AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಐಟಿ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ; ಆರೋಪಿ ಪ್ರೊಫೆಸರ್‌ಗೆ ಬೋಧಕರ ವೇದಿಕೆ, ಹಳೆಯ ವಿದ್ಯಾರ್ಥಿಗಳಿಂದ ಬೆಂಬಲ

ಐಐಟಿ ಬಾಂಬೆ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಯೊಬ್ಬನ ಆತ್ಮಹತ್ಯೆಯ ನಂತರ ತೀವ್ರ ಪ್ರತಿಭಟನೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ, ಪ್ರೊಫೆಸರ್ ಸೂರ್ಯನಾರಾಯಣ ದುಲ್ಲಾ ಅವರನ್ನು 'ಆಡಳಿತಾತ್ಮಕ ವ್ಯವಹಾರಗಳ ಡೀನ್' ಹುದ್ದೆಯಿಂದ ತೆರವುಗೊಳಿಸಿದ ಬೆನ್ನಲ್ಲೇ, ಸಂಸ್ಥೆಯ ಬೋಧಕ ಸಿಬ್ಬಂದಿ (ಫ್ಯಾಕಲ್ಟಿ) ಅವರ ಬೆಂಬಲಕ್ಕೆ ನಿಂತಿದ್ದಾರೆ. ಸೆಪ್ಟೆಂಬರ್ 18ರಂದು ವಿದ್ಯಾರ್ಥಿ ಸಾಹಿಲ್ ವಾಕೋಡೆ ಪರೀಕ್ಷೆ ಬರೆಯುತ್ತಿದ್ದ ಕೊಠಡಿಯಲ್ಲಿ ಪ್ರೊಫೆಸರ್ ದುಲ್ಲಾ ಪರೀಕ್ಷಾ ಮೇಲ್ವಿಚಾರಕರಾಗಿದ್ದರು. ಈ ವೇಳೆ ಸಾಹಿಲ್ ಮೊಬೈಲ್ ಫೋನ್ ಬಳಸುತ್ತಿದ್ದಾಗ ಪ್ರೊ. ದುಲ್ಲಾ ಕೈಗೆ ಸಿಕ್ಕಿಬಿದ್ದಿದ್ದ. ಅದೇ ದಿನ ಸಾಹಿಲ್ ಆತ್ಮಹತ್ಯೆಗೆ ಶರಣಾಗಿದ್ದ.

ಐಐಟಿ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ; ಆರೋಪಿ ಪ್ರೊಫೆಸರ್‌ಗೆ ಬೋಧಕರ ವೇದಿಕೆ, ಹಳೆಯ ವಿದ್ಯಾರ್ಥಿಗಳಿಂದ ಬೆಂಬಲ
ಐಐಟಿ ಬಾಂಬೆ ಬೋಧಕರ ವೇದಿಕೆ, ದೇಶದ ಪ್ರಮುಖ ಗಣ್ಯರಿಂದ ಪ್ರೊ. ದುಲ್ಲಾಗೆ ಬೆಂಬಲImage Credit source: TV9
ಸುಷ್ಮಾ ಚಕ್ರೆ
|

Updated on: Sep 21, 2026 | 7:42 PM

Share

ಮುಂಬೈ, ಸೆಪ್ಟೆಂಬರ್ 21: ಐಐಟಿ ಬಾಂಬೆಯ ಬಿ.ಟೆಕ್ ವಿದ್ಯಾರ್ಥಿಯೊಬ್ಬ ಪರೀಕ್ಷೆ ವೇಳೆ ಚಾಟ್‌ಜಿಪಿಟಿ ಬಳಸುತ್ತಿದ್ದಾಗ ಸಿಕ್ಕಿಬಿದ್ದು, ಬಳಿಕ ಆತ್ಮಹತ್ಯೆಗೆ ಶರಣಾದ ಘಟನೆಗೆ ಸಂಬಂಧಿಸಿದಂತೆ ಸೃಷ್ಟಿಯಾಗಿರುವ ತೀವ್ರ ಆಕ್ರೋಶದ ನಡುವೆಯೇ, ಈ ಪ್ರಕರಣದ ಕೇಂದ್ರಬಿಂದುವಾಗಿರುವ ಪ್ರೊಫೆಸರ್ ಸೂರ್ಯನಾರಾಯಣ ದುಲ್ಲಾ ಅವರಿಗೆ ಐಐಟಿ ಬಾಂಬೆ ಬೋಧಕರ ವೇದಿಕೆ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಇಂದು ಐಐಟಿ ಬಾಂಬೆ ಫ್ಯಾಕಲ್ಟಿ ಫೋರಂ ಕ್ಯಾಂಪಸ್ ಒಳಗೆ ಬೃಹತ್ ಮೆರವಣಿಗೆ ನಡೆಸಿತು. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಸಾಹಿಲ್ ವಾಕೋಡೆ ಪ್ರಕರಣದಲ್ಲಿ ಆರೋಪಿಯಾಗಿ ಹೆಸರಿಸಲ್ಪಟ್ಟಿರುವ ಪ್ರೊ. ದುಲ್ಲಾ ಅವರ ಬೆಂಬಲಾರ್ಥವಾಗಿ ನಡೆದ ಈ ಮೆರವಣಿಗೆಯಲ್ಲಿ ಸಂಸ್ಥೆಯ ಸುಮಾರು 750 ಬೋಧಕ ಸಿಬ್ಬಂದಿ ಪಾಲ್ಗೊಂಡಿದ್ದರು.

