AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Horoscope: ನಿಮ್ಮ ರಾಶಿಗನುಗುಣವಾಗಿ ​ಸಪ್ಟೆಂಬರ್ ತಿಂಗಳ ಮೊದಲ ವಾರದ ಭವಿಷ್ಯ ಇಲ್ಲಿ ತಿಳಿಯಿರಿ

ಸಪ್ಟೆಂಬರ್ ತಿಂಗಳ ಈ ವಾರ 12 ರಾಶಿಗಳಿಗೆ ಕೌಟುಂಬಿಕ ಶಾಂತಿ, ಸ್ವಯಂ ಶೋಧನೆಗೆ ಹೆಚ್ಚಿನ ಮಹತ್ವವಿದೆ. ದೈಹಿಕ ಶ್ರಮ, ಆರೋಗ್ಯ ವ್ಯತ್ಯಾಸಗಳ ಬಗ್ಗೆ ಗಮನವಿರಲಿ. ಸಣ್ಣ ವಿಚಾರಗಳನ್ನು ದೊಡ್ಡದನ್ನಾಗಿ ಮಾಡಿಕೊಳ್ಳದಿರಿ. ನಾಯಕತ್ವದ ಗುಣಗಳು, ಹೂಡಿಕೆ ಲಾಭ, ಹೊಸ ವ್ಯಾಪಾರಾವಕಾಶ, ಉನ್ನತ ಶಿಕ್ಷಣ ಯೋಗಗಳು ಈ ವಾರವಿರಲಿವೆ. ಕೋಪ ನಿಯಂತ್ರಿಸಿ, ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡಿ.

Weekly Horoscope: ನಿಮ್ಮ ರಾಶಿಗನುಗುಣವಾಗಿ ​ಸಪ್ಟೆಂಬರ್ ತಿಂಗಳ ಮೊದಲ ವಾರದ ಭವಿಷ್ಯ ಇಲ್ಲಿ ತಿಳಿಯಿರಿ
ವಾರ ಭವಿಷ್ಯImage Credit source: Getty Images
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Aug 30, 2026 | 12:55 PM

Share

​ಸಪ್ಟೆಂಬರ್ ತಿಂಗಳ ಈ ವಾರ ಕೌಟುಂಬಿಕ ವಿಚಾರ, ಶಾಂತಿ, ಶೋಧನೆಗೆ ಹೆಚ್ಚುವರಿ ಮಹತ್ತ್ವ ಸಿಗಲಿದೆ. ನಿರಾಕರಣೆ, ಲಾಭದಿಂದ ಅಲ್ಪ ಸಂತೋಷ, ದೈಹಿಕ ಶ್ರಮ, ಆರೋಗ್ಯ ವ್ಯತ್ಯಾಸವನ್ನು ಹೆಚ್ಚು ಅನುಭವಿಸಬೇಕಾಗುವುದು. ಸಣ್ಣ ವಿಚಾರಗಳನ್ನು ದೊಡ್ಡ ಮಾಡಿಕೊಳ್ಳುವ ಪ್ರಮಾದ ಎಸಗಬೇಡಿ.

ಮೇಷ ರಾಶಿ:

ಈ ವಾರ ನಿಮದಯಮ ನಾಯಕತ್ವದ ಗುಣಗಳು ಎದ್ದು ಕಾಣಲಿವೆ. ಹೊಸ ಸವಾಲುಗಳು ಎದುರಾದರೂ ಕಷ್ಟವಿಲ್ಲದೆ ನಿವಾರಿಸುವಿರಿ. ಸಣ್ಣಪ್ರಮಾಣದ ಪ್ರಯಾಣಗಳಿಂದ ಧನಲಾಭವಾಗಲಿದೆ. ಹೊಸ ವ್ಯವಹಾರ ಆರಂಭಿಸಲು ಧನಸಹಾಯ ಸಿಗಲಿದೆ. ಒಡಹುಟ್ಟಿದವರಿಂದ ಸಂಪೂರ್ಣ ಸಹಕಾರ ಲಭಿಸಲಿದೆ. ದೈಹಿಕ ಶಕ್ತಿ ಹೆಚ್ಚಿದ್ದರೂ ವಾಹನ ಚಾಲನೆಯಲ್ಲಿ ಅತಿಯಾದ ಆತುರ ಬೇಡ.

