Daily Horoscope: ವೈವಾಹಿಕ ಸಂಬಂಧವನ್ನು ಸರಿಯಾಗಿ ಇಟ್ಟುಕೊಳ್ಳುವುದು ಈ ರಾಶಿಯವರಿಗೆ ಕಷ್ಟವಾದೀತು

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಸೆಪ್ಟೆಂಬರ್​ 12: ಸ್ಥಿರಾಸ್ತಿಯಿಂದ ನಿಮಗೆ ಸಾಲವು ದೊರೆಯಬಹುದು. ಹೊಸ ಸಂಬಂಧವನ್ನು ಮಾಡಿಕೊಳ್ಳುವಿರಿ. ನಿರಂತರ ಕೆಲಸವು ನಿಮಗೆ ಇಂದು ಇಷ್ಟವಾಗಲಿದೆ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು. ವಾಹನದ ದುರಸ್ತಿಯಿಂದ ಖರ್ಚಾಗಲಿದೆ. ಹಾಗಾದರೆ ಸೆಪ್ಟೆಂಬರ್​ 12ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope: ವೈವಾಹಿಕ ಸಂಬಂಧವನ್ನು ಸರಿಯಾಗಿ ಇಟ್ಟುಕೊಳ್ಳುವುದು ಈ ರಾಶಿಯವರಿಗೆ ಕಷ್ಟವಾದೀತು
ವೈವಾಹಿಕ ಸಂಬಂಧವನ್ನು ಸರಿಯಾಗಿ ಇಟ್ಟುಕೊಳ್ಳುವುದು ಈ ರಾಶಿಯವರಿಗೆ ಕಷ್ಟವಾದೀತು
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Sep 12, 2024 | 12:10 AM

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2024 ಸೆಪ್ಟೆಂಬರ್​ 12) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ನವಮೀ, ನಿತ್ಯನಕ್ಷತ್ರ: ಮೂಲಾ, ಯೋಗ: ಆಯುಷ್ಮಾನ್, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:35 ಗಂಟೆ, ರಾಹು ಕಾಲ ಮಧ್ಯಾನ್ನ 02:00 ರಿಂದ 03:32, ಯಮಘಂಡ ಕಾಲ ಬೆಳಿಗ್ಗೆ 06:22 ರಿಂದ 07:54ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 09:26 ರಿಂದ 10:57ರ ವರೆಗೆ.

ಸಿಂಹ ರಾಶಿ: ಬಂಧುಗಳ ಕಾರಣದಿಂದ ಇಂದಿನ ಕಾರ್ಯದಲ್ಲಿ ತೊಡಕುಗಳು ಕಾಣಿಸಿಕೊಳ್ಳುವುದು. ಕಾರ್ಯದ ಸ್ಥಳದಲ್ಲಿ ಪ್ರತಿಯೊಬ್ಬರೂ ನಿಮ್ಮ ಕೆಲಸವನ್ನು ಪ್ರಶಂಸಿಸುವರು. ಅಸಾಧ್ಯವನ್ನು ಸಾಧಿಸುವ ಛಲವಿರಲಿದೆ. ಉದ್ಯಮದಲ್ಲಿ ಹಿನ್ನಡೆಯಾಗುವ ಸಂಭವವು ನಿಮಗೆ ಮೊದಲೇ ಗೊತ್ತಾಗಲಿದೆ. ಎಷ್ಟೇ ಪ್ರಯತ್ನಿಸಿದರೂ ಹಳೆಯ ನೆನಪುಗಳಿಗೆ ಕಡಿವಾಣ ಹಾಕಲಾಗದು. ನಿರಪೇಕ್ಷ ವಿಚಾರವನ್ನು ಪ್ರಸ್ತಾಪಿಸಿಕೊಂಡು ಕಾಲಹರಣ ಮಾಡುವಿರಿ. ತಾಯಿಯ ವಿಚಾರದಲ್ಲಿ ನೀವು ಇಂದು ಕೋಪಗೊಳ್ಳಬಹುದು. ಇಂದು ನೀವು ಹೊಸ ತಂಡವನ್ನು ಕಟ್ಟಿಕೊಳ್ಳುವಿರಿ. ಪಾಲುದಾರಿಕೆಯಲ್ಲಿ ನಿಮಗೆ ಅಸಮಾಧಾನ ಇರಲಿದೆ. ನಿಮ್ಮ ಮಕ್ಕಳಿಂದ ಸೋಲನ್ನು ಒಪ್ಪಿಕೊಳ್ಳುವುದೇ ಸೂಕ್ತ. ಸಭ್ಯತೆಯನ್ನು ಇಟ್ಟುಕೊಂಡು ಇಂದಿನ ವ್ಯವಹಾರವನ್ನು ಮಾಡಿರಿ. ನೀವು ನಿಮ್ಮ ಸ್ಥಾನಕ್ಕಾಗಿ ಇನ್ನೊಬ್ಬರನ್ನು ದೂಷಿಸುವಿರಿ. ಹಳೆಯ ವಸ್ತುಗಳೇ ನಿಮಗೆ ಪ್ರಿಯವಾಗಬಹುದು. ಕೃತಜ್ಞತೆಯನ್ನು ಇಟ್ಟುಕೊಳ್ಳುವುದು ಕಷ್ಟವಾದೀತು. ನಿಮ್ಮ ಅನಿರೀಕ್ಷಿತ ನಡೆಯು ಶತ್ರುಗಳಿಗೆ ಭಯ ಹುಟ್ಟಿಸೀತು.

