ನಿತ್ಯ ಭವಿಷ್ಯ: ಇಂದು ಈ ರಾಶಿಯವರು ಸ್ಥಾನಕ್ಕಾಗಿ ಭ್ರಷ್ಟ ಮಾರ್ಗದಲ್ಲಿ ನಡೆಯುವರು…
ನಿತ್ಯ ಭವಿಷ್ಯ 03 ಸೆಪ್ಟೆಂಬರ್ 2026 ರ ಪ್ರಕಾರ, ಕೆಲವು ರಾಶಿಗಳವರು ಸ್ಥಾನಮಾನಕ್ಕಾಗಿ ಭ್ರಷ್ಟ ಮಾರ್ಗಗಳನ್ನು ಅನುಸರಿಸುವ ಸಾಧ್ಯತೆಯಿದೆ. ಹಣಕಾಸು, ಉದ್ಯೋಗ, ಪ್ರೀತಿ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಎಲ್ಲಾ 12 ರಾಶಿಗಳ ಭವಿಷ್ಯವನ್ನು ಇಲ್ಲಿ ವಿವರವಾಗಿ ತಿಳಿಸಲಾಗಿದೆ. ನಿಮ್ಮ ರಾಶಿಗೆ ಅನಿರೀಕ್ಷಿತ ತಿರುವುಗಳು, ಹೊಸ ಅವಕಾಶಗಳು ಮತ್ತು ಎದುರಿಸಬೇಕಾದ ಸವಾಲುಗಳ ಬಗ್ಗೆ ತಿಳಿದುಕೊಂಡು ದಿನವನ್ನು ಉತ್ತಮವಾಗಿ ಯೋಜಿಸಿ.

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಕೃಷ್ಣ ಪಕ್ಷದ ಷಷ್ಠೀ ತಿಥಿಯ ಗುರುವಾರದಂದು ಪ್ರೇಮದ ಬಾಧೆ, ನಿರಂತರ ಕಲಿಕೆ, ಅನ್ಯರ ಪಾಲಾದ ಉದ್ಯೋಗ, ಸ್ವಾತಂತ್ರ್ಯ, ಧಾರ್ಮಿಕ ಆಸಕ್ತಿ, ಅನ್ನದಾನ, ಭೂಮಿಯ ಹಸ್ತಾಂತರ, ಉತ್ತಮ ಹವ್ಯಾಸ, ಪದವಿಯಿಂದ ಗೌರವ ಇವೆಲ್ಲ ದಿನದ ವಿಶೇಷ.
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಶ್ರಾವಣ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಪೂರ್ವಾಫಲ್ಗುಣೀ, ವಾರ : ಗುರು, ಪಕ್ಷ : ಕೃಷ್ಣ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ಅಶ್ವಿನೀ, ಯೋಗ : ವ್ಯಾಘಾತ, ಕರಣ : ಭದ್ರ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 28 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13:51 – 15:24, ಯಮಗಂಡ ಕಾಲ 06:10 – 07:42, ಗುಳಿಕ ಕಾಲ 09:14 – 10:47
ಮೇಷ ರಾಶಿ : ನಿಮ್ಮ ತೊಂದರೆಯ ಪರಿಹಾರಕ್ಕೆ ಹತ್ತಾರು ಮಾರ್ಗಗಳು ಇವೆ. ಅದನ್ನು ಅನ್ಯರ ಮೂಲಕ ಕೇಳಿ ತಿಳಿದುಕೊಳ್ಳುವ ಪ್ರಯತ್ನ ಮಾಡಿ. ಸುತ್ತಲಿನವರು ನಿಮ್ಮನ್ನು ಅರ್ಥಮಾಡಿಕೊಳ್ಳುವರು. ಆದರೆ ಅವರಿಂದ ಗೌರವ ಸಿಗುತ್ತಿಲ್ಲ ಎಂಬ ಕೊರಗು ಕಾಡಬಹುದು. ಹೊಸತನ್ನು ಕಲಿಯಬೇಕು ಎನ್ನುವ ಬಯಕೆ ಹೆಚ್ಚು ಇರಲಿದೆ. ಅನಿರೀಕ್ಷಿತವಾಗಿ ಆರೋಗ್ಯ ಕೆಡಬಹುದು. ಸಂಗಾತಿಯಿಂದ ಸಹಕಾರವು ನಿಮಗೆ ಸಿಗಲಿದೆ.