​ವೃಷಭ ರಾಶಿ:

ಹಳೆಯ ಹೂಡಿಕೆಗಳು, ಭೂಮಿ ಅಥವಾ ಆಸ್ತಿ ವ್ಯವಹಾರಗಳಿಂದ ನಿರೀಕ್ಷಿತ ಲಾಭ ಕೈಸೇರಲಿದೆ. ನಿಮ್ಮ ಮಾತಿಗೆ ಸಮಾಜದಲ್ಲಿ ಮತ್ತು ಕುಟುಂಬದಲ್ಲಿ ವಿಶೇಷ ತೂಕ ಬರಲಿದೆ. ಮನೆಯಲ್ಲಿ ಶಾಂತಿ, ಸೌಹಾರ್ದತೆ ನೆಲೆಸಲಿದ್ದು, ಬಂಧು-ಮಿತ್ರರ ಆಗಮನ ಮನಸ್ಸಿಗೆ ಆನಂದ ತರಲಿದೆ.

​ಮಿಥುನ ರಾಶಿ:

ಲೇಖಕರು, ಸಂಶೋಧಕರು ಹಾಗೂ ಮಾಧ್ಯಮ ರಂಗದವರಿಗೆ ನವೀನ ಚಿಂತನೆಗಳು ಹೊಳೆಯಲಿವೆ. ಕ್ಷಿಪ್ರ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಆದರೆ ಕೋಪ ಮತ್ತು ಆತುರದಿಂದ ಮಾತನಾಡಿ ಬಾಂಧವ್ಯ ಹಾಳುಮಾಡಿಕೊಳ್ಳಬೇಡಿ. ದೇಹದಲ್ಲಿ ಉಷ್ಣತೆ ಹೆಚ್ಚಾಗುವುದು ಅಥವಾ ರಕ್ತದೊತ್ತಡದಲ್ಲಿ ವ್ಯತ್ಯಾಸ ಕಂಡುಬರಬಹುದು, ಜಾಗ್ರತೆ ಇರಲಿ.

ಕರ್ಕಾಟಕ ರಾಶಿ:

​ಗೌರವ, ನಾಯಕತ್ವ ಹಾಗೂ ಗೌರವಾನ್ವಿತ ಸ್ಥಾನಮಾನಗಳು ನಿಮ್ಮನ್ನರಸಿ ಬರಲಿವೆ. ವಿದ್ಯಾರ್ಥಿಗಳಿಗೆ, ಉನ್ನತ ಅಧ್ಯಯನಕಾರರಿಗೆ ಅತ್ಯುತ್ತಮ ಫಲಿತಾಂಶ ದೊರೆಯಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ಸುದೀರ್ಘ ದಿನಗಳ ದೈಹಿಕ ಹಾಗೂ ಮಾನಸಿಕ ದಣಿವಿನಿಂದ ಮುಕ್ತಿ ಸಿಗಲಿದ್ದು, ಪ್ರಸನ್ನತೆ ಇರಲಿದೆ.

​ಸಿಂಹ ರಾಶಿ:

ಈ ವಾರ ಬುಧಾದಿತ್ಯ ಯೋಗವು ಅತ್ಯುತ್ತಮ ಫಲ ನೀಡಲಿದೆ. ಸರ್ಕಾರಿ ಕೆಲಸಗಳು, ನ್ಯಾಯಾಲಯದ ವಿಚಾರಗಳು ಹಾಗೂ ಆಡಳಿತಾತ್ಮಕ ನಿರ್ಧಾರಗಳಲ್ಲಿ ಯಶಸ್ಸು ನಿಮ್ಮದೇ. ಬುದ್ಧಿವಂತಿಕೆಯಿಂದ ನಷ್ಟದಲ್ಲಿದ್ದ ವ್ಯಾಪಾರವನ್ನು ಲಾಭದತ್ತ ತರಲು ಸಾಧ್ಯವಾಗುತ್ತದೆ. ಕೇತುವಿನ ಪ್ರಭಾವದಿಂದ ಕೆಲವೊಮ್ಮೆ ವೈಚಾರಿಕ ಗೊಂದಲ ಅಥವಾ ಒಂಟಿತನದ ಅಭಾಸ ಮೂಡಬಹುದು, ಧ್ಯಾನ ಉಪಯುಕ್ತ.

