AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿತ್ಯ ಭವಿಷ್ಯ: ಇಂದು ಈ ರಾಶಿಯವರ ಬಾಂಧವ್ಯ ಹಣಕಾಸಿನ ವಿಚಾರಕ್ಕೆ ಕೊನೆಯಾಗಲಿದೆ…

Horoscope Today 02 September: ಸೆಪ್ಟೆಂಬರ್ 02, 2026ರ ಇಂದಿನ ರಾಶಿ ಭವಿಷ್ಯ: ಶ್ರಾವಣ ಕೃಷ್ಣ ಚತುರ್ಥೀ ಬುಧವಾರದಂದು ಕೆಲವು ರಾಶಿಗಳ ಬಾಂಧವ್ಯಗಳು ಹಣಕಾಸಿನ ಕಾರಣಕ್ಕೆ ಅಂತ್ಯಗೊಳ್ಳಬಹುದು. ಆತ್ಮಾವಲೋಕನ, ದುರಸ್ತಿಗೆ ಹಣ ಖರ್ಚು, ಹೂಡಿಕೆಯಿಂದ ಸಂತೋಷ ಹಾಗೂ ಮಕ್ಕಳ ಮೇಲಿನ ಆತಂಕಗಳು ಕಂಡುಬರಲಿವೆ. ಪ್ರತಿಯೊಂದು ರಾಶಿಯ ಸಂಪೂರ್ಣ ಹಣಕಾಸು, ಪ್ರೀತಿ, ಆರೋಗ್ಯ ಮತ್ತು ವೃತ್ತಿಜೀವನದ ದೈನಂದಿನ ಜ್ಯೋತಿಷ್ಯ ವಿವರ ಇಲ್ಲಿದೆ.

ನಿತ್ಯ ಭವಿಷ್ಯ: ಇಂದು ಈ ರಾಶಿಯವರ ಬಾಂಧವ್ಯ ಹಣಕಾಸಿನ ವಿಚಾರಕ್ಕೆ ಕೊನೆಯಾಗಲಿದೆ...
ಉದ್ಯೋಗ ಭವಿಷ್ಯImage Credit source: Getty Images
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Sep 02, 2026 | 3:50 AM

Share

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಕೃಷ್ಣ ಪಕ್ಷದ ಚತುರ್ಥೀ ತಿಥಿಯ ಬುಧವಾರದಂದು ಆತ್ಮಾವಲೋಕನ, ದುರಸ್ತಿಗೆ ಹಣ ಖರ್ಚು. ಕಾಮಗಾರಿ ಪರಿಶೀಲನೆ, ಅಧಿಕಾರದಲ್ಲಿ ಅನಿಶ್ಚಿತತೆ, ಹೂಡಿಕೆಯಿಂದ ಸಂತೋಷ, ಮಕ್ಕಳ‌ ಮೇಲೆ ಆತಂಕ, ವಾಹನ ಚಾಲನೆಗೆ ಅನನುಮತಿ ಇವೆಲ್ಲ ದಿನದ ವಿಶೇಷ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಶ್ರಾವಣ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಪೂರ್ವಾಫಲ್ಗುಣೀ, ವಾರ : ಬುಧ, ಪಕ್ಷ : ಕೃಷ್ಣ, ತಿಥಿ : ಪಂಚಮೀ, ನಿತ್ಯನಕ್ಷತ್ರ : ರೇವತೀ, ಯೋಗ : ಧ್ರುವ, ಕರಣ : ತೈತಿಲ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 28 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:19 – 13:52, ಯಮಗಂಡ ಕಾಲ 07:42 – 09:14, ಗುಳಿಕ ಕಾಲ 10:47 – 12:19