ವೃಷಭ ರಾಶಿ : ನಿಮಗೆ ಅನೇಕ ಅವಕಾಶಗಳು ಸಿಗಲಿದ್ದು ಅದನ್ನು ಬಿಡುವಿರಿ. ಕೃಷಿ ಚಟುವಟಿಕೆಗಳನ್ನು ತೊಡಗಿಕೊಳ್ಳುವ ಸಾಧ್ಯತೆ ಇದೆ. ಕುಟುಂಬದ ಸೌಖ್ಯವನ್ನು ಇಚ್ಛಿಸುವಿರಿ. ಕೆಲವನ್ನು ಮಾತನಾಡಿ ಕೆಡಿಸಿಕೊಳ್ಳುವಿರಿ. ಇದು ನಿಮ್ಮನ್ನು ಚಿಂತೆಗೆ ಚಿಂತೆಗೆ ಒಳಗಾಗುವಿರಿ. ಅಧಿಕಾರಿವರ್ಗವು ನಿಮ್ಮ ಮೇಲೆ ಒತ್ತಡವನ್ನು ತರಬಹುದು. ನೀವೇ ನಿಮಗೆ ವೈರಿಯಾಗುವ ಸಾಧ್ಯತೆ ಇದೆ. ಸಾಮರಸ್ಯದ ಕೊರೆತೆಯು ನೀಗಲಿದೆ. ಮಕ್ಕಳಿಂದ ನೀವು ಸ್ವತಂತ್ರರಾಗಲು ಬಯಸುವಿರಿ. ಮಿಥುನ ರಾಶಿ : ಅಪೇಕ್ಷೆ ಇಲ್ಲದೇ ಕೆಲಸವನ್ನು ಮಾಡುವುದು ನಿಮಗೆ ಇಷ್ಟವಾಗುವುದು. ಮಕ್ಕಳ ಭಾವನೆಗೆ ಸ್ಪಂದಿಸಿ ಅವರನ್ನು ಖುಷಿಪಡಿಸುವಿರಿ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದ್ದು ನಿಮಗೆ ಭಯವಾಗಬಹುದು. ಕಲಹವು ಸಣ್ಣದೇ ಆಗಿದ್ದರೂ ಅದ ಫಲವು ಬಹಳ ದೊಡ್ಡಾದಾಗಿರುವುದು. ಮಾತಿನ ಮೇಲೆ ನಿಮ್ಮ ನಿಯಂತ್ರಣವಯ ಅಗತ್ಯ. ಬಂಧುಗಳು ನಿಮ್ಮನ್ನು ಪ್ರಶಂಸಿಸುವರು. ಮಹಿಳೆಯರು ಸ್ವ ಉದ್ಯೋಗವನ್ನು ಮಾಡಲು ಬಯಸಬಹುದು.
ಕರ್ಕಾಟಕ ರಾಶಿ : ಬರಬೇಕಾದ ಹಣವು ನಿಮಗೆ ಸಿಗುವುದು ಕಷ್ಟವಾಗುವುದು. ಓಡಾವೂ ವ್ಯರ್ಥವಾಗಿ, ಬೇಸರ ತರಬಹುದು. ಇಂದು ಹೊಸ ಉತ್ಸಾಹದಿಂದ ವೃತ್ತಿಗೆ ತೆರಳಿದರೂ ನಿಮ್ಮೊಳಗೆ ಆತಂಕವಂತೂ ಇರುವುದು. ಧನನಷ್ಟವಾದರೂ ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸುವಿರಿ. ದುರ್ಬಲ ಮನಸ್ಸಿಗೆ ನಕಾರಾತ್ಮಕ ಅಂಶಗಳು ಬರಬಹುದು. ಪ್ರಾತಃಕಾಲದಲ್ಲಿಯೇ ಅದನ್ನು ಕಳೆದುಕೊಳ್ಳುವ ಉಪಾಯವನ್ನು ಮಾಡಿಕೊಳ್ಳಿ.
