ದಿನ ಭವಿಷ್ಯ: ಇಂದು ಈ ರಾಶಿಯವರ ನಕಾರಾತ್ಮಕತೆಗೆ ಪರಿಹಾರ ಲಭ್ಯ
Horoscope Today 31 August: ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಕೃಷ್ಣ ಪಕ್ಷದ ತೃತೀಯಾ ತಿಥಿಯ ಸೋಮವಾರದಂದು ಕೋಪದಿಂದ ಕಟು ಮಾತು, ಭೂಮಿಯ ಪರಿಶೀಲನೆ, ಪ್ರಗತಿಗೆ ಮನಸ್ಸು, ವಿಶೇಷ ತರಬೇತಿ, ವಿಶ್ವಾಸಕ್ಕೆ ಘಾಸಿ, ಪಶ್ಚಾತ್ತಾಪ, ಸಾಲದ ಅಪೇಕ್ಷೆ, ದಾಖಲೆ ನಿರ್ಮಾಣ ಇವೆಲ್ಲ ಇಂದಿನ ವಿಶೇಷ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಶ್ರಾವಣ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಪೂರ್ವಾಫಲ್ಗುಣೀ, ವಾರ : ಭಾನು, ಪಕ್ಷ : ಕೃಷ್ಣ, ತಿಥಿ : ತೃತೀಯಾ, ನಿತ್ಯನಕ್ಷತ್ರ : ಪೂರ್ವಾಭಾದ್ರ, ಯೋಗ : ಶೂಲಿ, ಕರಣ : ಭದ್ರ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 30 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:42 – 09:15, ಯಮಗಂಡ ಕಾಲ 10:47 – 12:20, ಗುಳಿಕ ಕಾಲ 13:52 – 15:25
ಮೇಷ ರಾಶಿ: ಉಪಯೋಗಕ್ಕೆ ಬಾರದ ಎಲ್ಲ ಸಂದರ್ಭದಲ್ಲಿ ನಿಮ್ಮ ಪರಿಸ್ಥಿತಿಯು ಒಂದೇ ರೀತಿಯಲ್ಲಿ ಇರದು. ಸಂಗಾತಿಯ ಮಾತುಗಳು ನಿಮ್ಮನ್ನು ಚುಚ್ಚಿದಂತೆ ಆಗುವುದು. ಚಿಂತೆಯಿಂದ ಹೊರಬರಲು ದಾರಿಗಳನ್ನು ಹುಡುಕಿಕೊಳ್ಳುವಿರಿ. ಇಂದು ನಿಮ್ಮ ವಿರುದ್ಧ ಮಾತನಾಡುವವರಿಗೆ ಸರಿಯಾದ ಉತ್ತರವನ್ನು ಕೊಡಲಿದ್ದೀರಿ. ಇಷ್ಟವಿಲ್ಲದಿದ್ದರೂ ಕೆಲವು ಕೆಲಸಗಳನ್ನು ಮಾಡಬೇಕಾಗಬಹುದು. ಅತಿಯಾದ ಚಿಂತೆಯಲ್ಲಿ ಮನಸ್ಸನ್ನು ಹಾಳುಮಾಡಿಕೊಳ್ಳಬೇಡಿ.
ವೃಷಭ ರಾಶಿ: ನೀವು ಸೇವನೋಭಾವದಿಂದ ಹೊರಬರುವಿರಿ. ಇಂದು ಕಳೆದುಕೊಂಡ ಸಂಪತ್ತು ನಿಮಗೆ ಸಿಗದು. ನಿಮ್ಮ ಸಂತೋಷಕ್ಕೆ ಕಾರಣದ ಅವಶ್ಯಕತೆ ಇಲ್ಲ. ಹಣದ ಹೂಡಿಕೆಯನ್ನು ಸರಿಯಾದ ಕಡೆ ಸರಿಯಾ ಮಾಹಿತಿಯನ್ನು ಪಡೆದು ಮಾಡಿ. ನಿಮ್ಮ ಮಾತನ್ನು ಯಾರೂ ಪಾಲಿಸರು ಎಂಬ ಬೇಸರ ಇರಲಿದೆ. ಸಂಗಾತಿಯ ಮಾತನ್ನು ಪೂರ್ಣವಾಗಿ ಬೆಂಬಲಿಸಲಾರಿರಿ. ದಾಂಪತ್ಯದಲ್ಲಿ ಹಳೆಯ ವಿಚಾರವನ್ನು ಮತ್ತೆ ಕೆದಕುವುದು ಬೇಡ.
