AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿನ ಭವಿಷ್ಯ: ಇಂದು ಈ ರಾಶಿಯವರು ಕರ್ತವ್ಯವನ್ನು ಮರೆತು ಅನ್ಯ ಕಾರ್ಯದಲ್ಲಿ ಆಸಕ್ತಿ…

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮೀ ತಿಥಿಯ ಶನಿವಾರದಂದು ಕುಚೋದ್ಯದಿಂದ ದುಃಖ, ಉಪದೇಶ, ಉದ್ವೇಗದ ಮಾತು, ಸಹಾಯದ ನಿರೀಕ್ಷೆ, ಅಧಿಕಾರದ ಗತ್ತು, ಅಣಕಿಸುವುದು, ಸಂಗಾತಿಯ ಆಕ್ಷೇಪ, ಶುಭ ಕಾರ್ಯಕ್ಕೆ ಪ್ರಯಾಣ ಇವೆಲ್ಲ ಈ ದಿನದ ವಿಶೇಷ.

ದಿನ ಭವಿಷ್ಯ: ಇಂದು ಈ ರಾಶಿಯವರು ಕರ್ತವ್ಯವನ್ನು ಮರೆತು ಅನ್ಯ ಕಾರ್ಯದಲ್ಲಿ ಆಸಕ್ತಿ...
ದಿನ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Sep 05, 2026 | 12:08 AM

Share

ಮೇಷ ರಾಶಿ:

ಇತರರಿಗೆ ಒಳ್ಳೆಯದನ್ನು ಮಾಡುವ ಕಾರ್ಯಕ್ಕೆ ಪ್ರತಿಫಲವಿದೆ. ಇಂದು ಮನೆಯಲ್ಲಿ ಏನಾದರೂ ತೊಂದರೆ ಕಾಣಿಸಿಕೊಳ್ಳಬಹುದು. ನಿಮ್ಮ ನಿರೀಕ್ಷಿತ ಗುರಿಯನ್ನು ತಲುಪಲು‌ ನೀವು ವಿಳಂಬ ಆಗಬಹುದು. ಸಂತೋಷವು ಇಂದು ಹೆಚ್ಚಾಗಬಹುದು.‌ ಬಂಧುಗಳು ನಿಮ್ಮನ್ನು ಬೇಕೆಂದೇ ತಪ್ಪು ದಾರಿ ತೋರಿಸುವರು. ಸಣ್ಣ ಕಾರ್ಯವನ್ನು ಮಾಡಲು ನಿಮಗೆ ಬಾರದು.‌ ಕೇಳಿದವರಿಗೆ ನಿಮ್ಮ ಸಹಾಯವು ಸಿಗಲಿದೆ. ಹೆಚ್ಚಿನ ಆದಾಯದ ಬಗದಗೆ ಚಿಂತನೆ ಮಾಡುವಿರಿ.

ವೃಷಭ ರಾಶಿ:

ಇಷ್ಟಮಿತ್ರರು ನಿಮ್ಮನ್ನು ಭೇಟಿ ಮಾಡುವರು. ಕ್ಷೇಮಸಮಾಚಾರವನ್ನು ಹಂಚಿಕೊಳ್ಳುವರು. ನಿಮ್ಮ ಕೆಲಸಗಳಿಗೇ ನೀವು ಇಂದು ಹೆಚ್ಚು ಪ್ರಾಮುಖ್ಯ ನೀಡಿ. ಹೂಡಿಕೆಯ ಚಿಂತನೆಯಲ್ಲಿ ನೀವು ಇರುವಿರಿ. ಸಂತಾನದ ಸುಖವನ್ನು ನೀವುಬಪಡೆಯುವಿರಿ. ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗುವಿರಿ. ಅತಿಯಾದ ಮರೆವು ಉಂಟಾಗಲಿದೆ ಇಂದು. ವಾಹನವನ್ನು ಚಲಿಸುವಾಗ ಬಹಳ ಎಚ್ಚರಿಕೆ ಅಗತ್ಯ.

