ದಿನ ಭವಿಷ್ಯ: ಇಂದು ಈ ರಾಶಿಯವರು ಕಳೆದುಕೊಂಡಿದ್ದನ್ನು ಅನ್ಯಮಾರ್ಗದಿಂದ ಪಡೆಯುವರು…
ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಕೃಷ್ಣ ಪಕ್ಷದ ಸಪ್ತಮೀ ತಿಥಿಯ ಶುಕ್ರವಾರದಂದು ಕಲೆಗೆ ಯೋಗ್ಯ ಬೆಲೆ, ಅಪವಾದಸ ಭಯ, ಸಕಾರಾತ್ಮಕ ನಿರೀಕ್ಷೆ, ಅಪೂರ್ಣ ಪ್ರೇಮ, ಚಿಕಿತ್ಸೆಯಿಂದ ಕಷ್ಟ, ಅಲ್ಪ ಆದಾಯ, ಅನಾರೋಗ್ಯದಿಂದ ನಿರುತ್ಸಾಹ, ಕಾನೂನು ಸಮರ ಇವು ದಿನ ವಿಶೇಷ.

ಮೇಷ ರಾಶಿ:
ನಿಮ್ಮ ನಿರೀಕ್ಷೆಯಂತೆ ಬರಬೇಕಾದ ಹಣವು ಬರಬಹುದು. ಪರಿಶ್ರಮವು ಎಂದಿಗಿಂತ ಅಧಿಕವಾಗಿದ್ದು, ಅದಕ್ಕೆ ಯೋಗ್ಯವಾದ ಫಲವು ಸಿಗುವುದು. ನಿಮ್ಮ ಸರ್ಕಾರಿ ಕೆಲಸಗಳಿಗೆ ಹೆಚ್ಚು ಓಡಾಟ ಆಗಬಹುದು. ಸಂಗಾತಿಯ ಜೊತೆ ಉದ್ಯಮದ ಕುರಿತು ಚರ್ಚಿಸಿ, ಕಲಹದಲ್ಲಿ ಅಂತ್ಯವಾಗಲಿದೆ. ಅದೃಷ್ಟವನ್ನು ನಂಬಿ ಕೆಲಸವನ್ನು ಮಾಡುವಿರಿ. ಹೊಸತನ್ನು ಕಲಿಯುವ ಉತ್ಸಾಹದಲ್ಲಿ ಇರುವಿರಿ. ಕುಟುಂಬಕ್ಕೆ ಕಿಂಚಿತ್ ಸಹಾಯವನ್ನು ಯಾವುದೋ ಒಂದು ರೀತಿಯಲ್ಲಿ ಮಾಡುವಿರಿ.
ವೃಷಭ ರಾಶಿ:
ನಿಮ್ಮ ಮುಂದೆ ಸಾಲದ ವಿಚಾರ ಬಂದರೆ ಮೌನವಹಿಸುವಿರಿ. ನಿಮ್ಮ ಪ್ರಾಮಾಣಿಕ ಕೆಲಸಕ್ಕೆ ಅಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ನ್ಯಾಯಾಲಯದ ಓಡಾಟವು ನಿಮಗೆ ಬೇಸರ ತರಿಸಬಹುದು. ದಾನವಾಗಿ ಬಂದಿದ್ದರ ಬಗ್ಗೆ ಹಗುರವಾದ ಮಾತು ಬೇಡ. ಮಿತ್ರರೆಂದು ಬಂದವರ ವಿಚಾರದಲ್ಲಿ ಜಾಗರೂಕತೆ ಇರಲಿ. ಚಂಚಲವಾದ ಮನಸ್ಸಿನ ಕಾರಣ ಕೆಲವಕಳೆದುಕೊಳ್ಳುವಿರಿ. ಕೈಲಾಗದ್ದನ್ನು ಮಾಡುವ ಉತ್ಸಾಹ ಬೇಡ. ಆಸೆಯಿಂದ ಕಳೆದುಕೊಳ್ಳುವುದು ಹೆಚ್ಚಾಗಬಹುದು.
ಮಿಥುನ ರಾಶಿ:
ಎಲ್ಲ ಸಮಯದಲ್ಲಿಯೂ ಇನ್ನೊಬ್ಬರಿಗೆ ಪ್ರಶಂಸೆ ಕೊಡಲಾರಿರಿ. ಇಂದು ಹಳೆಯ ಪ್ರಣಯವು ಆರಂಭದ ಸೂಚನೆ ಸಿಗುವುದು. ಸ್ತ್ರೀಯರು ಮನೆಯಲ್ಲಿ ಆದ ಘಟನೆಯಿಂದ ತಾಳ್ಮೆಯನ್ನು ಕಳೆದುಕೊಳ್ಳಬಾರದು. ಬಂಧುಗಳ ಅಸಹಾಯವು ನಿಮಗೆ ಬೇಸರ ತರಿಸುವುದು. ದೂರಾದ ಪ್ರೇಮಿಯನ್ನು ನೆನಪುಮಾಡಿಕೊಂಡು ದುಃಖಿಸುವಿರಿ. ಮೋಜಿನ ಆಟಕ್ಕೆ ಬಲಿಯಾಗುವ ಸಾಧ್ಯತೆ ಇದೆ. ಆಟದಲ್ಲಿ ಎಚ್ಚರವಿರಲಿ.