ಮಿಥುನ ರಾಶಿ: ಹಿರಿಯರಿಂದ ನಿಮಗೆ ಪ್ರಶಂಸೆ ಆಶೀರ್ವಾದ ಸಿಗಲಿದೆ. ನೀವಾಡುವ ಸತ್ಯದ ಮಾತಿನಿಂದ ಸಹೋದ್ಯೋಗಿಯ ಕೆಲಸವು ಹೋಗಬಹುದು. ನಿಮಗೆ ಸಿಕ್ಕ ಪ್ರೇರಣೆ ಕೊನೆಯ ತನಕ ಬಾರದು. ಸಾಹಿತ್ಯಕ್ಷೇತ್ರದಲ್ಲಿ ವಿಶೇಷ ಸ್ಥಾನದ ಪ್ರಾಪ್ತಿ. ನಿಮ್ಮ ದಿನಚರ್ಯೆಯಿಂದ ನಿಮ್ಮ ಆರೋಗ್ಯಕ್ಕೆ ಲಾಭವಾಗಲಿದೆ. ಮನೆಯಲ್ಲಿ ಸಂತೋಷದ ವಾತಾವರಣವು ಇರಬಹುದು. ತಿದ್ದಿಕೊಳ್ಳುವ ಅಂಶಗಳನ್ನು ಗಮನಿಸುವುದು ಮುಖ್ಯವಾದೀತು. ವಿದ್ಯಾಭ್ಯಾಸಕ್ಕಾಗಿ ಮನೆಯನ್ನು ಬಿಟ್ಟು ಇರುವುದು ಕಷ್ಟವಾಗುವುದು.
ಕರ್ಕಾಟಕ ರಾಶಿ: ಎಲ್ಲ ಸಂದರ್ಭವನ್ನೂ ಆರ್ಥಿಕ ದೃಷ್ಟಿಯಿಂದ ಅಳೆಯುವುದು ಕಷ್ಟವೇ ಆದೀತು. ಸ್ವಾವಲಂಬಿಯಾಗಲು ನಿಮಗೆ ಇಷ್ಟವಿದ್ದರೂ ಅದನ್ನು ಮಾಡಲಾಗದು. ನೀವು ಎಲ್ಲವನ್ನೂ ಹೇಳಬೇಕು ಎಂದು ಅಂದುಕೊಂಡರೂ ನಿಮಗೆ ಹೇಳಲಾಗದೇ ದುಃಖವು ಬರಬಹುದು. ವಾಹನದ ದುರಸ್ತಿಯು ಅನಿವಾರ್ಯವಸದೀತು. ವಿದ್ಯಾರ್ಥಿಗಳು ಸಮಯ ಪಾಲನೆ ಮಾಡುವುದು ಮುಖ್ಯ. ಕೈ ಬಂದ ಉದ್ಯೋಗವನ್ನು ಅಹಂಕಾರದಿಂದ ಕಳೆದುಕೊಳ್ಳುವಿರಿ.
ಸಿಂಹ ರಾಶಿ: ಇಂದು ಮನೆಯ ನಿರ್ಮಾಣದ ಕಾರ್ಯಕ್ಕೆ ನಿಮ್ಮವರಿಂದ ತೊಂದರೆ ಬರಬಹುದು. ಧಾರ್ಮಿಕ ಕಾರ್ಯಕ್ರಮಗಳನ್ನು ಇಂದು ಅನಿವಾರ್ಯವಾಗಿ ಮಾಡುವಿರಿ. ಆಮದಿಗೆ ಬೇಕಾದ ದಾಖಲೆಗಳು ಸಿದ್ಧಪಡಿಸಿ. ನಿಮ್ಮ ಯೋಜನೆಯನ್ನು ಯಾರ ಬಳಿಯೂ ಹೇಳಿಕೊಳ್ಳುವುದು ಬೇಡ. ತಲುಪಬೇಕಾದ ಸ್ಥಳ ಬೇಗನೆ ತಲುಪುವಿರಿ. ವಾಹನ ಸಂಚಾರಕ್ಕೆ ನಿಮಗೆ ತೊಂದರೆಯಾಗಬಹುದು. ಸ್ತ್ರೀಯರ ಉದ್ಯಮಕ್ಕೆ ತೊಂದರೆಯಾಗುವುದು. ಮಕ್ಕಳ ಜೊತೆ ಇರುವಿರಿ. ಒಂದಿಷ್ಟು ಬದಲಾವಣೆಗಳು ಆಗಬಹುದು.