ಮೇಷ ರಾಶಿ : ಧಾರ್ಮಿಕವಾಗಿ ನೀವು ಹೆಚ್ಚು ಆಸಕ್ತರಾಗಬೇಕಾಗುತ್ತದೆ. ಆಪತ್ತಿನಲ್ಲಿ ಇರುವ ನಿಮಗೆ ಸ್ನೇಹಿತರ ಸಹಾಯ ಸಿಗಲಿದೆ, ಕೇಳಿ ಪಡೆಯಿರಿ. ಮನೆಗೆ ಬಂದವರಿಗೆ ಯೋಗ್ಯ ಆತಿಥ್ಯ ನೀಡುವಿರಿ. ಅಧಿಕ ಖರ್ಚಿಗೆ ಇಂದು ಬಹಳ ಆತಂಕಪಡುವಿರಿ. ನಿಮ್ಮ ಬಳಿ ಸಹಾಯ ಕೇಳಿ ಬಂದರೆ ಇಲ್ಲವೆನ್ನಬೇಡಿ. ನಿಯಮ ಬದ್ಧತೆಯನ್ನು ಯಾರೂ ಪ್ರಶ್ನಿಸಲಾರರು. ನಿಮ್ಮ ತೊಂದರೆಗಳು ಇನ್ನೊಬ್ಬರ ಮೇಲೆ ಪರಿಣಾಮ ಬೀರುವುದು.

ವೃಷಭ ರಾಶಿ : ಇಂದು ನೀವು ಎಲ್ಲರ ಮೇಲೂ ಸಿಟ್ಟು ಮಾಡಿಕೊಳ್ಳುವಿರಿ. ಮಾತಿಗೆ ಎದುರುತ್ತರ ಕೊಡುವಿರಿ. ಅಧಿಕಾರವು ಶಾಶ್ವತವಲ್ಲ ಎಂಬ ಮಾತು ನಿಮಗೆ ಕೇಳಿಸುತ್ತಿರಲಿ. ವಿವೇಚನೆಯನ್ನು ಕಳೆದುಕೊಂಡು ಇಂದಿನ ಮಾತುಕತೆಗಳು ತಾರಕಕ್ಕೆ ಹೋಗಬಹುದು. ನಿಮ್ಮ ಪರಾಕ್ರಮವು ಕೆಲಸದಲ್ಲಿ ಇರಲಿ. ಕಛೇರಿಯಲ್ಲಿ ಒತ್ತಡದ ವಾತಾವರಣ ಇದ್ದಕಾರಣ ನಿಮ್ಮ ಪೂರ್ವಯೋಜನೆ ಸಫಲವಾಗದು. ಸಂಗಾತಿಯನ್ನು ತಮಾಷೆ ಮಾಡಲು ಹೋಗಿ ವೈಮನಸ್ಸು.

ಮಿಥುನ ರಾಶಿ : ವೈಯಕ್ತಿಕ ಕೆಲಸಗಳೇ ಬಹಳ ಇರಲಿದ್ದು ಇನ್ನೊಂದರ ಕುರಿತು ಇಂದು ಯೋಚನೆ ಅಸಾಧ್ಯವಾದೀತು. ಕಾನೂನಾತ್ಮಕ ಹಾದಿಯಲ್ಲಿ ನಿಮಗೆ ಜಯ ಸಿಗುವ ನಿರೀಕ್ಷೆ ಇರುವುದು. ಇಂದು ನಿಮಗೆ ಸಿಕ್ಕ ಗೌರವವನ್ನು ಕಂಡು ಶತ್ರುಗಳು ಹುಟ್ಟಿಕೊಂಡಾರು. ನಿಮ್ಮದೆಂದು ಹೇಳಿಕೊಳ್ಳುವ ವಸ್ತು ನಿಮ್ಮದಲ್ಲದೇ ಹೋಗಬಹುದು. ಸದಾಕಾಲ ಸಂತೋಷದಿಂದ ಇರಲು ನೀವೇ ಏನಾದರೂ ಕ್ರಮವನ್ನು ಅನುಸರಿಸುವಿರಿ. ಸ್ವಯಂ ಕೃತ ಅಪರಾಧವೇ ನಿಮಗೆ ಮುಳುವಾಗಬಹುದು.

