Nepal Floods: ನೇಪಾಳದ ಪ್ರವಾಹದ ಸಾವಿನ ಸಂಖ್ಯೆ 1,050ಕ್ಕೆ ಏರಿಕೆ; 163 ಭಾರತೀಯರ ರಕ್ಷಣೆ
ಪ್ರವಾಹ ಪೀಡಿತ ನೇಪಾಳದಿಂದ ಇದುವರೆಗೆ 163 ಭಾರತೀಯರನ್ನು ರಕ್ಷಿಸಲಾಗಿದೆ ಹಾಗೂ 151 ಭಾರತೀಯರು ಇಂದು ಚೀನಾದಿಂದ ಹೊರಟಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ 1,050ಕ್ಕೂ ಹೆಚ್ಚು ಜನರು ಬಲಿಯಾಗಿದ್ದು, 580ಕ್ಕೂ ಹೆಚ್ಚು ವಿದೇಶಿ ಪ್ರಜೆಗಳು ಇನ್ನೂ ನಾಪತ್ತೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಬೃಹತ್ ರಕ್ಷಣೆ, ಪರಿಹಾರ ಮತ್ತು ಮೃತರ ಗುರುತು ಪತ್ತೆ ಕಾರ್ಯಾಚರಣೆಗಳು ನಡೆಯುತ್ತಿವೆ.

ಕಠ್ಮಂಡು, ಸೆಪ್ಟೆಂಬರ್ 1: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ (Nepal Flood) ಮತ್ತು ಸರಣಿ ಭೂಕುಸಿತಗಳಿಗೆ ಬಲಿಯಾದವರ ಸಂಖ್ಯೆ 1,050 ದಾಟಿದ್ದು, ದೇಶಾದ್ಯಂತ ಸಾವು-ನೋವಿನ ಭೀಕರತೆ ತೀವ್ರಗೊಂಡಿದೆ. ರಕ್ಷಣಾ ಪಡೆಗಳು ಹಾಗೂ ಹೆಲಿಕಾಪ್ಟರ್‌ಗಳು ಈಗ ಕಡಿದಾದ ಪ್ರದೇಶಗಳನ್ನು ತಲುಪಲು ಯಶಸ್ವಿಯಾಗಿದ್ದು, ಸಂತ್ರಸ್ತರನ್ನು ರಕ್ಷಿಸುವ ಮತ್ತು ಪರಿಹಾರ ಸಾಮಗ್ರಿಗಳನ್ನು ತಲುಪಿಸುವ ಕಾರ್ಯಾಚರಣೆ ತೀವ್ರಗೊಂಡಿದೆ. ಸತತ ಸುರಿದ ಜಲಪ್ರಳಯದಿಂದಾಗಿ ಮೃತರ ಸಂಖ್ಯೆ 1,050 ಮೀರಿದ್ದು, ಸಾವಿರಾರು ಜನರು ಇನ್ನೂ ನಾಪತ್ತೆಯಾಗಿದ್ದಾರೆ.
ನೇಪಾಳದಿಂದ 163 ಭಾರತೀಯರ ರಕ್ಷಣೆ:
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ, ಪ್ರವಾಹ ಪೀಡಿತ ಪ್ರದೇಶಗಳಿಂದ ಒಟ್ಟು 163 ಭಾರತೀಯರನ್ನು ರಕ್ಷಿಸಲಾಗಿದೆ. ಇಂದು ಚೀನಾದಲ್ಲಿದ್ದ 151 ಭಾರತೀಯರು ಸಹ ಸುರಕ್ಷಿತವಾಗಿ ಅಲ್ಲಿಂದ ಭಾರತಕ್ಕೆ ಹೊರಟಿದ್ದಾರೆ. ರಕ್ಷಣೆ ಹಾಗೂ ತಾಂತ್ರಿಕ ಬೆಂಬಲಕ್ಕಾಗಿ ಭಾರತವು ತಜ್ಞರ ತಂಡಗಳನ್ನು ನೇಪಾಳಕ್ಕೆ ರವಾನಿಸಿದೆ.
#WATCH | Nepal: A tunnel rescue team from India has partnered with the Nepali Army to undertake joint search and rescue operations at critical hydropower tunnel sites at Chilime, Rasuwa District.