ಕನ್ಯಾ ರಾಶಿ: ಇಂದು ನಿಮಗೆ ಗೊಂದಲಗಳಿಂದ ವೃತ್ತಿಯನ್ನು ನಿರ್ಧರಿಸಲು ಕಷ್ಟವಾದೀತು. ಹೊಸ ಕೆಲಸಗಳನ್ನು ಹುಡುಕಲು ಪ್ರಯತ್ನಿಸಿ. ಸಂಗಾತಿಯ ವಿಚಾರವಾಗಿ ನೀವು ಹೆಚ್ಚು ಚಿಂತಯಲ್ಲಿ ಇರುವಿರಿ. ಸಮಯಸ್ಫೂರ್ತಿಯಿಂದ ತೊಂದರೆಯ ಸನ್ನಿವೇಶವನ್ನು ದಾಟುವಿರಿ. ಸುಮ್ಮನೇ ಅನುಮಾನದಿಂದ ಸ್ನೇಹವನ್ನು ಹಾಳುಮಾಡಿಕೊಳ್ಳುವಿರಿ. ಸಿಗಬೇಕಾದ ಸಮಯಕ್ಕೆ ಗೌರವವು ಸಿಗಲಿದೆ. ದುಡುಕಿ ನಿರ್ಧಾರವನ್ನು ತೆಗೆದುಕೊಳ್ಳುವುದು ಬೇಡ.
ತುಲಾ ರಾಶಿ: ಇಂದು ಮಕ್ಕಳ ವಿಚಾರದಲ್ಲಿ ವಾಗ್ವಾದವು ದಾಂಪತ್ಯದಲ್ಲಿ ನಡೆದು ಇಬ್ಬರೂ ವೈಮನಸ್ಸಿನಿಂದ ಇರಬೇಕಾದೀತು. ಆಗಿಹೋದ ವಿಷಯವನ್ನು ಮತ್ತೆ ಮತ್ತೆ ನೆನಪು ಮಾಡಿಕೊಳ್ಳುವಿರಿ. ಪ್ರಯಾಣವು ಇಂದು ಕಷ್ಟಕರವಾಗಬಹುದು. ವೃತ್ತಿಯ ಅನ್ವೇಷಣೆ ಬಹಳ ವೇಗದಿಂದ ಸಾಗುವುದು. ಅವಕಾಶವನ್ನು ಬಿಟ್ಟಕೊಂಡು ದುಃಖಿಸುವಿರಿ. ವೃತ್ತಿಗಾಗಿ ಅಪರಿಚಿತರು ಹಣವನ್ನು ಕೇಳಬಹುದು. ಮಕ್ಕಳಿಂದ ಅಲ್ಪ ಸಂತೋಷವು ಸಿಗಬಹುದು.
ವೃಶ್ಚಿಕ ರಾಶಿ: ಜೀವನದಲ್ಲಿ ಉತ್ತಮವಾದ ಗುರಿಯನ್ನು ಇಟ್ಟುಕೊಳ್ಳಲು ಯಾರಾದರೂ ಸಹಾಯ ಮಾಡುವರು. ಅದೃಷ್ಟವನ್ನು ನೀವು ಹುಡುಕಿಕೊಂಡು ಹೋಗಬೇಡಿ. ನಿಮ್ಮ ಮಾತನ್ನು ಉಳಿಸಿಕೊಳ್ಳಲು ಕಷ್ಟವಾದೀತು. ಯಾರೊಂದಿಗೂ ಮಾತನಾಡಲು ಮನಸ್ಸೇ ಇರದು. ವಾಹನವನ್ನು ಯಾರದೋ ಕಾರ್ಯಕ್ಕೆ ಕೊಡಬೇಕಾಗುವುದು. ಪ್ರಾಯೋಗಿಕ ವಿಚಾರಕ್ಕೆ ಅತಿಯಾದ ಪ್ರವೇಶ ಬೇಡ. ದಿನದ ಬಹಳ ಹೊತ್ತನ್ನು ಏಕಾಂತದಲ್ಲಿ ಇರಬೇಕೆಂದು ನೀವಿಂದು ಬಯಸಬಹುದು.
ಧನು ರಾಶಿ: ತಪ್ಪನ್ನು ನೀವೇ ಒಪ್ಪಿಕೊಂಡರೆ ದಂಡನೆಯಲ್ಲಿಯೂ ವಿನಾಯಿತಿ ಸಿಗಬಹುದು. ನಿಮ್ಮ ಹಣವೂ ಖಾಲಿಯಾಗಿ ಸಂಗಾತಿಯಿಂದ ಹಣವನ್ನು ಪಡೆಯುವಿರಿ. ಅಧಿಕ ಒತ್ತಡದಿಂದ ಕೆಲಸವು ನಿಮಗೆ ಸೂಚಿಸದೇ ಹೋಗಬಹುದು. ವ್ಯಾವಹಾರಿಕ ಒತ್ತಡವನ್ನು ಬೇರೆಲ್ಲಿಯೂ ತೋರಿಸಬೇಡಿ. ಮನೆಗೆ ಬಂದವರಿಗೆ ಒಳ್ಳೆಯ ಆತಿಥ್ಯವನ್ನು ಕೊಡಯವಿರಿ. ವಿದ್ಯಾಭ್ಯಾಸದಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು. ನಿಮ್ಮ ಅತಿಯಾದ ಮಾತು ಕಿರಿಕಿರಿಯನ್ನು ಕೊಟ್ಟೀತು.