ಮಿಥುನ ರಾಶಿ:

ನಿಮಗೆ ಮಕ್ಕಳ ಮುಂದಿನ ವಿದ್ಯಾಭ್ಯಾಸದ ಚಿಂತೆ ಹೆಚ್ಚಾಗುವುದು. ಸರ್ಕಾರದಲ್ಲಿ ಆಗಬೇಕಾದ ನಿಮ್ಮ ಕೆಲಸವು ಸ್ವಲ್ಪ ವೇಗವನ್ನು ಪಡೆಯವುದು. ಅಧಿಕಾರಿಗಳ ಭೇಟಿಯಿಂದ ನಿಮ್ಮ ಉದ್ಯೋಗದಲ್ಲಿ ಪ್ರಭಾವವು ಹೆಚ್ಚಾಗಬಹುದು. ಅಳಿವು ಉಳಿವಿನ ವಿಚಾರಕ್ಕೆ ತಟಸ್ಥರಾಗುವುದು ಸೂಕ್ತ. ಶಾಂತವಾದ ಮನಸ್ಸಿನಿಂದ ನೆಮ್ಮದಿ ಕಾಣುವುದು. ಸ್ವಲ್ಪ ಮಾನಸಿಕ ಆಲಸ್ಯವು ಇರುವುದು. ಗೊಂದಲವನ್ನು ಇನ್ನೊಬ್ಬರ ಬಳಿ ಹೇಳಿ.

ಕರ್ಕಾಟಕ ರಾಶಿ:

ಇಂದು ನೀವು ಮಾಡುವ ಕೆಲಸಗಳು ಲಾಭದಾಯಕ ಆಗಿದ್ದರೂ ಪರಿಶ್ರಮವೂ ಹೆಚ್ಚಿರಲಿದೆ. ನಿಮ್ಮನ್ನು ಭಾವನಾತ್ಮಕವಾಗಿ ಬಂಧಿಸುವ ಪ್ರಯತ್ನ ಸಾಗಲಿದೆ. ಚಂಚಲವಾದ ಮನಸ್ಸನ್ನು ನೀವು ನಿಯಂತ್ರಿಸಲು ಬೇಕಾದ ಕ್ರಮವನ್ನು ಅನುಸರಿಸಿ. ನಿಮ್ಮ ಬಂಧುಗಳು ಹಣಕಾಸಿನ ಸಹಾಯಕ್ಕಾಗಿ ನಿಮ್ಮನ್ನು ಕೇಳಿಯಾರು. ನಿಮ್ಮ ಕ್ಷುಲ್ಲಕ ಕಾರಣದಿಂದ ಅದನ್ನು ಬಿಟ್ಟ ಬಿಡುವುದು ಬೇಡ. ಮನಸ್ಸನ್ನು ಸಂಗಾತಿಯ ಜೊತೆ ಹಂಚಿಕೊಳ್ಳಿ.

ಸಿಂಹ ರಾಶಿ:

ಅಧಿಕಾರದ ಬಲಾಬಲವನ್ನು ತಿಳಿದುಕೊಳ್ಳ ವಾಗ್ವಾದವು ಅಧಿಕಾರಿಗಳ ನಡುವೆ ನಡೆಯಬಹುದು. ಕುಂಟುತ್ತಿರುವ ಉದ್ಯಮಕ್ಕೆ ವೇಗವನ್ನು ನೀವೇ ಕೊಡಬೇಕು. ಒಬ್ಬರಿಂದ ಆಗದ್ದನ್ನು ಮಾಡಲು ಹೋಗಬೇಡಿ. ಸಾಲ ಪಡೆದವರಿಂದ ಅಲ್ಪ ಹಣವನ್ನು ಹಿಂದಿರುಗಲಿದೆ. ನಿಮ್ಮ ಅಹಂಕಾರವೇ ನಿಮ್ಮನ್ನು ಜನರಿಂದ ದೂರವಿರುವಂತೆ ಮಾಡಬಹುದು. ಎಲ್ಲವನ್ನೂ ನಂಬಿಕೆಯ ಆಧಾರದ ಮೇಲೆ ಸ್ವೀಕರಿಸಬೇಕಿಲ್ಲ. ಪ್ರೇಮವು ಬುದ್ಧಿಯ ನೇತೃತ್ವದಲ್ಲಿ ನಡೆಯಲಿ.

