ್ರ : ರೋಹಿಣೀ, ಯೋಗ : ಸಿದ್ಧಿ, ಕರಣ : ವಣಿಜ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 25 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:42 – 09:14, ಯಮಗಂಡ ಕಾಲ 10:46 – 12:18, ಗುಳಿಕ ಕಾಲ 13:50 – 15:21

-ಲೋಹಿತ್ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:29 am, Sun, 6 September 26

Loading...
Unable to load recommendations.
Follow Us