ಕನ್ಯಾ ರಾಶಿ:

ಉದ್ಯೋಗ ನಿಮಿತ್ತ ದೂರದ ಪ್ರಯಾಣಗಳು ಎದುರಾಗಲಿವೆ. ಜವಾಬ್ದಾರಿಗಳು ಹೆಚ್ಚಿದರೂ ನಿಭಾಯಿಸುವಿರಿ. ಯಾವುದೇ ಸಂಕೀರ್ಣ ಯೋಜನೆಯಲ್ಲಿದ್ದ ತಾಂತ್ರಿಕ ಲೋಪಗಳನ್ನು ಹುಡುಕಿ ಸರಿಪಡಿಸುವ ಸಾಮರ್ಥ್ಯ ತೋರಿಸುವಿರಿ. ಆದಾಯ ಚೆನ್ನಾಗಿದ್ದರೂ ಅನಗತ್ಯ ವೆಚ್ಚಗಳಿಗೆ ಕಟ್ಟುಪಾಡು ವಿಧಿಸುವುದು ಅತ್ಯಗತ್ಯ.

ತುಲಾ ರಾಶಿ:

​ರಾಶ್ಯಾಧಿಪತಿ ಶುಕ್ರನು ನಿಮ್ಮ ರಾಶಿಯಲ್ಲೇ ಬಲವಾಗಿದ್ದು, ಒಲವು ಹಾಗೂ ಸೌಂದರ್ಯಾತ್ಮಕ ಚಿಂತನೆಗಳನ್ನು ನೀಡಲಿದ್ದಾನೆ. ಪ್ರೀತಿ-ಪ್ರೇಮದ ವಿಷಯಗಳಲ್ಲಿ ಸಫಲತೆ ಸಿಗಲಿದೆ. ದಾಂಪತ್ಯದಲ್ಲಿದ್ದ ಭಿನ್ನಾಭಿಪ್ರಾಯಗಳು ಸಂಪೂರ್ಣ ತಿಳಿಯಾಗಲಿವೆ. ಹೊಸ ಉದ್ಯೋಗ ಒಪ್ಪಂದಗಳು, ವ್ಯವಹಾರ ಪಾಲುದಾರಿಕೆಗಳನ್ನು ಮಾಡಲು ಇದು ಅತ್ಯಂತ ಶುಭ ಕಾಲ. ಕಲಾ ಕ್ಷೇತ್ರ ಹಾಗೂ ಶೋಕಿ ವಸ್ತುಗಳ ವ್ಯಾಪಾರದಲ್ಲಿರುವವರಿಗೆ ಅಪಾರ ಯಶಸ್ಸು ಸಿಗಲಿದೆ.

ವೃಶ್ಚಿಕ ರಾಶಿ:

​ಕೆಲಸದ ಸ್ಥಳದಲ್ಲಿ ಪೈಪೋಟಿ ಹೆಚ್ಚಿದ್ದರೂ ನಿಮ್ಮ ಅಂತಃಶಕ್ತಿಯಿಂದ ಎದುರಾಳಿಗಳನ್ನು ಧೂಳೀಪಟ ಮಾಡುವಿರಿ. ಹಳೆಯ ಸಾಲಗಳು ತೀರುವ ಹಾದಿ ಸುಗಮವಾಗಲಿದೆ. ಬಾಕಿ ಉಳಿದ ಕಚೇರಿ ಕೆಲಸಗಳು ನೆರವೇರಲಿವೆ. ತಂದೆಯವರ ಅಥವಾ ಹಿರಿಯರ ಆರೋಗ್ಯದ ಕಡೆಗೆ ಕೊಂಚ ಹೆಚ್ಚಿನ ಗಮನ ನೀಡುವುದು ಅಗತ್ಯ.

ಧನು ರಾಶಿ:

ಗುರು ಕೃಪೆಯಿಂದ ಉನ್ನತ ಶಿಕ್ಷಣ, ವಿದೇಶಿ ಯತ್ನಗಳು ಹಾಗೂ ಧಾರ್ಮಿಕ ಯಾತ್ರೆಗಳಿಗೆ ಹಾದಿ ತೆರೆಯಲಿದೆ. ಮಾರ್ಗದರ್ಶಕರ ಹಾಗೂ ಗುರುಗಳ ಸಹವಾಸದಿಂದ ಜೀವನಕ್ಕೆ ಹೊಸ ದೃಶ್ಯಕೋನ ಸಿಗಲಿದೆ. ಧಾರ್ಮಿಕ ಮತ್ತು ಶೈಕ್ಷಣಿಕ ಕಾರ್ಯಗಳಿಗಾಗಿ ಧನವ್ಯಯವಾಗಲಿದ್ದು, ಸಮಾಜದಲ್ಲಿ ಕೀರ್ತಿ ಹೆಚ್ಚಲಿದೆ.

