AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ರಾಶಿಭವಿಷ್ಯ; ಈ ರಾಶಿಯವರಿಗೆ ಉದ್ಯಮದಲ್ಲಿ ಅಧಿಕಾರಕ್ಕಿಂತ ಚಾಣಾಕ್ಷತೆ ಮುಖ್ಯವಾಗುವುದು

Rashi Bhavishya: ಒಂದಷ್ಟು ಮಂದಿ ಪ್ರತಿನಿತ್ಯ ತಮ್ಮ ಭವಿಷ್ಯ ನೋಡುತ್ತಾರೆ. ಹಾಗಿದ್ದರೆ, ನೀವು ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ ರಾಶಿಯವರಾಗಿದ್ದರೇ, 20 ಮಾರ್ಚ್​ 2024ರ ನಿಮ್ಮ ರಾಶಿಭವಿಷ್ಯ ಹೇಗಿದೆ? ನಿಮಗೆ ಶುಭ ಅಥವಾ ಅಶುಭ ದಿನವಾ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಎಂಬಿತ್ಯಾದಿ ಮಾಹಿತಿಗಳನ್ನು ಇಂದಿನ ರಾಶಿಭವಿಷ್ಯದಿಂದ ತಿಳಿದುಕೊಳ್ಳಿ.

Horoscope: ರಾಶಿಭವಿಷ್ಯ; ಈ ರಾಶಿಯವರಿಗೆ ಉದ್ಯಮದಲ್ಲಿ ಅಧಿಕಾರಕ್ಕಿಂತ ಚಾಣಾಕ್ಷತೆ ಮುಖ್ಯವಾಗುವುದು
ನಿತ್ಯಭವಿಷ್ಯImage Credit source: Shutterstock
Rakesh Nayak Manchi
|

Updated on: Mar 20, 2024 | 12:15 AM

Share

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮಾರ್ಚ್​​​​ 20) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಶುಕ್ಲ, ವಾರ : ಬುಧ, ತಿಥಿ :ಏಕಾದಶೀ, ನಿತ್ಯನಕ್ಷತ್ರ : ಪುಷ್ಯಾ, ಯೋಗ : ಶೋಭನ, ಕರಣ : ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 37 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:40 ರಿಂದ ಸಂಜೆ 02:11ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 08:08 ರಿಂದ 09:39ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 11:10 ರಿಂದ 12:40 ರ ವರೆಗೆ.

ಮೇಷ ರಾಶಿ : ಇಂದು ನಿಮಗೆ ಜ್ಞಾನದ ಕೊರತೆಯಿಂದ ಅನ್ಯಾಯದ ಕಡೆ ಮನಸ್ಸು ಹೋಗಬಹುದು. ಪ್ರೇಮದಲ್ಲಿ ಸಂಶಯವು ನಿಮ್ಮ ಕಾರ್ಯವನ್ನು ನಿಧಾನ ಮಾಡುವುದು. ಬಹಳದ ದಿನದಿಂದ ನಿರೀಕ್ಷೆಯಲ್ಲಿ ಇರುವ ನಿಮಗೆ ಕೊನೆಗೂ ಉದ್ಯೋಗಕ್ಕಾಗಿ ಅವಕಾಶವು ಪ್ರಾಪ್ತವಾಗಲಿದೆ. ಆಪ್ತರ ಜೊತೆಗಿನ ಮಾತಿನಿಂದ‌ ಮನಸ್ಸು ಹಗುರಾಗುವುದು. ಪ್ರೀತಿಯಲ್ಲಿ ಅಂತರವು ಬಂದಂತೆ ತೋರಿದ್ದು ಮಾತುಕತೆಯಿಂದ ಅದನ್ನು ಸರಿ ಮಾಡಿಕೊಳ್ಳುವಿರಿ. ದ್ವೇಷವನ್ನು ಬೆಳೆಸಿಕೊಳ್ಳುವುದು ಯೋಗ್ಯವೆನಿಸದು. ಸ್ನೇಹಿತರ ಕೆಲವು ವರ್ತನೆಗಳು ನಿಮಗೆ ಇಷ್ಟವಾಗದೇ ಇರಬಹುದು. ಸಮಯದ ನಿರೀಕ್ಷೆಯಲ್ಲಿ ಇರಿ. ನಿಮ್ಮ ರಹಸ್ಯವು ಬೆಳಕಿಗೆ ಬರಬಬಹುದು ಎಂಬ ಭೀತಿಯು ಇರಲಿದೆ. ಇಂದಿನ ಕೆಲವು ಸಮಯವನ್ನು ಇನ್ನೊಬ್ಬರಿಗೆ ಮೀಸಲಿಡಬೇಕಾದೀತು. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸವು ಆಗಿದ್ದು ನಿಮಗೆ ಬಹಳ ಸಮಯದ ಅನಂತರ ತಿಳಿದು ಬೇಸರಿಸುವಿರಿ.