ಏನಿದು ಘಟನೆ?:

ಸೆಪ್ಟೆಂಬರ್ 18ರಂದು ಪರೀಕ್ಷೆಯೊಂದರಲ್ಲಿ ಚಾಟ್‌ಜಿಪಿಟಿ ಬಳಸುತ್ತಿದ್ದಾಗ ಸಿಕ್ಕಿಬಿದ್ದ ಕೆಲವು ಗಂಟೆಗಳ ನಂತರ ಸಾಹಿಲ್ ವಾಕೋಡೆ ತನ್ನ ಹಾಸ್ಟೆಲ್ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದನು. ಮುಂಬೈ ಪೊಲೀಸರು ಶನಿವಾರ ರಾತ್ರಿ ಈ ಪ್ರಕರಣವನ್ನು ಕ್ರೈಂ ಬ್ರಾಂಚ್‌ಗೆ ಹಸ್ತಾಂತರಿಸಿದ್ದು, ತನಿಖೆಯ ಭಾಗವಾಗಿ ಪ್ರೊಫೆಸರ್ ಸೇರಿದಂತೆ ಇತರರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.

ಮೃತ ವಿದ್ಯಾರ್ಥಿಯ ಪೋಷಕರು ಕ್ಯಾಂಪಸ್ ಆಡಳಿತ ಮಂಡಳಿಯಿಂದ ಕಿರುಕುಳ ಮತ್ತು ಜಾತಿ ಆಧಾರಿತ ತಾರತಮ್ಯ ನಡೆದಿದೆ ಎಂದು ಆರೋಪಿಸಿ ನೀಡಿದ ದೂರಿನ ಆಧಾರದ ಮೇಲೆ ಪ್ರೊ. ದೂಳ್ಳಾ ಅವರನ್ನು ಎಫ್‌ಐಆರ್‌ನಲ್ಲಿ ಆರೋಪಿಯನ್ನಾಗಿ ಮಾಡಲಾಗಿದೆ. ಐಐಟಿ ಬಾಂಬೆಯ ಎನರ್ಜಿ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದಲ್ಲಿ ಬಿ.ಟೆಕ್ ವ್ಯಾಸಂಗ ಮಾಡುತ್ತಿದ್ದ ಮೃತ ವಿದ್ಯಾರ್ಥಿಯು, ಶುಕ್ರವಾರ ಸಂಜೆ ಕ್ಯಾಂಪಸ್‌ನಲ್ಲಿ ನಡೆದ ಪರೀಕ್ಷೆಗೆ ಸಂಬಂಧಿಸಿದ ಘಟನೆಯ ಕೆಲವೇ ಗಂಟೆಗಳ ನಂತರ ಹಾಸ್ಟೆಲ್ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದನು. ಈ ಘಟನೆಯ ನಂತರ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳ ಭಾರಿ ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಲ್ಲೇ ಪ್ರೊ. ಸೂರ್ಯನಾರಾಯಣ ದುಲ್ಲಾ ಅವರನ್ನು ಬೆಂಬಲಿಸಿ ಬೋಧಕ ವೃಂದದಿಂದ ಈ ಮೆರವಣಿಗೆ ನಡೆದಿದೆ.

