AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಶ್ರೂಮ್‌ಗಳನ್ನು ಸ್ಟೋರ್ ಮಾಡುವಾಗ ಈ ತಪ್ಪು ಮಾಡಬೇಡಿ! ಬೇಗ ಹಾಳಾಗದಂತೆ ಹೀಗೆ ಸಂಗ್ರಹಿಸಿ

ಮಶ್ರೂಮ್‌ಗಳು ತೇವಾಂಶ ಹೆಚ್ಚಿರುವ ಆಹಾರವಾಗಿರುವುದರಿಂದ ಸರಿಯಾಗಿ ಸಂಗ್ರಹಿಸದಿದ್ದರೆ ಬೇಗ ಮೆತ್ತಗಾಗಿ, ಕಪ್ಪಾಗಿ ಅಥವಾ ಬೂಸ್ಟ್ ಹಿಡಿದು ಹಾಳಾಗಬಹುದು. ಹಾಗಾಗಿ ಇದನ್ನು ಸ್ಟೋರ್ ಮಾಡಿ ಇಟ್ಟುಕೊಳ್ಳುವುದೇ ದೊಡ್ಡ ಸವಾಲಾಗಿರುತ್ತದೆ. ಹಾಗಾಗಿ ಮಶ್ರೂಮ್‌ಗಳನ್ನು ಹೆಚ್ಚು ದಿನ ಫ್ರೆಶ್ ಆಗಿಡಲು ಮತ್ತು ಅದನ್ನು ಸ್ಟೋರ್ ಮಾಡುವ ಮೊದಲು ಅನುಸರಿಸಬೇಕಾದ ಕೆಲವು ಸರಳ ಸಲಹೆಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.

ಮಶ್ರೂಮ್‌ಗಳನ್ನು ಸ್ಟೋರ್ ಮಾಡುವಾಗ ಈ ತಪ್ಪು ಮಾಡಬೇಡಿ! ಬೇಗ ಹಾಳಾಗದಂತೆ ಹೀಗೆ ಸಂಗ್ರಹಿಸಿ
Mushroom StorageImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Sep 21, 2026 | 8:10 PM

Share

ಮಶ್ರೂಮ್‌ಗಳು ರುಚಿಕರವಾಗಿರುವುದರ ಜೊತೆಗೆ ಪ್ರೋಟೀನ್, ಫೈಬರ್, ಬಿ-ವಿಟಮಿನ್‌ಗಳು ಸೇರಿದಂತೆ ಹಲವು ಪೋಷಕಾಂಶಗಳನ್ನು ಹೊಂದಿರುವ ಆಹಾರ. ಆದರೆ ಇವುಗಳಲ್ಲಿ ನೀರಿನ ಅಂಶ ಹೆಚ್ಚಿರುವುದರಿಂದ ಸರಿಯಾಗಿ ಸಂಗ್ರಹಿಸದಿದ್ದರೆ ಬೇಗನೆ ಮೆತ್ತಗಾಗುವುದು, ಕಪ್ಪಾಗುವುದು ಅಥವಾ ಬೂಸ್ಟ್ ಹಿಡಿಯುವುದು ಸಾಮಾನ್ಯ. ಮಾರುಕಟ್ಟೆಯಿಂದ ತಂದ ಮಶ್ರೂಮ್‌ಗಳನ್ನು ಪ್ಲಾಸ್ಟಿಕ್ ಕವರ್‌ನಲ್ಲೇ ಫ್ರಿಜ್‌ಗೆ ಇಡುವುದು ತೇವಾಂಶ ಹೆಚ್ಚಿಸಿ ಅವು ಬೇಗ ಹಾಳಾಗಲು ಕಾರಣವಾಗಬಹುದು. ಹಾಗಾದರೆ ಮಶ್ರೂಮ್‌ಗಳನ್ನು ಹೆಚ್ಚು ದಿನ ಫ್ರೆಶ್ ಆಗಿಡುವುದು ಹೇಗೆ ಮತ್ತು ಮಶ್ರೂಮ್‌ಗಳು ಹಾಳಾಗಿರುವುದನ್ನು ಗುರುತಿಸುವುದು ಹೇಗೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಪೇಪರ್ ಬ್ಯಾಗ್‌ನಲ್ಲಿ ಇಡಿ