ವೃಷಭ ರಾಶಿ : ನಿಮ್ಮ ಚರಾಸ್ತಿಯ ಸ್ವಲ್ಪ ಭಾಗವನ್ನು ಕಳೆದುಕೊಳ್ಳಬೇಕಾಗಬಹುದು. ಯಾರಾದರೂ ನಿಮ್ಮ ಬಗ್ಗೆ ಏನಂದುಕೊಂಡಾರು ಎಂಬ ಭಯವಿರುವುದು. ಧಾರ್ಮಿಕ ವಿಚಾರಕ್ಕೆ ಯಾರ ಜೊತೆಗಾದರೂ ಕಲಹವಾಗಬಹುದು. ಹೊಸ ಮನೆಯ ಪ್ರವೇಶದಲ್ಲಿ‌ ನೀವು ಭಾಗಿಯಾಗುವಿರಿ. ಕೆಲವು ಸಮಸ್ಯೆಗಳನ್ನು ನೀವು ಪರಿಹಾರ ಮಾಡಿಕೊಳ್ಳುವಿರಿ. ಸಂಬಂಧಗಳನ್ನು ನೀವು ಬೇಕಾದುದಕ್ಕೆ ಬಳಸಿಕೊಳ್ಳುವಿರಿ. ರಾಜಕಾರಣಿಗಳು ಅಸ್ಥಿರ ಮನಸ್ಸಿನಲ್ಲಿ ಇರುವರು. ಅಧಿಕವಾಗಿರುವುದು. ಇಂದಿನ ಸೋಲು ನಿಮಗೆ ಪಾಠವಾಗುವುದು. ಮುನ್ನುಗ್ಗುವ ಅಭ್ಯಾಸವನ್ನು ಬೆಳೆಸಿಕೊಂಡು ನಿಮಗೆ ಇಷ್ಟವಾದ ಆಯ್ಕೆಯನ್ನು ಮಾಡಿಕೊಳ್ಳುವಿರಿ. ಪ್ರಪಂಚಜ್ಞಾನದ ಅಗತ್ಯತೆ ಹೆಚ್ಚಿವಿರುವಂತೆ ತೋರುತ್ತದೆ. ಮುನ್ನುಗ್ಗಲು ನಿಮಗೆ ಸ್ಥೈರ್ಯ ಸಾಲದು. ವಾಹನ ಚಾಲನೆಯಲ್ಲಿ ಉತ್ಸಾಹ ಹೆಚ್ಚಿರುವುದು. ಕಳೆದುಕೊಂಡಿದ್ದನ್ನು ಪಡೆಯುವ ಛಲವು ಬರಬಹುದು.