ಇದನ್ನೂ ಓದಿ: ವಿದ್ಯಾರ್ಥಿ ಆತ್ಮಹತ್ಯೆ, ಐಐಟಿ ಬಾಂಬೆ ಡೀನ್ ಪ್ರೊ. ಸೂರ್ಯನಾರಾಯಣ್ ಅಮಾನತು, ಹೇಳಿಕೆಗೆ ಕ್ಷಮೆ ಕೋರಿದ ಆಡಳಿತ

ಇಂದು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬೋಧಕರ ವೇದಿಕೆಯು, ಪ್ರೊ. ದುಲ್ಲಾ ಅವರನ್ನು ಐಐಟಿ ಬಾಂಬೆಯಿಂದ ಅಮಾನತುಗೊಳಿಸಲಾಗಿದೆ ಎಂಬ ಮಾಧ್ಯಮ ವರದಿಗಳನ್ನು ಸ್ಪಷ್ಟವಾಗಿ ನಿರಾಕರಿಸಿದೆ ಮತ್ತು ಅವರನ್ನು ಸಮರ್ಥಿಸಿಕೊಂಡಿದೆ. “ಐಐಟಿ ಬಾಂಬೆಯ ಬೋಧಕರ ವೇದಿಕೆಯು ನಮ್ಮ ಸಹೋದ್ಯೋಗಿ ಪ್ರೊ. ಸೂರ್ಯನಾರಾಯಣ ದುಲ್ಲಾ ಅವರೊಂದಿಗೆ ಬಲವಾಗಿ ನಿಲ್ಲುತ್ತದೆ. ನಾವು ಈ ಕೆಳಗಿನ ವಿಷಯಗಳನ್ನು ಸ್ಪಷ್ಟಪಡಿಸಲು ಬಯಸುತ್ತೇವೆ. ಮಾಧ್ಯಮಗಳಲ್ಲಿ ಬಂದಿರುವ ಹಲವು ವರದಿಗಳಂತೆ ಪ್ರೊ. ಸೂರ್ಯನಾರಾಯಣ ದುಲ್ಲಾ ಅವರನ್ನು ಐಐಟಿ ಬಾಂಬೆಯ ಸೇವೆಯಿಂದ ಅಮಾನತುಗೊಳಿಸಿಲ್ಲ. ಅವರು ಸಂಸ್ಥೆಯ ಗೌರವಾನ್ವಿತ ಬೋಧಕ ಸದಸ್ಯರಾಗಿ ಮುಂದುವರಿಯುತ್ತಿದ್ದಾರೆ ಎಂದು ಸ್ಪಷ್ಟಪಡಿಸಲಾಗಿದೆ.

ಇದನ್ನೂ ಓದಿ: ವಿದ್ಯಾರ್ಥಿಗಳ ಪ್ರತಿಭಟನೆಗೆ ಬೇಸತ್ತು ಐಐಟಿ ಬಾಂಬೆ ನಿರ್ದೇಶಕ ಪ್ರೊ. ಶಿರೀಶ್ ಕೇದಾರೆ ರಾಜೀನಾಮೆ: ಕಾಪಿ ತಡೆದಿದ್ದೇ ನಮ್ಮ ತಪ್ಪಾಯ್ತಾ ಎಂದು ಭಾವುಕ ಪ್ರಶ್ನೆ