ಕರ್ಕಾಟಕ ರಾಶಿ:
ವಹಿಸಿಕೊಂಡ ಕಾರ್ಯವನ್ನು ಬಿಡದೇ ಮುನ್ನಡೆಸುವಿರಿ. ಕಛೇರಿಯಲ್ಲಿ ಉದ್ಯೋಗದ ಕಾರಣ ನಿಮ್ಮನ್ನು ದೂರದ ಊರಿಗೆ ಕಳುಹಿಸಬಹುದು. ನಿಮಗೆ ಯಾರನ್ನಾದರೂ ಸೋಲಿಸುವ ಖಯಾಲಿ ಶುರುವಾಗುವುದು. ಹೊಸ ಶೈಲಿ ಬಟ್ಟೆಯನ್ನು ಖರೀದಿಸುವಿರಿ. ನಿಮ್ಮ ಗುರಿಯನ್ನು ತಪ್ಪಿಸಲು ಬೇಕಾದ ಪಿತೂರಿಯು ನಡೆಯಬಹುದು. ಖಾಸಗಿ ಉದ್ಯೋಗದಲ್ಲಿ ಇರುವವರಿಗೆ ಆತಂಕವಿರಲಿದೆ. ಸುಲಭವಾಗಿ ಸಿಕ್ಕುವುದನ್ನು ಬಿಟ್ಟಕೊಳ್ಳುವಿರಿ. ನೆರಮನೆಯವರ ಜೊತೆ ವಾದ ಮಾಡಬೇಕಾದೀತು.
ಸಿಂಹ ರಾಶಿ:
ಹೊಸ ಆದಾಯದ ಮೂಲವನ್ನು ಹುಡುಕುವುದು ಉತ್ತಮ. ನಿಮ್ಮ ಸಾಲವನ್ನು ಮನೆಯವರು ತೀರಿಸಬೇಕಾದೀತು. ಅಧಿಕ ಆದಾಯಕ್ಕೆ ನಿಮ್ಮ ಉದ್ಯಮವನ್ನು ವಿಸ್ತರಿಸುವಿರಿ. ನಿಮ್ಮ ಬಳಿ ಇರುವ ವಸ್ತುಗಳನ್ನು ಬಳಸಿಕೊಂಡು ಆಗಬೇಕಾದುದನ್ನು ಮಾಡಿ. ಅನ್ಯರ ದೃಷ್ಟಿಯಿಂದ ನಿಮ್ಮ ಕೆಲಸ ಗೈಗೂಡದು. ನಿಮ್ಮ ಪೂರ್ವಜರ ಜ್ಞಾನವು ಸಿಗಲಿದೆ. ಸತ್ಸಂಗ ಮೂಲಕ ಸಮಯವನ್ನು ಕಳೆಯುವಿರಿ.
ಕನ್ಯಾ ರಾಶಿ:
ಏನಾದರೂ ಕೆಲಸವನ್ನು ಕೊಡುತ್ತಲೇ ನೌಕರರನ್ನು ಸರಿಯಾದ ದಾರಿಗೆ ತರಬೇಕಾದೀತು. ಇಂದು ನಿಮ್ಮ ದುರಭ್ಯಾಸಗಳು ಇತರರಿಗೆ ಗೊತ್ತಾಗುವುದು. ತಂದೆ ತಾಯಿಗಳನ್ನು ಬಹಳ ಸಂತೋಷದಿಂದ ನೋಡಿಕೊಳ್ಳುವಿರಿ. ಅವರು ಅಪೇಕ್ಷಿಸಿದ ಸ್ಥಳಕ್ಕೆ ಅವರನ್ನು ಕರೆದೊಯ್ಯುವಿರಿ. ನಿಮ್ಮ ಕೈಲಾದವರಿಗೆ ಸಹಾಯವನ್ನು ಮಾಡುವುದು ಒಳ್ಳೆಯದು. ಅತಿಥಿ ಸತ್ಕಾರದಿಂದ ಸಂತೋಷವಾಗಲಿದೆ. ನೀವು ಹೊಸ ಯೋಜನೆಯ ಬಗ್ಗೆ ಅಧಿಕ ಆಲೋಚನೆ ಇರಲಿದೆ.