ಕರ್ಕಾಟಕ ರಾಶಿ : ನಿಮಗೆ ಇಂದು ಪ್ರಭಾವೀ ವ್ಯಕ್ತಿಗಳ ಸಹವಾಸದಿಂದ ಸ್ಥಾನವು ಪ್ರಾಪ್ತಿಯಾಗಲಿದೆ. ಸಂಗಾತಿಯ ಮನೋಭಾವವನ್ನು ಪೂರ್ತಿಯಾಗಿ ತಿಳಿಯಲು ಸಾಧ್ಯವಾಗದು. ನಿಮ್ಮ ಕೆಳಗೆ ಕೆಲಸ ಮಾಡುವವರು ಸರಿಯಾಗಿ ನಿರ್ವಹಿಸದೇ ನೀವು ಅನಂತರ ಮಾಡಬೇಕಾದೀತು. ನೇರವಾಗಿ ದಾನ ಮಾಡಲಾಗದೇ ಇದ್ದರೂ ದೈವ ನಿಮ್ಮ ಕೈಯಿಂದ ಮಾಡಿಸುತ್ತದೆ. ವ್ಯಕ್ತಿತ್ವವನ್ನು ನೋಡಿ ನಿಮ್ಮ ನಿರ್ಧಾರವು ಇರಲಿ. ಕೈಗೆ ಸಿಗದ ಹಣ್ಣು ಹುಳಿ ಎನ್ನುವುದು ಸಹಜವೇ.

ಸಿಂಹ ರಾಶಿ : ಇಂದು ಆರಂಭಿಸಿದ ಕಾರ್ಯವನ್ನು ಮುಗಿಸುವ ಮನೋಭಾವದಲ್ಲಿ ಇರುವಿರಿ. ಉದ್ಯೋಗಕ್ಕೆ ಸಂಬಂಧಿಸಿದಂತೆ ಸ್ವತಂತ್ರನಿರ್ಧಾರವನ್ನು ತೆಗೆದುಕೊಳ್ಳದೇ ಉದ್ಯೋಗಿಗಳ ಅಭಿಪ್ರಾಯವನ್ನೂ ಕಲೆಹಾಕಿ ಅಂತಿಮ‌ನಿರ್ಧಾರಕ್ಕೆ ಬರುವುದು ಉತ್ತಮ. ಸಂಗಾತಿಯ ಬೇಸರವನ್ನು ಸರಿಮಾಡುವಿರಿ. ದಾಂಪತ್ಯದಲ್ಲಿನ ಒಡಕು ಎಲ್ಲರಿಗೂ ಗೊತ್ತಾಗಂತೆ ಸರಿ ಮಾಡಿಕೊಳ್ಳಬೇಕಾಗಬಹುದು. ನಿಮ್ಮ ಪ್ರಯಾಣವು ತೊಂದರೆಯಿಂದ ಕೂಡಿರಲಿದೆ.

ಕನ್ಯಾ ರಾಶಿ : ನಿಮ್ಮ ಕಾರ್ಯಕ್ಷೇತ್ರವನ್ನು ಉತ್ತಮ ಮಾಡಿಕೊಳ್ಳುವುದು ಹೊಣೆಗಾರಿಕೆ ಆಗುವುದು. ಆರ್ಥಿಕವಾದ ನಷ್ಟವನ್ನು ಸರಿ‌ಮಾಡಿಕೊಳ್ಳಲು ನೀವು ಉದ್ಯೋಗವನ್ನು ಬದಲಿಸುವಿರಿ. ವಾದದಲ್ಲಿ ನೀವು ಸೋಲುವ ಸಾಧ್ಯತೆ ಇದ್ದು, ಗೆಲ್ಲಲು ನಿಮ್ಮ‌ ಪರಿಶ್ರಮವು ಅಧಿಕವಾಗಲಿದೆ. ವ್ಯಾಪಾರದ ನಷ್ಟವನ್ನು ಹೇಗಾದರೂ ತೂಗಿಸಿಕೊಳ್ಳುವಿರಿ. ಹಣಕಾಸಿನ ವಿಚಾರಕ್ಕೆ ಅಪವಾದ ಬರಬಹುದು. ನಿಮ್ಮನ್ನು ಪರೋಕ್ಷವಾಗಿ ಯಾರದರೂ ನಿಂದಿಸಬಹುದು.