ಕನ್ಯಾ ರಾಶಿ: ಸಾಲವನ್ನು ಇನ್ನೊಬ್ಬರಿಗಾಗಿ ಮಾಡಬೇಕಾದೀತು. ನಿಮ್ಮ ಸಂಕಷ್ಟಕ್ಕೆ ಯಾರನ್ನೋ ದೂರುತ್ತ ಇರುವುದು ಸರಿಯಲ್ಲ. ಹಣದ ಹರಿವು ಇಂದು ಸ್ವಲ್ಪ ಕಡಿಮೆಯಾಗಲಿದೆ. ಆಪ್ತರನ್ನು ಕಳೆದುಕೊಂಡು ದುಃಖಿಸುವಿರಿ. ನಿಮ್ಮ ಕಳವಳವು ಮಿತ್ರರಿಗೆ ಗೊತ್ತಾಗುವುದು. ಕಲಾವಿದರು ದೂರಪ್ರಯಾಣವನ್ನು ಮಾಡುವಿರಿ. ನಿದ್ರೆಯು ಕಡಿಮೆಯಾಗಿ ಕೆಲಸದಲ್ಲಿ ಉತ್ಸಾಹ ಕಡಿಮೆ ಇರಲಿದೆ‌. ಪ್ರೇಮಿಯ ಜೊತೆ ಈ ದಿನವನ್ನು ಕಳೆಯುವಿರಿ. ಸ್ತ್ರೀಸಂಬಂಧದ ವಿಷಯದಲ್ಲಿ ನಿಮ್ಮನ್ನು ವಿಚಾರಿಸಬಹುದು. ಯಂತ್ರಗಳ ಮಾರಾಟವನ್ನು ನೀವು ಕಡಿಮೆ‌ಮಾಡುವಿರಿ. ಅಪರಿಚಿತ ಪ್ರದೇಶದಲ್ಲಿ ಅನಿರೀಕ್ಷಿತವಾಗಿ ಮಿತ್ರನ ಭೇಟಿಯಾಗುವುದು. ಉದ್ಯೋಗದಲ್ಲಿ ನಿಶ್ಚಲತೆ ಕಾಣಿಸದು. ಸಂಗಾತಿಯ ಭಾವನೆಗೆ ಬೆಲೆ ಕೊಟ್ಟು ಸಂತೋಷಪಡಿಸುವಿರಿ. ವೈವಾಹಿಕ ಸಂಬಂಧವನ್ನು ಸರಿಯಾಗಿ ಇಟ್ಟುಕೊಳ್ಳುವುದು ಕಷ್ಟವಾಗಬಹುದು. ನಿಮ್ಮ ಸಂಪತ್ತು ಮತ್ತಾವುದೋ ರೂಪದಲ್ಲಿ ಬಂದು ಸೇರುತ್ತದೆ ಎಂಬ ನಂಬಿಕೆ ಇರಲಿದೆ. ಸಮೀಪದಲ್ಲಿ ಇರುವವರನ್ನು ಕೆಲಸಕ್ಕೆ ಬಳಸಿಕೊಳ್ಳುವಿರಿ.