ಮಶ್ರೂಮ್‌ಗಳನ್ನು ಪ್ಲಾಸ್ಟಿಕ್ ಕವರ್‌ನಿಂದ ತೆಗೆದು ಪೇಪರ್ ಬ್ಯಾಗ್‌ನಲ್ಲಿ ಇಟ್ಟು ಫ್ರಿಜ್‌ನಲ್ಲಿ ಸಂಗ್ರಹಿಸುವುದು ಉತ್ತಮ ವಿಧಾನ. ಪೇಪರ್ ಹೆಚ್ಚುವರಿ ತೇವಾಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಮಶ್ರೂಮ್‌ಗಳಿಗೆ ಗಾಳಿ ಸಿಗುವಂತೆ ಮಾಡುತ್ತದೆ. ಮಶ್ರೂಮ್‌ಗಳನ್ನು ಸಂಪೂರ್ಣವಾಗಿ ಗಾಳಿಯಾಡದ ಪ್ಲಾಸ್ಟಿಕ್ ಅಥವಾ ಏರ್‌ಟೈಟ್ ಕಂಟೇನರ್‌ನಲ್ಲಿ ಇಡುವುದನ್ನು ತಪ್ಪಿಸುವುದು ಉತ್ತಮ.

ಸ್ಟೋರ್ ಮಾಡುವ ಮೊದಲು ತೊಳೆಯಬೇಡಿ

ಮಶ್ರೂಮ್‌ಗಳನ್ನು ಬಳಸುವ ಮುನ್ನವೇ ಸ್ವಚ್ಛಗೊಳಿಸುವುದು ಉತ್ತಮ. ಮುಂಚಿತವಾಗಿ ನೀರಿನಲ್ಲಿ ತೊಳೆದು ಸಂಗ್ರಹಿಸಿದರೆ ಅವುಗಳಲ್ಲಿ ಹೆಚ್ಚುವರಿ ತೇವಾಂಶ ಉಳಿದು ಬೇಗ ಹಾಳಾಗುವ ಸಾಧ್ಯತೆ ಹೆಚ್ಚಬಹುದು. ಅಡುಗೆ ಮಾಡುವ ಸಮಯದಲ್ಲಿ ಮಾತ್ರ ಅವುಗಳನ್ನು ತ್ವರಿತವಾಗಿ ತೊಳೆದು ಅಥವಾ ಸ್ವಚ್ಛಗೊಳಿಸಿ ಬಳಸಬಹುದು. ಆದರೆ ಮಶ್ರೂಮ್‌ಗಳ ಮೇಲೆ ಮಣ್ಣು ಅಥವಾ ಕಸ ಹೆಚ್ಚಿದ್ದರೆ, ಸ್ವಚ್ಛಗೊಳಿಸಿದ ನಂತರ ಚೆನ್ನಾಗಿ ಒಣಗಿಸಿ ತಕ್ಷಣ ಬಳಸುವುದು ಉತ್ತಮ.

ಇದನ್ನೂ ಓದಿ: ಜಗಳವಿಲ್ಲ, ಮಾತುಕತೆಯೂ ಇಲ್ಲ! ಹಾಗಿದ್ರೆ ಈ ಸೈಲೆಂಟ್ ಡಿವೋರ್ಸ್ ಬಗ್ಗೆ ತಿಳಿದುಕೊಳ್ಳಲೇಬೇಕು

ಟಿಷ್ಯೂ ಪೇಪರ್ ಬಳಸಬಹುದೇ?

ಕಂಟೇನರ್ ಬಳಸಬೇಕಾದರೆ ಅದರೊಳಗೆ ಟಿಷ್ಯೂ ಅಥವಾ ಪೇಪರ್ ಟವೆಲ್ ಹಾಕಿ ಮಶ್ರೂಮ್‌ಗಳನ್ನು ಇಡಬಹುದು. ಇದು ಹೆಚ್ಚುವರಿ ತೇವಾಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಕಂಟೇನರ್ ಸಂಪೂರ್ಣ ಏರ್‌ಟೈಟ್ ಆಗಿರಬಾರದು. ಗಾಳಿಯಾಡುವ ವ್ಯವಸ್ಥೆ ಇರುವ ಕಂಟೇನರ್ ಅಥವಾ ಪೇಪರ್ ಬ್ಯಾಗ್ ಉತ್ತಮ ಆಯ್ಕೆ.

