AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಂಗ್ಲರ ನಾಡಲ್ಲಿ ಸ್ಪಿನ್ ಮೋಡಿ ಮುಂದುವರೆಸಿದ ಮಾನವ್ ಸುತಾರ್

ಮಾನವ್ ಸುತಾರ್ ಭಾರತ ಟೆಸ್ಟ್ ತಂಡದಲ್ಲಿ ಮಿಂಚುತ್ತಿದ್ದಾರೆ. ಈಗ ಇಂಗ್ಲೆಂಡ್ ಕೌಂಟಿ ಕ್ರಿಕೆಟ್‌ನಲ್ಲಿ ವಾರ್ವಿಕ್‌ಷೈರ್ ಪರ ಆಡುತ್ತಾ ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಹ್ಯಾಂಪ್‌ಶೈರ್ ವಿರುದ್ಧ 3 ವಿಕೆಟ್ ಪಡೆದು ಬೌಲಿಂಗ್‌ ವೈಭವ ಮೆರೆದಿದ್ದು, ವೇಗದ ಬೌಲರ್‌ಗಳಿಗೆ ಅನುಕೂಲಕರ ಪರಿಸ್ಥಿತಿಯಲ್ಲೂ ಸ್ಥಿರವಾಗಿ ವಿಕೆಟ್ ಕಬಳಿಸುತ್ತಿದ್ದಾರೆ. ಇವರ ಬಹುಮುಖ ಪ್ರತಿಭೆ ಭಾರತೀಯ ಕ್ರಿಕೆಟ್‌ಗೆ ಆಶಾಕಿರಣ.

ಪೃಥ್ವಿಶಂಕರ
|

Updated on: Sep 04, 2026 | 7:44 PM

Share
ಯುವ ಸ್ಪಿನ್ನರ್ ಮಾನವ್ ಸುತಾರ್ ಭಾರತ ಟೆಸ್ಟ್ ತಂಡದಲ್ಲಿ ಅವಕಾಶ ಪಡೆದ ಕೆಲವೇ ದಿನಗಳಲ್ಲಿ ತನ್ನ ಪ್ರತಿಭೆಯ ಮೂಲಕ ತಂಡದಲ್ಲಿ ಖಾಯಂ ಸ್ಥಾನ ಹುಡುಕಿಕೊಂಡಿದ್ದಾರೆ. ಕಳೆದ ಮೂರು ತಿಂಗಳುಗಳಲ್ಲಿ ಕೇವಲ ಮೂರು ಟೆಸ್ಟ್ ಪಂದ್ಯಗಳಲ್ಲಿ, ಸುತಾರ್ ಎಷ್ಟು ಅದ್ಭುತ ಪ್ರದರ್ಶನ ನೀಡಿದ್ದಾರೆ ಎಂದರೆ ಅವರನ್ನು ತಂಡದಿಂದ ಕೈಬಿಡುವ ಪ್ರಶ್ನೆಯೇ ಇಲ್ಲ(PC-PTI).

1 / 5
ಹೀಗಿರುವಾಗ ಟೀಂ ಇಂಡಿಯಾದಿಂದ ವಿರಾಮ ಸಿಕ್ಕಾಗಲೆಲ್ಲ ವಿದೇಶಿ ತಂಡಗಳ ಪರ ಆಡುವುದನ್ನು ಮುಂದುವರೆಸುತ್ತಿರುವ ಮಾನವ್ ಸುತಾರ್ ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಕೌಂಟಿ ಕ್ರಿಕೆಟ್​ನಲ್ಲಿ ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರೆಸಿದ್ದಾರೆ. ಇಂಗ್ಲಿಷ್ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ವಾರ್ವಿಕ್‌ಷೈರ್ ಪರ ಆಡುತ್ತಿರುವ ಸುತಾರ್, ಹ್ಯಾಂಪ್‌ಶೈರ್ ವಿರುದ್ಧದ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 3 ವಿಕೆಟ್ ಪಡೆದು ಮಿಂಚಿದರು(PC-PTI).

2 / 5
ಇತ್ತೀಚಿನ ಶ್ರೀಲಂಕಾ ಪ್ರವಾಸದಲ್ಲಿ ತಂಡದ ಪರ ಅತಿ ಹೆಚ್ಚು ವಿಕೆಟ್ ಪಡೆದಿದ್ದ ಸುತಾರ್, ಇದೀಗ ಇಂಗ್ಲೆಂಡ್‌ನಲ್ಲಿ ವೇಗದ ಬೌಲರ್‌ಗಳಿಗೆ ಅನುಕೂಲಕರ ಪರಿಸ್ಥಿತಿಯಲ್ಲೂ ತಮ್ಮ ಫಾರ್ಮ್ ಅನ್ನು ಮುಂದುವರೆಸಿದ್ದಾರೆ. ಪಂದ್ಯದ ಎರಡನೇ ದಿನದಂದು, ಮಾನವ್ ಸುತಾರ್ ಹ್ಯಾಂಪ್‌ಶೈರ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಎರಡು ವಿಕೆಟ್‌ಗಳನ್ನು ಪಡೆದಿದ್ದರು. ಅದಾದ ಬಳಿಕ ಮೂರನೇ ದಿನದಂದು 16 ಓವರ್‌ಗಳನ್ನು ಬೌಲ್ ಮಾಡಿ ಮೂರು ವಿಕೆಟ್‌ಗಳನ್ನು ಪೂರೈಸಿದರು(PC-PTI).

