
ಕಾನೂನಿಗೆ ವಿರುದ್ಧವಾದ ವ್ಯವಹಾರವು ನಿಮಗೆ ತೊಡಕನ್ನು ಉಂಟುಮಾಡುವುದು. ನಿದ್ರಾಯಲ್ಲಿ ನಿಮಗೆ ಸಮಾಧಾನವಿರದು. ಆಪ್ತರು ನಿಮ್ಮಿಂದ ದೂರವಾಗಲಿದ್ದು ಆ ವೇದನೆಯನ್ನು ನೀವು ಸಹಿಸಲಾರಿರಿ. ಮನೋವೇಗದ ನಿಯಂತ್ರಣ ಅಲ್ಪಮಟ್ಟಿಗೆ ಸಾಧ್ಯ. ಉಪಾಯದಿಂದ ನಿಮ್ಮ ಸ್ಥಾನವನ್ನು ಸ್ಥಿರವಾಗಿಸಿಕೊಳ್ಳಿ. ನಿಮ್ಮ ಮನಸ್ಸಿಗೆ ಬಾರದೇ ಯಾವುದನ್ನೂ ಒಪ್ಪಿಕೊಳ್ಳಲಾರಿರಿ. ತಪ್ಪನ್ನು ಒಪ್ಪಿಕೊಂಡು ಸುಮ್ಮನಾಗುವಿರಿ.
ಸ್ಪರ್ಧಾತ್ಮಕ ಪರೀಕ್ಷೆಗೆ ನಿಮಗೆ ಸಮಯ ಸಾಲದೆಂಬ ಆತಂಕವಿರುವುದು. ನಿಮ್ಮ ತಾಳ್ಮೆಯ ವರ್ತನೆಯಿಂದ ಸಂಕಟವನ್ನು ದೂರ ಮಾಡಿಕೊಳ್ಳುವಿರಿ. ಕಲಿಕೆಯಲ್ಲಿ ಹೊಸತನವನ್ನು ತಂದುಕೊಳ್ಳುವಿರಿ. ಮಕ್ಕಳ ಕಾರಣದಿಂದ ನಿಮಗೆ ವಿದೇಶ ಪ್ರವಾಸ ಆಗಬಹುದು. ನಿಮ್ಮದೇ ವಸ್ತುವನ್ನು ಗುರುತಿಸಲಾರದಷ್ಟು ಮರೆವು ನಿಮ್ಮದಾಗಿದೆ. ತಿಳಿವಳಿಕೆಯ ವಿಚಾರದಲ್ಲಿ ನಿಮಗೆ ಮುಜುಗರ ಆಗಬಹುದು.
ಹೆಚ್ಚು ಆದಾಯದ ಯೋಜನೆಗಳು ನಿಮ್ಮ ಪಾಲಿಗೆ ಸಿಗಲಿದೆ. ದುಂದುವೆಚ್ಚವನ್ನು ಮಾಡಿಕೊಳ್ಳಲಿದ್ದೀರಿ. ನಿಮ್ಮವರ ಪ್ರೀತಿಯು ನಿಮ್ಮ ಮೇಲೆ ಕಡಿಮೆ ಆದಂತೆ ಅನ್ನಿಸಬಹುದು. ಕೃಷಿಯಲ್ಲಿ ಲಾಭಗಳಿಸುವ ಯೋಜನೆಯನ್ನು ಕಂಡುಕೊಳ್ಳುವಿರಿ. ನಿವೃತ್ತಿಯಾದರೂ ನಿಮ್ಮ ಸೇವೆ ಮುಂದುವರಿಯುವುದು. ಮನಸ್ಸಿನ ಹತ್ತಾರು ಭಾವನೆಗಳು ನಿಮ್ಮನ್ನು ಕಾಡಿಸಬಹುದು. ಮಾನಸಿಕ ಅಸಮತೋಲನವು ನಿಮ್ಮ ಏಕಾಗ್ರತೆಯನ್ನು ಭಂಗ ಮಾಡೀತು.