ಕನ್ಯಾ ರಾಶಿ:

ಖರ್ಚನ್ನು ನೀವು ನಿಯಂತ್ರಣ ಮಾಡುವ ಅವಶ್ಯಕತೆ ಇಂದು ಬರಬಹುದು. ಮಹಿಳೆಯರು ನಿಮ್ಮಿಂದ ಸಹಾಯವನ್ನು ಪಡೆಯುವರು. ನೀವೇ ನಿರ್ಮಿಸಿಕೊಂಡ ಹಳೆಯ ಮನೆಗೆ ಹೋಗಿ ವಾಸಮಾಡಬೇಕಾದೀತು. ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಹುದು. ಹವಾಮಾನ ಬದಲಾವಣೆಯಿಂದ ನಿಮ್ಮ ದೇಹದ ಮೇಲೆ ವಿರುದ್ಧ ಪರಿಣಾಮವನ್ನು ಉಂಟುಮಾಡಬಹುದು. ಯಾರನ್ನೂ ಅವಲಂಬಿಸಲು ಹೋಗಬೇಡಿ. ನ್ಯಾಯಾಲಯದ ವಿಚಾರದಲ್ಲಿ ನಿಮಗಾದ ಕಹಿ ಅನುಭವವನ್ನು ಸಹಿಸಲಾಗದು.

ತುಲಾ ರಾಶಿ:

ನಿಮ್ಮ ಪೂರ್ವಯೋಜಿತ ವಿಷಯಗಳಿಂದ ಸಫಲತೆಯನ್ನು ಕಾಣಲಿದ್ದೀರಿ. ದೀರ್ಘಕಾಲದ ನೋವನ್ನು ಕಡಿಮೆ ಮಾಡಿಕೊಳ್ಳಲು ಇಂದು ಪ್ರಯತ್ನಿಸುವಿರಿ. ಪುಣ್ಯಸ್ಥಳದ ಕಡೆಗೆ ನಿಮ್ಮ ಗಮನವಿರುವುದು. ಉದ್ಯಮದಲ್ಲಿ ಹೊಸರೀತಿಯ ಲಾಭಾವನ್ನು ಪಡೆಯಲು ಆಲೋಚಿಸುವಿರಿ. ದೀರ್ಘಕಾಲ ಸ್ನೇಹಿತರು ವಿವಾಹಕ್ಕೆ ಹಿರಿಯರ ಅನುಮತಿಯನ್ನು ಪಡೆಕೊಳ್ಳಿ. ಅನಿರೀಕ್ಷಿತ ಅತಿಥಿಸತ್ಕಾರವು ನಿಮಗೆ ಸಿಗಲಿದೆ.

ವೃಶ್ಚಿಕ ರಾಶಿ:

ಮಕ್ಕಳ ವಿಚಾರದಲ್ಲಿ ಸಂತೃಪ್ತಿ ಇರದು. ಸ್ತ್ರೀ ಪುರುಷರ ನಡವೆ ಪರಸ್ಪರ ದ್ವೇಷಬರಬಹುದು. ಖಾಸಗಿ ಉದ್ಯೋಗಿಗಳಿಗೆ ಒಳ್ಳೆಯ ಸುದ್ದಿ ಸಿಗಬಹುದು. ನಿಮ್ಮ ಗುರಿಗಳು ಬದಲಾದಷ್ಟೂ ನಿಮ್ಮ‌ ಶ್ರಮವೂ ವ್ಯರ್ಥವಾಗಬಹುದು. ಸಂಗಾತಿಯ ಜೊತೆ ಹೆಚ್ಚು ಕಾಲ ಕಳೆಯುವ ಮನಸ್ಸಿದ್ದರೂ ಸಮಯದ ಅಭಾವದಿಂದ ಅದು ಸಾಧ್ಯವಾಗದು. ನಿಮ್ಮ ಅಧ್ಯಯನದಿಂದ ನಿಮ್ಮನ್ನು ವಿಚಲಿತಗೊಳಿಸುವ ಅನಗತ್ಯ ವಾದಗಳನ್ನು ತಪ್ಪಿಸಿ. ಅಂದುಕೊಂಡಂತೆ ಕಾರ್ಯವು ಸಾಗದು ಎಂಬ ಕೊರಗು ಇರುವುದು.