ಹೆಚ್ಚು ದಿನ ಇಡಬೇಕಾದರೆ ಫ್ರೀಜ್ ಮಾಡಿ

ಮಶ್ರೂಮ್‌ಗಳನ್ನು ಕೆಲವು ದಿನಗಳಲ್ಲಿ ಬಳಸಲು ಸಾಧ್ಯವಾಗದಿದ್ದರೆ ಫ್ರೀಜರ್‌ನಲ್ಲಿ ಸಂಗ್ರಹಿಸಬಹುದು. ಬಳಸುವ ಮೊದಲು ಅವುಗಳನ್ನು ಸ್ವಚ್ಛಗೊಳಿಸಿ, ಸ್ಲೈಸ್ ಮಾಡಿ ಸ್ವಲ್ಪ ಎಣ್ಣೆಯಲ್ಲಿ ಅಥವಾ ನೀರಿನಲ್ಲಿ ಹಗುರವಾಗಿ ಬೇಯಿಸಿ, ಸಂಪೂರ್ಣ ತಣ್ಣಗಾದ ಬಳಿಕ ಫ್ರೀಜರ್-ಸೇಫ್ ಬ್ಯಾಗ್ ಅಥವಾ ಕಂಟೇನರ್‌ನಲ್ಲಿ ಇಡಬಹುದು. ಫ್ರೀಜ್ ಮಾಡಿದ ಮಶ್ರೂಮ್‌ಗಳ ರುಚಿ ಮತ್ತು ವಿಶೇಷವಾಗಿ ಟೆಕ್ಸ್ಚರ್ ತಾಜಾ ಮಶ್ರೂಮ್‌ಗಳಿಗಿಂತ ಸ್ವಲ್ಪ ಬದಲಾಗಬಹುದು. ಆದ್ದರಿಂದ ಸೂಪ್, ಗ್ರೇವಿ, ಸ್ಟಿರ್-ಫ್ರೈ ಮುಂತಾದ ಅಡುಗೆಗಳಿಗೆ ಬಳಸುವುದು ಸೂಕ್ತ.

ಮಶ್ರೂಮ್‌ಗಳು ಹಾಳಾಗಿರುವುದನ್ನು ಗುರುತಿಸುವುದು ಹೇಗೆ?