ಸಿಂಹ ರಾಶಿ : ಆತುರದಲ್ಲಿ ಇಂದು ಅಸಂಬದ್ಧತೆ ಏರ್ಪಡುವ ಸಾಧ್ಯತೆ ಇದೆ. ವಿವಾಹದ ಪ್ರಸ್ತಾಪಗಳು ಬಂದು ಮತ್ತೆ ಹೋಗುತ್ತವೆ ಅಷ್ಟೇ. ಪ್ರಯತ್ನಪೂರ್ವಕವಾಗಿ ನಿಮ್ಮ ಕೆಲಸವನ್ನು ಪೂರೈಸುವಿರಿ. ಉದ್ಯೋಗದಲ್ಲಿ ಭಡ್ತಿಗಾಗಿ ಪ್ರಯತ್ನಿಸುವಿರಿ. ಆಲಸ್ಯವು ಇಂದಿನ ಕಾರ್ಯವನ್ನು ನಿಧಾನ ಮಾಡಬಹುದು. ವಿದ್ಯಾರ್ಥಿಗಳಿಗೆ ಸಮಯದ ಅಭಾವವು ಆಗಬಹುದು. ಕೆಲವು ದಿನಗಳ ವಿರಾಮವನ್ನು ಪಡೆದು ಪ್ರವಾಸ ಹೋಗುವಿರಿ. ನಿಮ್ಮ ವಸ್ತುವನ್ನು ಸರಿಯಾಗಿ ಇಟ್ಟುಕೊಳ್ಳಿ.
ಕನ್ಯಾ ರಾಶಿ : ಔದ್ಯೋಗಿಕ ವಿಚಾರದಲ್ಲಿ ನೀವು ಹೆಚ್ಚಿನ ಗಮನ ಅವಶ್ಯಕ. ಹಿರಿಯರ ಉಪದೇಶವು ನಿಮಗೆ ಕಿರಿಕಿರಿ ಎನಿಸಬಹುದು. ಗೃಹನಿರ್ಮಾಣದಲ್ಲಿ ವಿಘ್ನಗಳು ಬರಲಿದೆ. ನಿಮ್ಮ ಆದಾಯದ ಮೂಲವಾದ ವ್ಯಾಪಾರವು ಲಾಭವನ್ನು ಕೊಡಬಹುದು. ಆಪ್ತರ ಜೊತೆ ಪ್ರಯಾಣ ಮಾಡುವಿರಿ. ಪ್ರೇಮವು ಅತಂತ್ರ ಸ್ಥಿತಿಗೆ ಹೋಗಬಹುದು. ನೀರಿನ ಪ್ರದೇಶದಲ್ಲಿ ಜಾಗರೂಕತೆ ಅವಶ್ಯಕ. ಆಪ್ತರ ಜೊತೆ ದೂರದ ಊರಿಗೆ ಪ್ರಯಾಣ ಮಾಡುವ ಸಾಧ್ಯತೆ ಇದೆ.