3 / 5
ಈ ಇನ್ನಿಂಗ್ಸ್‌ನಲ್ಲಿ ಮಾನವ್ ಸುತಾರ್ ಹ್ಯಾಂಪ್‌ಶೈರ್ ಓಪನರ್ ನಿಕ್ ಗುಬ್ಬಿನ್ಸ್ ಅವರನ್ನು ಬೌಲ್ಡ್ ಮಾಡಿದರೆ, ನಂತರ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಎಡ್ಡಿ ಜ್ಯಾಕ್ ಅವರನ್ನು ಎಲ್ಬಿಡಬ್ಲ್ಯೂ ಔಟ್ ಮಾಡಿದರು. ಮೂರನೇ ವಿಕೆಟ್ ಜೇಮ್ಸ್ ಫುಲ್ಲರ್ ರೂಪದಲ್ಲಿ ಬಂದಿತು. ಸುತಾರ್ ಅವರ ಮಾರಕ ಬೌಲಿಂಗ್​ನಿಂದ ವಾರ್ವಿಕ್‌ಶೈರ್, ಹ್ಯಾಂಪ್‌ಶೈರ್ ತಂಡವನ್ನು ಕೇವಲ 115 ರನ್‌ಗಳಿಗೆ ಆಲೌಟ್ ಆಯಿತು. ಹೀಗಾಗಿ ವಾರ್ವಿಕ್, ಹ್ಯಾಂಪ್‌ಶೈರ್ ಮೇಲೆ ಫಾಲೋಆನ್ ಹೇರಿತು(PC-PTI).

4 / 5
ವಾರ್ವಿಕ್‌ಷೈರ್ ಪರ ಆಡುತ್ತಿರುವ ಸುತಾರ್ ಮೊದಲಿಗೆ ಎರಡು ಪಂದ್ಯಗಳನ್ನು ಆಡಿದ್ದರು. ಆ ಪಂದ್ಯದಲ್ಲಿ ಒಟ್ಟು 11 ವಿಕೆಟ್‌ಗಳನ್ನು ಕಬಳಿಸಿದ್ದರು. ಆ ನಂತರ ಶ್ರೀಲಂಕಾ ಪ್ರವಾಸವನ್ನು ಮುಗಿಸಿ ಮತ್ತೆ ಇಂಗ್ಲೆಂಡ್‌ಗೆ ಮರಳಿದ ಸುತಾ್​ಗೆ ಇದು ಮೂರನೇ ಪಂದ್ಯವಾಗಿದೆ. ಈ ಮೂರು ಪಂದ್ಯಗಳ ಐದು ಇನ್ನಿಂಗ್ಸ್‌ಗಳಲ್ಲಿ ಮಾನವ್ ಮೂರನೇ ಬಾರಿಗೆ ಒಂದು ಇನ್ನಿಂಗ್ಸ್‌ನಲ್ಲಿ ಮೂರು ವಿಕೆಟ್‌ಗಳನ್ನು ಕಬಳಿಸಿದ್ದಾರೆ(PC-PTI).

5 / 5
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us
ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಿಸಿದ ಕಬ್ಬು ಬೆಳೆಗಾರರು

ಅಗ್ನಿ ಪರೀಕ್ಷೆಗೆ 18 ಕಿಲೋಮೀಟರ್ ನಡೆದುಕೊಂಡು ಹೋಗಿದ್ದೆ: ಕಷ್ಟ ನೆನೆದ ಮಂಜ

ಮಂಡ್ಯ ಎಳನೀರು ವ್ಯಾಪಾರಿಗಳಿಗೆ ಮಹಾ ದೋಖಾ: 25 ಲಕ್ಷಕ್ಕೂ ಹೆಚ್ಚು ಹಣ ವಂಚನೆ

ಸಂಧಾನ ಸಭೆ ಯಶಸ್ವಿ: ಮುನಿಸು ಮರೆತು ಪರಸ್ಪರ ಕೈಲುಕಿದ ಹಾಸನ ಡಿಸಿ-ಎಸ್ಪಿ

ನಮ್ಮ ಮೆಟ್ರೋದಲ್ಲಿ ಮತ್ತೊಂದು ಜೀವಂತ ಹೃದಯ ಸಾಗಣೆ: ವಿಡಿಯೋ ನೋಡಿ

ಯಲಹಂಕ ಬಳಿ ನಿಂತಿದ್ದ ರೈಲು ಬೋಗಿಗಳು ಬೆಂಕಿಗೆ ಆಹುತಿ

ಈ ಬಾರಿ ಬಿಗ್​​ಬಾಸ್ ಫಿನಾಲೆಗೆ ಬರುವವರು ಯಾರು? ಮಂಜನ ಉತ್ತರ ಹೀಗಿತ್ತು

ಅಂಬಾರಿ ಹೊರುವ ಆನೆಯ ಆಯ್ಕೆ ಹೇಗೆ ನಡೆಯುತ್ತದೆ?

ರಮೇಶ್​​ ಜಾರಕಿಹೊಳಿ ಭೇಟಿ ರಹಸ್ಯ ಬಿಚ್ಚಿಟ್ಟ ಸಿದ್ದರಾಮಯ್ಯ

ಪರಿಣಾಮ ನೆಟ್ಟಗೆ ಇರಲ್ಲ: ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಉಗ್ರಪ್ಪ ಎಚ್ಚರಿಕೆ