- TV9 Kannada Kannada News Photos Cricket Photos vaibhav sooryavanshi: IPL's Youngest Century-Maker Hailed by Rajat Patidar
‘ಯಾರೂ ಅವರಂತೆ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ’; ವೈಭವ್ರನ್ನು ಹೊಗಳಿದ ಆರ್ಸಿಬಿ ನಾಯಕ
ಭಾರತದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಕೇವಲ 14 ನೇ ವಯಸ್ಸಿನಲ್ಲಿ ಐಪಿಎಲ್ನಲ್ಲಿ ಶತಕ ಸಿಡಿಸಿ ಸಂಚಲನ ಮೂಡಿಸಿದ್ದಾರೆ. ಆರ್ಸಿಬಿ ನಾಯಕ ರಜತ್ ಪಾಟಿದರ್ ಅವರ ವಿಶಿಷ್ಟ ಬ್ಯಾಟಿಂಗ್ ಶೈಲಿ ಮತ್ತು ಬೌಲರ್‌ಗಳ ಮೇಲೆ ಪ್ರಾಬಲ್ಯ ಸಾಧಿಸುವ ಸಾಮರ್ಥ್ಯವನ್ನು ಹೊಗಳಿದ್ದಾರೆ. ಕಿರಿಯ ವಯಸ್ಸಿನಲ್ಲಿಯೇ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ ವೈಭವ್, ಭವಿಷ್ಯದ ತಾರೆಯಾಗಿ ಹೊರಹೊಮ್ಮುತ್ತಿದ್ದಾರೆ.
Updated on: Sep 04, 2026 | 10:38 PM

ಭಾರತದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರ ಆಟಕ್ಕೆ ಇಡೀ ಕ್ರಿಕೆಟ್ ಜಗತ್ತೇ ಸಲಾಂ ಹೊಡೆದಿದೆ. ಕೇವಲ 14 ನೇ ವಯಸ್ಸಿನಲ್ಲಿ ಐಪಿಎಲ್ನಲ್ಲಿ ಸ್ಫೋಟಕ ಶತಕ ಸಿಡಿಸಿ ಕ್ರಿಕೆಟ್ ಲೋಕದಲ್ಲಿ ಸಂಚಲನ ಸೃಷ್ಟಿಸಿದ್ದ ವೈಭವ್ ದೇಶೀಯ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಎರಡರಲ್ಲೂ ತಮ್ಮ ಛಾಪೂ ಮೂಡಿಸಿದ್ದಾರೆ. ಇದೀಗ ವೈಭವ್ ಅವರ ಆಟವನ್ನು ಹೊಗಳುವವರ ಸಾಲಿಗೆ ಆರ್ಸಿಬಿ ನಾಯಕ ರಜತ್ ಪಾಟಿದರ್ ಕೂಡ ಸೇರಿಕೊಂಡಿದ್ದಾರೆ(PC-PTI).

ಇತ್ತೀಚೆಗೆ ಸಂದರ್ಶನವೊಂದರಲ್ಲಿ ವೈಭವ್ ಸೂರ್ಯವಂಶಿ ಹೊಂದಿರುವ ಪ್ರತಿಭೆಯ ಬಗ್ಗೆ ಮಾತನಾಡಿರುವ ರಜತ್, ‘ವೈಭವ್ ಸೂರ್ಯವಂಶಿ ಇತರ ಕ್ರಿಕೆಟಿಗರಿಗಿಂತ ಬಹಳ ಭಿನ್ನ. ಐಪಿಎಲ್ನಲ್ಲಿ, ಇಷ್ಟು ಚಿಕ್ಕ ವಯಸ್ಸಿನಲ್ಲಿ ಅವರು ಬೌಲರ್‌ಗಳ ಮೇಲೆ ಪ್ರಾಬಲ್ಯ ಸಾಧಿಸಿದ ರೀತಿ ಅದ್ಭುತವಾಗಿದೆ. ನಾನು ಅಥವಾ ಬೇರೆ ಯಾರೂ ಅವರಂತೆ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ. ಅವರು ಅತ್ಯುತ್ತಮ ಬೌಲರ್‌ಗಳ ಮೇಲೂ ಪ್ರಾಬಲ್ಯ ಸಾಧಿಸುವ ರೀತಿ ಸಂಪೂರ್ಣವಾಗಿ ವಿಶಿಷ್ಟವಾಗಿದೆ(PC-PTI).