ಧನು ರಾಶಿ:

ಮಕ್ಕಳ‌‌ ಮೇಲೆ ನಿಮಗೆ ಬೇಸರ ಉಂಟಾಗಬಹುದು. ತಾಳ್ಮೆಯನ್ನು ಕಳೆದುಕೊಳ್ಳುವ ಸ್ಥಿತಿಯು ಎದುರಾಗಬಹುದು. ಹೆಚ್ಚಿನ ಆದಾಯಕ್ಕಾಗಿ ಸುಳ್ಳುಹೇಳಬೇಕಾದೀತು ಅಥವಾ ನಷ್ಟವನ್ನು ತುಂಬಿಕೊಳ್ಳಲು ಅನ್ಯಮಾರ್ಗವನ್ನು ಪ್ರವೇಶಮಾಡಬಹುದು. ಮುಂಗಡ ಹಣವನ್ನು ಪಡೆಯದೇ ಕೆಲಸ ಮಸಡಲಾರಿರಿ. ಯಾರಮೇಲೂ ಒತ್ತಡಬೇಡ. ಭೂಮಿಯ ಬಗ್ಗೆ ಜಾಗರೂಕತೆ ಅವಶ್ಯಕ. ಸಣ್ಣ ಪಾಲು ಕೈತಪ್ಪಬಹುದು. ಸಂಗಾತಿಯ ಮಾತುಗಳು ನಿಮಗೆ ಅನಿರೀಕ್ಷಿತ ಆದೀತು.

ಮಕರ ರಾಶಿ:

ನೀವು ಇಂದು ನಂಬಿಕೆಯನ್ನು ಸುಳ್ಳು ಮಾಡುವಿರಿ. ನಿಮ್ಮ ಪ್ರಾಬಲ್ಯವೇ ಮೇಲಾದೀತು. ದೈವದತ್ತವಾದ ಆರೋಗ್ಯವನ್ನು ನೀವೇ ಹಾಳುಮಾಡಿಕೊಳ್ಳುವಿರಿ. ಸ್ವಂತ ಉದ್ಯೋಗವಿದ್ದರೆ ಜನರು ವಂಚಿಸಬಹುದು. ನಿಮ್ಮ ಸಂಗಾತಿಯ ಜೊತೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗಲಾರದು. ಸಾಧನೆಯ ರುಚಿ ಇನ್ನಷ್ಟು ಹಂಬಲವನ್ನು ತರಿಸಲಿದೆ. ಇದೇ ನಿಮಗೆ ಇಷ್ಟದ ವಿಚಾರವಾಗಿದೆ. ನೂತನ ವಸ್ತುಗಳ ಖರೀದಿಗೆ ಹಣವು ಖರ್ಚಾದೀತು. ಸ್ನೇಹದಿಂದ ಪ್ರೇಮವು ಉಂಟಾಗಲಿದೆ.