ನಿಮ್ಮ ಹಳೆಯ ಸಂಬಂಧಗಳು ಪುನಃ ಹತ್ತಿರವಾಗಲು ಕಾರಣವಿರುವುದು. ಅನಾರೋಗ್ಯದ ಕಾರಣ ನಿಮ್ಮ ದಿನಚರಿಯನ್ನು ಬದಲಿಸಿಕೊಳ್ಳುವಿರಿ. ಬಂಧುಗಳು ನಿಮ್ಮ ಬಗ್ಗೆ ಆಡಿಕೊಂಡಾರು. ನಿಮ್ಮ ಶ್ರಮವು ಯುಕ್ತಿಯಿಂದ ಇರಲಿ. ಹತ್ತಿರವರೂ ನಿಮ್ಮ ವರ್ತನೆಯಿಂದ ದೂರಾಗಬಹುದು. ಧನಾತ್ಮಕ ಚಿಂತನೆಯನ್ನು ಪ್ರಯತ್ನಪೂರ್ವಕವಾಗಿ ಮಾಡಿಕೊಳ್ಳುವಿರಿ. ಗೊಂದಲವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ. ಯಾರ ಸಲಹೆ ಪಡೆಯದೇ ಮನಸ್ಸಿಗೆ ಬಂದಂತೆ ವ್ಯವಹರಿಸ ಬೇಡಿ.
ನಿಮ್ಮ ಮಾತಿನಿಂದ ಕೆಲವರು ಪ್ರಭಾವಿತರಾಗಬಹುದು. ಪ್ರತ್ಯೇಕತೆಯನ್ನು ನೀವು ಬಯಸುವಿರಿ. ಉದ್ಯೋಗದಲ್ಲಿ ಬಡ್ತಿಯು ಸಿಗುವ ನಿರೀಕ್ಷೆಯಲ್ಲಿ ಇರುವಿರಿ. ನೀವು ನೆಚ್ಚಿದವರ ಜೊತೆಗೆ ಇಂದು ಕೆಲವು ಸಮಯ ಇರುವಿರಿ. ಭಾಷೆಯಲ್ಲಿ ನಿಮಗೆ ತೊಂದರೆ ಕಾಣಿಸುವುದು. ನಿಮ್ಮ ವಸ್ತುಗಳ ಮೇಲೆ ಅಧಿಕ ಮೋಹವು ಉಂಟಾಗಬಹುದು. ಸಮಯಕ್ಕೆ ಆಗಬೇಕಾದುದು ಆಗುವುದು. ಮಾತು ಸಂಗಾತಿಯನ್ನು ಮೌನಿಯನ್ನಾಗಿ ಮಾಡುವುದು.
ಗೌರವಕ್ಕಾಗಿ ಕಾರ್ಯವನ್ನು ಮಾಡದೇ ಕರ್ತವ್ಯದ ದೃಷ್ಟಿಯಿಂದ ಮಾಡಿ. ಪ್ರಶಂಸೆಯು ಸಹಜವಾಗಿ ಸಿಗುವುದು. ಮಕ್ಕಳಿಗೆ ಆಸ್ತಿ ಮಾಡುವ ಯೋಚನೆ ಬರುವುದು. ಖರೀದಿಸಿದ ವಸ್ತು ನಿಮ್ಮನ್ನು ಸೇರದೇ ತಪ್ಪಿಹೋಗುವುದು. ದ್ವೇಷವನ್ನು ಬೆಳೆಸಿಕೊಳ್ಳುವ ಸ್ವಭಾವವನ್ನು ಬಿಡುವುದು ಒಳ್ಳೆಯದು. ದೃಶ್ಯಮಾಧ್ಯಮದವರು ಹೆಚ್ಚಿನ ಆದಾಯ ಬರುವಲ್ಲಿಗೆ ಹೋಗುವ ಯೋಚನೆ ಮಾಡುವರು. ಮಕ್ಕಳು ನಿಮ್ಮ ಮಾತಿಗೆ ಅನಾದರ ತೋರಿಸಬಹುದು.
ಸಾಮಾಜಿಕವಾಗಿ ಕಾರ್ಯಗಳಿಗೆ ನಿಮ್ಮ ಸ್ವಂತ ಹಣವನ್ನು ಖರ್ಚು ಮಾಡುವಿರಿ. ಇಂದು ನೀವು ದೈಹಿಕವಾಗಿ ಬರುವ ನೋವನ್ನು ಸಹಿಸುವ ಶಕ್ತಿಯನ್ನು ತಂದುಕೊಳ್ಳುವಿರಿ. ಮಕ್ಕಳಿಗೆ ಹಿರಿಯರ ಒಡನಾಟವಿರಲಿದೆ. ಮನೆಯಲ್ಲಿ ನಿಮ್ಮ ಕೆಲಸಗಳಿಗೆ ವಿರೋಧ ಬರಬಹುದು. ನಿಮ್ಮ ಸಂತೋಷಕ್ಕಾಗಿ ಕಾರಣಗಳು ಹಲವು ಇರಬಹುದು. ಆದರೆ ಅದನ್ನು ಪಡೆಯುವ ಆಸಕ್ತಿ ಇರದು. ಸಾಧ್ಯವಾದಷ್ಟು ಇಂದು ನಿಮ್ಮ ಸಮಯವು ವ್ಯರ್ಥವಾಗದಂತೆ ನೋಡಿಕೊಳ್ಳಿ.