ವೈಭವ್ ಸೂರ್ಯವಂಶಿ ಅಸಾಧಾರಣ ಹುಡುಗ. ನಾನು ಅಥವಾ ಬೇರೆ ಯಾರೂ ಅವರಂತೆ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ. ಅವರು ಪ್ರತಿಯೊಬ್ಬ ಬೌಲರ್‌ನ ಮೇಲುಗೈ ಸಾಧಿಸಿದ ರೀತಿ, ಅವರು ಎಷ್ಟೇ ಶ್ರೇಷ್ಠ ಬೌಲರ್ ಆಗಿದ್ದರೂ, ಬೌಲರ್‌ಗಳು ಅನೇಕ ಬಾರಿ ಅಜ್ಞಾನಿಗಳಾಗಿ ಕಾಣಿಸಿಕೊಳ್ಳುವುದನ್ನು ನಾನು ನೋಡಿದ್ದೇನೆ. ಬೌಲರ್‌ಗಳು ಯಾವಾಗಲೂ ಅವರಿಗೆ ಏನು ಬೌಲಿಂಗ್ ಮಾಡಬೇಕೆಂದು ಯೋಚಿಸಿರುತ್ತಾರೆ. ಈ ವಯಸ್ಸಿನಲ್ಲಿ ಅವರು ಬೌಲರ್‌ಗಳ ಮೇಲೆ ಪ್ರಾಬಲ್ಯ ಸಾಧಿಸಿದ ರೀತಿ ಸಂಪೂರ್ಣವಾಗಿ ವಿಭಿನ್ನವಾಗಿದೆ ಎಂದಿದ್ದಾರೆ(PC-PTI).

ಇನ್ನು ಆರ್ಸಿಬಿ ಹಾಗೂ ರಾಜಸ್ಥಾನ್ ನಡುವಿನ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗಾಗಿಯೇ ವಿಶಿಷ್ಟ ಯೋಜನೆ ಇರುತ್ತಿತ್ತ ಎಂಬ ಪ್ರಶ್ನೆಗೆ ಉತ್ತರಿಸಿದ ರಜತ್ ಪಾಟಿದಾರ್, ‘ಓಹ್, ಖಂಡಿತವಾಗಿಯೂ ಇರುತ್ತಿತ್ತು. ರಾಜಸ್ಥಾನ್ ವಿರುದ್ಧದ ಪಂದ್ಯಗಳ ಸಮಯದಲ್ಲಿ ಕಾರ್ಯತಂತ್ರ ರೂಪಿಸುವಾಗ ತಂಡದ ಡ್ರೆಸ್ಸಿಂಗ್ ಕೋಣೆಯಲ್ಲಿ ವೈಭವ್ ಸೂರ್ಯವಂಶಿ ಬಗ್ಗೆ ಚರ್ಚಿಸಲಾಗುತ್ತಿತ್ತು. ಅವರನ್ನು ಕಟ್ಟಿಹಾಕುವ ಬಗ್ಗೆ ತಂತ್ರ ರೂಪಿಸಲಾಗುತಿತ್ತು ಎಂದು ಪಾಟಿದರ್ ಹೇಳಿಕೊಂಡಿದ್ದಾರೆ(PC-PTI).

ಇನ್ನು ಇಂಗ್ಲೆಂಡ್ ವಿರುದ್ಧ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ವೈಭವ್ ಸೂರ್ಯವಂಶಿ, ಭಾರತದ ಪರ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಂಗ್ಲೆಂಡ್ ಸರಣಿಯಲ್ಲಿ ಅವರು ಹೆಚ್ಚು ರನ್ ಗಳಿಸದಿದ್ದರೂ, ಜಿಂಬಾಬ್ವೆ ಸರಣಿಯಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದರು. ಆ ಸರಣಿಯಲ್ಲಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಲಭಿಸಿತ್ತು. ವೈಭವ್ ಸೂರ್ಯವಂಶಿ ಕಳೆದ ಮೂರು ಸರಣಿಗಳಲ್ಲಿ ತಂಡದ ಪರ ಆಡಿದ್ದಾರೆ. ಇದೀಗ ಅಫ್ಘಾನಿಸ್ತಾನ ವಿರುದ್ಧದ ನಾಲ್ಕನೇ ಸರಣಿಗೂ ಅವರನ್ನು ಆಯ್ಕೆ ಮಾಡಲಾಗಿದೆ(PC-PTI).

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.
Read More



