ಸಚಿವ ಕೃಷ್ಣಭೈರೇಗೌಡ ಸೂಚನೆಗೂ ಡೋಂಟ್ ಕೇರ್: ಬಿತ್ತು ಕಾರ್ಯಪಾಲಕ ಅಭಿಯಂತರರ ವಿಕೆಟ್
ಸಚಿವ ಕೃಷ್ಣಭರೇಗೌಡ ಅವರು ಬೆಂಗಳೂರು ನಗರವನ್ನು ಕೊಂಚ ಮಟ್ಟಿಗೆ ಬದಲಾವಣೆ, ಅಭಿವೃದ್ಧಿ ಮಾಡಲು ಮುಂದಾಗಿದ್ದು, ಅಧಿಕಾರಿಗಳ ಸರಣಿ ಸಭೆ ಮೂಲಕ ಹಲವು ಮಹತ್ವದ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಆದ್ರೆ, ಮಾತು ಕೇಳದ ಹಾಗೂ ಸಲಹೆ ಸೂಚನೆಗಳನ್ನು ನಿರ್ಲಕ್ಷಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಇದೀಗ ಅವರು ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಬಳಿಕ ಎರಡನೇ ವಿಕೆಟ್ ಪತನಗೊಂಡಿದೆ.

ಬೆಂಗಳೂರು, (ಸೆಪ್ಟೆಂಬರ್ 01): ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ (Krishna Byre Gowda) ಅವರ ಸೂಚನೆ ಮೇರೆಗೆ ಇತ್ತೀಚೆಗಷ್ಟೇ ಕಳಪೆ ರಸ್ತೆ ಕಾಮಗಾರಿ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಸಹಾಯಕ ಎಂಜಿನಿಯರ್‌ರನ್ನು ಅಮಾನತುಗೊಳಿಸಲಾಗಿತ್ತು. ಇದೀಗ ಮತ್ತೊಂದು ವಿಕೆಟ್ ಬಿದ್ದಿದೆ. ಹೌದು…ಬೆಂಗಳೂರು ಬೀದಿ ದೀಪಗಳ (Bengaluru Streetlight) ನಿರ್ವಹಣೆಯಲ್ಲಿ ತೀವ್ರ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಜಿಬಿಎ (GBA) ಕಾರ್ಯಪಾಲಕ ಅಭಿಯಂತರ ಹೆಚ್. ವಿ. ರಮೇಶ್ ಅವರನ್ನು ಅಮಾನತು ಮಾಡಲಾಗಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರ ಸೂಚನೆಗೆ ಕ್ಯಾರೇ ಎನ್ನದ ಹೆಚ್. ವಿ. ರಮೇಶ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ.
ಹಡ್ನನ್ ವೃತ್ತದಿಂದ ಚಾಲುಕ್ಯ ವೃತ್ತದವರೆಗಿನ ರಸ್ತೆಯಲ್ಲಿ 222 ಬೀದಿ ದೀಪಗಳ ಪೈಕಿ 140 ದೀಪ ಕಾರ್ಯನಿರ್ವಹಿಸುತ್ತಿವೆ ಎಂದು ಸಚಿವರಿಗೆ ಸುಳ್ಳು ವರದಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೃಷ್ಣಬೈರೇಗೌಡ ಅವರ ಸೂಚನೆ ಮೇರೆಗೆ ಹೆಚ್.ವಿ.ರಮೇಶ್ ಅಮಾನತುಗೊಳಿಸಿದ ಜಂಟಿ ಆಯುಕ್ತರು ಇಂದು (ಸೆಪ್ಟೆಂಬರ್ 01) ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಬೀದಿ ದೀಪ ಲೋಪ: ಸಚಿವರ ಸೂಚನೆಗೂ ಡೋಂಟ್ ಕೇರ್; ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಕೃಷ್ಣಬೈರೇಗೌಡ