ನೀವು ಅನನೂಕುಲ ಸ್ಥಿತಿಯಿಂದ ಹೊರ ಬರುವಿರಿ. ಪ್ರತ್ಯೇಕತೆಯನ್ನು ನೀವು ಬಯಸುವಿರಿ. ಏಕಾಂತವು ನಿಮಗೆ ಇಂದು ಬಹಳ ಪ್ರಿಯವಾಗುವುದು. ಆರ್ಥಿಕ ಅಭಿವೃದ್ಧಿಯಿಂದ ನಿಮಗೆ ಸಂತೋಷವಾಗುವುದು. ಆದಾಯವನ್ನು ಸರಿಯಾದಕಡೆಗೆ ವಿನಿಯೋಗ ಮಾಡುವಿರಿ. ಚಂಚಲವಾದ ಮನಸ್ಸಿನಿಂದ ಏನನ್ನೂ ಮಾಡಲು ಹೋಗುವುದು ಬೇಡ. ನಿಮ್ಮನ್ನು ಬಿಟ್ಟು ಇನ್ನೊಬ್ಬರಿಂದ ಸಹಾಯವನ್ನು ನಿಮ್ಮವರು ಕೇಳುವರು.
ಇಂದಿನ ಲೆಕ್ಕಾಚಾರ ಸರಿಯಾಗಲಿದೆ. ಸಹನೆಯ ನಿಮ್ಮ ಗುಣದಿಂದ ಸಾಕಷ್ಟು ಅನುಕೂಲವನ್ನು ಮಾಡಲಿದೆ. ಮೋಸ ಹೋಗುವ ಸಾಧ್ಯತೆ ಇದೆ. ಮನೋಬಲವನ್ನು ಹೆಚ್ಚಿಸಿಕೊಳ್ಳುವ ವಿಧಾನವನ್ನು ತಿಳಿಯುವುದು ಒಳ್ಳೆಯದು. ಸುಮ್ಮನೇ ಮಾತನಾಡುವುದು ವ್ಯರ್ಥ ಎಂದು ನಿಮಗೆ ಅನ್ನಿಸಬಹುದು. ಇನ್ನೊಬ್ಬರನ್ನು ನೋಡಿ ಖುಷಿಯಿಂದ ಇರುವುದನ್ನು ಕಲಿಯುವ ಅವಶ್ಯಕತೆ ಇದೆ. ಯಾವುದಾದರೂ ಕಳ್ಳತನದ ಅಪವಾದ ನಿಮಗೆ ಅಂಟುವುದು.
ಹಣಕಾಸಿನ ವಿಚಾರಕ್ಕೆ ದಾಂಪತ್ಯದಲ್ಲಿ ಕಲಹವುಂಟಾಗಿ ಕೊನೆಗೆ ಮೌನದಲ್ಲಿ ಮುಕ್ತಾಯವಾಗಬಹುದು. ವ್ಯಾಪಾರದ ಲಾಭದಿಂದ ನಿಮ್ಮಲ್ಲಿ ಹೆಚ್ಚು ಉತ್ಸಾಹವಿರುವುದು. ಕುಟುಂದ ಜೊತೆ ಸಮಯವನ್ನು ಕೊಡುವುದು ಇಂದು ಕಷ್ಟವಾದೀತು. ನಿಮ್ಮ ಸಿಟ್ಟನ್ನು ಎಲ್ಲ ಕಡೆಗಳಲ್ಲಿ ತೋರಿಸುವುದು ಬೇಡ. ಇಂದು ನಿಮಗೆ ಒಂದೇ ಕೆಲಸವನ್ನು ಹೆಚ್ಚು ಸಮಯ ಮಾಡಲು ನಿಮಗೆ ಇಷ್ಟವಾಗದು. ಆಸ್ತಿ ಖರೀದಿಯ ಬಗ್ಗೆ ನಿಮಗೆ ಸ್ಪಷ್ಟತೆ ಸಾಕಾಗದು. ಮಾಧ್ಯಮದಲ್ಲಿ ಇರುವವರು ಹೆಚ್ಚು ಪ್ರಚಾರವನ್ನು ಪಡೆಯುವರು.