ತುಲಾ ರಾಶಿ : ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಅತಿಯಾದ ಭಯವು ಕಾಡಬಹುದು. ನಿಮ್ಮಿಂದ ಆಗದ ಕೆಲಸವನ್ನು ಮತ್ತೆ ಮತ್ತೆ ಮಾಇನ್ನೊಬ್ಬರಅಪಮಾನಕ್ಕೆ ಒಳಗಾಗಬೇಡಿ. ಆರ್ಥಿಕ ವಿಭಾಗದಲ್ಲಿ ಕಾರ್ಯ ಮಾಡುವವರಿಗೆ ತೊಂದರೆಗಳು ಬರಬಹುದು. ಏಕಾಗ್ರತೆಯಿಂದ ಇರಲು ನಿಮಗೆ ಕಷ್ಟವಾದೀತು.‌ ಕೆಲಸಕ್ಕಾಗಿ ಬಹಳ‌ ಸಮಯ ಕಾಯಬೇಕಾಗಬಹುದು. ಮಿತ್ರರಿಂದ ಸಹಾಯವನ್ನು ಪಡೆದು ನಿಮಗೆ ಆಗುವ ವ್ಯವಹಾರವನ್ನು ಮಾಡಿಲೊಳ್ಳುವಿರಿ. ಬಹಳ ದಿನಗಳ ಅನಂತರ ಸಹೋದರನ ಜೊತೆ ಕೆಲವು ಸಮಯವನ್ನು ಕಳೆಯುವಿರಿ.

ವೃಶ್ಚಿಕ ರಾಶಿ : ನಿಮ್ಮ‌ ಮನಸ್ಸನ್ನು ಕದಡಲೆಂದು ಕೆಲವರು ತಯಾರಿ ಮಾಡಬಹುದು. ನಿಮ್ಮ ಸಂಕಟವನ್ನು ಪರಿಹರಿಸಿಕೊಳ್ಳಲು ದೈವದ ಮೊರೆ ಹೊಗುವಿರಿ. ದೂರದ ಬಂಧುಗಳ ನಿಮ್ಮನ್ನು ಭೇಟಿಯಾಗಬಹುದು. ನಿಮ್ಮ ಕೆಲಸಕ್ಕೆ ಸಮಜಾಯಿಷಿ ಕೊಡಲು ಹೋಗುವಿರಿ. ನಿಮ್ಮ ವಿದೇಶಕ್ಕೆ ಹೋಗುವ ಕನಸು ನನಸಾಗುವ ಸಾಧ್ಯತೆ ಇದೆ.‌ ನಿಮ್ಮ ಯಶಸ್ಸು ಕುಂಟಿತವಾಗಲಿದೆ. ಕೆಲಸವಿಲ್ಲದೇ ಮನೆಯಲ್ಲಿ ಕುಳಿತುಕೊಂಡು ಬೇಸರವಾಗಲಿದೆ. ದಾಂಪತ್ಯದಲ್ಲಿ ಕೆಲವು ಜೀರ್ಣವಾಗದ ಮಾತುಗಳನ್ನು ಕೇಳುವಿರಿ.

ಧನು ರಾಶಿ : ಯಾವ ಕಾರ್ಯವನ್ನು ಮಾಡುವಾಗಲೂ ಉದ್ವೇಗಪಡುವ ಅಗತ್ಯ ಇರದು. ನಿಮ್ಮ ಸ್ನೇಹಿತರ ಬಳಗ ದೊಡ್ಡದಿದ್ದು ಎಲ್ಲರಿಗೂ ಸಂತೋಷವನ್ನು ಕೊಡುವಿರಿ‌. ಅಪರಿಚಿತ ಊರಿಗೆ ಹೋಗಿ ಸ್ವಲ್ಪ ಕಷ್ಟವಾದೀತು. ವೃತ್ತಿಯಲ್ಲಿ ಸಹಯೋಗದಿಂದ ಕಾರ್ಯವನ್ನು ಮಾಡುವಿರಿ. ಆದರೆ ಅದರ ಹೆಸರನ್ನು ನೀವು ಮಾತ್ರ ಪಡೆಯುವಿರಿ. ಅಪರಿಚಿತರು ಆಪ್ತರಾಗುವ ಸಾಧ್ಯತೆ ಇದೆ. ಪ್ರತಿಭಾ ಪ್ರದರ್ಶನಕ್ಕೆ ಪೂರ್ವಸಿದ್ಧತೆ ಕಷ್ಟವಾದೀತು. ಸಂಗಾತಿಯ ಜೊತೆ ಮುನಿಸು ಕಡಿಮೆ ಮಾಡಿಕೊಳ್ಳಿ.