(Video: MEA) pic.twitter.com/4BeCLcaQaF
— ANI (@ANI) September 1, 2026
ಇದನ್ನೂ ಓದಿ: ಪ್ರವಾಹದ ನಡುವೆಯೂ ದುರಾಸೆ; ಕೊಚ್ಚಿಬಂದ ಬ್ಯಾಂಕ್ ಲಾಕರ್ ಒಡೆದು 57 ಲಕ್ಷ ರೂ. ದೋಚಿದ ನೇಪಾಳಿಗರು
ನೇಪಾಳದ ಚಿಲಿಮೆಯಲ್ಲಿರುವ ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಭಾರತದ ವಿಶೇಷ ರಕ್ಷಣಾ ಪಡೆಯು ಕಾರ್ಯಾಚರಣೆ ಆರಂಭಿಸಿದೆ. ಆದರೆ, ಒಳಗಿನ ಚಲನವಲನಕ್ಕೆ ತೀವ್ರ ಅಡೆತಡೆಗಳು ಎದುರಾಗಿವೆ. ಈ ಸವಾಲುಗಳನ್ನು ಎದುರಿಸಲು ರಕ್ಷಣಾ ಪಡೆಯು ತಾತ್ಕಾಲಿಕ ತೇಲುವ ಸಾಧನಗಳನ್ನು ಬಳಸಿ ಸುರಂಗದ ಆಳಕ್ಕೆ ತೆರಳುತ್ತಿದೆ. ಬುಧವಾರವೂ ಸುರಂಗದ ಒಳಗೆ ಸಿಲುಕಿರುವವರ ಹುಡುಕಾಟ ಮುಂದುವರಿಯಲಿದೆ.
Terrifying footage shows a flash flood sweeping through the Nepal–Tibet border, trapping people on rooftops and balconies. At least 469 have been killed, with hundreds still missing. pic.twitter.com/xRgRWmwut7
— Weather Monitor (@WeatherMonitors) August 28, 2026
ರಕ್ಷಣಾ ಕಾರ್ಯಾಚರಣೆಯ ಜೊತೆಗೆ, ಮೃತರ ಮತ್ತು ನಾಪತ್ತೆಯಾದವರ ಗುರುತು ಪತ್ತೆಹಚ್ಚಲು ಭಾರತದ ಫಾರೆನ್ಸಿಕ್ ತಜ್ಞರ ತಂಡವು ನೇಪಾಳದ ಅಧಿಕಾರಿಗಳೊಂದಿಗೆ ಕೈಜೋಡಿಸಿದೆ. ಪ್ರವಾಹದಲ್ಲಿ ಮೃತಪಟ್ಟವರ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಿ, ತಪಾಸಣೆ ನಡೆಸಲು ಭಾರತೀಯ ತಂಡವು ನೇಪಾಳಕ್ಕೆ ಪೂರ್ಣ ಸಹಕಾರ ನೀಡುತ್ತಿದೆ.
ಇದನ್ನೂ ಓದಿ: ಶಾಲೆಯ ಗಂಟೆ ಬಾರಿಸಿ 1,643 ಮಕ್ಕಳ ಜೀವ ಉಳಿಸಿದ ಶಿಕ್ಷಕ: ಪ್ರವಾಹಕ್ಕೆ ಶಾಲೆಯೇ ಧ್ವಂಸವಾದರೂ ಮಕ್ಕಳು ಬಚಾವ್
ಭೂಕುಸಿತದಿಂದಾಗಿ ಹೆದ್ದಾರಿಗಳು ಮತ್ತು ಸೇತುವೆಗಳು ಕೊಚ್ಚಿಹೋಗಿದ್ದರಿಂದ ಈವರೆಗೆ ತಲುಪಲಾಗದಿದ್ದ ದುರ್ಗಮ ಪ್ರದೇಶಗಳಿಗೆ ನೇಪಾಳಿ ಸೇನೆ, ಸಶಸ್ತ್ರ ಪೊಲೀಸ್ ಪಡೆ ಹಾಗೂ ಭಾರತ ಸೇರಿದಂತೆ ಅಂತಾರಾಷ್ಟ್ರೀಯ ರಕ್ಷಣಾ ಪಡೆಗಳು ಹೆಲಿಕಾಪ್ಟರ್‌ಗಳ ಮೂಲಕ ತಲುಪಿ ರಕ್ಷಣಾ ಕಾರ್ಯದಲ್ಲಿ ತೊಡಗಿವೆ.
580ಕ್ಕೂ ಹೆಚ್ಚು ವಿದೇಶಿಗರು ನಾಪತ್ತೆ:
ಈ ಭೀಕರ ಪ್ರವಾಹದ ನಂತರ 580ಕ್ಕೂ ಹೆಚ್ಚು ವಿದೇಶಿ ಪ್ರಜೆಗಳು ನೇಪಾಳದಲ್ಲಿ ನಾಪತ್ತೆಯಾಗಿದ್ದಾರೆ. ಸಂತ್ರಸ್ತರ ಕುಟುಂಬಗಳು ಮಾಹಿತಿ ನಿರೀಕ್ಷಿಸುತ್ತಿದ್ದು, ಭಾರತೀಯ ತಂಡಗಳು ನೇಪಾಳದ ಅಧಿಕಾರಿಗಳೊಂದಿಗೆ ರಕ್ಷಣೆ ಮತ್ತು ವಿಧಿವಿಜ್ಞಾನ ಕಾರ್ಯಾಚರಣೆಯನ್ನು ಮತ್ತಷ್ಟು ವಿಸ್ತರಿಸಿವೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