ಕರ್ತವ್ಯದಲ್ಲಿ ನಿರಾಸಕ್ತಿ ಬರಬಹುದು. ನಿಮ್ಮ ಜವಾಬ್ದಾರಿಗಳನ್ನು ನೀವು ಕಳೆದುಕೊಂಡು ನಿಶ್ಚಿಂತೆಯಿಂದ ಇರಲ ಬಯಸುವಿರಿ. ನಿಮ್ಮದಲ್ಲದ ವಿಚಾರಕ್ಕೆ ಹೆಚ್ಚು ಓಡಾಟ ಮಾಡುವಿರಿ. ನಿಮ್ಮದೇ ವಸ್ತುವನ್ನು ಗುರುತಿಸಲಾರದಷ್ಟು ಮರೆವು ಹೆಚ್ಚಾಗಲಿದೆ. ಪ್ರವಾಸವನ್ನು ಹೆಚ್ಚು ಮಾಡುವ ಆಸಕ್ತಿಯನ್ನು ಹೊಂದಿರುವಿರಿ. ಕಳ್ಳತನದ ಭೀತಿಯಿಂದ ವಸ್ತುಗಳನ್ನು ಜೋಪಾನ ಮಾಡಿಕೊಳ್ಳುವಿರಿ. ನಿಮಗೆ ಇರವುದು. ಸಜ್ಜನರಿಗೆ ಕೆಲವು ಅಪವಾದದ ಮಾತುಗಳು ಬರಬಹುದು.
ನೀವು ಪ್ರಮುಖ ವ್ಯಕ್ತಿಯ ಇಂದು ಸಂಬಂಧವನ್ನು ಬೆಳೆಸುವಿರಿ. ಉಪಾಯದಿಂದ ನಿಮ್ಮ ಸ್ಥಾನವನ್ನು ಗಟ್ಟಿಮಾಡಿಕೊಳ್ಳುವಿರಿ. ಕೃಷಿಯಲ್ಲಿ ಆಸಕ್ತಿಯು ನಿಮಗೆ ಹೆಚ್ಚಾಗಲಿದೆ. ಇನ್ನೊಬ್ಬರ ಬಗ್ಗೆ ಸದ್ಭಾವನೆ ಇರಲಿ. ನಿಮ್ಮ ವಿಚಾರವನ್ನು ಇತರರ ಜೊತೆ ಹಂಚಿಕೊಳ್ಳುವಿರಿ. ಮಿತ್ರರು ನಿಮಗೆ ಏನಾದರೂ ತೊಂದರೆ ಕೊಡಬಹುದು. ಇಷ್ಟವಾದುದನ್ನು ಬಿಟ್ಟುಕೊಡಬೇಕಾದೀತು. ಎಲ್ಲದಕ್ಕೂ ಇನ್ನೊಬ್ಬರನ್ನು ದೂರುವಿರಿ. ಸ್ನೇಹಿತರ ಜೊತೆ ಮನಸ್ತಾಪವು ಬರಬಹುದು. ವ್ಯಾಪಾರದ ಏರಿಳಿತಗಳು ನಿಮ್ಮ ಗಮನಕ್ಕೆ ಬಾರದೇ ಹೋಗಬಹುದು.
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಭಾದ್ರಪದ, ಸೌರ ಮಾಸ : ಕನ್ಯಾ, ಮಹಾನಕ್ಷತ್ರ : ಉತ್ತರಾಫಲ್ಗುಣೀ, ವಾರ : ಗುರು, ಪಕ್ಷ : ಶುಕ್ಲ, ತಿಥಿ : ತ್ರಯೋದಶೀ, ನಿತ್ಯನಕ್ಷತ್ರ : ಶತಭಿಷಾ, ಯೋಗ : ಧೃತಿ, ಕರಣ : ತೈತಿಲ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 13 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13:42 – 15:12, ಯಮಗಂಡ ಕಾಲ 06:10 – 07:40, ಗುಳಿಕ ಕಾಲ 09:11 – 10:41
– ಲೋಹಿತ್ ಹೆಬ್ಬಾರ್ – 8762924271 (what’s app only)
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:17 am, Thu, 24 September 26