ಮಕರ ರಾಶಿ : ನಿಮ್ಮ ಸಂಗಾತಿಯು ನಿಮಗೆ ಪ್ರಿಯವಾದುದನ್ನೇ ಮಾಡುವರು. ಸರ್ಕಾರಿ ಕೆಲಸಗಳು ನಿಧಾನವಾಗಿ ಮುಂದುವರಿಯುವುದು. ಕೆಲವು ನಿಮಗೆ ಬಂಧನ ಎನಿಸಬಹುದು. ಕಛೇರಿಯಲ್ಲಿ ನಿಮ್ಮ ಸಾಮರ್ಥ್ಯವು ಅರ್ಥವಾಗುವುದು. ಹಳೆಯ ಘಟನೆಗಳು ಮರೆತುಹೋಗುವ ಸಾಧ್ಯತೆ ಇದೆ. ಸಂಗಾತಿಯ ಕಡೆಯಿಂದ ಪ್ರೀತಿಯು ಸಿಗಲಿದೆ. ನಿಮ್ಮ ನಿಲುವನ್ನು ಬದಲಿಸಿಕೊಳ್ಳಲು ಇಚ್ಛಿಸುವುದಿಲ್ಲ. ನಿಮ್ಮ ಸಂದರ್ಭೋಚಿತ ಸಲಹೆಯನ್ನು ಸ್ವೀಕರಿಸುವರು.

ಕುಂಭ ರಾಶಿ : ಒಂದುಷ್ಟು ಶಿಸ್ತಿನಿಂದ ನೀವು ಇರಬೇಕಾದೀತು.‌ ನಿಮ್ಮ ಗಂಭೀರವಾದ ನಡೆಯು ಕೆಲವರಿಗೆ ಕಷ್ಟವಾಗಬಹುದು. ಮಕ್ಕಳ ಮೇಲೆ‌ ನಿಮ್ಮ ಗಮನವಿರಲಿ. ದೂರ ಬಂಧುಗಳು ನಿಮ್ಮನ್ನು ಭೇಟಿಯಾಗಲು ಬರುವರು. ನಿಮ್ಮ‌ ಮಾತಿನಿಂದ ಸಂತೋಷಪಡುವರು. ನಿಮ್ಮ ಮೇಲೆ ಆರೋಪ ಬಂದಾಗ ಜಾರಿಕೊಳ್ಳುವುದು ಬೇಡ. ಪುಣ್ಯಸ್ಥಳಗಳಿಗೆ ಹೋಗುವಿರಿ. ವಾಹನದ ವಿಚಾರಕ್ಕೆ ದಂಪತಿಗಳ ನಡುವೆ ಕಲಹವಾಗಬಹುದು. ಕಳೆದುಕೊಂಡ ವಸ್ತುವನ್ನು ಅಲ್ಲಿಯೇ ಪಡೆಯಲಿದ್ದೀರಿ.

ಮೀನ ರಾಶಿ : ಇಂದು ಖ್ಯಾತ ಕಲಾವಿದರಿಗೆ ಹೆಚ್ಚು ಮತ್ತಷ್ಟು ಖ್ಯಾತಿಯಿಂದ ಅನುಕೂಲವಾಗಲಿದೆ. ಪಾಲುದಾರಿಕೆಯಲ್ಲಿ ಸರಿಯಾದ ನಿಯಮಗಳನ್ನು ರೂಪಿಸಿಕೊಳ್ಳಿ. ಪರರ ಮೋಹಕ್ಕೆ ಸಿಲುಕಿ ಅತಂತ್ರವಾಗಬಹುದು. ಹೊಸ ಯೋಜನೆಗಳಿಂದ ಆರ್ಥಿಕ ಅಭಿವೃದ್ಧಿಯಾಗಲಿದೆ. ಕೆಲವನ್ನು ನೀವೇ ಹಾಳುಮಾಡಿಕೊಳ್ಳುವಿರಿ. ಅವಶ್ಯಕತೆ ಇದ್ದರೆ‌ ಮಾತ್ರ ಮುಂದುವರಿಯುವುದು ಉತ್ತಮ.