ಮಶ್ರೂಮ್‌ಗಳು ಅತಿಯಾಗಿ ಜಿಗುಟಾಗಿದ್ದರೆ, ದುರ್ವಾಸನೆ ಬರುತ್ತಿದ್ದರೆ, ಬಣ್ಣ ಬದಲಾಗಿದ್ದರೆ ಅಥವಾ ಬೂಸ್ಟ್ ಹಿಡಿದಿದ್ದರೆ ಅವುಗಳನ್ನು ಬಳಸಬೇಡಿ. ಬೂಸ್ಟ್ ಹಿಡಿದ ಮಶ್ರೂಮ್‌ನ ಹಾಳಾದ ಭಾಗವನ್ನು ಮಾತ್ರ ತೆಗೆದು ಉಳಿದದ್ದನ್ನು ಬಳಸುವುದು ಸುರಕ್ಷಿತ ವಿಧಾನವಲ್ಲ. ಒಟ್ಟಿನಲ್ಲಿ, ಮಶ್ರೂಮ್‌ಗಳನ್ನು ಪೇಪರ್ ಬ್ಯಾಗ್‌ನಲ್ಲಿ ಫ್ರಿಜ್‌ನಲ್ಲಿ ಇಡುವುದು, ಅಡುಗೆ ಮಾಡುವ ಮುನ್ನ ಸ್ವಚ್ಛಗೊಳಿಸುವುದು ಮತ್ತು ಹೆಚ್ಚು ದಿನ ಉಳಿಸಬೇಕಾದರೆ ಬೇಯಿಸಿ ಫ್ರೀಜ್ ಮಾಡುವುದು ಉತ್ತಮ ಸಂಗ್ರಹ ವಿಧಾನಗಳು. ಸರಿಯಾದ ಸ್ಟೋರೇಜ್ ಮೂಲಕ ಆಹಾರದ ವ್ಯರ್ಥತೆಯನ್ನು ಕಡಿಮೆ ಮಾಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಮಾಜಿ ಪ್ರಧಾನಿ ದೇವೇಗೌಡ್ರಿಗೆ ವೀರ ಮಾರ್ತಾಂಡ ಚಾವುಂಡರಾಯ ಪ್ರಶಸ್ತಿ ಪ್ರದಾನ
ಮಾಜಿ ಪ್ರಧಾನಿ ದೇವೇಗೌಡ್ರಿಗೆ ವೀರ ಮಾರ್ತಾಂಡ ಚಾವುಂಡರಾಯ ಪ್ರಶಸ್ತಿ ಪ್ರದಾನ
ಲೋಕಭವನದಲ್ಲಿ ಕನ್ಯಾಪೂಜೆ ನೆರವೇರಿಸಿದ ನೂತನ ರಾಜ್ಯಪಾಲೆ ಡಾ. ಸುಧಾ ಯಾದವ್
ಲೋಕಭವನದಲ್ಲಿ ಕನ್ಯಾಪೂಜೆ ನೆರವೇರಿಸಿದ ನೂತನ ರಾಜ್ಯಪಾಲೆ ಡಾ. ಸುಧಾ ಯಾದವ್
ಕಿರೀಟ ತೊಟ್ಟು ಸಹ ಸ್ಪರ್ಧಿಗಳ ವಿರುದ್ಧ ದೂರುಗಳ ಸರಮಾಲೆ ಪೋಣಿಸಿದ ಕುಮಾರಿ
ಕಿರೀಟ ತೊಟ್ಟು ಸಹ ಸ್ಪರ್ಧಿಗಳ ವಿರುದ್ಧ ದೂರುಗಳ ಸರಮಾಲೆ ಪೋಣಿಸಿದ ಕುಮಾರಿ
ಹೊತ್ತಿ ಉರಿದ ಕೆಮಿಕಲ್ ಟ್ಯಾಂಕರ್:ನೈಸ್ ರಸ್ತೆಯಲ್ಲಿ 4 ಕಿಲೋಮೀಟರ್ ಟ್ರಾಫಿಕ್
ಹೊತ್ತಿ ಉರಿದ ಕೆಮಿಕಲ್ ಟ್ಯಾಂಕರ್:ನೈಸ್ ರಸ್ತೆಯಲ್ಲಿ 4 ಕಿಲೋಮೀಟರ್ ಟ್ರಾಫಿಕ್
ಆಗುಂಬೆ ಘಾಟ್​ ತಿರುವಿನಲ್ಲಿ ​ಬಸ್ ಮೇಲೆ ಹತ್ತಿಸಲು ಆಗದೆ ಚಾಲಕನ ಹರಸಾಹಸ!
ಆಗುಂಬೆ ಘಾಟ್​ ತಿರುವಿನಲ್ಲಿ ​ಬಸ್ ಮೇಲೆ ಹತ್ತಿಸಲು ಆಗದೆ ಚಾಲಕನ ಹರಸಾಹಸ!
ಹವಾಮಾನ ವೈಪರೀತ್ಯದಿಂದ ಮೊಟಕುಗೊಂಡ ವಾಯುಪಡೆಯ ಏರ್ ಶೋ!
ಹವಾಮಾನ ವೈಪರೀತ್ಯದಿಂದ ಮೊಟಕುಗೊಂಡ ವಾಯುಪಡೆಯ ಏರ್ ಶೋ!
ಹಾಸನದಲ್ಲಿ ದಸರಾ ಗೊಂಬೆಗಳಿಗೆ ಎಚ್.ಡಿ. ಕುಮಾರಸ್ವಾಮಿ ಪೂಜೆ
ಹಾಸನದಲ್ಲಿ ದಸರಾ ಗೊಂಬೆಗಳಿಗೆ ಎಚ್.ಡಿ. ಕುಮಾರಸ್ವಾಮಿ ಪೂಜೆ
ಇಂದಿನಿಂದ 2 ದಿನ ಕಂಬಳ ; ಸುಪ್ರೀಂ ಕೋರ್ಟ್ ನ ಮಾರ್ಗಸೂಚಿ ಪಾಲನೆ ಕಡ್ಡಾಯ
ಇಂದಿನಿಂದ 2 ದಿನ ಕಂಬಳ ; ಸುಪ್ರೀಂ ಕೋರ್ಟ್ ನ ಮಾರ್ಗಸೂಚಿ ಪಾಲನೆ ಕಡ್ಡಾಯ
‘ಸ್ಟಾರ್ ಹೀರೋಗಳು ಹೀಗೆ ಮಾಡಿದರೆ ನಿರ್ಮಾಪಕರು ಸರ್ವನಾಶ’: ಕೆ. ಮಂಜು ಬೇಸರ
‘ಸ್ಟಾರ್ ಹೀರೋಗಳು ಹೀಗೆ ಮಾಡಿದರೆ ನಿರ್ಮಾಪಕರು ಸರ್ವನಾಶ’: ಕೆ. ಮಂಜು ಬೇಸರ
ವಾರದ ರಾಶಿ ಭವಿಷ್ಯ: ಅಕ್ಟೋಬರ್ 19 ರಿಂದ 25ರ ವರೆಗಿನ ದ್ವಾದಶ ರಾಶಿಗಳ ಫಲಾಫಲ
ವಾರದ ರಾಶಿ ಭವಿಷ್ಯ: ಅಕ್ಟೋಬರ್ 19 ರಿಂದ 25ರ ವರೆಗಿನ ದ್ವಾದಶ ರಾಶಿಗಳ ಫಲಾಫಲ