ಇದನ್ನೂ ಓದಿ: ಮೊದಲ ಭೇಟಿಯಲ್ಲೇ ಎಲ್ಲರನ್ನೂ ಸೆಳೆಯುವ ಶಕ್ತಿ ಈ 3 ರಾಶಿಯವರಿಗಿದೆ; ಇವರ ಮೋಡಿಗೆ ಬೀಳದವರಿಲ್ಲ!

ಮಕರ ರಾಶಿ:

ಉದ್ಯೋಗದಲ್ಲಿ ಜವಾಬ್ದಾರಿಗಳು ಹೆಚ್ಚಾಗಲಿವೆ. ತಕ್ಷಣದ ಫಲಿತಾಂಶ ಸಿಗದಿದ್ದರೂ ಶ್ರಮ ಮುಂದುವರಿಸಿ. ನಿಮ್ಮ ಕಠಿಣ ನಿರ್ಧಾರಗಳಿಗೆ ಕೊನೆಗೂ ಉತ್ತಮ ಪ್ರತಿಫಲ ಸಿಗಲಿದ್ದು, ಮೇಲಾಧಿಕಾರಿಗಳ ಮೆಚ್ಚುಗೆ ದೊರೆಯಲಿದೆ. ಕೀಲು ನೋವು, ಕಾಲುಗಳ ಆಯಾಸ ಅಥವಾ ಅತಿಯಾದ ಆಲಸ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಬೇಡಿ.

ಕುಂಭ ರಾಶಿ:

ಐಟಿ, ಆಧುನಿಕ ತಂತ್ರಜ್ಞಾನ ಹಾಗೂ ಹೊಸ ಆಲೋಚನೆಗಳನ್ನು ಜಾರಿಗೆ ತರಲು ಇದು ಅದ್ಭುತ ಸಮಯ. ನೆಟ್‌ವರ್ಕಿಂಗ್ ಮತ್ತು ಸ್ನೇಹಿತರ ಮುಖಾಂತರ ಹೊಸ ಯೋಜನೆಗಳು ಹಾಗೂ ಆದಾಯದ ದಾರಿಗಳು ಮುಕ್ತವಾಗಲಿವೆ. ಹಣಕಾಸಿನ ವಿಷಯದಲ್ಲಿ ಶಾರ್ಟ್‌ ಕಟ್ ಅಥವಾ ಅತಿಯಾದ ಆಸೆಗೆ ಬಿದ್ದು ಹಣ ಕಳೆದುಕೊಳ್ಳಬೇಡಿ.

​ಮೀನ ರಾಶಿ:

​ದಿನನಿತ್ಯದ ನಡವಳಿಕೆ, ಸಮಯಪಾಲನೆ ಹಾಗೂ ಆಹಾರ ಪದ್ಧತಿಯಲ್ಲಿ ಅಚ್ಚುಕಟ್ಟುತನ ಕಾಯ್ದುಕೊಳ್ಳುವುದು ಕಡ್ಡಾಯ. ಇತರರ ಕಷ್ಟಕ್ಕೆ ಸ್ಪಂದಿಸುವ ನಿಮ್ಮ ಉದಾರ ಮನೋಭಾವವೇ ನಿಮಗೊಂದು ಶ್ರೀರಕ್ಷೆಯಾಗಿ ನಿಲ್ಲಲಿದೆ. ಆತುರದ ಆಲೋಚನೆಗಳನ್ನು ಬದಿಗೊತ್ತಿ, ಪ್ರಕೃತಿ ಸಹಜವಾದ ತಾಳ್ಮೆಯಿಂದ ವ್ಯವಹರಿಸಿದರೆ ಯಾವುದೇ ಹಾನಿಯಿಲ್ಲ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ರಾಯರ ಮಠದಲ್ಲಿ ಗುರುರಾಯರ ಮಧ್ಯಾರಾಧನೆ: ವಿಶೇಷ ಪೂಜಾ ಕೈಂಕರ್ಯಗಳು
ರಾಯರ ಮಠದಲ್ಲಿ ಗುರುರಾಯರ ಮಧ್ಯಾರಾಧನೆ: ವಿಶೇಷ ಪೂಜಾ ಕೈಂಕರ್ಯಗಳು
ಪಾರ್ಕ್​ಗಳ ಜಾಗ ವಾಣಿಜ್ಯ ಉದ್ದೇಶಕ್ಕೆ ಬಳಕೆ ಖಂಡಿಸಿ ಮೈಸೂರಲ್ಲೂ ಪ್ರತಿಭಟನೆ
ಪಾರ್ಕ್​ಗಳ ಜಾಗ ವಾಣಿಜ್ಯ ಉದ್ದೇಶಕ್ಕೆ ಬಳಕೆ ಖಂಡಿಸಿ ಮೈಸೂರಲ್ಲೂ ಪ್ರತಿಭಟನೆ
ಗೃಹಲಕ್ಷ್ಮಿ ಯೋಜನೆಗೆ 3 ವರ್ಷ: ಸಿಎಂ ಡಿಕೆ ಶಿವಕುಮಾರ್​​ ಮಹತ್ವದ ಸಂದೇಶ
ಗೃಹಲಕ್ಷ್ಮಿ ಯೋಜನೆಗೆ 3 ವರ್ಷ: ಸಿಎಂ ಡಿಕೆ ಶಿವಕುಮಾರ್​​ ಮಹತ್ವದ ಸಂದೇಶ
ಗೋಡೆಕೆರೆ ಗೇಟ್‌ ಬಳಿಯ ಅಪಘಾತದಲ್ಲಿ ಸಾವಿಗೀಡಾದವ್ರ ಒಂದೊಂದು ಕಥೆ
ಗೋಡೆಕೆರೆ ಗೇಟ್‌ ಬಳಿಯ ಅಪಘಾತದಲ್ಲಿ ಸಾವಿಗೀಡಾದವ್ರ ಒಂದೊಂದು ಕಥೆ
ನಟ ಚಿಕ್ಕಣ್ಣ ಮದುವೆ: ಡಾಲಿ, ಮಂಡ್ಯ ರಮೇಶ್, ಎ.ಪಿ. ಅರ್ಜುನ್ ಶುಭ ಹಾರೈಕೆ
ನಟ ಚಿಕ್ಕಣ್ಣ ಮದುವೆ: ಡಾಲಿ, ಮಂಡ್ಯ ರಮೇಶ್, ಎ.ಪಿ. ಅರ್ಜುನ್ ಶುಭ ಹಾರೈಕೆ
ಆಗಸ್ಟ್ 31 ರಿಂದ ಸೆಪ್ಟೆಂಬರ್​​ 6 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 31 ರಿಂದ ಸೆಪ್ಟೆಂಬರ್​​ 6 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ನೇಪಾಳ ಪ್ರವಾಹ: ಸಾವಿನ ದವಡೆಯಿಂದ ಪಾರಾಗಿ 54 ಕನ್ನಡಿಗರು ವಾಪಸ್​​
ನೇಪಾಳ ಪ್ರವಾಹ: ಸಾವಿನ ದವಡೆಯಿಂದ ಪಾರಾಗಿ 54 ಕನ್ನಡಿಗರು ವಾಪಸ್​​
'ಭಾರತದಲ್ಲಿ ಮುಸ್ಲಿಮರಿರಬಾರದು ಎನ್ನುವವರು ಹಿಂದೂಗಳೇ ಅಲ್ಲ'; ಮೋಹನ್ ಭಾಗವತ್
'ಭಾರತದಲ್ಲಿ ಮುಸ್ಲಿಮರಿರಬಾರದು ಎನ್ನುವವರು ಹಿಂದೂಗಳೇ ಅಲ್ಲ'; ಮೋಹನ್ ಭಾಗವತ್
ನೇಪಾಳದ ಪ್ರವಾಹ ಸಂತ್ರಸ್ತರಿಗಾಗಿ ಅಡುಗೆ ಮಾಡಿಕೊಟ್ಟ ಸೈನಿಕರು
ನೇಪಾಳದ ಪ್ರವಾಹ ಸಂತ್ರಸ್ತರಿಗಾಗಿ ಅಡುಗೆ ಮಾಡಿಕೊಟ್ಟ ಸೈನಿಕರು
ನಟ ಚಿಕ್ಕಣ್ಣ ಮದುವೆ ಆರತಕ್ಷತೆ ಸಂಭ್ರಮ: ವಿಡಿಯೋ ನೋಡಿ
ನಟ ಚಿಕ್ಕಣ್ಣ ಮದುವೆ ಆರತಕ್ಷತೆ ಸಂಭ್ರಮ: ವಿಡಿಯೋ ನೋಡಿ