ತುಲಾ ರಾಶಿ: ಇಂದು ನೀವು ಹೊರಟ ಕಾರ್ಯದಿಂದ ಅರ್ಧಕ್ಕೆ ಬರಬೇಕಾದೀತು. ಇಂದು ಮೇಲಧಿಕಾರಿಗಳಿಂದ ಹಲವು ರೀತಿಯ ಒತ್ತಡವನ್ನು ನೀವು ಅನುಭವಿಸುವಿರಿ. ಸ್ಥಿರಾಸ್ತಿಯಿಂದ ನಿಮಗೆ ಸಾಲವು ದೊರೆಯಬಹುದು. ಹೊಸ ಸಂಬಂಧವನ್ನು ಮಾಡಿಕೊಳ್ಳುವಿರಿ. ನಿರಂತರ ಕೆಲಸವು ನಿಮಗೆ ಇಂದು ಇಷ್ಟವಾಗಲಿದೆ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು. ಮಾತುಗಳಲ್ಲಿ ಇರುವ ಕೋಪವು ನಿಮಗೆ ಕಾಣಿಸುವುದು. ವಾಹನದ ದುರಸ್ತಿಯಿಂದ ಖರ್ಚಾಗಲಿದೆ. ಗೃಹನಿರ್ಮಾಣದ ಭೂಮಿಯ ವಿಚಾರದಲ್ಲಿ ದೂರನ್ನು ದಾಖಲಿಸಬಹುದು. ಅವಕಾಶಗಳು ಇಲ್ಲದೇ ನೀವು ಇಂದು ಅಸಮಾಧಾನದಿಂದ ಇರುವಿರಿ. ಕೂಡಿಟ್ಟ ಹಣವನ್ನು ಬೇರೆ ಉದ್ದೇಶಕ್ಕೆ ಬಳಸುವಿರಿ. ಮಾರಾಟದಿಂದ ನಿಮಗೆ ಅಲ್ಪ ಲಾಭವಾಗಲಿದೆ. ಹಳೆಯ ಘಟನೆಗಳು ನಿಮ್ಮನ್ನು ಕಾಡಬಹುದು. ಆತಂಕದಿಂದ ನೀವು ಮುಕ್ತರಾಗಲು ಬಯಸುವಿರಿ. ಸಮಯ ಇಂದು ಬೇಗನೆ ಕಳೆದಂತೆ ಅನ್ನಿಸಬಹುದು.

ವೃಶ್ಚಿಕ ರಾಶಿ: ಹಣಕ್ಕಿಂತ ಆರೋಗ್ಯ ಮುಖ್ಯವಾದ ಕಾರಣ ಅಂತಹ ಸನ್ನಿವೇಶವನ್ನು ನೀವು ಅರ್ಥಮಾಡಿಕೊಳ್ಳಬೇಕು. ನಿಮ್ಮ ಕಠಿಣ ಪರಿಶ್ರಮವು ಕೆಲಸಕ್ಕೆ ಬಾರದು.‌ ಯುಕ್ತಿಯಿಂದ ನಿರ್ವಹಿಸುವ ಚಾಣಾಕ್ಷತೆ ಬೇಕು. ಸರ್ಕಾರದಿಂದ ಸೌಲಭ್ಯವನ್ನು ನೀವು ನಿರೀಕ್ಷಿಸುತ್ತಿರುವಿರಿ. ಯಶಸ್ಸನ್ನು ಒಡೆಯುವ ಹಂಬಲವು ಅಧಿಕವಾಗುವುದು. ನೌಕರರಿಂದ ಕೆಲಸವಾಗುತ್ತಿಲ್ಲ ಎಂಬ ಬೇಸರ ಬರುವುದು. ಅವಶ್ಯಕತೆಗೆ ಅನುಸಾರವಾಗಿ ಮುಂದುವರಿಯಿರಿ.‌ ಸ್ನೇಹಿತರಿಗೆ ಸಾಲವಾಗಿ ಹಣವನ್ನು ಕೊಡುವಿರಿ. ಸಾಮಾಜಿಕ ತಾಣದಲ್ಲಿ ನಿಮಗೆ ಸ್ತ್ರೀಯ ಜೊತೆ‌ ಪ್ರೇಮವು ಉಂಟಾಗಬಹುದು. ಹೊಸ ಬಾಳಿನ ಕಡೆ ಮನಸ್ಸು ಹರಿಯುವುದು. ಸಮಯವನ್ನು ವ್ಯರ್ಥ ಮಾಡದೇ ಅಧಿಕಸಂಪಾದನೆಯನ್ನು ಮಾಡುವಿರಿ. ಮನೆಯಲ್ಲಿ ಒಂಟಿಯಾಗಿದ್ದು ನಿಮಗೆ ಭಯವು ಉಂಟಾಗಬಹುದು. ಕೆಲಸದಲ್ಲಿ ಆಸಕ್ತಿಯ‌ ಕೊರತೆ ಕಾಣಿಸುವುದು. ಉದ್ಯಮದಲ್ಲಿ ಹಿನ್ನಡೆಯಾಗುವುದು ನಿಮಗೆ ಮೊದಲೇ ಗೊತ್ತಿದ್ದೂ ಪ್ರಯತ್ನಿಸುವಿರಿ. ವಹಿಸಿಕೊಂಡ ಕಾರ್ಯವನ್ನು ಸಮಯಕ್ಕೆ ಮುಗಿಸಿ.