ತುಲಾ ರಾಶಿ:
ಹಣವು ಬಲವಂತದಿಂದ ಬರಲಿದೆ. ವೈದ್ಯಕೀಯ ವೃತ್ತಿಯಲ್ಲಿ ಚುರುಕುತನ ಬೇಕಾಗಬಹುದು. ನಿಮ್ಮ ಬಗ್ಗೆ ಸದ್ಭಾವನೆ ಇರುವವರು ನಿಮಗೆ ಶ್ರೇಯಸ್ಸನ್ನು ಹರಸುವರು. ರಕ್ಷಣಾ ವಲಯದಲ್ಲಿ ನಿಮ್ಮ ಕಾರ್ಯ ಪ್ರತಲಿತಕ್ಕೆ ಹಣಕಾಸಿನ ವಿಚಾರಕ್ಕೆ ಸಲ್ಲದ ಅಪವಾದ ಬಂದೀತು. ನಿಮ್ಮ ಒಳಗುಟ್ಟನ್ನು ಬಿಟ್ಟುಕೊಡಬೇಡಿ. ನಿಮ್ಮನ್ನು ಹಗುರಾಗಿ ಕಾಣಬಹುದು. ಯಾವ ಪ್ರಯೋಜನವೂ ಇರದೇ ನೀವು ಏನನ್ನೂ ಮಾಡಲಾರಿರಿ.
ವೃಶ್ಚಿಕ ರಾಶಿ:
ಸ್ನೇಹಿತರ ಜೊತೆ ಹೆಚ್ಚು ಇಂದು ಕಾಲವನ್ನು ವ್ಯಯಿಸುವಿರಿ. ವಿದ್ಯುತ್ ಉಪಕರಣಗಳ ಮಾರಾಟವನ್ನು ನೀವು ಮಾಡುತ್ತಿದ್ದರೆ ಲಾಭವನ್ನು ಪಡೆಯಬಹುದಾಗಿದೆ. ಹಣವಂತರಿಗೆ ವಿದ್ಯಾವಂತರ ನಡುವೆ ಏನೂ ಕೆಲಸವಿಲ್ಲದೇ ಇರಬೇಕಾದೀತು. ನಿಮ್ಮ ಬಳಿ ಬಂದ ಕಾರ್ಯವನ್ನು ನೀವು ಬಿಟ್ಟುಕೊಡಲಾರಿರಿ. ಒಂದನ್ನು ಮಾಡಲು ಹೋಗಿ ಮತ್ತೊಂದು ಆದರೆ ಅದಕ್ಕೆ ಹೊಣೆ ಯಾರು? ಹೊಸ ಕೆಲಸಕ್ಕೆ ಹೋಗುವ ಸಾಧ್ಯತೆ ಇದೆ. ನಿಮ್ಮಿಂದ ಆಗುವ ಕೆಲಸಕ್ಕೆ ಹೆಚ್ಚು ಒತ್ತು ಕೊಡಿ. ಮಕ್ಕಳಿಗೆ ಸಮಯವನ್ನು ಕೊಡುವಿರಿ. ಸಣ್ಣ ವಿವಾದಗಳು ಆಗಬಹುದು.
ಧನು ರಾಶಿ:
ಎಲ್ಲವನ್ನೂ ನಕಾರಾತ್ಮಕವಾಗಿ ಭಾವಿಸುವಿರಿ. ಇಂದು ನಿಮ್ಮ ನಿರ್ಲಕ್ಷ್ಯದಿಂದ ವ್ಯಾಪಾರದಲ್ಲಿ ವಂಚನೆ ಸಾಧ್ಯವಾದೀತು. ತೊಂದರೆಗಳಿಂದ ಮನಸ್ಸು ಕುಗ್ಗಬಹುದು. ನಿಮ್ಮ ಸುಳ್ಳು ಇತರರಿಗೆ ಗೊತ್ತಾಗಲಿದೆ. ಸೃಜನಾತ್ಮಕ ಕಾರ್ಯಗಳಿಗೆ ತಡೆಯಾಗಲಿದೆ. ಮಾತಿನ ಮೇಲೆ ಯಾರನ್ನೂ ಅಳೆಯಬೇಡಿ. ನಿಮ್ಮನ್ನು ನೀವು ಹೊಗಳಿಕೊಳ್ಳುವಿರಿ. ದೂರದ ಪ್ರಯಾಣವನ್ನು ಅಪೇಕ್ಷಿಸುವಿರಿ. ಸ್ತ್ರೀಯರಿಗೆ ಅಪನಿಂದೆಯಾಗುವ ಸಾಧ್ಯತೆ ಇದೆ.