-ಲೋಹಿತ್ ಹೆಬ್ಬಾರ್ – 8762924271 (what’s app only)

Follow Us
ಅಖಾಡಕ್ಕಿಳಿದ ಡಿಕೆಶಿ: ಬಳ್ಳಾರಿಯತ್ತ ತೋಳೇರಿಸಿ ಹೊರಟ ಬಿಜೆಪಿಗೆ ಕೌಂಟರ್!
ಅಖಾಡಕ್ಕಿಳಿದ ಡಿಕೆಶಿ: ಬಳ್ಳಾರಿಯತ್ತ ತೋಳೇರಿಸಿ ಹೊರಟ ಬಿಜೆಪಿಗೆ ಕೌಂಟರ್!
ಕಿರ್ಗಿಸ್ತಾನ್ ಭೇಟಿಯ ಹೈಲೈಟ್ಸ್ ಹಂಚಿಕೊಂಡ ಪ್ರಧಾನಿ ಮೋದಿ
ಕಿರ್ಗಿಸ್ತಾನ್ ಭೇಟಿಯ ಹೈಲೈಟ್ಸ್ ಹಂಚಿಕೊಂಡ ಪ್ರಧಾನಿ ಮೋದಿ
ಆರ್‌ಎಸ್‌ಎಸ್ ಕಚೇರಿ ಮುಂದೆ ಮನುಸ್ಮೃತಿ ಸುಟ್ಟ ಕಾಂಗ್ರೆಸ್‌ ನಾಯಕ ಪೊಲೀಸ್ ವಶ
ಆರ್‌ಎಸ್‌ಎಸ್ ಕಚೇರಿ ಮುಂದೆ ಮನುಸ್ಮೃತಿ ಸುಟ್ಟ ಕಾಂಗ್ರೆಸ್‌ ನಾಯಕ ಪೊಲೀಸ್ ವಶ
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
ಮಾಫಿ ಸಾಕ್ಷಿಗೆ ದರ್ಶನ್ ಆಕ್ಷೇಪ; ತುರ್ತು ವಿಚಾರಣೆಗೆ ಹೈಕೋರ್ಟ್ ಸಮ್ಮತಿ
ಮಾಫಿ ಸಾಕ್ಷಿಗೆ ದರ್ಶನ್ ಆಕ್ಷೇಪ; ತುರ್ತು ವಿಚಾರಣೆಗೆ ಹೈಕೋರ್ಟ್ ಸಮ್ಮತಿ
ಬಗೆದಷ್ಟು ಬಯಲಾಗ್ತಿದೆ KPSC ಹಗರಣ: Dysp ನೇಮಕಾತಿಯಲ್ಲೂ ಅಕ್ರಮ ಶಂಕೆ
ಬಗೆದಷ್ಟು ಬಯಲಾಗ್ತಿದೆ KPSC ಹಗರಣ: Dysp ನೇಮಕಾತಿಯಲ್ಲೂ ಅಕ್ರಮ ಶಂಕೆ
ಇಲ್ಲಿ ಎದೆಮಟ್ಟದ ನೀರಿನಲ್ಲಿ ನಡೆದರೆ ಮಾತ್ರ ನರಸಿಂಹನ ದರ್ಶನ ಭಾಗ್ಯ!
ಇಲ್ಲಿ ಎದೆಮಟ್ಟದ ನೀರಿನಲ್ಲಿ ನಡೆದರೆ ಮಾತ್ರ ನರಸಿಂಹನ ದರ್ಶನ ಭಾಗ್ಯ!
ನೆಲಮಂಗಲ-ಹಾಸನ ಹೆದ್ದಾರಿ ಟೋಲ್ ದರ ಹೆಚ್ಚಳ: ವಾಹನ ಸವಾರರ ಆಕ್ರೋಶ
ನೆಲಮಂಗಲ-ಹಾಸನ ಹೆದ್ದಾರಿ ಟೋಲ್ ದರ ಹೆಚ್ಚಳ: ವಾಹನ ಸವಾರರ ಆಕ್ರೋಶ