ಸಚಿವರಿಗೆ ಸುಳ್ಳು ಮಾಹಿತಿ
222 ಬೀದಿ ದೀಪಗಳ ಪೈಕಿ 140 ದೀಪ ಕಾರ್ಯನಿರ್ವಹಿಸುತ್ತಿವೆ ಎಂದು ಜಿಬಿಎ ಕಾರ್ಯಪಾಲಕ ಅಭಿಯಂತರ H.V.ರಮೇಶ್ ಅವರು ಸಚಿವ ಕೃಷ್ಣಭೈರೇಗೌಡರ ಸಭೆಯಲ್ಲಿ ವರದಿ ನೀಡಿದ್ದರು. ಆದ್ರೆ, ಆಗಸ್ಟ್ 28ರ ಸಂಜೆ ನಾನು ಹಡ್ಸನ್ ವೃತ್ತದಿಂದ ಚಾಲುಕ್ಯ ವೃತ್ತದವರೆಗೆ ರಸ್ತೆಯಲ್ಲಿ ಖುದ್ದಾಗಿ ಸಚಿವ ಕೃಷ್ಣಭೈರೇಗೌಡ ಅವರು ವಿದ್ಯುತ್ ಬೀದಿ ದೀಪಗಳ ಪರಿವೀಕ್ಷಣೆ ಮಾಡುವ ಸಂದರ್ಭದಲ್ಲಿ ಒಟ್ಟು 222 ಪೈಕಿ 140 ವಿದ್ಯುತ್ ಕಂಬಗಳಲ್ಲಿನ ದೀಪಗಳು ಕಾರ್ಯನಿರ್ವಹಿಸದಿರುವುದು ಕಂಡುಬಂದಿದೆ. ಇದರಿಂದ ಕೆಂಡಾಮಂಡಲರಾಗಿದ್ದ ಸಚಿವರು, ಸಾಮಾಜಿಕ ಜಾಲತಾಣಗಳಲ್ಲಿ ಅಧಿಕಾರಿಗಳ ಬೇಜವಾಬ್ದಾರಿಗೆ ಅಸಮಾಧಾನ ಹೊರಹಾಕಿದ್ದರು. ಅಲ್ಲದೇ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ಸಹ ನೀಡಿದ್ದರು.
ಅಮಾನತು ಆದೇಶದಲ್ಲೇನಿದೆ?
ಬೆಂಗಳೂರು ಬೀದಿ ದೀಪಗಳ ನಿರ್ವಹಣೆಯಲ್ಲಿ ತೀವ್ರ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಜಿಬಿಎ (GBA) ಕಾರ್ಯಪಾಲಕ ಅಭಿಯಂತರ ಹೆಚ್. ವಿ. ರಮೇಶ್ ಅವರನ್ನು ಅಮಾನತು ಮಾಡಲಾಗಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರ ಸೂಚನೆಗೆ ಕ್ಯಾರೇ ಎನ್ನದ ಹೆಚ್. ವಿ. ರಮೇಶ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ.
ಹಡ್ನನ್ ವೃತ್ತದಿಂದ ಚಾಲುಕ್ಯ ವೃತ್ತದವರೆಗಿನ ರಸ್ತೆಯಲ್ಲಿ 222 ಬೀದಿ ದೀಪಗಳ ಪೈಕಿ 140 ದೀಪ ಕಾರ್ಯನಿರ್ವಹಿಸುತ್ತಿವೆ ಎಂದು ಸಚಿವರಿಗೆ ಸುಳ್ಳು ವರದಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೃಷ್ಣಬೈರೇಗೌಡ ಅವರ ಸೂಚನೆ ಮೇರೆಗೆ ಹೆಚ್.ವಿ.ರಮೇಶ್ ಅಮಾನತುಗೊಳಿಸಿದ ಜಂಟಿ ಆಯುಕ್ತರು ಇಂದು (ಸೆಪ್ಟೆಂಬರ್ 01) ಆದೇಶ ಹೊರಡಿಸಿದ್ದಾರೆ. ಆದರೂ ಸಚಿವರ ಸೂಚನೆ-ನಿರ್ದೇಶನಗಳನ್ನು ಗಂಭೀರವಾಗಿ ತೆಗೆದುಕೊಳ್ಳದ ಕಾರಣ ಇಂದು (ಮಂಗಳವಾರ) ಕರ್ತವ್ಯಲೋಪಕ್ಕೆ ಸಂಬಂಧಿಸಿದಂತೆ ತತ್ ಕ್ಷಣಕ್ಕೆ ಜಾರಿಯಾಗುವಂತೆ ಅಮಾನತ್ತುಗೊಳಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಈ ಮೂಲಕ ಕೃಷ್ಣಭೈರೇಗೌಡ ಅವರು ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಬಳಿಕ ಎರಡನೇ ವಿಕೆಟ್ ಪತನವಾದಂತಾಗಿದೆ,