ಮಕರ ರಾಶಿ: ಉಪಕಾರ ಮಾಡುವುದು ನಿಮಗೆ ಖುಷಿ ಕೊಡುವುದು. ಕುಟುಂಬದ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ತಾಯಿಯಿಂದ ನಿಮಗೆ ಹಿತವಚನವು ಸಿಗಬಹುದು. ಪ್ರೀತಿಯನ್ನು ಉಳಿಸಿಕೊಳ್ಳಲು ನೀವು ಪ್ರಯತ್ನಶೀಲರಾಗುವಿರಿ. ಹಣಕಾಸಿಗೆ ಸಂಬಂಧಿಸಿದಂತೆ ನಿಮ್ಮ ಕ್ರಮವು ಬಹಳ ಚೆನ್ನಾಗಿರುವುದು. ಶ್ರಮದ ಕೆಲಸಕ್ಕೆ ನೀವು ಹೋಗುವುದಿಲ್ಲ. ಕೃಷಿಯ ವ್ಯವಹಾರದಲ್ಲಿ ಲಾಭವು ಬರವಂತೆ ಆಲೋಚನೆ ಮಾಡುವಿರಿ.
ಕುಂಭ ರಾಶಿ: ನಿಮಗೆ ಯಾವದೋ ಪ್ರೇರಣೆಯಿಂದ ನಿಮ್ಮ ಜೀವನವನ್ನು ಬದಲಿಸಿಕೊಳ್ಳುವಿರಿ. ಪ್ರೀತಿಯನ್ನು ಒಡೆಯಲು ನೀವು ಬಹಳ ಹಾತೊರೆಯುವಿರಿ. ಸಣ್ಣ ವ್ಯಾಪರವು ಲಾಭದಾಯಕವಾಗಲಿದೆ. ಭಾವ ಬಲದಿಂದ ಗೆಲ್ಲಲು ಪ್ರಯತ್ನಿಸಿ. ಕೊಟ್ಟ ಜವಾಬ್ದಾರಿಯನ್ನು ಸ್ವ ಇಚ್ಛೆಯಿಂದ ಮಾಡುವಿರಿ. ವಾಹನವನ್ನು ನಿಧಾನವಾಗಿ ಚಲಾಯಿಸಿ. ಇಂದು ಕುಟುಂಬದ ಜೊತೆ ಸಂತೋಷದಿಂದ ಸಮಯವನ್ನು ಕಳೆಯುವಿರಿ. ನಿಮ್ಮ ಅನನುಕೂಲತೆಯನ್ನು ಹೇಳಬೇಡಿ.
ಮೀನ ರಾಶಿ: ನಿಮ್ಮಿಂದ ಆಗಬೇಕಾದ ಕೆಲಸಗಳು ಬಹಳ ಇದ್ದರೂ ಯಾವುದೇ ಚಿಂತೆ ಇಲ್ಲದೇ ಇರುವಿರಿ. ದೊಡ್ಡ ವ್ಯಕ್ತಿಗಳಾದರೂ ಜನಸಾಮಾನ್ಯರಂತೆ ಇರಲಿದ್ದೀರಿ. ಆಪ್ತರು ನಿಮ್ಮಿಂದ ದೂರವಾಗಬಹುದು. ಇದು ನಿಮ್ಮನ್ನು ವಿಚಲಿತ ಗೊಳಿಸಬಹುದು. ನಿಮ್ಮ ಬಳಿ ಆಗದೇ ಇರುವ ಕಾರ್ಯಕ್ಕೆ ಮರಳಿ ಯತ್ನವ ಮಾಡುವಿರಿ. ಒತ್ತಾಯದಿಂದ ಒಲಿಸಿಕೊಂಡಿದ್ದು ನಿಮಗೆ ಸಿಗದು. ತೆರೆದ ಮನಸ್ಸಿನಿಂದ ನೀವು ಯಾವ ಕಾರ್ಯವನ್ನೂ ಮಾಡುವುದೂ ಕಷ್ಟ.
ಲೋಹಿತ್ ಹೆಬ್ಬಾರ್ – 8762924271 (what’s app only)
Published On - 1:03 am, Mon, 31 August 26