ಸೆಪ್ಟೆಂಬರ್ 18ರಂದು ನಡೆದ ದುರದೃಷ್ಟಕರ ಘಟನೆಯ ಸ್ವತಂತ್ರ ಮತ್ತು ನಿಷ್ಪಕ್ಷಪಾತ ತನಿಖೆಗೆ ಅನುಕೂಲವಾಗುವಂತೆ ಅವರನ್ನು ಸಂಸ್ಥೆಯ ‘ಆಡಳಿತಾತ್ಮಕ ವ್ಯವಹಾರಗಳ ಡೀನ್’ ಹುದ್ದೆಯ ಕರ್ತವ್ಯಗಳಿಂದ ತಾತ್ಕಾಲಿಕವಾಗಿ ಮುಕ್ತಿಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಪ್ರೊ. ದುಲ್ಲಾ ಅವರನ್ನು ವಿದ್ಯಾರ್ಥಿಗಳ ಮೌಲ್ಯಮಾಪನ ಮತ್ತು ಪ್ರತಿಕ್ರಿಯೆಯ ಆಧಾರದ ಮೇಲೆ ನೀಡಲಾಗುವ ‘ಬೋಧನಾ ಶ್ರೇಷ್ಠತಾ ಪ್ರಶಸ್ತಿ’ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದ ಅತ್ಯಂತ ಗೌರವಾನ್ವಿತ ಬೋಧಕರೆಂದು ಬೋಧಕರ ಒಕ್ಕೂಟ ಬಣ್ಣಿಸಿದೆ. ಜೊತೆಗೆ ‘ವಿದ್ಯಾರ್ಥಿ ವ್ಯವಹಾರಗಳ ಡೀನ್’ ಆಗಿ ಅವರು ವಿದ್ಯಾರ್ಥಿಗಳ ಕಲ್ಯಾಣಕ್ಕೆ ನೀಡಿದ ಕೊಡುಗೆಗಳನ್ನು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ. “ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸುಳ್ಳು ಮತ್ತು ದಾರಿ ತಪ್ಪಿಸುವ ವರದಿಗಳಿಂದ ನಮ್ಮ ಸಹೋದ್ಯೋಗಿಯ ಗೌರವಕ್ಕೆ ಕಳಂಕ ತಂದಿರುವುದು ನಮಗೆ ತೀವ್ರ ನೋವು ಉಂಟುಮಾಡಿದೆ” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಆದೇಶ: ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ
ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಆದೇಶ: ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ
ಮಾಂಗಲ್ಯ ಮಾರಿಯಾದ್ರೂ ದುಡ್ಡು ಕೊಡ್ತೀವಿ, ನೀರು ಕೊಡಿ: ಮಹಿಳೆಯರ ಅಳಲು
ಮಾಂಗಲ್ಯ ಮಾರಿಯಾದ್ರೂ ದುಡ್ಡು ಕೊಡ್ತೀವಿ, ನೀರು ಕೊಡಿ: ಮಹಿಳೆಯರ ಅಳಲು
ಮನೆ ಕೆಲಸದ ಹೆಸರಿನಲ್ಲಿ 'ಕಾಳಿಕಾಂಬ ಎಂಟರ್‌ಪ್ರೈಸಸ್' ವಂಚನೆ
ಮನೆ ಕೆಲಸದ ಹೆಸರಿನಲ್ಲಿ 'ಕಾಳಿಕಾಂಬ ಎಂಟರ್‌ಪ್ರೈಸಸ್' ವಂಚನೆ
ಯಲ್ಲಮ್ಮನ ಗುಡ್ಡದ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಔಷಧ ಮಾರಾಟ ಪತ್ತೆ
ಯಲ್ಲಮ್ಮನ ಗುಡ್ಡದ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಔಷಧ ಮಾರಾಟ ಪತ್ತೆ
ಕಳೆದ ಅಧಿವೇಶನದಂತೆ ಈ ವಿಶೇಷ ಅಧಿವೇಶನದ ಕಲಾಪವೂ ವೇಸ್ಟ್ ಆಗುತ್ತಾ!
ಕಳೆದ ಅಧಿವೇಶನದಂತೆ ಈ ವಿಶೇಷ ಅಧಿವೇಶನದ ಕಲಾಪವೂ ವೇಸ್ಟ್ ಆಗುತ್ತಾ!
ಇಂದಿನಿಂದ ದಸರಾ ಗೋಲ್ಡ್ ಕಾರ್ಡ್, ವಿವಿಧ ಕಾರ್ಯಕ್ರಮಗಳ ಟಿಕೆಟ್‌ ಮಾರಾಟ ಆರಂಭ
ಇಂದಿನಿಂದ ದಸರಾ ಗೋಲ್ಡ್ ಕಾರ್ಡ್, ವಿವಿಧ ಕಾರ್ಯಕ್ರಮಗಳ ಟಿಕೆಟ್‌ ಮಾರಾಟ ಆರಂಭ
ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚೆ
ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚೆ
ಹೆಚ್.ಕೆ. ಪಾಟೀಲ್ ಪತ್ರ ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ JDS ವ್ಯಂಗ್ಯ
ಹೆಚ್.ಕೆ. ಪಾಟೀಲ್ ಪತ್ರ ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ JDS ವ್ಯಂಗ್ಯ
ಬಿಗ್ ಬಾಸ್ ಮನೆಯಲ್ಲಿ ವೈಲೆಂಟ್ ಆದ ಜಗ್ಗಿ; ತೀವ್ರ ಸ್ವರೂಪ ಪಡೆದ ಜಗಳ
ಬಿಗ್ ಬಾಸ್ ಮನೆಯಲ್ಲಿ ವೈಲೆಂಟ್ ಆದ ಜಗ್ಗಿ; ತೀವ್ರ ಸ್ವರೂಪ ಪಡೆದ ಜಗಳ
ಕಸ್ತೂರಿರಂಗನ್ ಯೋಜನೆ ಜನರಪರವಾದದ್ದು: ಉಪನ್ಯಾಸಕ ಡಾ. ಎಲ್. ಕೆ ಶ್ರೀಪತಿ
ಕಸ್ತೂರಿರಂಗನ್ ಯೋಜನೆ ಜನರಪರವಾದದ್ದು: ಉಪನ್ಯಾಸಕ ಡಾ. ಎಲ್. ಕೆ ಶ್ರೀಪತಿ