ತುಲಾ ರಾಶಿ : ನೀವು ಆಯ್ಕೆ ಮಾಡಿಕೊಳ್ಳುವ ಕೆಲಸವೇ ನಿಮ್ಮ ಭವಿಷ್ಯಕ್ಕೆ ಮಾರ್ಗವನ್ನು ತೋರಿಸುವುದು. ಉದ್ಯೋಗದಲ್ಲಿ ಉನ್ನತ ಸ್ಥಾನವನ್ನು ಪಡೆಯುವ ಅವಕಾಶಗಳು ಲಭ್ಯವಾಗುವುವು. ಆಪ್ತರ ಸಹಾಯದಿಂದ ನಿಮಗೆ ಉದ್ಯೋಗವು ಸಿಗಬಹುದು. ಮಾತನ್ನು ಉಳಿಸಿಕೊಳ್ಳುವುದು ನಿಮಗೆ ಕಷ್ಟವಾದೀತು. ನಿಮ್ಮವರ ಮೇಲೆ ಅನುಮಾನವು ದೂರವಾಗಲು ಕಾರಣವಾಗಬಹುದು. ನಿಮ್ಮ ಹೇಳಿಕೆಗಳು ಸ್ಪಷ್ಟವಾಗಿರಲಿ.
ವೃಶ್ಚಿಕ ರಾಶಿ : ಮನೆಯ ಸಂತೋಷದ ವಾತಾವರಣವು ಪುಟ್ಟ ಕಾರಣಕ್ಕೆ ಹಾಳಾಗಬಹುದು. ತನಗೆ ಬೇಕಾದುದನ್ನು ಪಡೆಯುವ ಆತುರತೆ ಇರಲಿದೆ. ಸ್ನೇಹಿತರಿಂದ ನಿಮಗೆ ಉಡುಗೊರೆ ಸಿಗಬಹುದು. ಆದಾಯ ಮೂಲವನ್ನು ತೋರಿಸದೇ ಹಣವನ್ನು ರಕ್ಷಿಸಲಾಗದು. ಜಾಣ್ಮೆಯಿಂದ ಕಾರ್ಯವನ್ನು ಸಾಧಿಸಬಹುದು. ನಿಮಗೆ ಬೇಕಾದ ವಸ್ತುವು ಯಾರಿಂದಲಾದರೂ ಸಿಗಬಹುದು. ಉದ್ಯಮದ ವಾಸ್ತವಿಕ ಚಿತ್ರಣ ಅಂತಿಮವಾಗಿ ಗೊತ್ತಾಗಲಿದೆ. ಇಂದು ನಿಮಗೆ ಸಿಕ್ಕಿದ್ದರಲ್ಲಿ ಸಂತೋಷಿಸಿ.
ಧನು ರಾಶಿ : ನೀವು ಅನಿರೀಕ್ಷಿತವಾಗಿ ಎದುರಾದ ಪರಿಸ್ಥಿತಿಯನ್ನು ನಿಭಾಯಿಸುವ ವಿಧಾನವನ್ನು ಕಲಿಯುವುದು ಯೋಗ್ಯ. ಕೋಪವನ್ನು ಬಹಳ ಶ್ರಮದಿಂದ ನಿಯಂತ್ರಣ ಮಾಡಿಕೊಳ್ಳುವಿರಿ. ನಿಮ್ಮ ವಿದ್ಯಾಭ್ಯಾಸವು ಪ್ರಗತಿಯತ್ತ ಸಾಗುವುದು. ಹಣಕಾಸಿನ ವಿಚಾರದಲ್ಲಿ ವಿಳಂಬವಾದರೂ ತಿಂದರೆ ಇಲ್ಲ. ನಿಮ್ಮ ಆದಾಯದ ಮೂಲವು ಹೊರಗಿನಿಂದ ಬರುವುದಾಗಿದೆ. ಹಾಗಾಗಿ ಹಣಕ್ಕಾಗಿ ತಲೆ ಕೆಡಸಿಕೊಳ್ಳುವುದಿಲ್ಲ. ಬೇಕಾಗಿದ್ದನ್ನು ಪಡೆಯುವಿರಿ. ಸೇವಾ ಮನೋಭಾವವನ್ನು ಇಟ್ಟುಕೊಳ್ಳುವಿರಿ.