ಕುಂಭ ರಾಶಿ:

ಅನಿರೀಕ್ಷಿತ ಧನಾಗಮನವು ನಿಮಗೆ ಸಂತಸವನ್ನು ತಂದರೂ ಮನೆಯಲ್ಲಿ ಅಸಮಾಧಾನ. ಅನವಶ್ಯಕ ವಸ್ತುಗಳನ್ನು ಖರೀದಿಸುವ ಚಪಲತೆ ಬರುವುದು. ನಿಮ್ಮ ಪ್ರತಿಭೆಯು ನಿರಾಶಾದಾಯಕವಾಗಿರುವುದು. ಮನೆಗೆ ಬಂದರನ್ನು ಬರಿ ಕೈಯಲ್ಲಿ ಏನನ್ನಾದರೂ ಕೊಡಿಸುವುದು ಉಚಿತ. ಮಕ್ಕಳ ಮೇಲಿನ ಮೋಹವು ನಿಮ್ಮನ್ನು ಕುರುಡು ಮಾಡಬಹುದು. ಯಾರ ಮೆಚ್ಚುಗೆಯೂ ನಿಮಗೆ ಸಮಾಧಾನ ತರದು.

ಮೀನ ರಾಶಿ:

ಸಂಕಟಪಟ್ಟುಕೊಂಡು ಬರುವ ಪುಣ್ಯವನ್ನೂ ಕಳೆದುಕೊಳ್ಳಬೇಡಿ. ಇಂದು ನಿಮ್ಮ ಸ್ವಂತ ಕಾರ್ಯದಲ್ಲಿ ಹೆಚ್ಚಿನ ಪ್ರಗತಿ ಇರುವುದು. ನೀವು ಇಂದು ಸಂಪನ್ಮೂಲ‌ ವ್ಯಕ್ತಿಳಾಗಿ ನೀವು ಇರುವಿರಿ. ನಿಮ್ಮ ಗುಣಗಳನ್ನು ಇತರರು ಹೇಳಿಯಾರು. ಸಮಯಕ್ಕೆ ನೀವು ಹೆಚ್ಚು ಮಹತ್ತ್ವವನ್ನು ಕೊಡಬಹುದು. ಸುಖದುಃಖಗಳು ಎರಡೂ ನಿಮಗೆ ಸಮವಾಗಿ ಸಿಗಬಹುದು. ಹೆಚ್ಚು ಶ್ರವಹಿಸಿ ಕೆಲಸ ಮಾಡುವುದನ್ನು ನಿಲ್ಲಿಸಬಹುದು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಶ್ರಾವಣ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಪೂರ್ವಾಫಲ್ಗುಣೀ, ವಾರ : ಶನಿ, ಪಕ್ಷ : ಕೃಷ್ಣ, ತಿಥಿ : ಅಷ್ಟಮೀ, ನಿತ್ಯನಕ್ಷತ್ರ : ಕೃತ್ತಿಕಾ, ಯೋಗ : ವಜ್ರ, ಕರಣ : ತೈತಿಲ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 26 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:14 – 10:46, ಯಮಗಂಡ ಕಾಲ 13:50 – 15:23, ಗುಳಿಕ ಕಾಲ 06:10 – 07:42