ಮಕರ ರಾಶಿ:
ಮನೆಯಲ್ಲಿ ಮಾಡದೇ ಉಳಿದ ಕೆಲಸಕ್ಕೆ ಚಾಲನೆ ಸಿಗಲಿದೆ. ದುಃಖವನ್ನು ಮರೆಯಲು ಬೇಕಾದ ಚಟುವಟಿಕೆಗಳನ್ನು ಮಾಡಿ. ಚಂಚಲಸ್ವಭಾವವನ್ನು ನಿಯಂತ್ರಿಸಲು ಕಷ್ಟವಾದೀತು. ಅಲಂಕಾರಿಕಕ್ಕೆ ಹೆಚ್ಚು ಒತ್ತನ್ನು ನೀಡುವಿರಿ. ನಿಮ್ಮೆದರೇ ಮತ್ತಾರನ್ನಾದರೂ ಪ್ರಶಂಸಿಸಿಯಾರು. ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಮನಸ್ಸು ಮಾಡುವರು. ಸಂಗಾತಿಯನ್ನು ಜೊತೆ ಹೊಸ ಉದ್ಯಮವನ್ನು ಆರಂಭಿಸುವ ಹುನ್ನಾರ ನಡೆಯಲಿದೆ.
ಕುಂಭ ರಾಶಿ:
ಕಾರ್ಯದಲ್ಲಿ ವಿಳಂಬಗತಿಗೆ ಮೇಲಿನಿಂದ ನಿಂದನೆ ಬರಲಿದೆ. ನಂಬಿಕೆಯನ್ನು ಉಳಿಸಿಕೊಳ್ಳಲು ಬೇಕಾದ ಪ್ರಯತ್ನ ಮಾಡುವಿರಿ. ಅಪ್ರಾಮಾಣಿಕ ಪ್ರಯತ್ನವು ನಿಮಗೆ ಯಶಸ್ಸು ಕೊಡದು. ಹಾಗೆಂದು ಯಶಸ್ಸಿಗೆ ಅಡ್ಡದಾರಿಯನ್ನು ಹುಡುಕಬೇಡಿ. ಹಣವನ್ನು ಹೊಂದಿಸುವ ವಿಚಾರದಲ್ಲಿ ಬಹಳ ತೊಂದರೆಪಡುವಿರಿ. ಉತ್ತಮವಾದುದನ್ನು ಪಡೆಯಲು ಪ್ರಯತ್ನಿಸಿ. ಕುಟುಂಬದ ಸದಸ್ಯರ ಸಲಹೆಯಿಂದ ನೀವು ಪ್ರಯೋಜನ ಪಡೆಯಬಹುದು.
ಮೀನ ರಾಶಿ:
ನಿಮಗೆ ಹಣಕ್ಕಿಂತ ಪ್ರತಿಷ್ಠೆಯನ್ನು ತೋರುವ ಮಬಲವಿದೆ. ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ಮುಂದೆ ಸಾಗಿರಿ. ಸಂಗಾತಿಯು ನಿಮ್ಮ ಒತ್ಯಡವನ್ನು ಕಡಿಮೆ ಮಾಡಬಹುದು. ಇಷ್ಟಪಟ್ಟವರ ಜೊತೆ ಸಮಯವನ್ನು ಕಳೆಯಬಯಸುವಿರಿ. ಮಕ್ಕಳ ವಿಚಾರದಲ್ಲಿ ನೀವು ಅಸ್ವಂತ್ರರು. ನಿಮ್ಮ ದೃಷ್ಟಿಕೋನವನ್ನು ಬದಲಿಸಿಕೊಳ್ಳಲು ಪ್ರಯತ್ನಿಸಿ. ಉದ್ಯೋಗಾವಕಾಶಗಳನ್ನು ಹುಡುಕುವಿರಿ. ಬಂಧುಗಳ ಭೇಟಿಯು ಖುಷಿ ಕೊಡಬಹುದು. ಬಹುದಿನಗಳಿಂದ ಬಾಧಿಸುತ್ತಿದ್ದ ಅನಾರೋಗ್ಯದಿಂದ ಮುಕ್ತಿ
ಇಂದಿನ ಪಂಚಾಂಗ:
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಶ್ರಾವಣ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಪೂರ್ವಾಫಲ್ಗುಣೀ, ವಾರ : ಶುಕ್ರ, ಪಕ್ಷ : ಕೃಷ್ಣ, ತಿಥಿ : ಸಪ್ತಮೀ, ನಿತ್ಯನಕ್ಷತ್ರ : ಭರಣೀ, ಯೋಗ : ಹರ್ಷಣ, ಕರಣ : ಬಾಲವ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 27 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:46 – 12:19, ಯಮಗಂಡ ಕಾಲ 15:23 – 16:55, ಗುಳಿಕ ಕಾಲ 07:42 – 09:14
-ಲೋಹಿತ್ ಹೆಬ್ಬಾರ್-8762924271 (what’s app only)
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