ಮಕರ ರಾಶಿ : ನೀವು ಅತಿಯಾದ ಮಾನಸಿಕ ಹಿಂಸೆಯನ್ನು ಅನುಭವಿಸಬೇಕಾದ ಸ್ಥಿತಿಯು ಬರಬಹುದು. ಹೊಸ ಗೆಳೆತನ ನಿಮಗೆ ಬಹಳ ಇಷ್ಟವಾಗುವುದು. ವಿವಾದದಲ್ಲಿ ಜಯವಿದೆ ಎಂದು ಎಲ್ಲರ ಬಳಿಯೂ ವಾದಕ್ಕೆ ಹೋಗುವುದು ಬೇಡ. ಆಕಸ್ಮಿಕ ಧನಲಾಭವು ನಿಮಗೆ ಸಂತೋಷವನ್ನು ಕೊಡಲಿದೆ. ಅನವಶ್ಯಕ ಮಾತುಗಳಿಂದ ವಿವಾದವು ಸೃಷ್ಟಿಯಾಗುವುದು. ಕುಟುಂಬದ ಕಲಹವು ನಿಮಗೆ ಹಲವು ವಿಚಾರಗಳನ್ನು ತಿಳಿಸೀತು.
ಕುಂಭ ರಾಶಿ : ನಿಮ್ಮ ದುರಭ್ಯಾಸದಿಂದ ಇಂದಿನ ಸಮಯವನ್ನು ನಷ್ಟಮಾಡಿಕೊಳ್ಳುವಿರಿ. ನಿಮ್ಮನ್ನು ಸರಿ ದಾರಿಗೆ ತರುವ ಪ್ರಯತ್ನದಲ್ಲಿ ಮನೆಯವರು ಇರುವರು. ನಿಮ್ಮ ಆಲೋಚನೆಗಳಿಂದ ನಿಮ್ಮ ಸ್ಥಾನವೇ ಬದಲಾಗಬಹುದು. ಬಾಂಧವ್ಯವು ಗಟ್ಟಿಯಾಗಬಹುದು. ಒತ್ತಡದಿಂದ ಹೊರಬಂದ ಕಾರಣ ನಿರಾಳವೆನಿಸಬಹುದು. ಸಮಾಜಮುಖಿಯಾದ ಕಾರ್ಯದಲ್ಲಿ ತೊಡಗಿಕೊಳ್ಳುವಿರಿ. ಆರ್ಥಿಕ ತೊಂದರೆಯನ್ನು ನಿಭಾಯಿಸುವ ಕಲೆ ಗೊತ್ತಾಗಲಿದೆ.
ಮೀನ ರಾಶಿ : ಇತರರು ನಿಮ್ಮ ಕುರಿತು ಬೇಡದ ಮಾತುಗಳನ್ನು ಆಡುವ ಸಾಧ್ಯತೆಯೂ ಹೆಚ್ಚು. ಹಣವು ಬಂದ ಹಾಗೇ ಹೋಗುವುದು. ನೌಕರರಿಂದ ನಿಮಗೆ ತೊಂದರೆಯಾಗಬಹುದು. ವಿದ್ಯಾರ್ಥಿಗಳಿಗೆ ಯೋಗ್ಯವಾದ ಮಾರ್ಗದರ್ಶನ ಬೇಕಾಗುವುದು. ಸುಖದಲ್ಲಿ ಇಂದು ಮಾಡಬೇಕಾದ ಕೆಲಸವನ್ನು ಮರೆಯುವಿರಿ. ಕಂಟಕದಿಂದ ನೀವು ಮುಕ್ತರಾಗುವಿರಿ. ಯಾವುದನ್ನೇ ಆರಂಭದಿಂದಲೇ ಅದು ಬರಬೇಕು.
-ಲೋಹಿತ್ ಹೆಬ್ಬಾರ್ – 8762924271 (what’s app only)