-ಲೋಹಿತ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಟಿವಿ9 ಇಂಪ್ಯಾಕ್ಟ್: 8 ವರ್ಷದಿಂದ ಆಗದ ಕೆಲಸ ಕೇವಲ ಹತ್ತು ದಿನದಲ್ಲೇ ಆಯ್ತು!
ಟಿವಿ9 ಇಂಪ್ಯಾಕ್ಟ್: 8 ವರ್ಷದಿಂದ ಆಗದ ಕೆಲಸ ಕೇವಲ ಹತ್ತು ದಿನದಲ್ಲೇ ಆಯ್ತು!
ಬಿಗ್ ಬಾಸ್ ಸ್ಪರ್ಧಿಗಳ ವಿಡಿಯೋ ಹಂಚಿಕೊಂಡ ಕಲರ್ಸ್ ಕನ್ನಡ; ಯಾರು ಗೊತ್ತಾಯ್ತಾ
ಬಿಗ್ ಬಾಸ್ ಸ್ಪರ್ಧಿಗಳ ವಿಡಿಯೋ ಹಂಚಿಕೊಂಡ ಕಲರ್ಸ್ ಕನ್ನಡ; ಯಾರು ಗೊತ್ತಾಯ್ತಾ
ದೆಹಲಿಯಲ್ಲಿ ಧಾರಾಕಾರ ಮಳೆ; ರಸ್ತೆಯಲ್ಲಿ ನಿಂತ ನೀರಿನಲ್ಲಿ ಈಜಾಡಿದ ಮಕ್ಕಳು
ದೆಹಲಿಯಲ್ಲಿ ಧಾರಾಕಾರ ಮಳೆ; ರಸ್ತೆಯಲ್ಲಿ ನಿಂತ ನೀರಿನಲ್ಲಿ ಈಜಾಡಿದ ಮಕ್ಕಳು
ವಿಚ್ಛೇದನದ ಬಗ್ಗೆ ಕೇಳಿದ್ದಕ್ಕೆ ದುನಿಯಾ ವಿಜಯ್ ನೀಡಿದ ಪ್ರತಿಕ್ರಿಯೆ ಏನು?
ವಿಚ್ಛೇದನದ ಬಗ್ಗೆ ಕೇಳಿದ್ದಕ್ಕೆ ದುನಿಯಾ ವಿಜಯ್ ನೀಡಿದ ಪ್ರತಿಕ್ರಿಯೆ ಏನು?
ಉದ್ಯಾನವನಗಳ ಸಂರಕ್ಷಣಾ ತಿದ್ದುಪಡಿ ವಿಧೇಯಕ ಸರ್ಕಾರಕ್ಕೆ ವಾಪಸ್
ಉದ್ಯಾನವನಗಳ ಸಂರಕ್ಷಣಾ ತಿದ್ದುಪಡಿ ವಿಧೇಯಕ ಸರ್ಕಾರಕ್ಕೆ ವಾಪಸ್
ಕೃಷ್ಣಾ ನದಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ ಡಿಕೆ ಶಿವಕುಮಾರ್
ಕೃಷ್ಣಾ ನದಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ ಡಿಕೆ ಶಿವಕುಮಾರ್
ಅಕ್ರಮವಾಗಿ ಸ್ಫೋಟಕಗಳ ಸಾಗಾಟ: 600 ಜಿಲೆಟಿನ್, 100 ಡಿಟೋನೇಟರ್ ಜಪ್ತಿ
ಅಕ್ರಮವಾಗಿ ಸ್ಫೋಟಕಗಳ ಸಾಗಾಟ: 600 ಜಿಲೆಟಿನ್, 100 ಡಿಟೋನೇಟರ್ ಜಪ್ತಿ
ಭಾರಿ ಮಳೆಯಿಂದ ದೆಹಲಿ ವಿಮಾನ ನಿಲ್ದಾಣ ಜಲಾವೃತ; ಪ್ರಯಾಣಿಕರ ಪರದಾಟ
ಭಾರಿ ಮಳೆಯಿಂದ ದೆಹಲಿ ವಿಮಾನ ನಿಲ್ದಾಣ ಜಲಾವೃತ; ಪ್ರಯಾಣಿಕರ ಪರದಾಟ
ಬೆಂಗಳೂರಿಗರೇ ಎಚ್ಚರ: ನಗರದಲ್ಲಿ ಟೋಯಿಂಗ್ ಕಾರ್ಯಾಚರಣೆ ಪುನರಾರಂಭ!
ಬೆಂಗಳೂರಿಗರೇ ಎಚ್ಚರ: ನಗರದಲ್ಲಿ ಟೋಯಿಂಗ್ ಕಾರ್ಯಾಚರಣೆ ಪುನರಾರಂಭ!
‘ಮೈಮೇಲೆ ಪ್ರಜ್ಞೆ ಇರಬೇಕು’: ಮಗ ಮಾಡಿದ ಕೃತ್ಯದ ಬಗ್ಗೆ ವಿಜಯ್ ಸಿಟ್ಟು
‘ಮೈಮೇಲೆ ಪ್ರಜ್ಞೆ ಇರಬೇಕು’: ಮಗ ಮಾಡಿದ ಕೃತ್ಯದ ಬಗ್ಗೆ ವಿಜಯ್ ಸಿಟ್ಟು