ಮಿಥುನ ರಾಶಿ : ನಿಮ್ಮ‌ ಸಾಧನೆಯನ್ನು ನೀವೇ ಹೇಳಿಕೊಳ್ಳುವುದು ಸರಿಯಲ್ಲ. ಕಲೆಯ ಕ್ಷೇತ್ರದಲ್ಲಿ ಇರುವವರಿಗೆ ಇನ್ನಷ್ಟು ಬೆಳೆಯುವ ಆಸೆ ಇರುವುದು. ಯಾರದೋ ಅಧೀನರಾಗಿ ಇರುವುದು ನಿಮಗೆ ಇಷ್ಟವಾಗದು. ವ್ಯವಹಾರವು ಹಳಿ ತಪ್ಪಬಹುದು. ಅನಾರೋಗ್ಯದಿಂದ ನೀವು ಬಹಳಷ್ಟು ಸುಧಾರಿಸುವಿರಿ.‌ ಯಾವ ಕೆಲಸವನ್ನೂ ನೀವು ಪೂರ್ಣ ಮಾಡದೇ ಇರಲು ಮನಸ್ಸು ಬಾರದು. ನಿಮ್ಮ ವ್ಯವಹಾರದಲ್ಲಿ ಪೈಪೋಟಿಯು ಅಧಿಕವಾಗಿ ಇರಲಿದ್ದು ತಂತ್ರಗಳನ್ನು ರೂಪಿಸಬೇಕಾದೀತು. ಕಾನೂನಾತ್ಮಕ ವಿಚಾರಕ್ಕೆ ಮಾತ್ರ ನಿಮ್ಮ ಬೆಂಬಲವು ಇರಲಿ. ಸಂಗಾತಿಯ ಜೊತೆ ಒಡನಾಟವು ಹೆಚ್ಚಿರಲಿದೆ. ತಂದೆಯ ಶ್ರಮವನ್ನು ಕಂಡು ಮಕ್ಕಳಿಗೆ ನೋವಾಗಬಹುದು. ನಿಮ್ಮವರ ಪ್ರೀತಿಯಿಂದ ನೀವು ಮನಸೋಲುವಿರಿ. ಲೆಕ್ಕಪತ್ರದಲ್ಲಿ ಮಚ್ಚು ಮರೆ ಬೇಡ.

ಕಟಕ ರಾಶಿ : ವಿದೇಶೀ ಕಂಪನೆಗಳ ನೌಕರರಾಗಿದ್ದರೆ ನಿಮಗೆ ಭವಿಷ್ಯದ ಬಗ್ಗೆ ಭಯವು ಬರಬಹುದು. ‌ಉದ್ಯಮದಲ್ಲಿ ಅಧಿಕಾರಕ್ಕಿಂತ ಚಾಣಾಕ್ಷತೆ ಮುಖ್ಯವಾಗುವುದು. ಇಂದು ನೀವು ಇತರರ ಭಾವನೆಗೆ ಸ್ಪಂದಿಸುವಿರಿ. ಹಸ್ತಕ್ಷೇಪವನ್ನು ಮಾಡಲು ಹಿಂದೇಟು ಹಾಕುವುದು ಉತ್ತಮ. ಸಂಬಂಧಿಕರು ನಿಮ್ಮನ್ನು ಕ್ಷುಲ್ಲಕ ವಿಚಾರಕ್ಕೆ ಟೀಕಿಸಬಹುದು. ಇಂದು ನಿಮ್ಮ ಸಂಗಾತಿಗೆ ಅಪರೂಪದ ಉಡುಗೊರೆಯನ್ನು ಕೊಡಿಸುವಿರಿ. ಸಂಗಾತಿಯ ಕಡೆಯಿಂದ ನಿಮಗೆ ಅಚ್ಚರಿ ಇರುವುದು. ಏನನ್ನಾದರೂ ಸಾಧಿಸಬೇಕು ಎಂಬ ಹಂಬಲವು ಹುಟ್ಟಿಕೊಂಡೀತು. ಕೋಪಕ್ಕೆ ಮಿತಿ‌ ಇರಲಿ. ಇನ್ನೊಬ್ಬರ ಜೊತೆ ಸಂಬಂಧವನ್ನು ಬಯಸಿ, ಬೆಳೆಸುವಿರಿ. ಜಾಡ್ಯವನ್ನು ಬಿಡಬೇಕಾದೀತು. ಮಕ್ಕಳ‌ ಮೇಲಿನ ಮೋಹವನ್ನು ಕಡಿಮೆ‌ಮಾಡಿಕೊಳ್ಳಬೇಕಾಗುವುದು. ವಿನ್ಯಾಸಕಾರರಿಗೆ ಹೊಸ ಕೆಲಸವು ಸಿಗಬಹುದು.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್